ಕೊರೋನಾ ವೈರಸ್ ತಡೆಯಲು ಫೇಸ್ ಮಾಸ್ಕ್ ಬಳಸಿದರೆ ಸೋಂಕು ಹೆಚ್ಚುವ ಸಾಧ್ಯತೆ: ವರದಿ

ಈ ಮುನ್ನೆಚ್ಚರಿಕೆ ಕ್ರಮಗಳಲ್ಲಿ ಮನೆಯಿಂದ ಹೊರ ಹೋಗುವಾಗ ಮುಖಕ್ಕೆ ಮಾಸ್ಕ್ ಧರಿಸುವುದು ಕೂಡ ಒಂದು. ಮಾಸ್ಕ್ ಧರಿಸುವುದರಿಂದ ನಿಜವಾಗಿಯು ಕೊರೋನಾ ವೈರಸ್ ಬರದಂತೆ ತಡೆಗಟ್ಟಬಹುದೇ?

Here the simple measures can prevent coronavirus

Here the simple measures can prevent coronavirus

 • Share this:
  ಕೊರೋನಾ ವೈರಸ್ ಜಗತ್ತಿನಾದ್ಯಂತ ಜನರನ್ನು ಬೆಚ್ಚಿ ಬೀಳಿಸಿರುವುದಂತೂ ಸತ್ಯ. 70 ಕ್ಕೂ ಹೆಚ್ಚು ದೇಶಗಳಿಗೆ ಹರಡಿರುವ ಈ ಮಹಾಮಾರಿ 3200ಕ್ಕೂ ಹೆಚ್ಚು ಜನರನ್ನು ಇದುವರೆಗೆ ಬಲಿ ತೆಗೆದುಕೊಂಡಿದೆ.

  ಚೀನಾದಲ್ಲಿ ವ್ಯಾಪಕವಾಗಿದ್ದ ಈ ರೋಗ ಇದೀಗ ಭಾರತಕ್ಕೂ ಕಾಲಿಟ್ಟಿದ್ದು 26 ವೈರಸ್ ಸೋಂಕಿತ ಪ್ರಕರಣ ವರದಿಯಾಗಿದೆ. ಈ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ರೆಡ್ ಆಲರ್ಟ ಘೋಷಿಸಿದೆ. ಜನರಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಹೇಳಿದೆ.

  ಈ ಮುನ್ನೆಚ್ಚರಿಕೆ ಕ್ರಮಗಳಲ್ಲಿ ಮನೆಯಿಂದ ಹೊರ ಹೋಗುವಾಗ ಮುಖಕ್ಕೆ ಮಾಸ್ಕ್ ಧರಿಸುವುದು ಕೂಡ ಒಂದು. ಮಾಸ್ಕ್ ಧರಿಸುವುದರಿಂದ ನಿಜವಾಗಿಯು ಕೊರೋನಾ ವೈರಸ್ ಬರದಂತೆ ತಡೆಗಟ್ಟಬಹುದೇ?

  ಇಲ್ಲ, ಈಗ ಬಂದಿರುವ ಮಾಹಿತಿಯ ಪ್ರಕಾರ ಮಾಸ್ಕ್ ಧರಿಸುವುದರಿಂದಲೇ ಸೋಂಕು ಹೆಚ್ಚಾಗುವ ಸಾಧ್ಯತೆ ಇರುತ್ತದೆ ಎಂದು ಲೋವಾಸ್ ವಿಶ್ವವಿದ್ಯಾನಿಲಯದ ಔಷಧ ಕಾಲೇಜಿನ ಮೆಡಿಸಿನ್ ಮತ್ತು ಸಾಂಕ್ರಾಮಿಕ ರೋಗಶಾಸ್ರದ ಪ್ರಾಧ್ಯಾಪಕಿ ಎಲಿ ಪೆರೆನ್ಸ್ ಹೇಳಿದ್ದಾರೆ.

  ಆರೋಗ್ಯಕರವಾಗಿರುವ ಮನುಷ್ಯ ಮಾಸ್ಕ್ ಬಳಸುವ ಅಗತ್ಯವಿಲ್ಲ. ಅವರು ಮಾಸ್ಕ್ ಅನ್ನು ಸರಿಯಾಗಿ ಹಾಕಿಕೊಳ್ಳದೇ ಇದ್ದರೆ ಪದೇ ಪದೇ ಮುಖವನ್ನು ಮುಟ್ಟಿಕೊಳ್ಳುವ ಸಾಧ್ಯತೆ ಇರುವುದರಿಂದ ಸೋಂಕು ಹೆಚ್ಚಾಗುವ ಸಾಧ್ಯತೆ ಹೆಚ್ಚು. ನಾವು ಮಾಸ್ಕ್ ಧರಿಸಿದಾಗ ನಾವು ಹೊರ ಹಾಕಿದ ಉಸಿರು ಹೊರ ಹೋಗಲು ಸ್ಥಳವಿರುವುದಿಲ್ಲ ಹಾಗಗಿ ನಮ್ಮ ಉಸಿರನ್ನು ನಾವೇ ಮತ್ತೆ ಎಳೆದುಕೊಳ್ಳುತ್ತೇವೆ ಇದರಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತವೆ.

  ನಿಮ್ಮ ಆರೋಗ್ಯ ಪರಿಸ್ಥಿತಿ ಸರಿಯಿಲ್ವೇ ಹಾಗಾದರೆ ಮಾಸ್ಕ್ ಧರಿಸಿ:

  ಪ್ರಸ್ತುತ ಜನರು ಕೊರೋನಾ ವೈರಸ್ ಬರದೇ ಇರಲು ಮಾಸ್ಕ್ಗಳನ್ನು ಖರೀದಿಸಿ ಧರಿಸುತ್ತಿದ್ದಾರೆ. ಕೊರೋನಾ ವೈರಸ್ ಹರಡುವುದು ಗಾಳಿಯಿಂದ ಅಲ್ಲ, ಹನಿಗಳಿಂದ ಹರಡುತ್ತದೆ ಎನ್ನಲಾಗುತ್ತಿದೆ. ಹಾಗಾಗಿ ನೀವು ಅದನ್ನು ಉಸಿರಾಟದ ಮೂಲಕ ಒಳಗೆ ಎಳೆದುಕೊಳ್ಳಲು ಸಾಧ್ಯವಿಲ್ಲ. ಈ ಫೇಸ್ ಮಾಸ್ಕ್ಗಳು ರೋಗ ಉಲ್ಬಣವಾಗಲು ಕಾರಣವಾಗುತ್ತದೇ ಹೊರತು ಅದು ಸಮಸ್ಯೆಗೆ ಪರಿಹಾರವಂತು ಅಲ್ಲ. ಹಾಗಾಗಿ ನಿಮ್ಮ ಆರೋಗ್ಯದಲ್ಲಿ ಏರುಪೇರಾಗಿದ್ದರೆ ಮಾತ್ರ ನೀವು ಮಾಸ್ಕ್ಗಳನ್ನು ಧರಿಸಬೇಕು.

  ಕೊರೋನಾ ವೈರಸ್ ಬಾರದಂತೆ ಹೇಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳ ಬೇಕು?.
  ಕೈಗಳನ್ನು ಸಮಯ ಸಿಕ್ಕಾಗೆಲ್ಲ ಸೋಪ್ ಅಥವಾ ಹ್ಯಾಂಡ್ ವಾಶ್ ಹಾಕಿ ತೊಳೆಯುತ್ತಿರಬೇಕು.

  ಜನರೊಂದಿಗೆ ಬೆರೆತಾಗ ಶೇಕ್ ಹ್ಯಾಂಡ್ ಕೊಡಬಾರದು:

  ಆರೋಗ್ಯದ ಸಮಸ್ಯೆ ಇರುವ ಜನರ ಜೊತೆ ಅಂತರವನ್ನು ಕಾಯ್ದುಕೊಳ್ಳಬೇಕು.
  ಮುಖವನ್ನು ಪದೇ ಪದೇ ಮುಟ್ಟಿಕೊಳ್ಳಬಾರದು. ಈ ವೈರಸ್ ಬರೀ ಉಸಿರಾಟದ ಮೂಲಕ ನಮ್ಮ ದೇಹವನ್ನು ಸೇರಿಕೊಳ್ಳುವುದಿಲ್ಲ ಮುಖ ಮತ್ತು ಬಾಯಿಯ ಮೂಲಕ ಸಹ ಸೇರಿಕೊಳ್ಳುತ್ತದೆ.

  ಯಾವಾಗಲು ನಿಮ್ಮ ಜೊತೆಯಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಇಟ್ಟುಕೊಂಡಿರಬೇಕು.
  ವೈರಸ್ ಹರಡಿರುವ ಪ್ರದೇಶಗಳಿಗೆ ಪ್ರವಾಸ ಮೊಟಕುಗೊಳಿಸಿ.

  ಇವುಗಳಲ್ಲದೇ ಇನ್ನು ಹಲವಾರು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವ ಮೂಲಕ ವೈರಸ್ ಬರದಂತೆ ತಡೆಯಬಹುದು. ಆದರೆ ಯಾವುದೇ ಕಾರಣಕ್ಕೂ ಫೇಶ್ ಮಾಸ್ಕ್​ಗಳನ್ನು ಧರಿಸಬಾರದು.

  ಇನ್ನು ಕೊರೋನಾ ವೈರಸ್ ಆತಂಕ ಹೆಚ್ಚಾಗಿರುವ ಹಿನ್ನಲೆ ವಿದೇಶಗಳಿಂದ ಬರುವ ಪ್ರವಾಸಿಗರ ಮೇಲೆ ತೀವ್ರ ನಿಗಾವಹಿಸಲಾಗಿದೆ. ಆದರೆ ಇಟಲಿಯಿಂದ ಬಂದ 14 ಜನ ಪ್ರವಾಸಿಗರಿಗೆ ಸೋಂಕು ತಗುಲಿರುದು ಧೃಢಪಟ್ಟದ್ದು ಅವರನ್ನು ಏಮ್ಸ್​ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.

  (ವರದಿ: ಸಂಧ್ಯಾ ಎಂ)
  First published: