Crime News: ಅಂಗಡಿ ಮಾಲೀಕನ ಹೆಂಡತಿ ಜೊತೆ ಮಲಗಲು 10 ಸಾವಿರ ಆಫರ್​ ಕೊಟ್ಟ 80 ವರ್ಷದ ಮುದುಕ: ಆಮೇಲೇನಾಯ್ತು?

Weird Crime News: ಗೊಡೌನ್​ಗೆ ನಿನ್ನ ಹೆಂಡತಿ ಕಳಿಸು ಹತ್ತು ಸಾವಿರ ಕೊಡ್ತೀನಿ ಎಂದು ಮುದುಕ ಹೇಳಿದಾಗ, ಅಂಗಡಿ ಮಾಲಿಕನಿಗೆ ಪಿತ್ತ ನೆತ್ತಿಗೇರಿದೆ. ಸಿಟ್ಟಿಗೆದ್ದ ಅಂಗಡಿ ಮಾಲಿಕ, ಶಮಾಕಾಂತ್​​ ತುಕಾರಾಮ್​ ನಾಯ್ಕ್​ (ಮುದುಕ) ನನ್ನು ತಳ್ಳಿದ್ದಾನೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ಮುಂಬೈ: ನವೀ ಮುಂಬೈನಲ್ಲಿ (Navi Mumbai Crime) ಅಂಗಡಿಯೊಂದನ್ನು ನಡೆಸಿಕೊಂಡಿದ್ದ 33 ವರ್ಷದ ವ್ಯಕ್ತಿಯ ಹೆಂಡತಿ ಜೊತೆ ಮಲಗಲು 80 ವರ್ಷದ ಮುದುಕನೊಬ್ಬ ರೂ. 10,000 ಆಫರ್​ ಮಾಡಿದ್ದನಂತೆ. ಅಂಗಡಿಯವನು ಮತ್ತು ಮುದುಕ ಇಬ್ಬರಿಗೂ ಹಲವು ವರ್ಷಗಳಿಂದ ಪರಿಚಯವಿತ್ತು. ದಿನನಿತ್ಯ ಮುದುಕ ಅಂಗಡಿಗೆ ಬರುತ್ತಿದ್ದ. ಮರ ಮುಪ್ಪಾದರೂ ಹುಣಸೆ ಮುಪ್ಪೇ ಎಂಬ ಗಾದೆಯಂತೆ, ಮುದುಕನಿಗೆ 80 ದಾಟಿದರೂ ಲೈಂಗಿಕ ಚಪಲ (Sexual Desires of 80 year old) ನೀಗಿರಲಿಲ್ಲ. ಮೊದಲ ಸಲ ರೂ 5000 ಕೊಡುತ್ತೀನಿ ಹೆಂಡತಿಯನ್ನು ಮಂಚಕ್ಕೆ ಹತ್ತಿಸು ಎಂದು ಮುದುಕ ಕೇಳಿದ್ದನಂತೆ. ಮೊದಲ ಬಾರಿ ಬೈದು ಕಳಿಸಿದ್ದನಂತೆ.

  ಆದರೆ ಎರಡನೇ ಬಾರಿ ಮತ್ತೆ ಬಂದು, ತನ್ನ ಗೊಡೌನ್​ಗೆ ನಿನ್ನ ಹೆಂಡತಿ ಕಳಿಸು ಹತ್ತು ಸಾವಿರ ಕೊಡ್ತೀನಿ ಎಂದು ಮುದುಕ ಹೇಳಿದಾಗ, ಅಂಗಡಿ ಮಾಲಿಕನಿಗೆ ಪಿತ್ತ ನೆತ್ತಿಗೇರಿದೆ. ಸಿಟ್ಟಿಗೆದ್ದ ಅಂಗಡಿ ಮಾಲಿಕ, ಶಮಾಕಾಂತ್​​ ತುಕಾರಾಮ್​ ನಾಯ್ಕ್​ (ಮುದುಕ) ನನ್ನು ತಳ್ಳಿದ್ದಾನೆ. ಕೆಳಗೆ ಬಿದ್ದ ತುಕಾರಾಮ್​ನಿಗೆ ಪೆಟ್ಟಾಗಿದೆ. ನಂತರ ಅಂಗಡಿಯ ಶಟರ್​ ಕೆಳಗಿಳಿಸಿ, ಒಳಗಡೆ ಎಳೆದೊಯ್ದಿದ್ದಾನೆ. ನಂತರ ಬಾತ್​ರೂಮ್​ನಲ್ಲಿ ಉಸಿರುಗಟ್ಟಿಸಿ ಸಾಯಿಸಿದ್ದಾನೆ. ಈ ಎಲ್ಲಾ ಘಟನೆ ಆಗಸ್ಟ್​ 29ರಂದು ನಡೆದಿದೆ.

  ಮೂಲಗಳ ಪ್ರಕಾರ, ಮೃತ ತುಕಾರಾಮ್​ ಉಳ್ವೆ ಏರಿಯಾದಲ್ಲಿ ಹಲವು ಫ್ಲಾಟ್​ಗಳು, ಅಂಗಡಿಗಳು ಮತ್ತಿತರ ಆಸ್ತಿಯನ್ನು ಹೊಂದಿದ್ದ. ಸುಮಾರು ಹತ್ತು ಕೋಟಿಗೂ ಅಧಿಕ ಆಸ್ತಿಯ ಮಾಲಿಕನಾಗಿದ್ದ. ಆದರೆ ಇಳಿ ವಯಸ್ಸಿನ ಚಪಲದಿಂದ ಕೊಲೆಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆಗಸ್ಟ್​ 30ರಂದು ಆರೋಪಿ ಸಹ, ಮೃತ ತುಕಾರಾಮ್​ ಮಗನ ಜೊತೆ ಮುಂಬೈನ ಎನ್​ಆರ್​ಐ ಪೊಲೀಸ್​ ಠಾಣೆಗೆ (NRI Police Station Mumbai) ತೆರಳಿ ಕಾಣೆಯಾದ ಬಗ್ಗೆ ದೂರು ನೀಡಿದ್ದಾರೆ. ಅದಾದ ನಂತರ ರಾತ್ರಿ ಬ್ಲಾಂಕೆಟ್​ ಒಳಗೆ ಶವವನ್ನು ಸುತ್ತಿ, ಹತ್ತಿರದ ಕೆರೆಯೊಂದರೊಳಕ್ಕೆ ಬಿಸಾಕಿದ್ದಾನೆ. ಈ ಎಲ್ಲವೂ ಹತ್ತಿರದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಚಾರಣೆ ಆರಂಭಿಸಿದ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ, ಬಂಧಿಸಿದ್ದಾರೆ.

  ತುಕಾರಾಮ್​ ಮೊಬೈಲ್​ ಫೋನ್​ ಕೂಡ ಕಸದ ತೊಟ್ಟಿಯಲ್ಲಿ ಸಿಕ್ಕಿದೆ. ವಿಚಾರಣೆ ವೇಳೆ ಮಾಹಿತಿ ನೀಡಿರುವ ಆರೋಪಿ, ತುಕಾರಾಮ್​ ತನ್ನ ಹೆಂಡತಿಯ ಮೇಲೆ ಕಣ್ಣುಹಾಕಿದ್ದ. ಈ ಕಾರಣಕ್ಕಾಗಿಯೇ ಸಿಟ್ಟಿನಿಂದ ಕೊಲೆ ಮಾಡಿದೆ ಎಂದು ಒಪ್ಪಿಕೊಂಡಿದ್ದಾನೆ.

  ವಿಚಾರಣೆ ವೇಳೆ ಇನ್ನಷ್ಟು ಮಾಹಿತಿ ತುಕಾರಾಮ್​ ಬಗ್ಗೆ ಲಭ್ಯವಾಗಿದ್ದು, ಆತ ಹಲವರ ಜೊತೆ ಈ ರೀತಿಯಾಗಿ ವರ್ತಿಸುತ್ತಿದ್ದ. ನೋಡಲು ಸುಂದರವಾದ ಯುವತಿಯರಿಗೆ ಹಣದ ಆಸೆ ತೋರಿಸಿ ತನ್ನೊಡನೆ ಲೈಂಗಿಕ ಸಂಪರ್ಕ ಮಾಡುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ.

  ಒಟ್ಟಿನಲ್ಲಿ ಹತ್ತಾರು ಕೋಟಿ ಆಸ್ತಿಯಿದ್ದರೂ, ಇಳಿ ವಯಸ್ಸಿನಲ್ಲಿ ನೆಮ್ಮದಿಯ ಜೀವನ ತುಕಾರಾಮ್​ಗೆ ಸಿಗಲಿಲ್ಲ. ತನ್ನ ಚಪಲ ವರ್ತನೆಯಿಂದ ಜೀವವನ್ನೇ ಕಳೆದುಕೊಂಡಿದ್ದಾರೆ.

  ಮತ್ತೊಂದು ವಿಚಿತ್ರ ಘಟನೆ (Weird News):

  ಮಳೆಗಾಗಿ (Rain) ಜನರು ಏನೆಲ್ಲ ಮಾಡುವುದನ್ನ ಕೇಳಿದ್ದೇವೆ. ಕಪ್ಪೆ ಮದುವೆ, ಪೂಜೆ, ಹವನ, ಕತ್ತೆ ಮದುವೆ ಹೀಗೆ. ಆದರೆ ಮಳೆ ಬರಲು ಅಪ್ರಾಪ್ತ ಬಾಲಕಿಯನ್ನು ಬೆತ್ತಲೆಯಾಗಿ ಭಿಕ್ಷೆ ಬೇಡಿಸುವುದನ್ನ ಕೇಳಿದ್ದೀರಾ? ಹೌದು ಮಧ್ಯಪ್ರದೇಶದ ಬುಡಕಟ್ಟು ಹಳ್ಳಿಯಲ್ಲಿನ ಸ್ಥಳೀಯರು ಊರಿನ ಬರಗಾಲದ (Drought) ಪರಿಸ್ಥಿತಿಗೆ ಪರಿಹಾರಕ್ಕಾಗಿ ಮತ್ತು ಮಳೆ ದೇವರನ್ನು ಸಂತೈಸಲು ಅಪ್ರಾಪ್ತ ಬಾಲಕಿಯರನ್ನು ಬೆತ್ತಲೆಯಾಗಿ ನಡೆಸಿ ಭಿಕ್ಷೆ ಬೇಡುವಂತೆ ಮಾಡಿದ್ದಾರೆ. ಇಲ್ಲಿನ ದಾಮೋಹ್ ಜಿಲ್ಲೆಯಲ್ಲಿ ಭಾನುವಾರ ಧಾರ್ಮಿಕ ಕಾರ್ಯದ ಭಾಗವಾಗಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ (NCPCR) ದಾಮೋಹ್ ಜಿಲ್ಲಾಡಳಿತದಿಂದ ಈ ಪ್ರಕರಣದ ಬಗ್ಗೆ ವರದಿ ಕೇಳಿದೆ. ಇನ್ನು ಈ ಕುರಿತು ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಸುಮಾರು ಐದು ವರ್ಷ ವಯಸ್ಸಿನ ಆರು ಹುಡುಗಿಯರು ಬೆತ್ತಲೆಯಾಗಿ ದೇಹಕ್ಕೆ ಕಪ್ಪೆಯನ್ನು ಕಟ್ಟಿಕೊಂಡು ತಮ್ಮ ಭುಜದ ಮೇಲೆ ಮರದ ತುಂಡನ್ನು ಇಟ್ಟುಕೊಂಡು ನಡೆಯುವುದನ್ನು ಕಾಣಬಹುದು. ಇನ್ನು ಇವರ ಹಿಂದೆ ಮಹಿಳೆಯರ ಗುಂಪು ಭಕ್ತಿಗೀತೆಗಳನ್ನು ಹಾಡುತ್ತಾ ಹಾಗೂ ದೇವರನ್ನು ಪ್ರಾರ್ಥಿಸುತ್ತ ಮೆರವಣಿಗೆಯನ್ನು ಅನುಸರಿಸುವುದು ಕಂಡುಬರುತ್ತದೆ.

  ಇದನ್ನೂ ಓದಿ: ಮಳೆಗಾಗಿ ಅಪ್ರಾಪ್ತ ಬಾಲಕಿಯರ ಬೆತ್ತಲೆ ಮೆರವಣಿಗೆ- ವೈರಲ್ ಆದ ಮೆರವಣಿಗೆ ವಿಡಿಯೋ

  ಮೂಲಗಳ ಪ್ರಕಾರ ಬೆತ್ತಲೆಯಾಗಿರುವ ಹುಡುಗಿಯರು ಹಳ್ಳಿಯ ಪ್ರತಿ ಮನೆಗೂ ಭೇಟಿ ನೀಡಿ ಹಿಟ್ಟು, ಬೇಳೆಕಾಳುಗಳು ಮತ್ತು ಉಳಿದ ಆಹಾರ ಧಾನ್ಯಗಳನ್ನು ಭಿಕ್ಷೆ ನೀಡುವಂತೆ ಬೇಡುತ್ತಾರೆ. ಸಂಗ್ರಹಿಸಿದ ವಸ್ತುಗಳನ್ನು ನಂತರ ಹಳ್ಳಿಯ ದೇವಸ್ಥಾನದಲ್ಲಿ ಭಂಡಾರಕ್ಕೆ (ಸಮುದಾಯ ಭೋಜನ) ದಾನ ಮಾಡಲಾಗುತ್ತದೆ. ಆಚರಣೆಯ ಸಮಯದಲ್ಲಿ ಎಲ್ಲಾ ನಿವಾಸಿಗಳು ಕಡ್ಡಾಯವಾಗಿ ಹಾಜರಿರಬೇಕು.

  ಇದನ್ನೂ ಓದಿ: ಲೈಂಗಿಕ ಕ್ರಿಯೆಯಲ್ಲಿ ಹುಡುಗಿಯ ಕಿವಿಗಾಯ್ತು ಪೆಟ್ಟು, ಮಾಡಿದ ವಿಚಿತ್ರ ಕೆಲಸ ಕೇಳಿದ್ರೆ ಏನಿದು ಕರ್ಮ ಅಂತೀರ

  ಇನ್ನೊಂದು ವಿಡಿಯೋದಲ್ಲಿ , ಕೆಲವು ಮಹಿಳೆಯರು ಈ ಅಭ್ಯಾಸವು ಭತ್ತದ ಬೆಳೆ ಒಣಗುತ್ತಿರುವ ಪ್ರದೇಶದಲ್ಲಿ ಮಳೆಯನ್ನು ತರಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. ಮೆರವಣಿಗೆಯ ಸಮಯದಲ್ಲಿ ಗ್ರಾಮಸ್ಥರಿಂದ ಹಸಿ ಆಹಾರ ಧಾನ್ಯಗಳನ್ನು ಸಂಗ್ರಹಿಸಿ ನಂತರ ಸ್ಥಳೀಯ ದೇವಸ್ಥಾನದಲ್ಲಿ ಕಾರ್ಯಕ್ರಮಗಳಲ್ಲಿ ಊಟ ತಯಾರಿಸಲು ಬಳಸಲಾಗುತ್ತದೆ ಎಂದು ಮಹಿಳೆಯರು ತಿಳಿಸಿದ್ದಾರೆ.
  Published by:Sharath Sharma Kalagaru
  First published: