ತೆಲಂಗಾಣ: ಚುನಾವಣೆಗೆ ದಿನಗಣನೆ, ಟಿಆರ್​ಎಸ್​​ ನೂರು ಸೀಟು ಗೆಲ್ಲಲಿದೆ ಎಂದ ಸಿಎಂ ಕೆಸಿಆರ್​​ ಪುತ್ರ ಕೆಟಿಆರ್​​..!

ಕಾಂಗ್ರೆಸ್​​-ಟಿಡಿಪಿ ಮೈತ್ರಿಕೂಟ ತೆಲಂಗಾಣದಲ್ಲಿ ಕೆಲಸಕ್ಕೆ ಬರುವುದಿಲ್ಲ. ಜನ ನಮ್ಮ ಟಿಆರ್​ಎಸ್​​ ಪಕ್ಷಕ್ಕೆ ಮತ ನೀಡಲಿದ್ಧಾರೆ- ಕೆಟಿಆರ್​​ | Telangana elections: We wants KCR as CM for 15 more years, says KT Rama Rao

Ganesh Nachikethu
Updated:November 7, 2018, 10:35 AM IST
ತೆಲಂಗಾಣ: ಚುನಾವಣೆಗೆ ದಿನಗಣನೆ, ಟಿಆರ್​ಎಸ್​​ ನೂರು ಸೀಟು ಗೆಲ್ಲಲಿದೆ ಎಂದ ಸಿಎಂ ಕೆಸಿಆರ್​​ ಪುತ್ರ ಕೆಟಿಆರ್​​..!
ಕೆಟಿಆರ್​
  • Share this:
ನ್ಯೂಸ್​​-18 ಕನ್ನಡ

ಹೈದರಬಾದ್​​​(ನವೆಂಬರ್​​​.07): ಸಿಎಂ ಕೆ ಚಂದ್ರಶೇಖರ್​​ ರಾವ್​​ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್​ಎಸ್​​) ಪಕ್ಷ ಈ ಬಾರಿ ವಿಧಾನಸಭಾ ಚುಣಾವಣೆಯಲ್ಲಿ ನೂರಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲಲಿದೆ ಎಂದು ಐಟಿ ಸಚಿವ ಕೆಟಿಆರ್​​ ತಿಳಿಸಿದ್ಧಾರೆ. ಅಲ್ಲದೇ ತೆಲಂಗಾಣದಲ್ಲಿ ಜನ ನಮ್ಮ ಸರ್ಕಾರದ ಅಭಿವೃದ್ದಿ ಕಾರ್ಯಗಳನ್ನು ನೋಡಿ ಮತ ನೀಡಲಿದ್ದಾರೆ ಎಂದು ಟಿಆರ್​​ಎಸ್ ನಾಯಕ ಕೆ.ಟಿ ರಾಮ ರಾವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಮ್ಮ ತಂದೆ ಕೆಸಿಆರ್​​ ರಾಜ್ಯದಲ್ಲಿ ಜನಪರ ಕಾರ್ಯಗಳನ್ನು ಮಾಡಿದ್ದಾರೆ. ಜೊತೆಗೆ ಮುಂದಿನ 15 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಚಂದ್ರಶೇಖರ್​​ ರಾವ್​​ ಅವರನ್ನು ನೋಡಬೇಕೆಂಬುದು ಟಿಆರ್​ಎಸ್​​ ನಾಯಕರ ಒತ್ತಾಸೆಯಾಗಿದೆ. ಹೀಗಾಗಿ ಈ ಬಾರಿ ವಿಧಾನಸಭಾ ಚುಣಾವಣೆಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲದೇ ಪಕ್ಷದ ಮುಖಂಡರು ಒಗ್ಗಟ್ಟಿನಿಂದ ಕೆಲಸ ಮಾಡಲಿದ್ದೇವೆಂದು ಕೆಟಿಆರ್​​ ಅಭಿಪ್ರಾಯಪಟ್ಟರು.

ಕಾಂಗ್ರೆಸ್​​-ಟಿಡಿಪಿ ಮೈತ್ರಿಕೂಟ ತೆಲಂಗಾಣದಲ್ಲಿ ಕೆಲಸಕ್ಕೆ ಬರುವುದಿಲ್ಲ. ಜನ ನಮ್ಮ ಟಿಆರ್​ಎಸ್​​ ಪಕ್ಷಕ್ಕೆ ಮತ ನೀಡಲಿದ್ಧಾರೆ. ರಾಜ್ಯದ ಮಣ್ಣಿನ ಮಗನ ಪಕ್ಷದ ಮೇಲೆ ಜನಸಾಮಾನ್ಯರಿಗೆ ಭಾರೀ ವಿಶ್ವಾಸವಿದೆ. ಕಾಂಗ್ರೆಸ್​​ ನೇತೃತ್ವದ ಮೈತ್ರಿಕೂಟ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವುದರಲ್ಲಿ ಯಾವುದೇ ಪ್ರಯೋಜನವಿಲ್ಲ. ಜನ ನಮ್ಮನ್ನು ಗೆಲ್ಲಿಸಲಿದ್ಧಾರೆ ಎಂಬ ವಿಶ್ವಾಸವಿದೆ ಎಂದರು.

ಇದನ್ನೂ ಓದಿ: ಮತಕ್ಕಾಗಿ ಏನೆಲ್ಲಾ ವೇಷ..! ಕ್ಷೌರಿಕರಾಗ್ತಾರೆ, ಹೆಣ ಹೊರುತ್ತಾರೆ, ಇಸ್ತ್ರಿ ಮಾಡ್ತಾರೆ, ಮಗುವಿಗೆ ಸ್ನಾನವೂ ಮಾಡಿಸ್ತಾರೆ

ಚುನಾವಣೆಗೆ ದಿನಗಣನೆ: ತೆಲಂಗಾಣದಲ್ಲಿ ನಿರೀಕ್ಷೆಯಂತೆ ಅವಧಿಗೂ ಮುನ್ನವೇ ಚುನಾವಣೆ ನಡೆಯುತ್ತಿದೆ. ಸಿಎಂ ಕೆಸಿಆರ್​​ ತೆಲಂಗಾಣ ವಿಧಾನಸಭೆಯನ್ನು ವಿಸರ್ಜಿಸಲು ನಿರ್ಧರಿಸಿದ್ಧಾರೆ. ಆಯೋಗವೂ ಒಪ್ಪಿಗೆ ನೀಡಿದ್ದು, ಇದೇ ಡಿಸೆಂಬರ್ 7 ರಂದು ಇಂದೇ ಹಂತದಲ್ಲಿ ಚುನಾವಣೆ ರಂಗೇರಲಿದೆ. ಈಗ ಸುಮಾರು ಏಳೆಂಟು ತಿಂಗಳ ಮುನ್ನವೇ ಚುನಾವಣೆಗೆ ಹೋಗುತ್ತಿದ್ದು ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.

ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗುತ್ತಿದ್ದಂತೆಯೇ ಕದನಕ್ಕೆ ವೇದಿಕೆ ಸಿದ್ದವಾಗುತ್ತಿದೆ. ಚುನಾವಣೆಯಲ್ಲಿ ಎದುರಾಳಿಗಳ ವಿರುದ್ಧ ಗೆಲ್ಲಲ್ಲು ಸ್ಥಳೀಯ ಆಡಳಿತರೂಢ ಪಕ್ಷ ಟಿಆರ್​ಎಸ್​​ ಸೇರಿದಂತೆ ಟಿಡಿಪಿ-ಕಾಂಗ್ರೆಸ್ ಮೈತ್ರಿ​​ ಹಾಗೂ ವೈಎಸ್​​ಆರ್​​ ಪಕ್ಷದ ಅಭ್ಯರ್ಥಿಗಳು ಮತಯಾಚನೆಯಲ್ಲಿ ತೊಡಗಿದ್ದಾರೆ. ಸ್ಟಾರ್ ಪ್ರಚಾರಕರ ನಡುವೆ ಕಣದಲ್ಲಿರುವ ಸಾಮಾನ್ಯ ಅಭ್ಯರ್ಥಿಗಳು ವಿವಿಧ ರೀತಿ ವೇಷ ತೊಟ್ಟು ಆಮಿಷವೊಡ್ಡುವ ಮೂಲಕ ಮತಯಾಚನೆ ಮಾಡುತ್ತಿದ್ಧಾರೆ.ಮತಕ್ಕಾಗಿ ಪ್ರತಿಬಾರಿಯಂತಲ್ಲದೇ ಈ ಸಲ ತುಸು ಹೆಚ್ಚು ವಿಭಿನ್ನವಾಗಿ ಮತಯಾಚನೆಗೆ ಅಭ್ಯರ್ಥಿಗಳು ಮುಂದಾಗಿದ್ದಾರೆ. ಈ ಮೂಲಕ ಮತದಾರರ ದೈನಂದಿನ ಬದುಕಿನಲ್ಲಿ ಇವರೊಬ್ಬರಾಗಿ ಭಾಗಿಯಾಗುತ್ತಿದ್ಧಾರೆ. ಕ್ಷೌರಿಕನ ಅಂಗಡಿಗೆ ತೆರಳಿ ಗ್ರಾಹಕರಿಗೆ ಶೇವ್ ಮಾಡುವುದು, ರಸ್ತೆ ಬದಿಯಲ್ಲಿ ಮತದಾರನಿಗೆ ಸ್ನಾನ ಮಾಡಿಸುವುದು, ದೋಸೆ ಮಾಡಿಕೊಡುವುದು, ಬಟ್ಟೆ ಐರನ್​​ ಮಾಡುವುದು ಸೇರಿದಂತೆ ಹಲವು ಕಾರ್ಯಗಳನ್ನು ಪ್ರಚಾರ ನಿರತ ಅಭ್ಯರ್ಥಿಗಳು ಹಮ್ಮಿಕೊಂಡಿದ್ದಾರೆ ಎನ್ನುತ್ತಿವೆ ಮೂಲಗಳು.

ಇದನ್ನೂ ಓದಿ: ಅವಧಿಗೂ ಮುನ್ನವೇ ತೆಲಂಗಾಣ ವಿಧಾನಸಭೆ ವಿಸರ್ಜನೆ: ಕೆಸಿಆರ್ ಪ್ರಸ್ತಾವಕ್ಕೆ ರಾಜ್ಯಪಾಲರದ್ದೂ ಒಪ್ಪಿಗೆ

ಬಿಜೆಪಿ ಸರ್ಕಸ್​​​: ಇನ್ನು ತೆಲಂಗಾಣದಲ್ಲಿ ಸಿಎಂ ಕೆಸಿಆರ್​​ ನೇತೃತ್ವದ ಟಿಆರ್​​ಎಸ್  ಅಧಿಕಾರದಲ್ಲಿದೆ. ಇಲ್ಲಿ ಆಡಳಿತರೂಢ ಪಕ್ಷದ ಮುಂದೆ ಬಿಜೆಪಿ ಒಂದು ಖಾತೆಯೂ ತೆರೆಯುವುದು ಅನುಮಾನ. ಆದರೂ ಬಿಜೆಪಿ ಹೈಕಮಾಂಡ್​​ ತೆಲಂಗಾಣವನ್ನು ಪ್ರತಿಷ್ಠೆಯ ಕಣವೆಂದು ಪರಿಗಣಿಸಿದ್ದಾರೆ. ಹೀಗಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿರುವ ಬಿಜೆಪಿ ತೆಲಂಗಾಣದ ಚುನಾವಣಾ ಉಸ್ತುವಾರಿಯಾಗಿ ಜಗತ್​ ಪ್ರಕಾಶ್​ ನಡ್ದಾ ಅವರನ್ನು ನೇಮಿಸಿದೆ.

-----------
ಉಪಚುನಾವಣೆ ಸೋಲಿನ ಬಳಿಕ ಬಿಸ್ವೈ ಪ್ರತಿಕ್ರಿಯೆ
First published:November 7, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ