Weird Crime News: ದೇವಸ್ಥಾನದ ಅರ್ಚಕ, ಯುವಕನ ಮೇಲೆ ಎಸ್ಟೇಟ್​ ಮ್ಯಾನೇಜರ್​ನಿಂದ ಲೈಂಗಿಕ ಕಿರುಕುಳ: ಕೇರಳದಲ್ಲೊಂದು ವಿಚಿತ್ರ ಘಟನೆ

Weird Crime News Today: ಪೂಜಾರಿ ಪೆರುವಂತಾನಮ್​ ದೇವಸ್ಥಾನದಲ್ಲಿ ಅರ್ಚಕನಾಗಿ ಕೆಲಸ ಮಾಡುತ್ತಿದ್ದರೆ, ಇನ್ನೊಬ್ಬ ಸಂತ್ರಸ್ಥ ಯುವಕ ರಬ್ಬರ್​ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಅದೇ ರಬ್ಬರ್​ ಫ್ಯಾಕ್ಟರಿಯ ಮಾಲಿಕ ಮತ್ತು ರಬ್ಬರ್​ ಎಸ್ಟೇಟ್​ನ ಮ್ಯಾನೇಜರ್​ ಈ ಕೃತ್ಯ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ಕೊಟ್ಟಾಯಂ: ದೇವಸ್ಥಾನದ ಪೂಜಾರಿ ಮತ್ತು ಯುವಕನೊಬ್ಬನ ಮೇಲೆ ಎಸ್ಟೇಟ್​ನ ಮಾಲಿಕನೊಬ್ಬ ಲೈಂಗಿಕ ಕಿರುಕುಳ ನೀಡಿರುವ ಅಸ್ವಾಭಾವಿಕ ಘಟನೆ ಕೇರಳದ ಕೊಟ್ಟಾಯಂನ ಪೆರುವಂತಾನಮ್​ನಲ್ಲಿ ನಡೆದಿದೆ. ಈ ಬಗ್ಗೆ ಕೊಟ್ಟಾಯಂನ ಮುಂಡಕ್ಕಾಯಂ ಬಳಿಯ ಪೆರುವಂತಾನಮ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೂಜಾರಿ ಪೆರುವಂತಾನಮ್​ ದೇವಸ್ಥಾನದಲ್ಲಿ ಅರ್ಚಕನಾಗಿ ಕೆಲಸ ಮಾಡುತ್ತಿದ್ದರೆ, ಇನ್ನೊಬ್ಬ ಸಂತ್ರಸ್ಥ ಯುವಕ ರಬ್ಬರ್​ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಅದೇ ರಬ್ಬರ್​ ಫ್ಯಾಕ್ಟರಿಯ ಮಾಲಿಕ ಮತ್ತು ರಬ್ಬರ್​ ಎಸ್ಟೇಟ್​ನ ಮ್ಯಾನೇಜರ್​ ಈ ಕೃತ್ಯ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. 

  ಯುವಕನ ಹೇಳಿಕೆಯನ್ನು ದಾಖಲು ಮಾಡಿಕೊಂಡಿರುವ ಪೆರುವಂತಾನಮ್​ ಪೊಲೀಸರು ರಬ್ಬರ್​ ಎಸ್ಟೇಟ್​ ಮ್ಯಾನೇಜರ್​ ಜಾರ್ಜ್​ ಪಿ ಜೇಕಬ್​ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೆರುವಂತಾನಮ್​ ಪೊಲೀಸ್​ ಠಾಣೆಯಲ್ಲಿ ದಾಖಲಾದ ದೂರಿನ ಪ್ರಕಾರ ಯುವಕ ಮತ್ತು ದೇವಸ್ಥಾನದ ಅರ್ಚಕನನ್ನು ಎಸ್ಟೇಟ್​ ಮ್ಯಾನೇಜರ್​ ಜಾರ್ಜ್​ ಇದೇ ತಿಂಗಳ 16ನೇ ತಾರೀಕು ಮನೆಗೆ ಕರೆಸಿಕೊಂಡಿದ್ದ. ಈ ವೇಳೆ ಮ್ಯಾನೇಜರ್​ ಇಬ್ಬರ ಮೇಲೂ ಲೈಂಗಿಕ ಕಿರುಕುಳ ನೀಡಿದ್ದಾನೆ. ಅಸಹಜ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಹಿಂಸಿಸಿದ್ದಾನೆ ಎಂದು ದೂರಲಾಗಿದೆ. ಮನೆಯಲ್ಲಿದ್ದ ಸೆಕ್ಯುರಿಟಿ ಗಾರ್ಡ್​ನನ್ನು ಆಚೆ ಕಳಿಸಿ, ನಂತರ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ.

  ಅರ್ಚಕ ಘಟನೆಯ ಬಳಿಕ, ನಡೆದ ವಿಚಾರವನ್ನು ದೇವಸ್ಥಾನದ ಆಡಳಿತ ಮಂಡಳಿಗೆ ತಿಳಿಸಿದ್ದಾನೆ, ಇದಾದ ಬಳಿಕ ಆಡಳಿತ ಮಂಡಳಿಯ ನಿರ್ಧಾರದ ಮೇಲೆ ಪೊಲೀಸ್​ ಠಾಣೆಗೆ ದೂರು ನೀಡಲಾಗಿದೆ. ನಂತರ ಪೊಲೀಸರು ಯುವಕ ಮತ್ತು ಅರ್ಚಕನ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅರ್ಚಕ ಸದ್ಯ ಕೊಟ್ಟಾಯಂ ಮೆಡಿಕಲ್​ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪೊಲೀಸ್​ ಮೂಲಗಳ ಪ್ರಕಾರ, ಲೈಂಗಿಕ ಕಿರುಕುಳದಿಂದ ಮಾನಸಿಕವಾಗಿ ಅರ್ಚಕ ನೊಂದಿದ್ದಾನೆ. ಪೆರುವಂತಾನಮ್​ ಪೊಲೀಸರು ಪ್ರಕರಣದ ಬಗ್ಗೆ ನ್ಯೂಸ್​18 ಮಾಹಿತಿ ನೀಡಿದ್ದು, ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂದಿದ್ದಾರೆ.

  ಎಸ್ಟೇಟ್​ ಮ್ಯಾನೇಜರ್​ ಜಾರ್ಜ್​ ಇದೇ ರೀತಿಯಾಗಿ ಬೇರೆ ಯುವಕರ ಮೇಲೂ ಲೈಂಗಿಕ ದೌರ್ಜನ್ಯ ಎಸಗಿದ್ದಾನಾ ಎಂದು ತಿಳಿದುಕೊಳ್ಳಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎಸ್ಟೇಟ್​ನಲ್ಲಿ ಕೆಲಸ ಮಾಡುತ್ತಿರುವವರ ಹೇಳಿಕೆಯನ್ನೂ ದಾಖಲು ಮಾಡಿಕೊಳ್ಳಲಾಗುತ್ತಿದ್ದು, ಇನ್ನಷ್ಟು ದಿನಗಳಲ್ಲಿ ಹೆಚ್ಚಿನ ಮಾಹಿತಿ ಲಭ್ಯವಾಗುವ ಸಾಧ್ಯತೆಯಿದೆ. ಪ್ರಕರಣದಲ್ಲಿ ಇನ್ನಷ್ಟು ಮಾಹಿತಿ ಕಲೆ ಹಾಕಿದ ನಂತರ ಆರೋಪಿಯನ್ನು ವಶಕ್ಕೆ ಪಡೆಯಲು ಪೊಲೀಸರು ನಿರ್ಧರಿಸಿದ್ದಾರೆ.

  ಇದನ್ನೂ ಓದಿ: Kanpur Rape Case: ಟ್ರಾಫಿಕ್​ ಕಾನ್ಸ್​ಟೇಬಲ್​ ಮಾವನಿಂದ ನಿರಂತರ ಅತ್ಯಾಚಾರ, ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಸೊಸೆ

  ಪ್ರಕರಣದ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿ ಸೂಕ್ತ ಸಾಕ್ಷಾಧಾರಗಳನ್ನು ಕಲೆಹಾಕಲು ಪೊಲೀಸರು ಯತ್ನಿಸುತ್ತಿದ್ದಾರೆ. ಜೊತೆಗೆ ಯುವಕ ಮತ್ತು ಅರ್ಚಕ ಇಬ್ಬರ ಮೆಡಿಕಲ್​ ರಿಪೋರ್ಟ್​ಗಾಗಿಯೂ ಪೊಲೀಸರು ಕಾಯುತ್ತಿದ್ದಾರೆ. ಎಸ್ಟೇಟ್​ ಮ್ಯಾನೇಜರ್​ ಜಾರ್ಜ್​ ಮನೆಯ ಸೆಕ್ಯುರಿಟಿ ಗಾರ್ಡ್​ ಹೇಳಿಕೆಯನ್ನು ಕೂಡ ಈಗಾಗಲೇ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

  ಇದನ್ನೂ ಓದಿ: Crime News: ದತ್ತು ಮಗಳ ಮೇಲೆ ನಿರಂತರ ಅತ್ಯಾಚಾರ ಮಾಡಿದ ತಂದೆ: ಆತ ಏಡ್ಸ್​ ರೋಗಿಯೂ ಹೌದು

  ಹೆಚ್ಚುತ್ತಿವೆ ಲೈಂಗಿಕ ಕಿರುಕುಳ ಪ್ರಕರಣಗಳು:

  ದೇಶಾದ್ಯಂತ ಲೈಂಗಿಕ ಕಿರುಕುಳ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಕೇರಳದಲ್ಲೂ ಕೂಡ ಇತ್ತೀಚೆಗೆ ಮುಂಚೆಗಿಂತ ಹೆಚ್ಚು ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕಣಗಳು ಬೆಳಕಿಗೆ ಬರುತ್ತಿವೆ. 59 ವರ್ಷದ ಗೃಹಿಣಿಯೊಬ್ಬರ ಮೇಲೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ನಿನ್ನೆಯಷ್ಟೇ ಬೆಳಕಿಗೆ ಬಂದಿತ್ತು. ಪ್ರಕರಣ ಸಂಬಂಧ ದೂರು ದಾಖಲಿಸದಂತೆ ಆರೋಪಿ, ಸಂತ್ರಸ್ಥೆಗೆ ಹಣದ ಆಮಿಷವೊಡ್ಡಿದ್ದ. ಆದರೆ ದೂರು ದಾಖಲಿಸಿದ ನಂತರ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದು ಮುಂಡಕ್ಕಾಯಂ ಏರಿಯಾದಲ್ಲೇ ನಡೆದಿತ್ತು. ಮೈಸೂರು ಗ್ಯಾಂಗ್​ ರೇಪ್​, ತುಮಕೂರು ಯುವತಿಯ ಮೇಲಿನ ಸಾಮೂಹಿಕ ಅತ್ಯಾಚಾರ, ಇದೇ ರೀತಿಯ ಹಲವು ಪ್ರಕರಣಗಳು ಕರ್ನಾಟಕದಲ್ಲೂ ನಡೆಯುತ್ತಿವೆ ಮತ್ತು ಬೆಳಕಿಗೆ ಬರುತ್ತಿದೆ. ಚಿಕ್ಕ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳೂ ಸಹ ಇತ್ತೀಚೆಗೆ ಹೆಚ್ಚುತ್ತಿವೆ. ಕೊರೋನಾ ಭಯದಿಂದ ಮನೆಯಲ್ಲೇ ಮಕ್ಕಳು ಇದ್ದಾಗ, ಅಕ್ಕಪಕ್ಕದವರೋ, ಅಥವಾ ಅದೇ ಮನೆಯ ಸದಸ್ಯನೋ ಅತ್ಯಾಚಾರ ಮಾಡಿರುವ ಅದೆಷ್ಟೋ ಪ್ರಕರಣಗಳು ಕೇಳಿಬಂದಿವೆ.
  Published by:Sharath Sharma Kalagaru
  First published: