ಭೋಪಾಲ್: ಮಧ್ಯಪ್ರದೇಶದಲ್ಲಿ (Madhya Pradesh) ಇರುವ ಮದ್ಯದ ಅಂಗಡಿಗಳನ್ನು ಗೋಶಾಲೆಗಳನ್ನಾಗಿ ಪರಿವರ್ತಿಸಬೇಕು ಎಂದು ಬಿಜೆಪಿಯ ಹಿರಿಯ ನಾಯಕಿ ಉಮಾ ಭಾರತಿ (Uma Bharti) ಆಗ್ರಹಿಸಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿರುವ ಮಧ್ಯಪ್ರದೇಶದ ಮಾಜಿ ಸಿಎಂ ಉಮಾಭಾರತಿ (Uma Bharati), ಮಹಿಳೆಯರ ವಿರುದ್ಧ ಅಪರಾಧ ಕೃತ್ಯಗಳ ಸಂಖ್ಯೆ ಹೆಚ್ಚಾಗಲು ಸಾರಾಯಿ ಸೇವನೆ ಕಾರಣ. ಸರ್ಕಾರದ ಮದ್ಯ ನೀತಿಗೆ ಕಾಯೋದಿಲ್ಲ, ನಿಯಮ ಉಲ್ಲಂಘಿಸಿ ನಡೆಸುತ್ತಿರುವ ಮದ್ಯದ ಅಂಗಡಿಗಳನ್ನು (Bar and wine shops) ಗೋಶಾಲೆಗಳನ್ನಾಗಿ ಪರಿವರ್ತಿಸಲು ನಾನು ಮುಂದಾಗುತ್ತೇನೆ ಎಂದು ಹೇಳಿದರು.
ಭೋಪಾಲ್‌ನ ಟ್ರಿಸೆಕ್ಷನ್ ಬಳಿ ಇರುವ ಮದ್ಯದ ಅಂಗಡಿ ಸಮೀಪದ ದೇವಸ್ಥಾನದ ಸ್ಥಳಾಂತರ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿ ದೇಗುಲದ ಸ್ಥಳಾಂತರ ಸಾಧ್ಯವೇ ಇಲ್ಲ.ರಾಜ್ಯದಲ್ಲಿ ನಿಯಂತ್ರಿತ ಮದ್ಯ ನೀತಿಯ ಬೇಡಿಕೆಯನ್ನು ಬೆಂಬಲಿಸುವ ಸಲುವಾಗಿ ‘ಮಧುಶಾಲಾ ಮೇ ಗೋಶಾಲಾ’ ಕಾರ್ಯಕ್ರಮವನ್ನು ಪ್ರಾರಂಭಿಸುವುದಾಗಿ ಘೋಷಿಸಿದರು. ಮದ್ಯದ ಅಂಗಡಿಯ ಹೊರಗೆ 11 ಹಸುಗಳನ್ನು ಹಾಕುವಂತೆ ವ್ಯವಸ್ಥೆ ಮಾಡಲು ಇಲ್ಲಿನ ಜನರಿಗೆ ತಿಳಿಸಿದ್ದೇನೆ ಎಂದು ಹೇಳಿದ ಉಮಾಭಾರತಿ, ನನ್ನನ್ನು ತಡೆಯಲು ಯಾರು ಧೈರ್ಯ ಮಾಡುತ್ತಾರೆ ಎಂದು ನೋಡುತ್ತೇವೆ. ಈ ಹಸುಗಳಿಗೆ ಆಹಾರ ಮತ್ತು ನೀರನ್ನು ಮದ್ಯದ ಅಂಗಡಿಯಲ್ಲಿ ಕೊಡುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ: Budget 2023: 2047ರ ವೇಳೆಗೆ ರಕ್ತಹೀನತೆಯನ್ನು ತೊಡೆದುಹಾಕಲು ಮಿಷನ್; ಬಜೆಟ್ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸಿಕ್ಕಿದ್ದೇನು?
ಬಿಜೆಪಿ ಸರ್ಕಾರದ ವಿರುದ್ಧವೇ ಕಿಡಿ
ಇನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮ್ಯಾಜಿಕ್‌ನಲ್ಲಿ ಬಿಜೆಪಿ ದೇಶದ ಎಲ್ಲೆಡೆ ಚುನಾವಣೆಗಳನ್ನು ಗೆಲ್ಲುತ್ತಿದೆ ಎಂದು ಹೇಳಿದ ಅವರು, ಪ್ರಜಾಪ್ರಭುತ್ವದಲ್ಲಿ ಒಳ್ಳೆಯವರನ್ನು ಮತ್ತು ಕೆಟ್ಟ ಜನರನ್ನು ಆಯ್ಕೆ ಮಾಡುವ ಹಕ್ಕು ಜನರಿಗೆ ಇದೆ. ಒಬ್ಬನಿಗೆ ಕೆಟ್ಟದ್ದು ಮತ್ತು ಕೆಟ್ಟದ್ದು ಎಂಬ ಆಯ್ಕೆ ಇದ್ದಾಗ, ಜನರು ಕೆಟ್ಟದ್ದನ್ನು ಆಯ್ಕೆ ಮಾಡುತ್ತಾರೆ, ಅದು ಸಾಧನೆಯಲ್ಲ. ಸರ್ಕಾರ ರಚಿಸುವುದು ದೊಡ್ಡ ವಿಷಯವಲ್ಲ, ಆದರೆ ಆರೋಗ್ಯಕರ ಸಮಾಜವನ್ನು ಅಭಿವೃದ್ಧಿಪಡಿಸುವುದು ಮತ್ತು ಮಹಿಳೆಯರ ರಕ್ಷಣೆ ಮತ್ತು ಮಕ್ಕಳ ಭವಿಷ್ಯವನ್ನು ಖಚಿತಪಡಿಸುವುದು ದೊಡ್ಡ ವಿಷಯ ಎಂದು ಹೇಳುವ ಮೂಲಕ ಬಿಜೆಪಿ ಪಕ್ಷದ ಸರ್ಕಾರದ ವಿರುದ್ಧವೇ ಹರಿಹಾಯ್ದರು.
ಇದನ್ನೂ ಓದಿ: Budget 2023: ಬಡವರಿಗೆ ಸರ್ಕಾರದ ಗಿಫ್ಟ್, ಉಚಿತ ಆಹಾರ ಧಾನ್ಯಕ್ಕೆ 2 ಲಕ್ಷ ಕೋಟಿ ಮೀಸಲು, ಸಂಪೂರ್ಣ ವೆಚ್ಚ ಇನ್ನು ಕೇಂದ್ರದ್ದೇ!
ಇನ್ನು ಬಿಜೆಪಿ ಪಕ್ಷದ ಒಂದು ಗುಂಪು ನಾನು ಮದ್ಯ ಸೇವನೆಯ ವಿರುದ್ಧ ಕಾರ್ಯಕ್ರಮ ರೂಪಿಸಿದ್ದಕ್ಕೆ ನನ್ನನ್ನೇ ಟ್ರೋಲ್ ಮಾಡುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ ಉಮಾ ಭಾರತಿ, ಮಾತ್ರವಲ್ಲದೇ ಅದನ್ನು ತನ್ನ ರಾಜಕೀಯ ಉದ್ದೇಶಕ್ಕೆ ಬಳಸುತ್ತಿದೆ. ಭಾರತಿ ಅವರು ಸಿಎಂ ಆಗಿ ಸೇವೆಯನ್ನು ಸಲ್ಲಿಸಿದ್ದಾರೆ, ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಈಗ ಪ್ರಧಾನಿ ಸ್ಥಾನ ಮಾತ್ರ ಉಳಿದಿದೆ, ಆದರೆ ಕೆಲವೇ ಕೆಲವು ರಾಜಕಾರಣಿಗಳು ಆ ಉನ್ನತ ಹುದ್ದೆಯನ್ನು ಅಲಂಕರಿಸಬಹುದು. ಮದ್ಯ ನಿಷೇಧ ಆಂದೋಲನದಿಂದಾಗಿ ನನಗೆ ಆ ಹುದ್ದೆ ಸಿಗುತ್ತದೆಯೇ? ಆದರೆ ಬಿಜೆಪಿಯ ಒಂದು ಗುಂಪು ಇಂತಹ ವಿಷಯಗಳನ್ನು ಹರಡುತ್ತಿದೆ ಎಂದು ಹೇಳಿದರು.
ಮಹಿಳಾ ದೌರ್ಜನ್ಯದಲ್ಲಿ ಮಧ್ಯಪ್ರದೇಶ ಮುಂಚೂಣಿಯಲ್ಲಿದೆ
ಇನ್ನು, ಭಗವಾನ್ ಶ್ರೀರಾಮಚಂದ್ರನ ಹೆಸರಿನಲ್ಲಿ ಸರ್ಕಾರಗಳು ರಚನೆಯಾಗುತ್ತಿವೆ, ಆದರೆ ಓರ್ಚಾದಲ್ಲಿರುವ ರಾಮರಾಜ ದೇವಸ್ಥಾನದ ಬಳಿ ಮದ್ಯದ ಅಂಗಡಿಯನ್ನು ತೆರೆಯಲು ಸರ್ಕಾರವೇ ಅನುಮತಿ ನೀಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಉಮಾ ಭಾರತಿ, ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶವು ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯದಲ್ಲಿ ಮುಂಚೂಣಿಯಲ್ಲಿದೆ. ಈ ಹಿಂಸೆಯ ಪ್ರವೃತ್ತಿಗೆ ಮದ್ಯ ಸೇವನೆಯು ಒಂದು ಕಾರಣ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ