ಎನ್​​​​ಪಿಆರ್​​ಗೆ​​ ಸಹಕಾರ ನೀಡುತ್ತೇವೆ ಎಂದ ಸಿಎಂ ಉದ್ಧವ್‌ ಠಾಕ್ರೆ: ಮನವೊಲಿಸಲಾಗುವುದು ಎಂದ ಶರದ್​​ ಪವಾರ್​​

ಎನ್​​​ಪಿಆರ್​​ ಬೆಂಬಲಿಸುವ ವಿಚಾರ ಸಂಬಂಧ ನಾನು ಉದ್ಧವ್‌ ಠಾಕ್ರೆ ಜತೆ ಮಾತಾಡುತ್ತೇನೆ. ಶಿವಸೇನೆಯೊಂದಿಗೆ ಚರ್ಚಿಸಿ ಒಮ್ಮತಕ್ಕೆ ಬರುತ್ತೇವೆ. ಸದ್ಯ ಕಾಂಗ್ರೆಸ್​ ಮತ್ತು ಎನ್​​​ಸಿಪಿ ಸಿಎಎ ಮತ್ತು ಎನ್​​​ಆರ್​​ಸಿ ವಿರುದ್ಧ ನಿಲುವು ಹೊಂದಿವೆ ಎಂದರು ಶರದ್​​ ಪವಾರ್​.

news18-kannada
Updated:February 18, 2020, 7:38 PM IST
ಎನ್​​​​ಪಿಆರ್​​ಗೆ​​ ಸಹಕಾರ ನೀಡುತ್ತೇವೆ ಎಂದ ಸಿಎಂ ಉದ್ಧವ್‌ ಠಾಕ್ರೆ: ಮನವೊಲಿಸಲಾಗುವುದು ಎಂದ ಶರದ್​​ ಪವಾರ್​​
ಶರದ್​ ಪವಾರ್
  • Share this:
ನವದೆಹಲಿ(ಫೆ.18): ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್‌ಪಿಆರ್) ಪ್ರಕ್ರಿಯೆಗೆ ಅಡ್ಡಿಪಡಿಸುವುದಿಲ್ಲ ಎಂದು ನೀಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆಯವರ ಹೇಳಿಕೆಯೀಗ ಮಹಾ ವಿಕಾಸ್ ಆಘಾಡಿ ಮೈತ್ರಿಕೂಟದ ಸರ್ಕಾರದಲ್ಲಿ ಭಿನ್ನಮತಕ್ಕೆ ಕಾರಣವಾಗಿದೆ. ಇದಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸಿರುವ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ(ಎನ್​​ಸಿಪಿ) ಮುಖ್ಯಸ್ಥ ಶರದ್ ಪವಾರ್, ಸಿಎಂ ಉದ್ಧವ್‌ ಠಾಕ್ರೆ ಮನವೊಲಿಸುವುದಾಗಿ ಹೇಳಿದ್ದಾರೆ. ಈ ಮೂಲಕ ಸಿಎಎ ಮತ್ತು ಎನ್​​ಆರ್​ಸಿ ವಿಚಾರಕ್ಕೆ ತಮ್ಮ ಬೆಂಬಲವಿಲ್ಲ ಎನ್ನುವುದು ಸ್ಪಷ್ಟಪಡಿಸಿದ್ದಾರೆ.

ಇಂದು ಈ ಕುರಿತಂತೆ ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಎನ್​​​ಸಿಪಿ ಮುಖ್ಯಸ್ಥ ಶರದ್ ಪವಾರ್, ಎನ್​​​ಪಿಆರ್​​ ಬೆಂಬಲಿಸುವ ವಿಚಾರ ಸಂಬಂಧ ನಾನು ಉದ್ಧವ್‌ ಠಾಕ್ರೆ ಜತೆ ಮಾತಾಡುತ್ತೇನೆ. ಶಿವಸೇನೆಯೊಂದಿಗೆ ಚರ್ಚಿಸಿ ಒಮ್ಮತಕ್ಕೆ ಬರುತ್ತೇವೆ. ಸದ್ಯ ಕಾಂಗ್ರೆಸ್​ ಮತ್ತು ಎನ್​​​ಸಿಪಿ ಸಿಎಎ ಮತ್ತು ಎನ್​​​ಆರ್​​ಸಿ ವಿರುದ್ಧ ನಿಲುವು ಹೊಂದಿವೆ ಎಂದರು. ಹೀಗೆ ಮೈತ್ರಿ ನಾಯಕರು ಭಿನ್ನ ಭಿನ್ನ ಹೇಳಿಕೆ ನೀಡಿರುವುದರಿಂದ ಮಹಾರಾಷ್ಟ್ರ ಸಮ್ಮಿಶ್ರ ಸರ್ಕಾರದಲ್ಲಿ ದೊಡ್ಡ ಮಟ್ಟದಲ್ಲಿ ಬಂಡಾಯ ಭುಗಿಲೇಳುವ ಸಾಧ್ಯತೆ ಇದೆ.

ಈ ಮುನ್ನ ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್‌ಪಿಆರ್) ಪ್ರಕ್ರಿಯೆಗೆ ಅಡ್ಡಿಪಡಿಸುವುದಿಲ್ಲ. ಎನ್​​​ಪಿಆರ್​​​ನಿಂದ ಯಾರಿಗೂ ತೊಂದರೆ ಆಗದಂತೆ ಎಚ್ಚರಿಕೆ ವಹಿಸುತ್ತೇನೆ. ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪ್ರತಿಯನ್ನು ಸಂಪೂರ್ಣ ಪರಿಶೀಲಿಸುತ್ತೇನೆ. ಹಾಗೆಯೇ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ ಜಾರಿಗೊಳಿಸುವುದಿಲ್ಲ ಎಂದು ಉದ್ದವ್ ಠಾಕ್ರೆ ಟ್ವೀಟ್​​ ಮಾಡಿದ್ದರು.

ಇದನ್ನೂ ಓದಿ: ‘ಮಹಾರಾಷ್ಟ್ರದಲ್ಲಿ ಎನ್​​​ಪಿಆರ್​​​​​ ಪ್ರಕ್ರಿಯೆಗೆ ಯಾವುದೇ ಅಡ್ಡಿಯಿಲ್ಲ‘: ಸಿಎಂ ಉದ್ದವ್ ಠಾಕ್ರೆ

ಸಿಎಎ, ಎನ್​​ಆರ್​​ಸಿಗೂ ಮತ್ತು ಎನ್​​​ಪಿಆರ್​​​​ಗೂ ಸಂಬಂಧವಿಲ್ಲ. ಕೇಂದ್ರ ಸರ್ಕಾರ ಜನಗಣತಿ ನಡೆಸಲು ಯಾವುದೇ ತೊಂದರೆಯಿಲ್ಲ. ಆದರೆ, ಎನ್​​ಪಿಆರ್ ಮಾತ್ರ ಉನ್ನತೀಕರಿಸಲು ಆಗುವುದಿಲ್ಲ ನಾನು ಬಿಡುವುದಿಲ್ಲ. ಯಾವುದೇ ಕಾರಣಕ್ಕೂ ಎನ್​​ಆರ್​ಸಿ ಜಾರಿಗೊಳಿಸುವುದಿಲ್ಲ ಎಂದು ಮತ್ತೊಂದು ಟ್ವೀಟ್​ ಮೂಲಕ ಉದ್ದವ್ ಠಾಕ್ರೆ ವಿಶ್ವಾಸ ವ್ಯಕ್ತಪಡಿಸಿದ್ದರು.

ಎನ್​​ಪಿಆರ್​​ ಪ್ರಕ್ರಿಯೆಯು ರಾಷ್ಟ್ರೀಯ ಪೌರತ್ವ ನೋಂದಣಿಗೆ ಎಡೆಮಾಡಿಕೊಡಲಿದೆ ಎಂದು ಜನ ಆತಂಕದಲ್ಲಿದ್ಧಾರೆ. ಮಹಾರಾಷ್ಟ್ರದಲ್ಲಿ ಎನ್​​ಆರ್​ಸಿ ಜಾರಿಯಾದರೆ ಅರಾಜಕತೆ ಸೃಷ್ಟಿಯಾಗಲಿದೆ. ಇದರಿಂದ ಕೇವಲ ಹಿಂದು ಮತ್ತು ಮುಸ್ಲಿಮರಿಗೆ ಮಾತ್ರವಲ್ಲ ಆದಿವಾಸಿಗಳಿಗೂ ತೊಂದರೆಯಾಗಲಿದೆ. ಪ್ರತಿ 10 ವರ್ಷಕ್ಕೊಮ್ಮೆ ಜನಗಣತಿ ನಡೆಸಲಾಗುತ್ತದೆ. ಇದು ಯಾರಿಗೂ ಇಲ್ಲಿಯವರೆಗೂ ತೊಂದರೆ ನೀಡಿಲ್ಲ ಎಂದಿದ್ದರು. ಈ ಬೆನ್ನಲ್ಲೇ ಎಚ್ಚೆತ್ತ ಶರದ್​​ ಪವಾರ್​​ ತಮ್ಮ ನಿಲವು ವ್ಯಕ್ತಪಡಿಸಿದ್ದಾರೆ.
First published: February 18, 2020, 7:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading