Van Gets Electrocuted: ವ್ಯಾನ್​ಗೆ ವಿದ್ಯುತ್ ತಗುಲಿ 10 ಜನ ಸಾವು, ಹಲವರಿಗೆ ಗಾಯ

ವ್ಯಾನ್‌ನಲ್ಲಿದ್ದ ಡಿಜೆ ಸಿಸ್ಟಂನ ಜನರೇಟರ್‌ನ ವೈರಿಂಗ್‌ ಸಾವಿಗೆ ಕಾರಣವಾಯ್ತಾ? ವ್ಯಾನ್​ಗೆ ವಿದ್ಯುತ್ ಶಾಕ್ ತಗುಲಿ 10 ಜನ ಸಾವನ್ನಪ್ಪಿದ ಘಟನೆ ಪಶ್ಚಿಮ ಬಂಗಳಾದಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊಲ್ಕತ್ತಾ(ಆ.01): ಪಶ್ಚಿಮ ಬಂಗಾಳದ (West Bengal) ಕೂಚ್ ಬೆಹಾರ್‌ನಲ್ಲಿ ಭಾನುವಾರ ತಡರಾತ್ರಿ ಪ್ರಯಾಣಿಕರು ತುಂಬಿದ್ದ ಪಿಕ್ ಅಪ್ ವ್ಯಾನ್‌ಗೆ ವಿದ್ಯುತ್ ಸ್ಪರ್ಶವಾಗಿ (Electrocuted) ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ (Died). ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ವ್ಯಾನ್ ಜಲಪೇಶ್ ಕಡೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ವಾಹನಕ್ಕೆ ವಿದ್ಯುದಾಘಾತವಾದ ತಕ್ಷಣ, ಪ್ರಯಾಣಿಕರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. ಒಬ್ಬರ ಸ್ಥಿತಿ ಗಂಭೀರವಾಗಿದೆ. ಘಟನೆಯಲ್ಲಿ 27 ಜನರಲ್ಲಿ 16 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಜಲ್ಪೈಗುರಿ ಆಸ್ಪತ್ರೆಗೆ (Hospital) ದಾಖಲಿಸಲಾಗಿದೆ. ವ್ಯಾನ್‌ನಲ್ಲಿದ್ದ ಡಿಜೆ ಸಿಸ್ಟಂನ ಜನರೇಟರ್‌ನ ವೈರಿಂಗ್‌ನಿಂದ ಈ ಘಟನೆ ನಡೆದಿರಬಹುದು ಎಂದು ಪೊಲೀಸರು (Police) ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಎಎಸ್ಪಿ ಮತಭಂಗ, ಅಮಿತ್ ವರ್ಮಾ, ಇಂದು ಮಧ್ಯರಾತ್ರಿ 12 ಗಂಟೆ ಸುಮಾರಿಗೆ, ಮೆಖ್ಲಿಗಂಜ್ ಪಿಎಸ್ ವ್ಯಾಪ್ತಿಯ ಧಾರ್ಲಾ ಸೇತುವೆಯಲ್ಲಿ ಜಲ್ಪೇಶ್‌ಗೆ ತೆರಳುತ್ತಿದ್ದ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಪಿಕ್ ಅಪ್ ವ್ಯಾನ್‌ಗೆ ವಿದ್ಯುತ್ ಸ್ಪರ್ಶದ ಘಟನೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಜನರೇಟರ್‌ನ (ಡಿಜೆ ಸಿಸ್ಟಮ್) ವೈರಿಂಗ್ ಕಾರಣವೇ?

ವಾಹನದ ಹಿಂಭಾಗದಲ್ಲಿ ಅಳವಡಿಸಲಾದ ಜನರೇಟರ್‌ನ (ಡಿಜೆ ಸಿಸ್ಟಮ್) ವೈರಿಂಗ್ ಇದಕ್ಕೆ ಕಾರಣವಾಗಿರಬಹುದು ಎನ್ನಲಾಗಿದೆ. "ಅವರನ್ನು ಚಂಗ್ರಬಂಧ ಬಿಪಿಎಚ್‌ಸಿಗೆ ಕರೆತರಲಾಯಿತು. ಹಾಜರಾದ ವೈದ್ಯಾಧಿಕಾರಿ 27 ಜನರಲ್ಲಿ 16 ಜನರನ್ನು ಉತ್ತಮ ಚಿಕಿತ್ಸೆಗಾಗಿ ಜಲ್ಪೈಗುರಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ ಸಂಪೂರ್ಣ ತಪಾಸಣೆಯ ಅಗತ್ಯವಿದೆ. ಹಾಜರಾದ ವೈದ್ಯಾಧಿಕಾರಿ 10 ಜನರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಎಲ್ಲಾ ಪ್ರಯಾಣಿಕರು ಸಿತಾಲ್ಕುಚಿ ಪಿಎಸ್ ಪ್ರದೇಶಕ್ಕೆ ಸೇರಿದವರಾಗಿದ್ದು, ದುರಂತ ಘಟನೆಯ ಬಗ್ಗೆ ಅವರ ಕುಟುಂಬಗಳಿಗೆ ಮಾಹಿತಿ ನೀಡಲಾಗಿದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: Virtual Marriage: ಅಮೆರಿಕದ ಯುವಕನೊಂದಿಗೆ ಆನ್​ಲೈನ್ ಮದುವೆ! ಭಾರತದ ಯುವತಿಗೆ ಕೋರ್ಟ್ ಅನುಮತಿ

ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ ಚಾಲಕ ಪರಾರಿಯಾಗಿದ್ದಾನೆ. ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಪೊಲೀಸರು ಪರಿಹಾರ ಮತ್ತು ಅಗತ್ಯವಿರುವ ಯಾವುದೇ ಸಹಾಯಕ್ಕಾಗಿ ಸಮನ್ವಯಗೊಳಿಸುತ್ತಿದ್ದಾರೆ ಎಂದು ವರ್ಮಾ ಹೇಳಿದರು.
Published by:Divya D
First published: