ಬಾಲಕೋಟ್​ ದಾಳಿಯ ಮರುದಿನವೇ ಪಾಕ್​ ಸೇನಾ ನೆಲೆಗಳ ಮೇಲೆ ದಾಳಿಗೆ ಸಿದ್ಧವಾಗಿದ್ದೆವು; ವಾಯುಸೇನಾ ಮಾಜಿ ಮುಖ್ಯಸ್ಥ ಧನೋವಾ

ಬಾಲಕೋಟ್ ವಾಯುನೆಲೆ ಮೇಲೆ ದಾಳಿ ನಡೆಸಬೇಕೆಂಬ ಸೂಚನೆ ಬಂದಾಗಲೇ ನಾವು ಸಕಲ ರೀತಿಯಲ್ಲೂ ಸಜ್ಜಾಗಿದ್ದೆವು. ನಾವು ದಾಳಿ ನಡೆಸಿದ ನಂತರ ಪಾಕಿಸ್ತಾನ ಸೇನೆ ಭಾರತದ ಮೇಲೆ ದಾಳಿಗೆ ಮುಂದಾದರೆ ಪಾಕಿಸ್ತಾನದ ಸೇನಾ ಕ್ಯಾಂಪ್​ಗಳ ಮೇಲೆ ದಾಳಿ ಮಾಡಲು ನಮ್ಮ ಸೇನೆ ಸಿದ್ಧತೆ ಮಾಡಿಕೊಂಡಿತ್ತು ಎಂದು ವಾಯುಸೇನೆ ನಿವೃತ್ತ ಮುಖ್ಯಸ್ಥ ಬಿ.ಎಸ್. ಧನೋವಾ ಹೇಳಿದ್ದಾರೆ.

news18-kannada
Updated:December 15, 2019, 9:41 AM IST
ಬಾಲಕೋಟ್​ ದಾಳಿಯ ಮರುದಿನವೇ ಪಾಕ್​ ಸೇನಾ ನೆಲೆಗಳ ಮೇಲೆ ದಾಳಿಗೆ ಸಿದ್ಧವಾಗಿದ್ದೆವು; ವಾಯುಸೇನಾ ಮಾಜಿ ಮುಖ್ಯಸ್ಥ ಧನೋವಾ
ಬಿ.ಎಸ್. ಧನೋವಾ
  • Share this:
ಚಂಡೀಗಢ (ಡಿ. 15): ಭಾರತೀಯ ಸೇನಾಪಡೆ ಪಾಕಿಸ್ತಾನದ ಬಾಲಕೋಟ್ ಉಗ್ರರ ನೆಲೆಯ ಮೇಲೆ ವಾಯುದಾಳಿ ನಡೆಸಿ ಶತ್ರುಗಳನ್ನು ಮಟ್ಟ ಹಾಕಿದ ಘಟನೆಯನ್ನು ಇಡೀ ದೇಶವೇ ಮರೆಯಲು ಸಾಧ್ಯವಿಲ್ಲ. ಆದರೆ, ಈ ದಾಳಿಯ ಮಾರನೇ ದಿನವೇ ಭಾರತೀಯ ವಾಯುಸೇನೆ ಪಾಕಿಸ್ತಾನದ ಮಿಲಿಟರಿ ಕ್ಯಾಂಪ್​ಗಳ ಮೇಲೂ ದಾಳಿ ನಡೆಸಲು ಸಿದ್ಧವಾಗಿತ್ತು ಎಂಬ ವಿಷಯವನ್ನು ಭಾರತೀಯ ವಾಯುಸೇನೆಯ ನಿವೃತ್ತ ಮುಖ್ಯಸ್ಥ ಬಿ.ಎಸ್. ಧನೋವಾ ಬಹಿರಂಗಪಡಿಸಿದ್ದಾರೆ.

ಬಾಲಕೋಟ್ ಮೇಲೆ ನಡೆದ ವಾಯುದಾಳಿಯ ಉದ್ದೇಶ ನಮ್ಮ ಸೇನೆಯ ಪ್ರಾಬಲ್ಯವನ್ನು ಪ್ರದರ್ಶಿಸುವುದಾಗಿರಲಿಲ್ಲ. ನಮ್ಮ ದೇಶದ ತಂಟೆಗೆ ಬಂದರೆ ಪಾಕಿಸ್ತಾನದ ಉಗ್ರ ಸಂಘಟನೆಗಳನ್ನು ನಿರ್ನಾಮ ಮಾಡಲು ಹಿಂದೇಟು ಹಾಕುವುದಿಲ್ಲ ಎಂಬ ಸಂದೇಶವನ್ನು ಪಾಕ್​ಗೆ ರವಾನಿಸುವುದಾಗಿತ್ತು ಎಂದು ಪಂಜಾಬ್​ ಸರ್ಕಾರ ಆಯೋಜಿಸಿದ್ದ ಮಿಲಿಟರಿ ಲಿಟರೇಚರ್ ಫೆಸ್ಟಿವಲ್​ನಲ್ಲಿ 'ಬಾಲಕೋಟ್​ ದಾಳಿಯ ಸಂದೇಶದ ವ್ಯಾಖ್ಯಾನ' ಕುರಿತು ಮಾತನಾಡಿದ ಬಿ.ಎಸ್. ಧನೋವಾ ಹೇಳಿದ್ದಾರೆ.

Bangalore Weather: ಬೆಂಗಳೂರಿಗರ ವೀಕೆಂಡ್​ ಸಂಭ್ರಮಕ್ಕೆ ಅಡ್ಡಿಯಾಗುತ್ತಾ ಮಳೆ?

ಬಾಲಕೋಟ್ ದಾಳಿಯ ಬಗ್ಗೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾಹಿತಿ ನೀಡಿರುವ ಬಿ.ಎಸ್. ಧನೋವಾ, ಬಾಲಕೋಟ್ ವಾಯುನೆಲೆ ಮೇಲೆ ದಾಳಿ ನಡೆಸಬೇಕೆಂಬ ಸೂಚನೆ ಬಂದಾಗಲೇ ನಾವು ಸಕಲ ರೀತಿಯಲ್ಲೂ ಸಜ್ಜಾಗಿದ್ದೆವು. ನಾವು ದಾಳಿ ನಡೆಸಿದ ನಂತರ ಪಾಕಿಸ್ತಾನ ಸೇನೆ ಭಾರತದ ಮೇಲೆ ದಾಳಿಗೆ ಮುಂದಾದರೆ ಪಾಕಿಸ್ತಾನದ ಸೇನಾ ಕ್ಯಾಂಪ್​ಗಳ ಮೇಲೆ ದಾಳಿ ಮಾಡಲು ನಮ್ಮ ಸೇನೆ ಸಿದ್ಧತೆ ಮಾಡಿಕೊಂಡಿತ್ತು. ವಾಯುದಳ, ನೌಕಾದಳಗಳನ್ನು ಸಿದ್ಧಗೊಳಿಸಲಾಗಿತ್ತು ಎಂದು ವಾಯುಸೇನೆಯ ಮಾಜಿ ಮುಖ್ಯಸ್ಥ ಬಿ.ಎಸ್. ಧನೋವಾ ತಿಳಿಸಿದ್ದಾರೆ.
First published:December 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ