ಪ್ರೀತಿಸಿದವಳ ಕೈಹಿಡಿದ ಯುವಕ ಮದುವೆ ಮರುದಿನವೇ ನಾಪತ್ತೆ; ಹುಡುಕಿ ಹೊರಟವರಿಗೆ ಕಾದಿತ್ತು ಶಾಕ್!

ಉತ್ತರ ಪ್ರದೇಶದ ಬರೇಲಿಯಲ್ಲಿ ಸೋಮವಾರ ದುಷ್ಯಂತ್ ಗಿರಿ ಎಂಬ 22 ವರ್ಷದ ಯುವಕ ತಾನು ಇಷ್ಟಪಟ್ಟ ಹುಡುಗಿಯೊಂದಿಗೆ ಮದುವೆಯಾಗಿದ್ದ. ಮಂಗಳವಾರ ಮದುವೆ ಮಂಟಪದಿಂದ ಮನೆಗೆ ಹೋಗುವಾಗ ದಿಢೀರ್ ಎಂದು ನಾಪತ್ತೆಯಾಗಿದ್ದ.

Sushma Chakre | news18-kannada
Updated:February 13, 2020, 12:18 PM IST
ಪ್ರೀತಿಸಿದವಳ ಕೈಹಿಡಿದ ಯುವಕ ಮದುವೆ ಮರುದಿನವೇ ನಾಪತ್ತೆ; ಹುಡುಕಿ ಹೊರಟವರಿಗೆ ಕಾದಿತ್ತು ಶಾಕ್!
ಸಾಂದರ್ಭಿಕ ಚಿತ್ರ
  • Share this:
ಬರೇಲಿ (ಫೆ. 13): ಭವಿಷ್ಯದ ಬಗ್ಗೆ ನೂರಾರು ಕನಸುಗಳನ್ನು ಹೊತ್ತು ಆಕೆ ಆತನನ್ನು ಮದುವೆಯಾಗಿದ್ದಳು. ಆತ ಕೂಡ ಇಷ್ಟಪಟ್ಟು ಆಕೆಯನ್ನು ಮದುವೆಯಾಗಿದ್ದ. ಎರಡೂ ಕುಟುಂಬದವರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದ ಅವರಿಬ್ಬರ ಮದುವೆಯಾಗಿ ಒಂದು ದಿನ ಕಳೆದಿತ್ತು. ಆದರೆ, ಎಲ್ಲವೂ ಆಕೆ ಅಂದುಕೊಂಡಂತೆ ನಡೆಯಲಿಲ್ಲ. ಹೊಸ ಜೀವನವನ್ನು ಸ್ವಾಗತಿಸಲು ಕಾತುರದಿಂದ ಕಾಯುತ್ತಿದ್ದ ಮದುಮಗಳಿಗೆ ಆಘಾತವೊಂದು ಕಾದಿತ್ತು.

ಉತ್ತರ ಪ್ರದೇಶದ ಬರೇಲಿಯಲ್ಲಿ ಸೋಮವಾರ ದುಷ್ಯಂತ್ ಗಿರಿ ಎಂಬ 22 ವರ್ಷದ ಯುವಕ ತಾನು ಇಷ್ಟಪಟ್ಟ ಹುಡುಗಿಯೊಂದಿಗೆ ಮದುವೆಯಾಗಿದ್ದ. ಮಂಗಳವಾರ ಮದುವೆ ಮಂಟಪದಿಂದ  ಮನದೊಡತಿಯೊಂದಿಗೆ ಮನೆಗೆ ವಾಪಾಸ್ ಹೋಗುವಾಗ ಮನೆಯವರೆಲ್ಲ ರಸ್ತೆಪಕ್ಕದ ಹೋಟೆಲ್ ಒಂದರಲ್ಲಿ ಟೀ ಕುಡಿಯಲು ಕಾರು ನಿಲ್ಲಿಸಿದ್ದರು. ಈ ವೇಳೆ ಆಚೆ ಹೋಗಿಬರುತ್ತೇನೆಂದು ಹೊರನಡೆದ ದುಷ್ಯಂತ್ ಬಹಳ ಸಮಯವಾದರೂ ವಾಪಾಸ್ ಬರಲಿಲ್ಲ. ಹೋಟೆಲ್ ಸುತ್ತಮುತ್ತಲೂ ಹುಡುಕಿದ ಆತನ ಮನೆಯವರಿಗೆ ಯಾವ ಸುಳಿವೂ ಸಿಗಲಿಲ್ಲ.

ಇದನ್ನೂ ಓದಿ: ಮೂರನೇ ಬಾರಿ ಹಸೆಮಣೆ ಏರಿದ ವರ; ಮದುವೆ ಮಂಟಪದಲ್ಲೇ ಮೊದಲ ಹೆಂಡತಿಯಿಂದ ಬಿತ್ತು ಗೂಸಾ

ಮದುಮಕ್ಕಳನ್ನು ಮನೆ ತುಂಬಿಸಿಕೊಳ್ಳಲು ಕರೆದುಕೊಂಡು ಹೋಗುತ್ತಿದ್ದ ದುಷ್ಯಂತ್ ಮನೆಯವರಿಗೆ ಇದರಿಂದ ಆಘಾತವಾಯಿತು. ಮದುಮಗನೇ ಇಲ್ಲದೆ ಸೊಸೆಯನ್ನು ಮನೆ ತುಂಬಿಸಿಕೊಳ್ಳಲು ಸಾಧ್ಯವಿಲ್ಲವೆಂದು ಮದುಮಗಳನ್ನು ಆಕೆಯ ತವರುಮನೆಗೆ ವಾಪಾಸ್ ಕಳುಹಿಸಲಾಯಿತು. ದುಷ್ಯಂತ್ ಸಿಕ್ಕಮೇಲೆ ಆಕೆಯನ್ನು ಮನೆಗೆ ಕರೆದುಕೊಂಡು ಬರಲು ನಿರ್ಧರಿಸಲಾಯಿತು. ತಮ್ಮ ಮಗ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾನೆ ಎಂದು ದುಷ್ಯಂತ್ ಮನೆಯವರು ಪೊಲೀಸರಿಗೆ ದೂರು ನೀಡಿದರು.

ದುಷ್ಯಂತ್ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸರು ಹೋಟೆಲ್​ನ ಸುತ್ತಮುತ್ತಲೂ ಹುಡುಕಾಟ ನಡೆಸಿದ್ದರು. 1 ದಿನದ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಆ ಯುವಕ ಶವವಾಗಿ ಪತ್ತೆಯಾಗಿದ್ದ. ಹೋಟೆಲ್​ನಿಂದ 2 ಕಿ.ಮೀ. ದೂರದಲ್ಲಿದ್ದ ನಿರ್ಜನ ಪ್ರದೇಶದಲ್ಲಿದ್ದ ಮರದಲ್ಲಿ ದುಷ್ಯಂತ್ ದೇಹ ನೇತಾಡುತ್ತಿತ್ತು. ದುಷ್ಯಂತ್ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ತಿಳಿದು ಆತನ ಮನೆಯವರು ಆಘಾತಕ್ಕೊಳಗಾಗಿದ್ದಾರೆ. ಮಗನ ಪೋಸ್ಟ್​ಮಾರ್ಟಂ ಕೂಡ ಮಾಡುವುದು ಬೇಡ, ಈ ಸಾವಿನ ವಿಚಾರದಲ್ಲಿ ಮತ್ತೆ ತನಿಖೆ ನಡೆಸಿ ನಮ್ಮನ್ನು ಇನ್ನಷ್ಟು ಮಾನಸಿಕವಾಗಿ ಹಿಂಸಿಸಬೇಡಿ ಎಂದು ಆತನ ಮನೆಯವರು ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಚೀನಾದಿಂದ ಬಂದ ವರನನ್ನೇ ಬಿಟ್ಟು ಮಗಳ ಮದುವೆ ರಿಸೆಪ್ಷನ್ ನಡೆಸಿದ ಕೇರಳ ಕುಟುಂಬ!

ಆದರೆ, ಕಾನೂನು ಪ್ರಕಾರವಾಗಿ ಪೊಲೀಸರು ದುಷ್ಯಂತ್ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಆತ ನೇಣು ಬಿಗಿದುಕೊಂಡು ಸಾವನ್ನಪ್ಪಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಖಚಿತವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದುಷ್ಯಂತ್ ಅವರ ಹೆಂಡತಿ ಆಶಾ, 'ಈ ಘಟನೆಯಿಂದ ನಮ್ಮ ಮನೆಯವರೆಲ್ಲರಿಗೂ ತುಂಬ ಆಘಾತವಾಗಿದೆ.ಈ ಸಾವಿನ ಹಿಂದೆ ಬೇರೋ ಸಂಚು ನಡೆದಿದೆ. ನನ್ನನ್ನು ಮದುವೆಯಾಗುತ್ತಿರುವುದಕ್ಕೆ ಮತ್ತು ಮದುವೆಯಾದ ನಂತರವೂ ದುಷ್ಯಂತ್ ಬಹಳ ಖುಷಿಯಾಗಿದ್ದರು. ಅವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇ ಇರಲಿಲ್ಲ. ಮದುವೆಯಾಗಿ 1 ದಿನ ಕಳೆಯುವಷ್ಟರಲ್ಲಿ ಗಂಡನನ್ನು ಕಳೆದುಕೊಂಡಿರುವುದು ಬಹಳ ನೋವಿದೆ' ಎಂದಿದ್ದಾರೆ.ದುಷ್ಯಂತ್ ಮೀರತ್​ನ ಪೆಟ್ರೋಲ್​ ಬಂಕ್​ನಲ್ಲಿ ಸೇಲ್ಸ್​ಮನ್ ಆಗಿ ಕೆಲಸ ಮಾಡುತ್ತಿದ್ದರು. ತಾನು ಪ್ರೀತಿಸಿದ್ದ ಹುಡುಗಿಯನ್ನು ಮದುವೆಯಾಗುವ ಸಲುವಾಗಿ ಕೆಲವು ದಿನಗಳ ಹಿಂದಷ್ಟೇ ಬರೇಲಿಗೆ ಶಿಫ್ಟ್​ ಆಗಿದ್ದರು. ಈ ಮದುವೆಗೆ ಎರಡೂ ಕುಟುಂಬದವರೂ ಒಪ್ಪಿಗೆ ಸೂಚಿಸಿದ್ದರು. ಹೀಗಿದ್ದರೂ ಆತ ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬುದೇ ದೊಡ್ಡ ಪ್ರಶ್ನೆಯಾಗಿ ಉಳಿದಿದೆ.
First published:February 13, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading