ಕುಟುಂಬಗಳು ಒಪ್ಪಿದ್ದರೂ ಹಿಂದೂ ಯುವತಿ, ಮುಸ್ಲಿಂ ಯುವಕನ ಆರತಕ್ಷತೆಗೆ ಅಡ್ಡಿ: ಲವ್ ಜಿಹಾದ್ ಆರೋಪ

ಮದುವೆ ಕರೆಯೋಲೆ ಹೊತ್ತಿಸಿತು “ಲವ್ ಜಿಹಾದ್” ಕಿಡಿ: ಪ್ರತಿಭಟನೆ ಬೆದರಿಕೆಗೆ ಮಣಿದು ಆರತಕ್ಷತೆ ಸಮಾರಂಭ ರದ್ದು!

ಆರತಕ್ಷತೆಯ ಆಮಂತ್ರಣ ಪತ್ರಿಕೆ

ಆರತಕ್ಷತೆಯ ಆಮಂತ್ರಣ ಪತ್ರಿಕೆ

 • Share this:

  ಎರಡು ಹೃದಯಗಳು, ಎರಡು ಕುಟುಂಬ ಮತ್ತು ಎರಡು ಧರ್ಮಗಳ ಮಿಲನವನ್ನು ಸಂಭ್ರಮಿಸಬೇಕು ಎಂದು ಅವರೆಲ್ಲಾ ಅಂದುಕೊಂಡಿದ್ದರು. ಆದರೆ ಯಾರೋ ಮದುವೆಯ ಕರೆಯೋಲೆಗೆ ತಗಾದೆ ತೆಗೆದು ಅವರ ಸಂಭ್ರಮಕ್ಕೆ ತಣ್ಣೀರೆರೆಚಿದ್ದಾರೆ. ಮಹಾರಾಷ್ಟ್ರದ ನಾಸಿಕ್‍ನ ಕುಟುಂಬವೊಂದು ತಮ್ಮ 28 ವರ್ಷದ ಮಗಳ ವಿವಾಹವನ್ನು ಮುಸ್ಲಿಂ ಪುರುಷನ ಜೊತೆ ಹಿಂದೂ ಸಂಪ್ರದಾಯದಂತೆ ನೆರವೇರಿಸುವುದರಲ್ಲಿದ್ದರು. ಆದರೆ ಅವರ ಸಮುದಾಯದವರು ಪ್ರತಿಭಟನೆ ನಡೆಸಿದ್ದರಿಂದ ಸಮಾರಂಭವನ್ನು ರದ್ದುಗೊಳಿಸಬೇಕಾಯಿತು. ಪ್ರತಿಭಟನಾಕಾರರು ಈ ಮದುವೆಯನ್ನು ‘ಲವ್ ಜಿಹಾದ್’ ಪ್ರಕರಣ ಎಂದು ಕರೆದಿದ್ದಾರೆ.    ಅದ್ಧೂರಿ ಮದುವೆ ಆರತಕ್ಷತೆಯನ್ನು ರದ್ದು ಮಾಡಿದರು ಕುಟುಂಬದವರು ತಮ್ಮ ಮಗಳ ಆಯ್ಕೆಗೆ ಬೆಂಬಲವಾಗಿ ನಿಲ್ಲಲು ನಿರ್ಧರಿಸಿದರು. ಅವರ ಪ್ರಕಾರ ಯಾವುದೇ ಒತ್ತಾಯದ ಮತಾಂತರ ನಡೆದಿಲ್ಲ. ಮದುವೆಯನ್ನು ಈಗಾಗಲೇ ಸ್ಥಳಿಯ ನ್ಯಾಯಾಲಯದಲ್ಲಿ ನೋಂದಾಯಿಸಲಾಗಿದೆ. ಪ್ರಮುಖ ಆಭರಣ ವ್ಯಾಪಾರಿ ಮತ್ತು ವಧುವಿನ ತಂದೆ ಪ್ರಸಾದ್ ಅಡ್‍ಗಾಂವ್ಕರ್‌ ಅವರ ಪ್ರಕಾರ ಅವರ ಮಗಳು ರಸಿಕಾ ಅಂಗವೈಕಲ್ಯದಿಂದ ಬಳಲುತ್ತಿದ್ದರು. ಆಕೆಗಾಗಿ ಸೂಕ್ತ ವರನನ್ನು ಹುಡುಕಲು ಅವರ ಕುಟುಂಬ ಕೆಲವು ತೊಂದರೆಗಳನ್ನು ಎದುರಿಸಿತ್ತು. ಇತ್ತೀಚೆಗೆ ಆಕೆ ಮತ್ತು ಆಕೆಯ ಮಾಜಿ ಸಹಪಾಠಿ ಆಸಿಫ್ ಖಾನ್ ಮದುವೆಯಾಗುವ ಬಯಕೆ ವ್ಯಕ್ತಪಡಿಸಿದರು. ಎರಡು ಕುಟುಂಬಗಳು ಬಹಳ ವರ್ಷಗಳಿಂದ ಒಬ್ಬರಿಗೊಬ್ಬರು ಪರಿಚಯ ಇರುವುದರಿಂದ ಈ ಮದುವೆಗೆ ಅವರಿಂದ ಸಮ್ಮತಿ ದೊರೆಯಿತು.  ಮೇ ತಿಂಗಳಲ್ಲಿ ನಾಸಿಕ್ ನ್ಯಾಯಾಲಯದಲ್ಲಿ ಎರಡೂ ಕುಟುಂಬಗಳ ಸಮ್ಮುಖದಲ್ಲಿ ಈ ಮದುವೆ ರಿಜಿಸ್ಟರ್ ಆಯಿತು ಎಂದು ಅಡ್‍ಗಾಂವ್ಕರ್‌ ತಿಳಿಸಿದ್ದಾರೆ. ಆ ಸಮಯದಲ್ಲಿ ವಧು ಅತ್ತೆಯ ಮನೆಗೆ ಹೋಗುವ ಮೊದಲು ಜುಲೈ 18ರಂದು ಮದುವೆಯ ವಿಧಿ ವಿಧಾನಗಳನ್ನು ನೆರವೇರಿಸಲು ಅವರು ಒಪ್ಪಿಗೆ ನೀಡಿದ್ದರು. ಈ ಸಮಾರಂಭವನ್ನು ಹತ್ತಿರದ ಸಂಬಂಧಿಗಳ ಸಮ್ಮುಖದಲ್ಲಿ ನಾಸಿಕ್‍ನ ಹೊಟೇಲೊಂದರಲ್ಲಿ ನೆರವೇರಿಸಲು ನಿರ್ಧರಿಸಲಾಗಿತ್ತು. ಆದರೆ ಮದುವೆಯ ಆಮಂತ್ರಣ ಪತ್ರಿಕೆ ವಿವಿಧ ವಾಟ್ಸ್ಯಾಪ್ ಗ್ರೂಪ್‍ಗಳಲ್ಲಿ ಹಂಚಿಕೆಯಾಗಿ ಮದುವೆಯನ್ನು ರದ್ದುಗೊಳಿಸುವಂತೆ ಅಪರಿಚಿತರು ಸೇರಿದಂತೆ ಹಲವರಿಂದ ಪ್ರತಿಭಟನೆ ಬೆದರಿಕೆಗಳು ಬಂದಿವೆ. ಪ್ರತಿಭಟನೆಗೆ ಪ್ರಚೋದನೆ ನೀಡುವಂತ ಸಂದೇಶಗಳು ಮತ್ತು ಕರೆಗಳು ಬರತೊಡಗಿದವು ಎಂದು ವಧುವಿನ ತಂದೆ ತಿಳಿಸಿದ್ದಾರೆ.


  ಇದನ್ನೂ ಓದಿ: Love Jihad: ಹಿಂದೂ ಹುಡುಗ ಮದುವೆಯ ವೇಳೆ ಹಿಂದೂ ಹುಡುಗಿಗೆ ಸುಳ್ಳು ವಿವರ ನೀಡಿದ್ದರೆ, ಆಗಲೂ ಅದು ಲವ್ ಜಿಹಾದ್ !


  ಜುಲೈ 9ರಂದು ಸಮುದಾಯದ ಸದಸ್ಯರು ಅಡ್‍ಗಾಂವ್ಕರ್‌ ರನ್ನು ಕರೆದು ಸಮಾರಂಭ ನಡೆಸದಂತೆ ಸಲಹೆ ನೀಡಲಾಯಿತು. “ಸಮುದಾಯದ ಜನರು ಮತ್ತು ಇತರರಿಂದ ಬಹಳಷ್ಟು ಒತ್ತಡಗಳು ಬರತೊಡಗಿದವು. ಹಾಗಾಗಿ ಸಮಾರಂಭವನ್ನು ರದ್ದುಗೊಳಿಸಲು ತೀರ್ಮಾನಿಸಿದೆವು” ಎಂದು ಕುಟುಂಬದ ಮತ್ತೊಬ್ಬ ಸದಸ್ಯರು ತಿಳಿಸಿದ್ದಾರೆ. ಬಳಿಕ, ಸಮಾರಂಭವನ್ನು ರದ್ದುಗೊಳಿಸಲಾಗಿದೆ ಎಂದು ಸಮುದಾಯ ಸಂಸ್ಥೆಗೆ ಒಂದು ಪತ್ರವನ್ನು ಸಲ್ಲಿಸಬೇಕಾಯಿತು. ಈ ಪ್ರಕರಣದ ಕುರಿತು ಪೊಲೀಸರನ್ನು ಸಂಪರ್ಕಿಸದಿರಲು ಮಹಿಳೆಯ ಕುಟುಂಬ ನಿರ್ಧರಿಸಿದೆ.

  Published by:Kavya V
  First published: