ದೆಹಲಿ ಚುನಾವಣೆಗೆ ಮುನ್ನ ಕಾಂಗ್ರೆಸ್​ಗೆ ಭಾರೀ ಹಿನ್ನೆಡೆ; ಕೈ ತೊರೆದು ಆಪ್ ಸೇರಿದ ಮತ್ತಿಬ್ಬರು ನಾಯಕರು

ಇನ್ನು ಕಳೆದ ವಾರವಷ್ಟೇ ಕಾಂಗ್ರೆಸ್​ನ ಐವರು ನಾಯಕರು ಪಕ್ಷ ತೊರೆದಿದ್ದರು. ಅದರ ಬೆನ್ನ ಹಿಂದೆ ಇಂದು ಮತ್ತಿಬ್ಬರು ಪಕ್ಷ ತೊರೆಯುವ ಮೂಲಕ ಪಕ್ಷಕ್ಕೆ ಹಿನ್ನೆಡೆಯಾಗಿದೆ. 

Seema.R | news18-kannada
Updated:January 13, 2020, 5:34 PM IST
ದೆಹಲಿ ಚುನಾವಣೆಗೆ ಮುನ್ನ ಕಾಂಗ್ರೆಸ್​ಗೆ ಭಾರೀ ಹಿನ್ನೆಡೆ; ಕೈ ತೊರೆದು ಆಪ್ ಸೇರಿದ ಮತ್ತಿಬ್ಬರು ನಾಯಕರು
ಕೇಜ್ರಿವಾಲ್​ ಸಮ್ಮುಖದಲ್ಲಿ ಆಪ್​ ಪಕ್ಷ ಸೇರಿದ ರಾಮ್​ ಸಿಂಗ್​​ ನೇತಾಜಿ
  • Share this:
ನವದೆಹಲಿ (ಜ.13): ದೆಹಲಿಯ ವಿಧಾನಸಭಾ ಚುನಾವಣೆಗೆ ಇನ್ನೇನು ವಾರಗಳು ಬಾಕಿ ಉಳಿದಿರುವ ಸಮಯದಲ್ಲಿ ಕಾಂಗ್ರೆಸ್​ನ ಮತ್ತಿಬ್ಬರು ನಾಯಕರು ಪಕ್ಷ ತೊರೆದು, ಎಎಪಿ ಸೇರುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ವಿನಯ್​ ಮಿಶ್ರಾ ಮತ್ತು ರಾಮ್​ ಸಿಂಗ್​ ನೇತಾಜಿ ಇಂದು ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಸಮ್ಮುಖದಲ್ಲಿ ಆಪ್​ ಪಕ್ಷ ಸೇರ್ಪಡನೆಗೊಂಡ ನಾಯಕರು. ಕಾಂಗ್ರೆಸ್​ ಮಾಜಿ ಸಂಸದ ಮಹಾಬಲ್​ ಮಿಶ್ರಾ ಅವರ ಮಗ ವಿನಯ್​ ಮಿಶ್ರಾ ಆದರೆ, ರಾಮ್​ ಸಿಂಗ್​ ಬಡರ್ಪುರ್​ ಮಾಜಿ ಶಾಸಕರಾಗಿದ್ದಾರೆ.

ಆಮ್​ ಆದ್ಮಿ ಪಕ್ಷ ಸೇರ್ಪಡನೆ ಕುರಿತು ಮಾತನಾಡಿದ ನೇತಾಜಿ, ರಾಷ್ಟ್ರ ರಾಜಧಾನಿಯಲ್ಲಿ ಆಪ್​ ಸರ್ಕಾರದ ಕಾರ್ಯಕ್ರಮದಿಂದ ಪ್ರೇರೆಪಿತರಾಗಿ ಪಕ್ಷ ಸೇರ್ಪಡನೆಯಾಗಿರುವುದಾಗಿ ತಿಳಿಸಿದರು.

ಇನ್ನು ಇವರ ಜೊತೆ, ಮತ್ತಿಬ್ಬರು ನಾಯಕರಾದ ಜೈ ಭಗವಾನ್​ ಮತ್ತು ನವೀನ್​ ದಿಪು ಚೌದರಿ ಕೂಡ ಆಪ್​ ಸೇರ್ಪಡನೆಯಾಗಿದ್ದಾರೆ. ಇನ್ನು ಕಳೆದ ವಾರವಷ್ಟೇ ಕಾಂಗ್ರೆಸ್​ನ ಐವರು ನಾಯಕರು ಪಕ್ಷ ತೊರೆದಿದ್ದರು. ಅದರ ಬೆನ್ನ ಹಿಂದೆ ಮತ್ತಿಬ್ಬರು ಪಕ್ಷ ತೊರೆಯುವ ಮೂಲಕ ಪಕ್ಷಕ್ಕೆ ಹಿನ್ನೆಡೆಯಾಗಿದೆ.

ಇದನ್ನು ಓದಿ: ನಿಮಗೆ ಬೇಕಾದ 5 ಟೀಕಾಕಾರರೊಂದಿಗಾದರೂ ಪ್ರಶ್ನೋತ್ತರ ನಡೆಸಿ: ಮೋದಿಗೆ ಚಿದಂಬರಮ್ ಸವಾಲು

70 ಸ್ಥಾನಗಳಲ್ಲಿ 67 ಸ್ಥಾನ ಗೆಲ್ಲುವ ಮೂಲಕ ದೆಹಲಿ ಗದ್ದುಗೆ ಹಿಡಿದ ಆಪ್​ ಈ ಬಾರಿ 70ಕ್ಕೆ 70 ಸ್ಥಾನವನ್ನು ಗೆಲ್ಲುವ ಉಮೇದಿನಲ್ಲಿದೆ.

ಆಪ್​ನ ರಾಜಕೀಯ ಎದುರಾಳಿಯಾಗಿರುವ ಬಿಜೆಪಿ ಕೂಡ ಈ ಬಾರಿ ಆಡಳಿತಕ್ಕೆ ಭಾರೀ ಪೈಪೋಟಿ ನಡೆಸಿದ್ದು, ಚುನಾವಣೆಯಲ್ಲಿ ಗೆಲ್ಲುವ ಕುರಿತು ಕಳೆದ ವಾರ ಅಮಿತ್​ ಶಾ ರಣತಂತ್ರ ರೂಪಿಸಿದ್ದರು.
Published by: Seema R
First published: January 13, 2020, 5:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading