• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Viral News: ಜೇಮ್ಸ್ ಬಾಂಡ್​ ರೀತಿ ಗನ್​ ಹಿಡಿದು ಕ್ಯಾಮರಾಗೆ ಪೋಸ್​, ಮುಖವನ್ನೇ ಸುಟ್ಟುಕೊಂಡ ವಧು! ವಿಡಿಯೋ ವೈರಲ್

Viral News: ಜೇಮ್ಸ್ ಬಾಂಡ್​ ರೀತಿ ಗನ್​ ಹಿಡಿದು ಕ್ಯಾಮರಾಗೆ ಪೋಸ್​, ಮುಖವನ್ನೇ ಸುಟ್ಟುಕೊಂಡ ವಧು! ವಿಡಿಯೋ ವೈರಲ್

ಮುಖಮುಖ ಸುಟ್ಟುಕೊಂಡ ವಧು

ಮುಖಮುಖ ಸುಟ್ಟುಕೊಂಡ ವಧು

ವೈರಲ್ ವಿಡಿಯೋದಲ್ಲಿ ವಧು-ವರರು ಆರತಕ್ಷತೆ​ ವೇದಿಕೆಯಲ್ಲಿ ಕೇಕ್ ಮುಂದೆ ಇಟ್ಟು , ಕೈಯಲ್ಲಿ ಸ್ಪಾರ್ಕ್ಲಿಂಗ್ ಬಂದೂಕು ಹಿಡಿದು ಫೋಟೋಗೆ ಪೋಸ್ ನೀಡಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ಒಟ್ಟಿಗೆ ಗನ್​ ಟ್ರಿಗರ್​ ಒತ್ತಿದ್ದಾರೆ. ಆದರೆ ಈ ವೇಳೆ ಯಾರೂ ಊಹಿಸದ ಘಟನೆ ನಡೆದಿದೆ.

 • News18 Kannada
 • 5-MIN READ
 • Last Updated :
 • Mumbai, India
 • Share this:

ಮುಂಬೈ: ಇತ್ತೀಚಿನ ದಿನಗಳಲ್ಲಿ ವಿವಾಹದ (Marriage) ಸಂದರ್ಭದಲ್ಲಿ ಮಹತ್ವದ ದಿನವನ್ನು ವಿಶೇಷವಾಗಿಸಲು ಪ್ರತಿಯೊಬ್ಬರು ಪ್ರಯತ್ನಿಸುತ್ತಾರೆ. ಇನ್ನೂ ಮದುವೆಗೂ ಮುನ್ನವೇ ಪ್ರಿ ವೆಡ್ಡಿಂಗ್ ಫೋಟೋ ಶೂಟಿಂಗ್ (Pre Wedding Photoshoot) ಮಾಡಿಸುವುದು, ಮದುವೆ ದಿನ ವಿಶೇಷವಾಗಿ ಡೆಕೋರೇಶನ್ ಮಾಡಿಸುವುದು, ಆರ್ಕೆಸ್ಟ್ರಾ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಡೆಸುವುದು ರೂಢಿಯಾಗುತ್ತಿದೆ. ಇದಲ್ಲದೆ ನೆನಪಿಗೋಸ್ಕರ ಈ ಎಲ್ಲಾ ಕಾರ್ಯಕ್ರಮ ವಿಡಿಯೋ, ಫೋಟೋಗಳ ಮೂಲಕ ಸೆರೆ ಹಿಡಿಯಲಾಗುತ್ತದೆ. ಇನ್ನೂ ಮದುವೆ ರಿಸೆಪ್ಶನ್ (Marriage Reception) ವೇಳೆ ಕೇಕ್ ಕಟ್​ ಮಾಡಿಸುವುದು,  ಒಂದೇ ಬಾಟೆಲ್​ನಲ್ಲಿ  ಜ್ಯೂಸ್​  ಕುಡಿಸುವುದು ಕಂಡು ಬರುತ್ತದೆ. ಇದೇ ರೀತಿ ಸಂಭ್ರಮಿಸಲು ಹೋದ ಒಂದು ಜೋಡಿ ಎಡವಟ್ಟು ಮಾಡಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ಭಾರೀ ವೈರಲ್ ಆಗುತ್ತಿದೆ.


ಸಿಡಿದ ಸ್ಪಾರ್ಕಿಂಗ್ ಗನ್


ವೈರಲ್ ವಿಡಿಯೋದಲ್ಲಿ ವಧು-ವರರು ರಿಸೆಪ್ಶನ್​ ವೇದಿಕೆಯಲ್ಲಿ ಕೇಕ್ ಮುಂದೆ ಇಟ್ಟು , ಕೈಯಲ್ಲಿ ಸ್ಪಾರ್ಕ್ಲಿಂಗ್ ಬಂದೂಕು ಹಿಡಿದು ಫೋಟೋಗೆ ಪೋಸ್ ನೀಡಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರೂ ಒಟ್ಟಿಗೆ ಗನ್​ ಟ್ರಿಗರ್​ ಒತ್ತಿದ್ದಾರೆ. ಆದರೆ ಈ ವೇಳೆ ಯಾರೂ ಊಹಿಸದ ಘಟನೆ ನಡೆದಿದೆ. ವಧು ಗನ್​ ಟ್ರಿಗರ್ ಒತ್ತುತ್ತಿದ್ದಂತೆ ಗನ್​ ಸ್ಫೋಟಗೊಂಡು, ಬೆಂಕಿ ಕಿಡಿ ಆಕೆಯ ಮುಖಕ್ಕೆ ತಾಗಿದೆ. ತಕ್ಷಣ ಗಾಬರಿಯಾದ ವಧು ಹೆದರಿ ಕಿರುಚಿಕೊಂಡು ಓಡಿದ್ದಾರೆ. ವಧುವಿನ ಮುಖಕ್ಕೆ ಬೆಂಕಿ ತಾಗಿದ್ದರಿಂದ ಒಂದು ಕ್ಷಣ ಸ್ಥಳದಲ್ಲಿದ್ದವರೂ ಕೂಡ ಗಾಬರಿಯಾಗಿದ್ದಾರೆ.ವಿಡಿಯೋ ವೈರಲ್


ಈ ದೃಶ್ಯ ಮೊಬೈಲ್‌ ನಲ್ಲಿ ಸೆರೆಯಾಗಿದ್ದು, ವಿವಿಧ ಸೋಶಿಯಲ್‌ ಮೀಡಿಯಾ ಫ್ಲಾಟ್​ಫಾರ್ಮ್​ನಲ್ಲಿ ವೈರಲ್‌ ಆಗಿದೆ. ಆದಿತಿ ಎನ್ನುವವರು ಈ ವಿಡಿಯೋ ಹಂಚಿಕೊಂಡಿದ್ದು, ಇದು ಮಹಾರಾಷ್ಟ್ರದಲ್ಲಿ ನಡೆದ ಮದುವೆ ಕಾರ್ಯಕ್ರಮ ಎಂದು ವರದಿ ತಿಳಿಸಿದೆ. ಈ ವಿಡಿಯೋ 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಯಾಗಿದೆ. ಈ ದೃಶ್ಯ ಭಯಾನಕವಾಗಿದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದರೆ, ಇನ್ನೂ ಕೆಲವರೂ ಇದೆಲ್ಲಾ ಬೇಕಿತ್ತಾ ಎಂದು ವ್ಯಂಗ್ಯ ಮಾಡಿದ್ದಾರೆ.


ಇದನ್ನೂ ಓದಿ: Marriage Cancel: ವಿಷಯ ಗೊತ್ತಾಗುತ್ತಲೇ ಮಂಟಪದಿಂದ ಹೊರ ಬಂದ ವಧು


ನೋಟು ಎಣಿಸಲು ವರ ವಿಫಲ, ಮದುವೆ ಮುರಿದ ವಧು


ಉತ್ತರ ಪ್ರದೇಶದ ಫಾರುಕ್​ಬಾದ್ ಜಿಲ್ಲೆಯಲ್ಲಿ ವಿವಾಹವೊಂದು ವಿಚಿತ್ರ ಕಾರಣಕ್ಕೆ ಮುರಿದುಬಿದ್ದಿದೆ. ಮದುವೆಯ ಎಲ್ಲಾ ಶಾಸ್ತ್ರಗಳು ಅಚ್ಚಕಟ್ಟಾಗಿ ನಡೆದಿವೆ, ಆದರೆ ಇನ್ನೇನೂ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ವಧು ನನಗೆ ಈ ಮದುವೆ ಬೇಡ ಎಂದು ಹೊರನಡೆದಿದ್ದಾಳೆ. ವಧುವಿಗೆ ವರನ ನಡವಳಿಕೆ ಅನುಮಾನ ಮೂಡಿಸಿದೆ. ಆತನ ವರ್ತನೆ ಸಹಜವಾಗಿಲ್ಲ. ಆತ ಎಲ್ಲರಂತೆ ಇಲ್ಲ ಮಾನಸಿಕ ಅಸ್ವಸ್ಥ ಎಂದು ವಧು ಆರೋಪಿಸಿದ್ದಾಳೆ.
ನೋಟು ಎಣಿಸಲು ಸೋತ ಮದುಮಗ


ವಧುವಿನ ಆರೋಪಕ್ಕೆ ಗಂಡಿನ ಕಡೆಯವರು ಕೆಂಡಮಂಡಲವಾಗಿದ್ದಾರೆ. ವರ ಮಾನಸಿಕ ಅಸ್ವಸ್ಥ ಎನ್ನುವ ವಿಷಯವನ್ನು ಗಂಡಿನ ಕಡೆಯವರು ಒಪ್ಪಿಕೊಂಡಿಲ್ಲ. ಕಡೆಗೆ ವರನಿಗೆ ಒಂದು ಪರೀಕ್ಷೆ ಇಡಲಾಯಿತು. 10 ರೂಪಾಯಿಗಳ 30 ನೋಟುಗಳನ್ನು ತಂದು ಅದನ್ನು ಎಣಿಸುವಂತೆ ಹೇಳಲಾಗಿದೆ. ಆದರೆ ವರನಿಗೆ ಎಣಿಸುವುದಕ್ಕೆ ಸಾಧ್ಯವಾಗಲಿಲ್ಲ. ಇದರಿಂದ ವಧುವಿನ ಕಡೆಯವರು ವರನ ಮನೆಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


ಆಗ ವರನ ಮನೆಯವರು ವರಸೆ ಬದಲಾಯಿಸಿದ್ದಾರೆ. ಹುಡುಗ ಮಾನಸಿಕ ಅಸ್ವಸ್ಥ ಎನ್ನುವುದು ತಮಗೆ ತಿಳಿದಿರಲಿಲ್ಲ ಎಂದಿದ್ದಾರೆ. ಆದರೆ ಹೆಣ್ಣಿನ ಕಡೆಯವರು ಇದನ್ನು ಒಪ್ಪದೇ ಹುಡುಗನ ಕಡೆಯವರು ವಿಷಯ ಮುಚ್ಚಿಟ್ಟು ಮದುವೆ ಮಾಡಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.


ಪೊಲೀಸರಿಂದ ಸಂಧಾನ


ಆರೋಪ ಪ್ರತ್ಯಾರೋಪದ ನಡುವೆ ಪರಿಸ್ಥಿತಿ ಕೈ ಮೀರಿದೆ. ಈ ಸಂದರ್ಭದಲ್ಲಿ ಪೊಲೀಸರು ಸಂಧಾನಕ್ಕೆ ಯತ್ನಿಸಿದ್ದಾರೆ. ಇನ್ನೂ ವರನ ವರ್ತನೆ ಬಗ್ಗೆ ಪುರೋಹಿತರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನು ಪರಿಶೀಲಿಸಿದ ವಧು ಮದುವೆ ಮುರಿದುಕೊಂಡಿದ್ದಾಳೆ. ಈ ಬಗ್ಗೆ ಬೇಸರವಿಲ್ಲವೆಂದು ವಧುವಿನ ಸಹೋದರ ತಿಳಿಸಿದ್ದಾನೆ.

First published: