ಟಿಕ್...ಟಿಕ್... ಬರುತ್ತಿದೆ ಮನುಕುಲದ ಅಂತ್ಯದ ಕಾಲ!?

ಹವಾಮಾನ ಬದಲಾವಣೆ ಇದೇ ಗತಿಯಲ್ಲಿ ಮುಂದುವರಿದರೆ ಇಡೀ ವಿಶ್ವ ಉಳಿಯುವ ಸಾಧ್ಯತೆಗಳು ಕ್ಷೀಣಿಸುತ್ತದೆ. ಜೀವ ವಿನಾಶದ ಪ್ರಕ್ರಿಯೆ ಅತ್ಯಂತ ತೀವ್ರಗೊಂಡಿದೆ.

(Photo:Google)

(Photo:Google)

 • Share this:
  ಪ್ರಪಂಚದ ಮಹಾ ಅಂತ್ಯ ಆರಂಭವಾಗಿದೆಯೇ?. ಅದು ಮಾನವನ ಅಸ್ತಿತ್ವವನ್ನೇ ಅಳಿಸಿ ಹಾಕುತ್ತದೆಯೇ?.. ಹೌದೆನ್ನುತ್ತಾರೆ ಬೈಬಲ್ ಬೋಧಕರು. ಹವಾಮಾನ ಬದಲಾವಣೆ ಇದೇ ಗತಿಯಲ್ಲಿ ಮುಂದುವರಿದರೆ ಇಡೀ ವಿಶ್ವ ಉಳಿಯುವ ಸಾಧ್ಯತೆಗಳು ಕ್ಷೀಣಿಸುತ್ತದೆ. ಜೀವ ವಿನಾಶದ ಪ್ರಕ್ರಿಯೆ ಅತ್ಯಂತ ತೀವ್ರಗೊಂಡಿದೆ. ಮಾನವೀಯತೆಯು ಪ್ರಸ್ತುತ ಅದರ ಕೊನೆಯ ಕಾಲದಲ್ಲಿ ಸಾಗುತ್ತಿದೆ ಎಂದು ನಂಬುತ್ತಾರೆ ಪಾದ್ರಿ ಪಾಲ್ ಬೆಗ್ಲೆ ಸೇರಿದಂತೆ ಹಲವಾರು ಬೈಬಲ್ ಬೋಧಕರು ನಂಬಿದ್ದಾರೆ.

  ಬೈಬಲ್ ಬೋಧರ ಪ್ರಕಾರ, ಕೊರೊನಾ ವೈರಸ್ ಸಾಂಕ್ರಾಮಿಕವು ಏಕಾಏಕಿ ದಾಳಿಯಿಟ್ಟು ಲಕ್ಷಾಂತರ ಜೀವಗಳನ್ನು ಬಲಿ ಪಡೆದುಕೊಂಡಿದೆ. ಇತ್ತೀಚೆಗೆ ನಡೆಯುತ್ತಿರುವ ಅಪಾಯಕಾರಿ ಘಟನೆಗಳು ಪ್ರಪಂಚದ ಅಂತ್ಯವನ್ನು ಸಂಕೇತಿಸುತ್ತಿವೆ ಮತ್ತು ಕ್ರಿಸ್ತನ 2ನೇ ಬರುವಿಕೆ ಸನ್ನಿಹಿತವಾಗಿದೆ ಎಂದು ಅವರು ವಾದಿಸುತ್ತಾರೆ. ನಂಬಲಾಗದ ಈ ಮುನ್ಸೂಚನೆಗಳ ಬಗ್ಗೆ ಕೇಳಿ ನಿಮಗೆ ಶಾಕ್ ಆಗಬಹುದು. ಮರುಭೂಮಿಗಳಲ್ಲಿ ಹಿಮಪಾತ ಸನ್ನಿಹಿತವಾಗಿ ವಿಶ್ವ ಅಂತ್ಯದ ಮತ್ತೊಂದು ಸಂಕೇತವಾಗಬಹುದು ಎಂದು ಬೈಬಲ್ ವ್ಯಾಖ್ಯಾನಕಾರರು ಎಚ್ಚರಿಸಿದ್ದಾರೆ.

  ಮರುಭೂಮಿಯಲ್ಲಿನ ಹಿಮಪಾತ ಬೈಬಲ್ ಭವಿಷ್ಯವಾಣಿಯನ್ನು ನಿಜವಾಗಿಸುತ್ತಿದೆಯೇ?

  ಸೌದಿ ಅರೇಬಿಯಾದ ಆಸಿರ್ ಪ್ರಾಂತ್ಯದಲ್ಲಿ 50 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹಿಮ ಬೀಳುತ್ತಿದ್ದಂತೆ ಬೈಬಲ್ ನಂಬುವವರು ಈ ಭವಿಷ್ಯ ನುಡಿದಿದ್ದಾರೆ. ಭಾರೀ ಹಿಮಪಾತದಿಂದಾಗಿ ಈ ಪ್ರದೇಶದಲ್ಲಿನ ತಾಪಮಾನವು -2 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ.

  ಈ ಮಧ್ಯೆ ಅಲ್ಜೀರಿಯಾದ ಪಟ್ಟಣ ಐನ್ ಸೆಫ್ರಾದಲ್ಲಿ ಕೂಡ ಹಿಮಪಾತವಾಯಿತು. ಈ ಪ್ರದೇಶವನ್ನು ಗೇಟ್‌ವೇ ಟು ಸಹಾರಾ ಎಂದು ಕರೆಯಲಾಗುತ್ತದೆ. ಅಲ್ಲಿ ಹವಾಮಾನ ಸಾಮಾನ್ಯವಾಗಿ ಶುಷ್ಕವಾಗಿರುತ್ತದೆ. ಈ ಎರಡು ಅಸಾಮಾನ್ಯ ಪ್ರದೇಶಗಳಲ್ಲಿ ಅನಿರೀಕ್ಷಿತ ಹವಾಮಾನ ಬದಲಾವಣೆಗಳು ಸಂಭವಿಸಿರುವುದರಿಂದ ಈ ಘಟನೆಗಳು ವಿಶ್ವದ ಅಂತ್ಯವನ್ನು ಸಂಕೇತಿಸುತ್ತಿವೆ ಎಂದು ಅನೇಕ ಜನರು ಮಾತನಾಡಲು ಪ್ರಾರಂಭಿಸಿದ್ದಾರೆ.

  ಬೈಬಲ್ ನ ಭವಿಷ್ಯವಾಣಿಯನ್ನು ನಿಜವೆಂದು ಹೇಳುತ್ತಿರುವ ಇಸ್ರೇಲ್ 365 ನ್ಯೂಸ್, ಮರುಭೂಮಿಗಳಲ್ಲಿ ಹಿಮಪಾತವಾದಾಗ ಪ್ರವಾದಿ ಯೆಶಾಯನು ಪ್ರಪಂಚದ ಅಂತ್ಯದ ಸಾಧ್ಯತೆಯ ಬಗ್ಗೆ ಮಾತನಾಡಿದ್ದಾನೆಂದು ವರದಿ ಮಾಡಿದೆ.

  ‘ಶುಷ್ಕ ಮರುಭೂಮಿ ಮತ್ತಷ್ಟು ಉತ್ತಮವಾಗಲಿದೆ, ಅರಣ್ಯವು ಸಮೃದ್ಧವಾಗಿ ಬೆಳೆಯಲಿದೆ/ ಗುಲಾಬಿಯಂತೆ ಅರಳುತ್ತದೆ. ನಾನು ಹೊಸದನ್ನು ಸೃಷ್ಟಿಸಲಿದ್ದೇನೆ/ ಈಗಲೂ ಅದು ಸಂಭವಿಸಲಿದೆ. ಇದ್ದಕ್ಕಿದ್ದಂತೆ ನೀವು ಅದನ್ನು ಗ್ರಹಿಸುವಿರಿ/ ನಾನು ಅರಣ್ಯದ ಮೂಲಕ ಒಂದು ರಸ್ತೆಯನ್ನು ನಿರ್ಮಿಸುತ್ತೇನೆ/ಮತ್ತು ಮರುಭೂಮಿಯಲ್ಲಿ ನದಿಗಳು ಸೃಷ್ಟಿಯಾಗುತ್ತವೆ’ ಎಂದು ಯೆಶಾಯನು ಹೇಳಿದ್ದಾನೆಂದು ನಂಬಲಾಗಿದೆ.

  ತಾಪಮಾನದಲ್ಲಿ ಹಠಾತ್ ಕುಸಿತಕ್ಕೆ ಕಾರಣವೇನು?

  ಸದ್ಯ ಚಳಿಗಾಲದಲ್ಲಿ ತಾಪಮಾನವು ವಿಶ್ವದ ಹಲವಾರು ಭಾಗಗಳಲ್ಲಿ ಅಸಾಮಾನ್ಯವಾಗಿದೆ ಎಂಬುದನ್ನು ಗಮನಿಸಬೇಕು. ಭಾರತದಲ್ಲಿಯೇ ತೆಗೆದುಕೊಂಡರೆ ದೆಹಲಿಯು 119 ವರ್ಷಗಳಲ್ಲಿ ಅತ್ಯಂತ ತಂಪಾದ ಹವಾಮಾನವನ್ನು ದಾಖಲಿಸಿದೆ. ಆದರೆ 1971ರಿಂದ ಸ್ಪೇನ್ ಅತ್ಯಂತ ಭೀಕರವಾದ ಹಿಮಪಾತಕ್ಕೆ ಸಾಕ್ಷಿಯಾಗಿದೆ. ಈ ಅಸಾಮಾನ್ಯ ಶೀತ ವಾತಾವರಣವನ್ನು ವಿಶ್ವದ ಅಂತ್ಯದ ಸಂಕೇತವೆಂದು ಪರಿಗಣಿಸಿದ್ದರೂ ಕೂಡ ಹವಾಮಾನ ತಜ್ಞರು ಮಾನವ ಹಸ್ತಕ್ಷೇಪದಿಂದಾಗಿ ಹವಾಮಾನ ಬದಲಾವಣೆಗೆ ಕಾರಣವೆಂದು ಹೇಳಿದ್ದಾರೆ. ವಿಶ್ವದ ಅನೇಕ ದೇಶಗಳು ಈ ಹಠಾತ್ ತಾಪಮಾನ ಕುಸಿತಕ್ಕೆ ಸಾಕ್ಷಿಯಾಗಿವೆ ಎಂದೂ ಕೂಡ ಗಮನಸೆಳೆದಿದ್ದಾರೆ.

  ವಾತಾವರಣದಲ್ಲಿನ ಇಂಗಾಲದ ಮಟ್ಟವು ಹೆಚ್ಚಾದಂತೆ ಇದು ಬಿಸಿಯಾದ ಮತ್ತು ತಂಪಾದ ತಾಪಮಾನಕ್ಕೆ ಕಾರಣವಾಗಬಹುದು ಮತ್ತು ಪ್ರಪಂಚದಾದ್ಯಂತ ಅಸಾಮಾನ್ಯ ಹವಾಮಾನ ಮಾದರಿಗಳನ್ನು ಸಹ ಪ್ರಚೋದಿಸಬಹುದು ಎಂದು ಹೇಳಲಾಗಿದೆ.
  Published by:Harshith AS
  First published: