• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Tamilnadu Politics| ಮೋದಿ ಸರ್ಕಾರವನ್ನು ಒಕ್ಕೂಟ ಸರ್ಕಾರ ಎಂದು ಕರೆಯುವ ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ; ಎಂ.ಕೆ. ಸ್ಟಾಲಿನ್

Tamilnadu Politics| ಮೋದಿ ಸರ್ಕಾರವನ್ನು ಒಕ್ಕೂಟ ಸರ್ಕಾರ ಎಂದು ಕರೆಯುವ ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ; ಎಂ.ಕೆ. ಸ್ಟಾಲಿನ್

ತಮಿಳುನಾಡು ವಿಧಾನಮಂಡಲ ಅಧಿವೇಶನದಲ್ಲಿ ಎಂ.ಕೆ. ಸ್ಟಾಲಿನ್.

ತಮಿಳುನಾಡು ವಿಧಾನಮಂಡಲ ಅಧಿವೇಶನದಲ್ಲಿ ಎಂ.ಕೆ. ಸ್ಟಾಲಿನ್.

1957 ರಲ್ಲಿ ಡಿಎಂಕೆ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ 'ಇಂಡಿಯನ್ ಯೂನಿಯನ್' ಎಂಬ ಪದವನ್ನು ಬಳಸಿತ್ತು. ಈ ನಿಲುವಿಗೆ ನಾವು ಈಗಲೂ ಬದ್ಧವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಒಕ್ಕೂಟ ಸರ್ಕಾರ ಎಂದೇ ಕರೆಯಲಿದ್ದೇವೆ ಎಂದು ಎಂ.ಕೆ. ಸ್ಟಾಲಿನ್ ಸ್ಪಷ್ಟಪಡಿಸಿದ್ದಾರೆ.

  • Share this:

    ಚೆನ್ನೈ (ಜೂನ್ 24); ಆರಂಭದಿಂದಲೂ ಬಿಜೆಪಿ ಪಕ್ಷವನ್ನೂ ಬಿಜೆಪಿ ನೇತೃತ್ವದ ಕೇಂದ್ರವನ್ನು, ರಾಜ್ಯಗಳ ಕುರಿತ ಅವರ ಮಲತಾಯಿ ಧೋರಣೆ ವಿರೋಧಿಸುತ್ತಲೇ ರಾಜಕಾರಣ ಮಾಡಿದ ಪಕ್ಷ ಡಿಎಂಕೆ. ಕಳೆದ 7 ವರ್ಷಗಳಲ್ಲಿ ಈ ವಿರೋಧ ಮತ್ತಷ್ಟು ಹೆಚ್ಚಾಗಿತ್ತು. ಪರಣಾಮ ತಮಿಳುನಾಡು ವಿಧಾನಸಭೆ ಚುನಾವಣೆ ಮುಗಿದು ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಮುಖ್ಯಮಂತ್ರಿ ಗಾಧಿಗೆ ಏರುತ್ತಿದ್ದಂತೆ ಕೇಂದ್ರ ಸರ್ಕಾರದ ವಿರುದ್ದದ ತಮ್ಮ ಸಮರವನ್ನು ಮುಂದುವರೆಸಿದ್ದರು. ಅಲ್ಲದೆ, "ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಎಂಬ ಪದವೇ ಇಲ್ಲ. ಸಂವಿಧಾನದಲ್ಲಿ ಉಲ್ಲೇಖವಾಗಿರು ವಂತೆ ನಾವು ಒಕ್ಕೂಟ ಸರ್ಕಾರ ಎಂದೇ ಕರೆಯುತ್ತೇವೆ" ಎಂದು ಸ್ಟಾಲಿನ್ ಸ್ಪಷ್ಟಪಡಿಸಿ ದ್ದರು. ಅದರಂತೆ ನಿನ್ನೆ ತಮಿಳುನಾಡು ವಿಧಾನಮಂಡಲ ದಲ್ಲಿ "ಒಕ್ಕೂಟ ಸರ್ಕಾರ" ಎಂದು ಕರೆಯುವ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದ್ದಾರೆ.


    ತಮಿಳುನಾಡಿನಲ್ಲಿ ಇತ್ತೀಚೆಗೆ ಡಿಎಂಕೆ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಕೇಂದ್ರ ಸರ್ಕಾರವನ್ನು ಒಕ್ಕೂಟ ಸರ್ಕಾರ ಎಂದು ಕರೆದಿತ್ತು. ಈ ವಿಚಾರದ ವಿರುದ್ಧ ಅನೇಕರು ಕಿಡಿಕಾರಿದ್ದರು. ಈ ಎಲ್ಲಾ ಪ್ರಶ್ನೆಗಳೀಗೆ ವಿಧಾನ ಮಂಡಲ ಅಧಿವೇಶನದಲ್ಲಿ ಉತ್ತರ ನೀಡಿರುವ ಎಂಕೆ ಸ್ಟಾಲಿನ್,  "ಮೋದಿ ಸರ್ಕಾರವನ್ನು 'ಕೇಂದ್ರ ಸರ್ಕಾರ' ಎಂದು ಉಲ್ಲೇಖಿಸುವುದರ ಬದಲು 'ಒಕ್ಕೂಟ ಸರ್ಕಾರ' ಎಂದೇ ನಾವು ಬಳಸುತ್ತೇವೆ.


    ಏಕೆಂದರೆ 1957 ರಲ್ಲಿ ಡಿಎಂಕೆ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ 'ಇಂಡಿಯನ್ ಯೂನಿಯನ್' ಎಂಬ ಪದವನ್ನು ಬಳಸಿತ್ತು. ಈ ನಿಲುವಿಗೆ ನಾವು ಈಗಲೂ ಬದ್ಧವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಒಕ್ಕೂಟ ಸರ್ಕಾರ ಎಂದೇ ಕರೆಯಲಿದ್ದೇವೆ" ಎಂದು ಸ್ಪಷ್ಟಪಡಿಸಿದ್ದಾರೆ.


    ಸಂವಿಧಾನ ಕೂಡಾ ಭಾರತವನ್ನು 'ರಾಜ್ಯಗಳ ಒಕ್ಕೂಟ' ಎಂದು ಬಣ್ಣಿಸಿದೆ. ನಾವು ‘‘ಒಕ್ಕೂಟ’’ ಎಂದು ಬಳಸಿದ್ದೇವೆ ಮತ್ತು ಹಾಗೆ ಬಳಸುವುದನ್ನು ಮುಂದುವರಿಸುತ್ತೇವೆ ಎಂದು ಸಿಎಂ ಎಂ.ಕೆ. ಸ್ಟಾಲಿನ್ ವಿಧಾನಸಭೆಯಲ್ಲಿ ಹೇಳಿದ್ದಾರೆ.


    ವಿಧಾನಸಭೆಯಲ್ಲಿನ ಬಿಜೆಪಿ ನಾಯಕ ನೈನಾರ್ ನಾಗೇಂದ್ರನ್ ಅವರು "ಒಕ್ಕೂಟ" ಎಂಬ ಪದವನ್ನು ಬಳಸುವುದರ ಹಿಂದೆ ಏನಾದರೂ ಉದ್ದೇಶವಿದೆಯೇ ಎಂದು ಆಶ್ಚರ್ಯ ವ್ಯಕ್ತಪಡಿಸಿ ಮುಖ್ಯಮಂತ್ರಿಯಿಂದ ಪ್ರತಿಕ್ರಿಯೆ ಬಯಸಿದ್ದರು.


    ಇದನ್ನೂ ಓದಿ: Covid19 Death| ಹೋಮ್ ಐಸೊಲೇಶನ್ ಡೆತ್ ಆಡಿಟಿಂಗ್ ನಡೆಸಿದ ಬಿಬಿಎಂಪಿ; ಕೊರೋನಾದಿಂದ ಮನೆಯಲ್ಲೇ 910 ಮಂದಿ ಸಾವು!


    ಇದಕ್ಕೆ ಪ್ರತಿಕ್ರಿಯಿಸಿದ ಸ್ಟಾಲಿನ್, "ಈ ಪದ ಬಳಕೆಯ ಬಗ್ಗೆ ಯಾರೂ ಭಯಪಡುವ ಅಗತ್ಯವಿಲ್ಲ. ಏಕೆಂದರೆ ರಾಜಾಜಿ(ಸಿ. ರಾಜಗೋಪಾಲಾಚಾರಿ) ಅವರೆ ಅಧಿಕಾರದ ಕೇಂದ್ರೀಕರಣದ ವಿರುದ್ಧ ಮತ್ತು ನಿಜವಾದ ಫೆಡರಲಿಸಂ ಪರವಾಗಿ ಮಾತನಾಡಿದ್ದರು. ದಿವಂಗತ ಮಾ.ಪೋ.ಸಿ.(ಶಿವಜ್ಞನಂ) ಸಮಷ್ಠಿ ಎಂಬ ಪದವನ್ನು ಬಳಸಿದ್ದಾರೆ" ಎಂದು ಅವರು ಹೇಳಿದ್ದಾರೆ.


    "ಒಕ್ಕೂಟ" ಎಂಬ ಪದದ ಬಳಕೆಯನ್ನು "ಸಾಮಾಜಿಕ ಅಪರಾಧ" ಎಂದು ಪರಿಗಣಿಸುವ ಅಗತ್ಯವಿಲ್ಲ ಎಂದು ಸ್ಟಾಲಿನ್ ಹೇಳಿದ್ದಾರೆ. "ನಾವು ಸಂವಿಧಾನದಲ್ಲಿರುವುದನ್ನು ಮಾತ್ರ ಬಳಸುತ್ತಿದ್ದೇವೆ. ಇಂಡಿಯಾ, ಅದು ಭಾರತ, ರಾಜ್ಯಗಳ ಒಕ್ಕೂಟವಾಗಿರುತ್ತದೆ" ಎಂದು ಅವರು ತಿಳಿಸಿದ್ದಾರೆ.


    ಇದನ್ನೂ ಓದಿ: UP Assembly Election| ಮತ್ತೆ ಯೋಗಿ ಆದಿತ್ಯನಾಥ್​ ನಾಯಕತ್ವದಲ್ಲೇ ವಿಧಾನಸಭೆ ಚುನಾವಣೆಗೆ ಹೋಗಲಿದೆ ಉತ್ತರಪ್ರದೇಶ ಬಿಜೆಪಿ


    ಭಾರತವನ್ನು ಅದರ ರಾಜ್ಯಗಳು ರಚಿಸಿವೆ ಎಂದು ಅವರು ಹೇಳಿದ್ದಾರೆ. "ನಮ್ಮ ನಾಯಕರಾದ ಅಣ್ಣಾ (ಸಿ.ಎನ್. ಅನ್ನದುರೈ) ಮತ್ತು ಕಲೈನಾರ್ (ಎಂ. ಕರುಣಾನಿಧಿ) ಅವರು ಬಳಸದ ಪದವನ್ನು ಕೆಲವರು ಬಳಸುತ್ತಿದ್ದಾರೆಂದು ಕೆಲವರು ಆರೋಪಿಸುತ್ತಾರೆ. ಆದರೆ ಡಿಎಂಕೆ 1957 ರಲ್ಲಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಇಂಡಿಯನ್ ಯೂನಿಯನ್ ಎಂಬ ಪದವನ್ನು ಬಳಸಿದೆ" ಎಂದು ಅವರು ಹೇಳಿದ್ದಾರೆ.


    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

    Published by:MAshok Kumar
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು