Weird News: 10 ವರ್ಷದಲ್ಲಿ 25 ಬಾರಿ 25 ಬೇರೆ ಬೇರೆ ಗಂಡಸರ ಜೊತೆ ಓಡಿಹೋದ ಹೆಂಡತಿ: ಆದರೂ ಆಕೆಯನ್ನೇ ಪ್ರೀತಿಸುತ್ತಾರಂತೆ ಗಂಡ

Wife eloped 25 times with men: ಇಲ್ಲೊಬ್ಬ ವಿಶಿಷ್ಟ ಗಂಡನಿದ್ದಾನೆ. ಈತನ ಹೆಂಡತಿ ಮದುವೆಯಾದ ಮೇಲೆ ಅದೆಷ್ಟು ಬಾರಿ ಅದೆಷ್ಟು ಗಂಡಸರ ಜತೆ ಓಡಿ ಹೋಗಿದ್ದಾಳೆ ಎಂದು ತಿಳಿದರೆ ನಿಮಗೆ ಶಾಕ್​ ಆಗುತ್ತದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಇದೊಂದು ವಿಚಿತ್ರ ಕಥೆ. ಜಗತ್ತಿನಲ್ಲಿ ಪ್ರೀತಿ ಈ ಮಟ್ಟಕ್ಕೂ ಇರಬಹುದಾ ಎಂದು ಯೋಚಿಸಿದರೆ, ಅದು ಹೇಗೆ ಸಾಧ್ಯ ಅನಿಸುತ್ತದೆ. ಪ್ರೀತಿಗೆ ಕಣ್ಣಿಲ್ಲ ಅನ್ನೋದು ನಿಜ, ಆದರೆ ಪ್ರೀತಿಸಿ ಮದುವೆಯಾದ ನಂತರ ಹೆಂಡತಿ ಅಥವಾ ಗಂಡ ಇನ್ನೊಬ್ಬರೊಡನೆ ಓಡಿ ಹೋದಮೇಲೂ ಅದೇ ಪ್ರೀತಿ ಉಳಿಯುತ್ತದೆಯಾ? ಸಾಮಾನ್ಯವಾಗಿ ಪ್ರೀತಿ ಅಥವಾ ದಾಂಪತ್ಯದಲ್ಲಿ ಒಡಕು ಮೂಡುವುದು ಇದೇ ಕಾರಣಕ್ಕೆ. ಹೆಂಡತಿ ಅಥವಾ ಗಂಡ ಬೇರೆಯವರ ಜೊತೆ ಅನೈತಿಕ ಸಂಬಂಧ ಹೊಂದಿದ್ದು ತಿಳಿದರೆ, ಸಂಸಾರ ನುಚ್ಚುನೂರಾಗುತ್ತದೆ. ಪ್ರೀತಿಸುವ ಮನಸುಗಳು ವಂಚನೆಗೊಳಗಾದಾಗ, ಪ್ರೀತಿಗಿಂತ ಸಿಟ್ಟು ತೀವ್ರವಾಗಿರುತ್ತದೆ.

    ಆದರೆ ಇಲ್ಲೊಬ್ಬ ವಿಶಿಷ್ಟ ಗಂಡನಿದ್ದಾನೆ. ಈತನ ಹೆಂಡತಿ ಮದುವೆಯಾದ ಮೇಲೆ ಅದೆಷ್ಟು ಬಾರಿ ಅದೆಷ್ಟು ಗಂಡಸರ ಜತೆ ಓಡಿ ಹೋಗಿದ್ದಾಳೆ ಎಂದು ತಿಳಿದರೆ ನಿಮಗೆ ಶಾಕ್​ ಆಗುತ್ತದೆ. ಯಾಕೆಂದರೆ ಈಕೆ ಬರೋಬ್ಬರಿ 25 ಅನ್ಯ ಗಂಡಸರ ಜೊತೆ ಇದುವರೆಗೂ ಓಡಿ ಹೋಗಿದ್ದಾಳೆ (Wife Eloped 25 times in 10 years). ಮಫಿಜುದ್ದೀನ್​, ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಹತ್ತು ವರ್ಷಗಳ ಹಿಂದೆ ಸಮೀನಾ (ಹೆಸರು ಬದಲಿಸಲಾಗಿದೆ) ಳನ್ನು ಮದುವೆಯಾಗಿದ್ದರು. ಇಬ್ಬರಿಗೂ ಮೂವರು ಮುದ್ದಾದ ಮಕ್ಕಳಿದ್ದಾರೆ. ಆದರೆ ಹೆಂಡತಿಗೆ ವಿಚಿತ್ರ ಕಾಯಿಲೆ. ಕಂಡ ಕಂಡ ಗಂಡಸರ ಸಂಪರ್ಕ ಬೆಳೆಸಿ ಆಕೆ ಆಗಾಗ ಕಾಣೆಯಾಗುತ್ತಾಳೆ. ನಂತರ ಮತ್ತೆ ಮನೆಗೆ ವಾಪಸಾಗುತ್ತಾಳೆ. ಯಾವುದೋ ಸಂಬಂಧಿಯ ಮನೆಗೆ ಹೋಗಿದ್ದೆ ಎಂದು ಸಬೂಬು ನೀಡುತ್ತಾಳೆ. ಆದರೆ ಯಾವ ಸಂಬಂಧಿಯ ಮನೆಗೂ ಹೋಗುವುದೇ ಇಲ್ಲ.

    ಇದನ್ನೂ ಓದಿ: Crime News: ಸ್ಕ್ಯಾನ್​ಗೆ ಬಂದ ಯುವತಿಯ ಖಾಸಗಿ ಭಾಗಗಳನ್ನು ಮುಟ್ಟಿದ ಎಕ್ಸ್-ರೇ ಕ್ಲಿನಿಕ್ ಮಾಲೀಕನ ಬಂಧನ

    ಅಸ್ಸಾಂನ ನಾಗಾಂವ್​ ಜಿಲ್ಲೆಯ ಧಿಂಗ್​ ಲಹ್ಕರ್​ ಹಳ್ಳಿಯಲ್ಲಿ ಮಫಿಜುದ್ದೀನ್​ ಮತ್ತು ಸಮೀನಾ ವಾಸಿಸುತ್ತಾರೆ. ಮಾಧ್ಯಮವೊಂದರ ಜತೆ ಮಾತನಾಡಿರುವ ಮಫಿಜುದ್ದೀನ್​, 2011ರಲ್ಲಿ ನಮ್ಮ ಮದುವೆಯಾಯಿತು. ಈ ಹತ್ತು ವರ್ಷಗಳಲ್ಲಿ 25 ಬಾರಿ ನನ್ನ ಹೆಂಡತಿ ಬೇರೆಯವರ ಜತೆ ಓಡಿ ಹೋಗಿದ್ದಾಳೆ. ಪ್ರತಿ ಬಾರಿ ವಾಪಸ್​ ಬಂದಾಗಲೂ ಇನ್ನೊಮ್ಮೆ ಈ ರೀತಿ ಮಾಡುವುದಿಲ್ಲ, ಯಾರೊಂದಿಗೂ ಹೋಗುವುದಿಲ್ಲ ಎಂದು ಪ್ರಮಾಣ ಮಾಡುತ್ತಾಳೆ. ಆದರೆ ಇದುವರೆಗೂ ಆ ಆಣೆಯನ್ನು ಉಳಿಸಿಕೊಂಡಿಲ್ಲ. ಕೆಲ ಬಾರಿ ಯಾವುದೋ ಸಂಬಂಧಿಗಳ ಮನೆಗೆ ಹೋಗಿದ್ದೆ ಎನ್ನುತ್ತಾಳೆ, ಕೆಲವೊಮ್ಮೆ ಸಂಬಂಧಿ ಯಾರೋ ತೀರಿ ಹೋದರು ಎನ್ನುತ್ತಾಳೆ, ಹೀಗೇ ಸುಳ್ಳುಗಳನ್ನು ಹೇಳಿ ಓಡಿಹೋಗುತ್ತಾಳೆ. ನಮಗೆ ಮೂರು ಮಕ್ಕಳಿದ್ದಾರೆ. ಆಕೆಯನ್ನು ನಾನು ಹೊರಹಾಕಿದರೆ, ಆ ಮಕ್ಕಳ ಗತಿಯೇನು. ಈ ಕಾರಣಕ್ಕಾಗಿಯೇ ನಾನು ಪ್ರತಿ ಬಾರಿ ಆಕೆಯನ್ನು ಸ್ವೀಕರಿಸುತ್ತೇನೆ, ಎನ್ನುತ್ತಾರೆ ಮಫಿಜುದ್ದೀನ್​.

    ಇದನ್ನೂ ಓದಿ: Extramarital Affair: ಹೋಟೆಲ್​ ರೂಮಿನಲ್ಲಿ ಹುಡುಗಿಯ ಜೊತೆ ಸಂಭೋಗ ಮಾಡುತ್ತಿದ್ದ ಗಂಡನನ್ನು ರೆಡ್​ ಹ್ಯಾಂಡ್​ ಆಗಿ ಹಿಡಿದ ಹೆಂಡತಿ

    ಸೆಪ್ಟೆಂಬರ್​ 4ರಿಂದ ಆಕೆ ಮತ್ತೆ ಕಾಣೆಯಾಗಿದ್ದಾಳೆ. ಕೆಲಸ ಮುಗಿಸಿ ಮನೆಗೆ ಬಂದಾಗ, ನನ್ನ ಹೆಂಡತಿ ಮತ್ತೆ ಹೇಳದೇ ಕೇಳದೇ ಮನೆ ಬಿಟ್ಟು ಹೋಗಿದ್ದಾಳೆ ಎಂದು ನನ್ನ ಅಪ್ಪ ಹೇಳಿದರು. ನಮ್ಮ ಮೂರು ತಿಂಗಳ ಮಗುವನ್ನು ಪಕ್ಕದ ಮನೆಯವರಿಗೆ ಕೊಟ್ಟು ಓಡಿಹೋಗಿದ್ದಾಳೆ. ಎಲ್ಲಿ ಹೋಗಿದ್ದಾಳೋ ಗೊತ್ತಿಲ್ಲ, ಎಂದು ಮಫಿಜುದ್ದೀನ್​ ಬೇಸರ ವ್ಯಕ್ತಪಡಿಸುತ್ತಾರೆ.

    ಕುರಿಗೆ ಹುಲ್ಲು ತರುವ ನೆಪ ಹೇಳಿ ಮಗುವನ್ನು ಪಕ್ಕದ ಮನೆಯಲ್ಲಿ ಮಗು ಬಿಟ್ಟು ಸಮೀನಾ ಹೋಗಿದ್ದಾಳೆ ಎನ್ನಲಾಗಿದೆ. ಮನೆಯಿಂದ 22 ಸಾವಿರ ದುಡ್ಡು ಮತ್ತು ಕೆಲ ವಸ್ತುಗಳನ್ನು ಆಕೆ ತೆಗೆದುಕೊಂಡು ಹೋಗಿದ್ದಾಳೆ, ಯಾರ ಜೊತೆ ಈ ಬಾರಿ ಓಡಿಹೋಗಿದ್ದಾಳೋ ಗೊತ್ತಿಲ್ಲ ಎನ್ನುತ್ತಾರೆ ಮಫಿಜುದ್ದೀನ್​.

    ಇದನ್ನೂ ಓದಿ: ನಾಯಿಯೊಂದಿಗೆ ಲೈಂಗಿಕ ಸಂಭೋಗ ನಡೆಸಿದ ಯುವತಿಯ ವಿರುದ್ಧ ಪ್ರಕರಣ, ವಿಚಾರಣೆ

    ನಾನು ಆಕೆಯನ್ನು ನಿಜವಾಗಲೂ ತುಂಬಾ ಪ್ರೀತಿಸುತ್ತೇನೆ. ಅದಕ್ಕಾಗಿಯೇ ಪ್ರತಿ ಸಾರಿ ಅವಳು ವಾಪಸ್​ ಬಂದಾಗಲೂ ಕ್ಷಮಿಸಿ ಸ್ವೀಕರಿಸುತ್ತೇನೆ. ಹಾಗೊಂದು ವೇಳೆ ನಾನು ಆಕೆಯನ್ನು ಮನೆಯಿಂದ ಆಚೆ ಹಾಕಿದರೆ, ನಮ್ಮ ಮಕ್ಕಳು ತಬ್ಬಲಿಯಾಗುತ್ತಾರೆ. ಇಷ್ಟೆಲ್ಲಾ ಬಾರಿ ಓಡಿ ಹೋಗಿದ್ದರೂ ನಾನು ದೂರು ನೀಡಿಲ್ಲ ಎನ್ನುತ್ತಾರೆ ಮಫಿಜುದ್ದೀನ್​. ದಂಪತಿಗೆ ಮೂವರು ಮಕ್ಕಳಿದ್ದು, ಇಬ್ಬರು ಹೆಣ್ಣು ಮತ್ತು ಒಂದು ಗಂಡು ಮಗುವಿದೆ.
    Published by:Sharath Sharma Kalagaru
    First published: