• Home
 • »
 • News
 • »
 • national-international
 • »
 • Meghan and Harry: ಪ್ರಿನ್ಸ್​​ ಹ್ಯಾರಿ-ಮೇಘನ್ ಮಾರ್ಕೆಲ್​​ಗೆ ಮಗಳು ಹುಟ್ಟಿದ್ದಾಳೆ.. ಹೆಸರೇನು ಗೊತ್ತಾ?

Meghan and Harry: ಪ್ರಿನ್ಸ್​​ ಹ್ಯಾರಿ-ಮೇಘನ್ ಮಾರ್ಕೆಲ್​​ಗೆ ಮಗಳು ಹುಟ್ಟಿದ್ದಾಳೆ.. ಹೆಸರೇನು ಗೊತ್ತಾ?

ಪ್ರಿನ್ಸ್​​ ಹ್ಯಾರಿ-ಮೇಘನ್ ಮಾರ್ಕೆಲ್​​

ಪ್ರಿನ್ಸ್​​ ಹ್ಯಾರಿ-ಮೇಘನ್ ಮಾರ್ಕೆಲ್​​

ಲಿಲಿಬೆಟ್ ‘ಲಿಲಿ’ ಡಯಾನಾ ಮೌಂಟ್ ಬ್ಯಾಟನ್-ವಿಂಡ್ಸರ್ - ಇದು ಪ್ರಿನ್ಸ್ ಹ್ಯಾರಿ, ಮೇಘನ್ ಮಾರ್ಕೆಲ್ ಅವರ ಎರಡನೇ ಮಗುವಿನ ಪೂರ್ಣ ಹೆಸರು.

 • Share this:

  ಬ್ರಿಟನ್‌ ರಾಜ ಮನೆತನದ ವಿರುದ್ಧ ಆರೋಪ ಮಾಡಿ ಸದ್ಯ ಅಮೆರಿಕದಲ್ಲಿ ವಾಸವಾಗುತ್ತಿರುವ, ಹಾಗೂ ಕೆಲ ತಿಂಗಳುಗಳಿಂದ ಹೆಚ್ಚು ಸುದ್ದಿಯಲ್ಲಿರುವ ಬ್ರಿಟನ್‌ ಸಸೆಕ್ಸ್‌ನ ಡಚೆಸ್ ತನ್ನ ಎರಡನೇ ಮಗುವಿಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅಮೆರಿಕದ ಕ್ಯಾಲಿಫೋರ್ನಿಯಾದ ಸಾಂಟಾ ಬಾರ್ಬರಾ ಕಾಟೇಜ್ ಆಸ್ಪತ್ರೆಯಲ್ಲಿ ಶುಕ್ರವಾರ ಮೇಘನ್ ಅವರಿಗೆ ಹೆಣ್ಣು ಮಗು ಜನಿಸಿದೆ. ಈ ವೇಳೆ ಪತಿ ಪ್ರಿನ್ಸ್ ಹ್ಯಾರಿಯೂ ಹಾಜರಿದ್ದರು. ಇನ್ನು, ಈ ಮಗುವಿಗೆ ರಾಣಿ ಎಲಿಜಬೆತ್ ಮತ್ತು ಅವರ ತಾಯಿ ರಾಜಕುಮಾರಿ ಡಯಾನಾ ಅವರ ಹೆಸರನ್ನು ಇಡಲಾಗಿದೆ.


  ಲಿಲಿಬೆಟ್ ‘ಲಿಲಿ’ ಡಯಾನಾ ಮೌಂಟ್ ಬ್ಯಾಟನ್-ವಿಂಡ್ಸರ್ - ಇದು ಪ್ರಿನ್ಸ್ ಹ್ಯಾರಿ, ಮೇಘನ್ ಮಾರ್ಕೆಲ್ ಅವರ ಎರಡನೇ ಮಗುವಿನ ಪೂರ್ಣ ಹೆಸರು. ರಾಜಮನೆತನದ ಕರ್ತವ್ಯ ತೊರೆದು ಹೆಚ್ಚು ಸ್ವತಂತ್ರ ಜೀವನವನ್ನು ನಡೆಸಲು ಯುನೈಟೆಡ್ ಸ್ಟೇಟ್ಸ್‌ಗೆ ದಂಪತಿ ತೆರಳಿದ ಬಳಿಕ ಈ ಮಗುವಿನ ಜನನವಾಗಿದೆ. ಇತ್ತೀಚೆಗೆ ದಂಪತಿ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ.

  “ಜೂನ್ 4 ರಂದು, ನಮ್ಮ ಮಗಳು ಲಿಲಿಯ ಆಗಮನದಿಂದ ನಾವು ಆಶೀರ್ವದಿಸಲ್ಪಟ್ಟಿದ್ದೇವೆ. ಅವಳು ನಾವು ಊಹಿಸಿದ್ದಕ್ಕಿಂತಲೂ ಹೆಚ್ಚು ಅದ್ಭುತವಾಗಿದ್ದಾಳೆ. ಪ್ರಪಂಚದಾದ್ಯಂತ ಜನರು ತೋರಿಸ ಪ್ರೀತಿ ಮತ್ತು ಪ್ರಾರ್ಥನೆಗಳಿಗಾಗಿ ನಾವು ಕೃತಜ್ಞರಾಗಿರುತ್ತೇವೆ". "ನಮ್ಮ ಕುಟುಂಬಕ್ಕಾಗಿ ಈ ವಿಶೇಷ ಸಮಯದಲ್ಲಿ ನಿಮ್ಮ ಮುಂದುವರಿದ ದಯೆ ಮತ್ತು ಬೆಂಬಲಕ್ಕೆ ಧನ್ಯವಾದಗಳು" ಎಂದು ಹ್ಯಾರಿ ಮತ್ತು ಮೇಘನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.


  ಇದನ್ನೂ ಓದಿ:PM Narendra Modi: ಇಂದು ಸಂಜೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಪ್ರಧಾನಿ ಮೋದಿ


  ತಾಯಿ ಮತ್ತು ಮಗು ಇಬ್ಬರ ಆರೋಗ್ಯವೂ ಚೆನ್ನಾಗಿದ್ದು, ಮನೆಗೆ ಮರಳಿದ್ದಾರೆ ಎಂದು ಅವರ ಪತ್ರಿಕಾ ಕಾರ್ಯದರ್ಶಿ ತಿಳಿಸಿದ್ದಾರೆ.

  ಲಿಲಿಬೆಟ್ ರಾಣಿ ಎಲಿಜಬೆತ್ ಅವರ ಬಾಲ್ಯದ ಅಡ್ಡಹೆಸರು. ರಾಣಿ ಎಲಿಜಬೆತ್‌ ಪತಿ 95 ವರ್ಷದ ಪ್ರಿನ್ಸ್ ಫಿಲಿಪ್ ಮರಣದ ಸುಮಾರು ಎರಡು ತಿಂಗಳ ಬಳಿಕ ಎರಡನೇ ಮಗುವಿನ ಜನನವಾಗಿದ್ದು, ಲಿಲಿಬೆಟ್ ‘ಲಿಲಿ’ ಡಯಾನಾ ಮೌಂಟ್ ಬ್ಯಾಟನ್-ವಿಂಡ್ಸರ್ ಎಂದು ಹೆಸರಿಡಲಾಗಿದೆ.


  ಪ್ರಿನ್ಸ್ ಚಾರ್ಲ್ಸ್ ಅವರ ಮಾಜಿ ಪತ್ನಿ ಮತ್ತು ಹ್ಯಾರಿ ಹಾಗೂ ಅವರ ಹಿರಿಯ ಸಹೋದರ ವಿಲಿಯಂ ಅವರ ತಾಯಿ ಡಯಾನಾ 1997 ರಲ್ಲಿ ಪ್ಯಾರಿಸ್ ಕಾರು ಅಪಘಾತದಲ್ಲಿ ನಿಧನರಾದರು.


  39 ವರ್ಷದ ಮೇಘನ್, ಓಪ್ರಾ ವಿನ್ಫ್ರೇ ಅವರೊಂದಿಗೆ ಮಾರ್ಚ್‌ ತಿಂಗಳಲ್ಲಿ ನಡೆದ ಸ್ಫೋಟಕ ಅಮೆರಿಕದ ಟೆಲಿವಿಷನ್ ಸಂದರ್ಶನದಲ್ಲಿ ತಾನು ಹೆಣ್ಣು ಮಗುವನ್ನು ನಿರೀಕ್ಷಿಸುತ್ತಿರುವುದಾಗಿ ಘೋಷಿಸಿದಳು. ಈ ಟಿವಿ ಸಂದರ್ಶನದಲ್ಲಿ ಅವಳು ರಾಜಮನೆತನದ ವಿರುದ್ಧ ವರ್ಣಭೇದ ನೀತಿಯನ್ನು ಆರೋಪಿಸಿದ್ದಳು ಮತ್ತು ಮದುವೆಯ ಆರಂಭಿಕ ದಿನಗಳಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಚಿಂತನೆ ಮಾಡಿದ್ದೆನು ಎಂದೂ ಆಕೆ ಹೇಳಿದ್ದಾಳೆ.


  ಇದನ್ನೂ ಓದಿ:ಹೊಸ Income Tax E-Filing Portal‌ಗೆ ಇಂದು ಚಾಲನೆ; ಟ್ಯಾಕ್ಸ್​​ ಕಟ್ಟೋರಿಗೆ ಏನೆಲ್ಲಾ ಲಾಭ?


  ಈ ಸಂದರ್ಶನವು ಕುಟುಂಬವನ್ನು ಬಿಕ್ಕಟ್ಟಿಗೆ ತಳ್ಳಿತು. ಹ್ಯಾರಿ ಮತ್ತು ವಿಲಿಯಂ ನಡುವಿನ ಬಿರುಕನ್ನು ಗಾಢವಾಗಿಸಿತು ಮತ್ತು ಹ್ಯಾರಿ ತಂದೆ ರಾಜಕುಮಾರ ಚಾರ್ಲ್ಸ್ ರೊಂದಿಗೂ ಬಿರುಕು ಕಾಣಿಸಿಕೊಂಡಿತು.


  36 ವರ್ಷದ ಹ್ಯಾರಿ ಇತ್ತೀಚೆಗೆ ತನ್ನ ತಾಯಿ ಡಯಾನಾ ಅವರ ಶವಪೆಟ್ಟಿಗೆಯ ಹಿಂದೆ 12 ವರ್ಷ ವಯಸ್ಸಿನವನಾಗಿ ನಡೆಯಬೇಕಾದಾಗ ನಷ್ಟದ ಆಘಾತವು ಹೇಗೆ ಹೆಚ್ಚಾಯಿತು ಎಂಬುದರ ಕುರಿತು ಇತ್ತೀಚೆಗೆ ಮಾತನಾಡಿದ್ದರು. ವಿಶ್ವಾದ್ಯಂತ ಮಾಧ್ಯಮಗಳಲ್ಲಿ ಇದು ಜಗಜ್ಜಾಹೀರಾಗಿತ್ತು.

  ಇನ್ನೊಂದೆಡೆ, ಹ್ಯಾರಿ ಮತ್ತು ಮೇಘನ್ ಅವರ ಮೊದಲ ಮಗು ಆರ್ಚೀ 2019 ರಲ್ಲಿ ಜನಿಸಿದೆ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

  Published by:Latha CG
  First published: