ದಕ್ಷಿಣ ಕೊರಿಯಾ: ಭಾರತದ (India) ಹೆಚ್ಚಿನ ಭಾಗಗಳಲ್ಲಿ ಮದುವೆಯ ಸಮಯದಲ್ಲಿ ವರನ ಪಾದರಕ್ಷೆಗಳನ್ನು (Footwear)ಕದಿಯುವ ಆಚರಣೆಯನ್ನು ನಡೆಸಲಾಗುತ್ತದೆ. ಇದನ್ನು ವಧುವಿನ ಸಹೋದರಿಯರು ನಿರ್ವಹಿಸುತ್ತಾರೆ. ನಂತರ ಕೆಲವು ಸಮಯ ಆಟ ಆಡಿಸಿ ಕಾಣಿಕೆ ಪಡೆದ ನಂತರ ವರ ತನ್ನ ಪಾದರಕ್ಷೆಗಳನ್ನು ಹಿಂಪಡೆಯುತ್ತಾನೆ. ಆದರೆ ಕೆಲವು ಸ್ಥಳಗಳಲ್ಲಿ ಅಗ್ನಿ ಮುಂದೆ ಸಪ್ತಪದಿ ತುಳಿಯುವ ಬದಲೂ ನೀರಿನ ಸುತ್ತಾ ತುಳಿಸುತ್ತಾರೆ. ಮತ್ತೊಂದು ಕಡೆ ವಧು ಮತ್ತು ವರರು (Bride-Groom) ಒಂದು ವರ್ಷದವರೆಗೆ ರಹಸ್ಯ ಸ್ಥಳದಲ್ಲಿ ಒಟ್ಟಿಗೆ ವಾಸಿಸುವ ಪ್ರತೀತಿ ಇದೆ. ಇದರ ನಂತರ ಹಿರಿಯರು ಮದುವೆಯನ್ನು ಮಾನ್ಯವೆಂದು ಘೋಷಿಸುತ್ತಾರೆ. ನಂತರ ಮದುವೆ ಸಮಾರಂಭವನ್ನು ಆಚರಿಸಲಾಗುತ್ತದೆ. ಆದರೆ ಇಲ್ಲೊಂದು ವಿಚಿತ್ರ ಮದುವೆ ಆಚರಣೆಯಿದೆ, ಅದರ ಬಗ್ಗೆ ತಿಳಿದರೆ ಖಂಡಿತ ಆಶ್ಚರ್ಯ ಪಡಲಿದ್ದೀರಿ.
ವರನನ್ನು ತಲೆಕೆಳಗಾಗಿ ನೇಣು ಹಾಕಿ ಥಳಿತ
ದಕ್ಷಿಣ ಕೊರಿಯಾದಲ್ಲಿ ಮದುವೆಯ ಸಂದರ್ಭದಲ್ಲಿ, ವರನನ್ನು ತಲೆಕೆಳಗಾಗಿ ನೇಣು ಹಾಕುವ ಮೂಲಕ ಥಳಿಸಲಾಗುತ್ತದೆ. ಮೊದಲು ವರನ ಸ್ನೇಹಿತರು ಅವನ ಕಾಲಿಗೆ ಕೋಲು ಕಟ್ಟಿ ತಲೆಕೆಳಗಾಗಿ ನೇತುಹಾಕುತ್ತಾರೆ. ಇದಾದ ಬಳಿಕ ದೊಣ್ಣೆಯಿಂದ ಥಳಿಸುತ್ತಾರೆ. ಕೆಲವರು ವರನಿಗೆ ಶೂ ಮತ್ತು ಚಪ್ಪಲಿಯಿಂದಲೂ ಥಳಿಸಿದ್ದಾರೆ. ಈ ಬಾರಿಸುವುದರಲ್ಲಿ ವಿಶೇಷವೆಂದರೆ ವರನ ಪಾದಕ್ಕೆ ಮಾತ್ರ ಕೋಲು, ಬೂಟು, ಚಪ್ಪಲಿ ಹೊಡೆಯುತ್ತಾರೆ. ಈ ಸಮಯದಲ್ಲಿ, ವರನ ಪಾದಗಳಿಂದ ಶೂಗಳನ್ನು ತೆಗೆಯಲಾಗುತ್ತದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Marriage: ಮದುವೆಗೂ ಮುನ್ನವೇ ಮೈಥುನಕ್ಕೆ ಅವಕಾಶ! ಭಾರತದಲ್ಲೂ ಇದೆ ಈ ವಿಚಿತ್ರ ಸಂಪ್ರದಾಯ!
ಆದರೆ ಈ ಆಚರಣೆಯನ್ನು ಭಾರತದಲ್ಲಿ ಆಚರಿಸಿದರೆ ಮದುವೆ ಮನೆ ಯುದ್ಧ ಭೂಮಿಯಾಗುತ್ತದೆ. ಆದರೆ ಈ ಆಚರಣೆ ಮಾಡಿದರೆ ದಂಪತಿಗಳ ವೈವಾಹಿಕ ಜೀವನದಲ್ಲಿ ಯಾವುದೇ ಸಮಸ್ಯೆಗಳಿರುವುದಿಲ್ಲ ಎಂದು ದಕ್ಷಿಣ ಕೊರಿಯಾದ ಜನರು ನಂಬುತ್ತಾರೆ. ಇನ್ನು ವರನಿಗೆ ಥಳಿಸುವ ಸಮಯದಲ್ಲಿ ಆಗಾಗ್ಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ.
ಮದುವೆಗೂ ಮುನ್ನ ಒಂದು ತಿಂಗಲು ವಧು ಪ್ರತಿನಿತ್ಯ ಅಳಬೇಕು!
ಮದುವೆಯ ಸಂದರ್ಭದಲ್ಲಿ ಕೆಲವು ವಿಚಿತ್ರ ಆಚರಣೆಗಳು ನಡೆಯುತ್ತವೆ. ಚೀನಾದಲ್ಲಿ ಮದುವೆಗೆ ಒಂದು ತಿಂಗಳ ಮೊದಲು ವಧು ಪ್ರತಿದಿನ ಒಂದು ಗಂಟೆ ಅಳಬೇಕೆಂಬ ವಿಚಿತ್ರ ಪದ್ದತಿಯಿದೆ. ಅಲ್ಲಿನ ಜನರು ಇದನ್ನು ವಧುವಿನ ವೈವಾಹಿಕ ಜೀವನಕ್ಕೆ ಉತ್ತಮ ಶಕುನವೆಂದು ಪರಿಗಣಿಸುತ್ತಾರೆ. ಇನ್ನು ಚೀನಾದ ಒಂದು ಪ್ರದೇಶದಲ್ಲಿ, ವಧು ಮತ್ತು ವರರು ಮದುವೆಗೆ ಮೊದಲು ಕೋಳಿಯನ್ನು ಸೀಳಬೇಕು ಮತ್ತು ಅದರ ಕರುಳನ್ನು ತೆಗೆದುಹಾಕಬೇಕು. ಈ ಆಚರಣೆಯನ್ನು ಮಾಡಿದ ನಂತರವಷ್ಟೇ ಅವರ ಮದುವೆಯ ದಿನಾಂಕವನ್ನು ನಿಗದಿಪಡಿಸಲಾಗುತ್ತದೆ.
ಆಹಾರವನ್ನು ಸೇವಿಸಿದ ನಂತರ ಪಾತ್ರೆಗಳನ್ನ ಪೀಸ್ ಪೀಸ್!
ಜರ್ಮನಿಯಲ್ಲಿ, ಎಲ್ಲಾ ಅತಿಥಿಗಳು ವಧು ಮತ್ತು ವರರನ್ನು ಆಶೀರ್ವದಿಸಲು ವಧುವಿನ ಮನೆಗೆ ಬರುತ್ತಾರೆ. ಊಟವಾದ ನಂತರ ಪಾತ್ರೆ ಒಡೆದು ಹಾಕಲಾಗುತ್ತದೆ. ಈ ರೀತಿ ಮಾಡುವುದರಿಂದ ವಧು ಮತ್ತು ವರರಿಗೆ ಅದೃಷ್ಟ ಬರಲಿದೆ ಎಂಬ ನಂಬಿಕೆಯಿದೆ. ಜರ್ಮನಿಯಲ್ಲಿ ಈ ಆಚರಣೆಯನ್ನ ಪೋಲ್ಟರ್‌ಬ್ಯಾಂಡ್ ಎಂದೂ ಕರೆಯುತ್ತಾರೆ. ಇದರ ನಂತರ, ವಧು ಮತ್ತು ವರರು ಒಟ್ಟಾಗಿ ಒಡೆದ ಪಾತ್ರೆಗಳ ರಾಶಿಯನ್ನು ಸ್ವಚ್ಛಗೊಳಿಸಬೇಕು. ಇದು ನವ ದಂಪತಿಗಳಿಂದ ದುಷ್ಟಶಕ್ತಿಗಳನ್ನು ದೂರವಿಡುತ್ತದೆ ಎಂದು ಜನರು ನಂಬುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ