Weird News: ವಿಮಾನ ನಿಲ್ದಾಣದಲ್ಲಿ ಬೆತ್ತಲಾಗಿ ತಿರುಗಾಡಿದ ಯುವತಿ: ಬ್ಲಾಂಕೆಟ್​ ಹಿಡಿದು ಓಡಿದ ಸಿಬ್ಬಂದಿ

Woman runs naked at international airport: ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ ಯುವತಿ ಮೈ ಮೇಲೆ ಬಟ್ಟೆಯನ್ನೇ ಹಾಕಿಕೊಳ್ಳದೇ ಕೇವಲ ಬಾಟಲಿ ಒಂದನ್ನು ಕೈಯಲ್ಲಿ ಹಿಡಿದು ಇಡೀ ವಿಮಾನ ನಿಲ್ದಾಣ ತಿರುಗುತ್ತಿದ್ದಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಸಾಮಾನ್ಯವಾಗಿ ವಿಮಾನ ನಿಲ್ದಾಣದಲ್ಲಿ (International Airport) ಪೊಲೀಸರು ಮತ್ತು ನಿಲ್ದಾಣ ಸಿಬ್ಬಂದಿ ಗನ್​ ಮತ್ತು ಲಾಠಿ ಹಿಡಿದು ಕೆಲಸ ಮಾಡುತ್ತಾರೆ. ಆದರೆ ಡೆನ್ವರ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Denver International Airport) ಆಗಿದ್ದೇ ಬೇರೆ. ಯುವತಿಯೊಬ್ಬಳು ಬಟ್ಟೆ ಬರೆ ಎಲ್ಲಾ ಬಿಚ್ಚಿ ಬೆತ್ತಲಾಗಿ (Woman roaming naked at airport) ವಿಮಾನ ನಿಲ್ದಾಣದಲ್ಲಿ ಓಡಾಡುತ್ತಿರುವುದರ ಬಗ್ಗೆ ಪ್ರಯಾಣಿಕರೊಬ್ಬರು ಕರೆ ಮಾಡಿ ದೂರು ನೀಡಿದ್ದಾರೆ. ಇದರ ಬೆನ್ನಲ್ಲೇ ಗನ್​, ಲಾಠಿ ಎಲ್ಲಾ ಬದಿಗಿಟ್ಟು, ಬ್ಲಾಂಕೆಟ್​ ಹಿಡಿದು ಸಿಬ್ಬಂದಿ ಓಡಿದ್ದಾರೆ. ಎಷ್ಟು ಹರಸಾಹಸ ಪಟ್ಟರು ಬಟ್ಟೆ ಹಾಕಿಕೊಳ್ಳಲು ಯುವತಿ ಒಪ್ಪಿರಲಿಲ್ಲ. ನಂತರ ಬಲವಂತವಾಗಿ ಆಕೆಗೆ ಬ್ಲಾಂಕೆಟ್​ ಹೊದಿಸಲಾಗಿದೆ ಎಂದು ವರದಿಯಾಗಿದೆ. ಯುವತಿ ಮಾನಸಿಕ ಸಮಸ್ಯೆಯಿಂದ (Mental health issue) ಬಳಲುತ್ತಿರುವ ಹಿನ್ನೆಲೆಯಲ್ಲಿ ಆಕೆಯ ಮೇಲೆ ಗಂಭೀರ ಕ್ರಮ ತೆಗೆದುಕೊಂಡಿಲ್ಲ, ಬದಲಾಗಿ ಆಕೆಗೆ ಬೇಕಾದ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. 

    ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ ಯುವತಿ ಮೈ ಮೇಲೆ ಬಟ್ಟೆಯನ್ನೇ ಹಾಕಿಕೊಳ್ಳದೇ ಕೇವಲ ಬಾಟಲಿ ಒಂದನ್ನು ಕೈಯಲ್ಲಿ ಹಿಡಿದು ಇಡೀ ವಿಮಾನ ನಿಲ್ದಾಣ ತಿರುಗುತ್ತಿದ್ದಳು. ಜತೆಗೆ, ಇತರ ಪ್ರಯಾಣಿಕರ ಬಳಿ ತೆರಳಿ, ಹೇಗಿದ್ದೀರಾ, ನೀವು ಎಲ್ಲಿಂದ ಬಂದವರು ಎಂದು ಪದೇ ಪದೇ ಪ್ರಶ್ನೆ ಕೇಳುತ್ತಿದ್ದರು. ಮೈಮೇಲೆ ಬಟ್ಟೆ ಇಲ್ಲದ್ದನ್ನು ಕಂಡ ಪ್ರಯಾಣಿಕರು ಈಕೆಯನ್ನು ನೋಡಿ ಏನು ಹೇಳಬೇಕು ಎಂದೇ ಅರ್ಥವಾಗದೇ ಸುಮ್ಮನಿದ್ದರು. ಆಕೆ ಮಾತ್ರ ನಗುತ್ತಲೇ ಇದ್ದಳು ಎನ್ನಲಾಗಿದೆ.

    ಮೂಲಗಳ ಪ್ರಕಾರ ಆಕೆ ಅತಿಯಾಗಿ ಪಾನಮತ್ತಳಾಗಿದ್ದಳು (Woman was inebriated) ಮತ್ತು ಆಕೆಗೆ ಮಾನಸಿಕ ಸಮಸ್ಯೆಯೂ ಇರಬಹುದು ಎನ್ನಲಾಗಿದೆ. ಸಿಬ್ಬಂದಿ ಬ್ಲಾಂಕೆಟ್​ ತೆಗೆದುಕೊಂಡು ಹೋದಾಗ, ಆಕೆ ದೂರ ಓಡಿದ್ದಾಳೆ. ಬಟ್ಟೆ ಬೇಡ ಎಂದು ಸಿಬ್ಬಂದಿಗೆ ಕಾಟ ಕೊಟ್ಟಿದ್ದಾಳೆ. ವಿಮಾನ ನಿಲ್ದಾಣದ ಹತ್ತಕ್ಕೂ ಹೆಚ್ಚು ಸಿಬ್ಬಂದಿ ಆಕೆಯ ಹಿಂದೆ ಓಡಿದ್ದಾರೆ. ಕಡೆಗೆ ಆಕೆಗೆ ಬ್ಲಾಂಕೆಟ್​ ತೊಡಿಸಿ ನಂತರ ಆಸ್ಪತ್ರೆಗೆ ಆ್ಯಂಬುಲೆನ್ಸ್​ನಲ್ಲಿ ಕರೆದುಕೊಂಡು ಹೋಗಲಾಗಿದೆ. ಆಕೆಯ ಮಾನಸಿಕ ಸ್ಥಿತಿ ಸರಿಯಿಲ್ಲ ಎಂಬ ಕಾರಣಕ್ಕೆ ಆಕೆಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗುವುದು ಎಂದು ಸಿಬ್ಬಂದಿ ತಿಳಿಸಿದ್ದಾರೆ.

    ಇದನ್ನೂ ಓದಿ: ₹260 ಕೋಟಿ ಹಣದ ಆಸೆ ತೋರಿಸಿ ಅತ್ಯಾಚಾರ; ಡೋಂಗಿ ಬಾಬಾಗಳಿಂದ 4 ಮಹಿಳೆಯರ ಮೇಲೆ ರೇಪ್

    ಕುಡಿದ ಅಮಲಿನಲ್ಲಿ ಯುವತಿಯೊಬ್ಬಳು ಬಟ್ಟೆಯಿಲ್ಲದೇ ಓಡಾಡುತ್ತಿದ್ದ ಬಗ್ಗೆ ಪ್ರಯಾಣಿಕರಿಂದ ದೂರು ಬಂತು. ತಕ್ಷಣ ಕಾರ್ಯಗತರಾದ ಸಿಬ್ಬಂದಿ, ಯುವತಿಯಿದ್ದ ಕಡೆ ಹೋಗಿದ್ದಾರೆ. ಯುವತಿ ಬ್ಲಾಂಕೆಟ್​ ಹೊದಿಸಿಕೊಳ್ಳಲು ಒಪ್ಪಲಿಲ್ಲ, ಕಡೆಗೆ ಬಲವಂತದಿಂದ ಬ್ಲಾಂಕೆಟ್​ ತೊಡಿಸಬೇಕಾಗಿ ಬಂತು. ನಂತರ ವೈದ್ಯಾಧಿಕಾರಿಗಳನ್ನು ಕರೆಸಿ ಯುವತಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಪರೀಕ್ಷೆಯಲ್ಲಿ ಮಾನಸಿಕ ಸಮಸ್ಯೆಯಿಂದ ಯುವತಿ ಬಳಲುತ್ತಿದ್ದಾಳೆ ಎಂದು ಅನುಮಾನಿಸಲಾಗಿದೆ. ಇದಕ್ಕಾಗಿಯೇ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಆಸ್ಪತ್ರೆಗೆ ಕಳಿಸಲಾಗಿದೆ ಎಂದು ಪೊಲೀಸ್​ ಇಲಾಖೆಯ ಅಧಿಕೃತ ಪ್ರಕಟಣೆ ತಿಳಿಸಿದೆ.

    ಇದನ್ನೂ ಓದಿ: ಮದುವೆಯಾದ 10ನೇ ದಿನಕ್ಕೇ ಪತ್ನಿ ಗರ್ಭಿಣಿ ಎಂದು ತಿಳಿದ ಪತಿ, ಆಮೇಲೆ ನಡೆದದ್ದೆಲ್ಲಾ ಸಿನಿಮಾ ಸ್ಟೈಲ್ ಘಟನೆ!

    ಒಂದು ನಿಮಿಷಕ್ಕೂ ಹೆಚ್ಚಿನ ವಿಡಿಯೋ ಒಂದು ಲಭ್ಯವಾಗಿತ್ತಾದರೂ, ಯುವತಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ, ಸ್ಥಳೀಯ ಮಾಧ್ಯಮಗಳು ವಿಡಿಯೋವನ್ನು ಪ್ರಕಟಿಸಿಲ್ಲ. ಘಟನೆ ಸಂಬಂಧ ವಿಮಾನ ನಿಲ್ದಾಣದ ಅಧಿಕಾರಿಗಳಿಂದ ಅಧಿಕೃತ ಮಾಹಿತಿ ಪಡೆಯಲು ಕೆಲಸ ಮಾಧ್ಯಮ ಸಂಸ್ಥೆಗಳು ಪ್ರಯತ್ನಿಸಿದೆಯಾದರೂ, ಯಾವುದೇ ಮಾಹಿತಿ ನೀಡಲು ಅಧಿಕಾರಿಗಳು ಒಪ್ಪಿಲ್ಲ. ಯುವತಿಯ ವಿರುದ್ಧ ಪೊಲೀಸರು ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ. ಯುವತಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಹಿನ್ನೆಲೆ, ಘಟನೆಯಯನ್ನು ಪೊಲೀಸರು ಅಲ್ಲಿಗೇ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಕುಡಿದ ಅಮಲಿನಲ್ಲಿ ಬಟ್ಟೆ ಹಾಕಿಕೊಳ್ಳದೇ ಹುಚ್ಚಾಟ ಮಾಡಿ ಈಗ ಆಸ್ಪತ್ರೆಗೆ ಸೇರಿದ್ದಾಳೆ.
    Published by:Sharath Sharma Kalagaru
    First published: