Supreme Court: ಕರ್ನಾಟಕದಿಂದ ಸುಪ್ರೀಂ ಕೋರ್ಟ್​​ಗೆ ಸಲ್ಲಿಕೆಯಾಗುತ್ತಿರುವ ಅರ್ಜಿಗಳ ಬಗ್ಗೆ ಸಿಜೆಐ ವ್ಯಂಗ್ಯ

CJI: ಅರ್ಜಿಯನ್ನ ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಸಾಲಿಸಿಟರ್​ ಜನರಲ್​ ತುಷಾರ್ ಮೆಹ್ತಾ ಮನವಿ ಮಾಡಿದರು. ಅದಕ್ಕೆ ಪ್ರತಿಯಾಗಿ ಮಾತನಾಡಿದ ಸಿಜೆಐ, ಈ ತುರ್ತು ವಿಚಾರಣೆ ಆಗಬೇಕಾದ ಪ್ರಕರಣಗಳ ಪಟ್ಟಿಯನ್ನು ನಾವು ಮಾಡುತ್ತೇವೆ. ಹೀಗೇ ಆದರೆ ಕರ್ನಾಟಕದ ವಿಷಯಗಳಿಗೆ ಮಾತ್ರ ಒಂದು ಪೀಠ ರಚಿಸಬೇಕಾಗುತ್ತದೆ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕೆಳ ಹಂತದ ನ್ಯಾಯಾಲಯ(Court) ಹಾಗೂ ರಾಜ್ಯ ಹೈಕೋರ್ಟ್(High Court) ತೀರ್ಪಿನಿಂದ ತೃಪ್ತವಾಗದ ಎಷ್ಟೋ ಜನರು, ಮಗು ಕೆಲವೊಂದು ಸಂದರ್ಭಗಳಲ್ಲಿ ಯಾವುದಾದರೂ ಅರ್ಜಿಯ ತುರ್ತು ವಿಚಾರಣೆಗೆ ಎಂದು ದಿನದಿಂದ ದಿನಕ್ಕೆ ಪದ್ಯದಿಂದ ಸುಪ್ರೀಂಕೋರ್ಟ್ನಲ್ಲಿ(Supreme Court) ವಿಚಾರಣೆಗೆಂದು ಹೋಗುತ್ತಿರುವ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ.. ಹೀಗಾಗಿ ಇದನ್ನು ಮನಗಂಡಿರುವ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ(N.V Ramana), ಕರ್ನಾಟಕದ (Karnataka)ಪ್ರಕರಣಗಳ ವಿಚಾರಣೆಗೆ ಪ್ರತ್ಯೇಕ ಪೀಠವೊಂದನ್ನು ಸುಪ್ರೀಂಕೋರ್ಟ್ನಲ್ಲಿ ರಚನೆ ಮಾಡಬೇಕಾಗಿ ಬರಬಹುದು ಎಂದು ವ್ಯಂಗ್ಯವಾಡಿದ್ದಾರೆ. ಕಳೆದ ವಾರ ಮತ್ತು ಈ ವಾರ ನಿರಂತರವಾಗಿ ಕರ್ನಾಟಕದ ಹಲವು ಪ್ರಕರಣಗಳನ್ನು ತುರ್ತು ವಿಚಾರಣೆ ಮಾಡುವಂತೆ ಕೋರಿ, ಸಿಜೆಐ ನೇತೃತ್ವದ ಪೀಠಕ್ಕೆ ಮನವಿ ಮಾಡಿದ್ದರಿಂದಮುಖ್ಯಮಂತ್ರಿ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ವ್ಯಂಗ್ಯ ಮಾಡಿದ್ದಾರೆ. .

  ಸುಪ್ರೀಂಕೋರ್ಟ್ ಸಿಜೆಐ ನೇತೃತ್ವದ ಪೀಠಕ್ಕೆ ರಾಜ್ಯ ಸರ್ಕಾರದ ತುರ್ತು ಅರ್ಜಿ ಸಲ್ಲಿಕೆ

  ಕರ್ನಾಟಕದ ತುಮಕೂರು, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳಲ್ಲಿ ಅದಿರು ಗಣಿಗಾರಿಕೆಯಿಂದ ತೊಂದರೆಗೊಳಗಾದ ಪ್ರದೇಶಗಳ ಪುನಶ್ಚೇತನ, ಪುನರ್ ನಿರ್ಮಾಣಕ್ಕಾಗಿ 18 ಸಾವಿರ ಕೋಟಿ ರೂಪಾಯಿ ಹಣ ಖರ್ಚು ಮಾಡಲು ಗಣಿಗಾರಿಕೆಯಿಂದ ಹಾನಿಗೊಳಗಾದ ವಾಸಿಸುವ ಜನರ, ಪ್ರದೇಶಗಳ ಅಭಿವೃದ್ಧಿಗೆ ಹಣವನ್ನು ಬಳಸಬೇಕಾಗಿರುವುದರಿಂದ ಪ್ರಕರಣವನ್ನು ತೀವ್ರ ತುರ್ತು ಎಂದು ಪರಿಗಣಿಸಿ ಎಂದು ಕರ್ನಾಟಕ ಸರ್ಕಾರವು ಈಗ ಸುಪ್ರೀಂಕೋರ್ಟ್ ಅನುಮತಿ ಕೋರಿ ಅರ್ಜಿ ಸಲ್ಲಿಸಿದೆ..

  ಇದನ್ನೂ ಓದಿ: ಭದ್ರತಾ ಪಡೆ ಮೇಲೆ ಗ್ರೆನೇಡ್ ದಾಳಿ ನಡೆಸಿದ ಭಯೋತ್ಪಾದಕರು; ಎರಡು ಅಂಗಡಿಗಳಿಗೆ ಹಾನಿ

  ಅಲ್ಲದೆ ಈ ಅರ್ಜಿಯನ್ನ ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಸಾಲಿಸಿಟರ್​ ಜನರಲ್​ ತುಷಾರ್ ಮೆಹ್ತಾ ಮನವಿ ಮಾಡಿದರು. ಅದಕ್ಕೆ ಪ್ರತಿಯಾಗಿ ಮಾತನಾಡಿದ ಸಿಜೆಐ, ಈ ತುರ್ತು ವಿಚಾರಣೆ ಆಗಬೇಕಾದ ಪ್ರಕರಣಗಳ ಪಟ್ಟಿಯನ್ನು ನಾವು ಮಾಡುತ್ತೇವೆ. ಹೀಗೇ ಆದರೆ ಕರ್ನಾಟಕದ ವಿಷಯಗಳಿಗೆ ಮಾತ್ರ ಒಂದು ಪೀಠ ರಚಿಸಬೇಕಾಗುತ್ತದೆ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

  ಸರ್ಕಾರ ಸಲ್ಲಿಕೆ ಮಾಡಿರುವ ಅರ್ಜಿಯಲ್ಲಿ ಏನಿದೆ..?

  ತುಮಕೂರು ಜಿಲ್ಲೆಯ ಗುಬ್ಬಿ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗಣಿ ಪ್ರದೇಶ, ಚಿತ್ರದುರ್ಗದ ಹೊಸದುರ್ಗ ತಾಲ್ಲೂಕು, ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಗಣಿ ಪ್ರದೇಶಗಳಲ್ಲಿ ಜನರು ವಾಸಿಸುವ ಪ್ರದೇಶದಲ್ಲಿ ಗಣಿಗಾರಿಕೆ ಸಾಕಷ್ಟು ಹಾನಿಯಾಗಿದೆ.. ಹೀಗಾಗಿ ಈ ಪ್ರದೇಶಗಳನ್ನು ಅಭಿವೃದ್ಧಿ ಮಾಡಲು ಹಾಗೂ ಹಾನಿಗೊಳಗಾದ ಜನರಿಗೆ ಪಾವತಿ ಮಾಡುವ ಪರಿಹಾರಕ್ಕೆ ಸಂಬಂಧಿಸಿದಂತೆ, ಗಣಿಗಾರಿಕೆ ಪರಿಣಾಮ ವಲಯಗಳ ಸಮಗ್ರ ಪರಿಸರ ಯೋಜನೆ ಅಡಿಯಲ್ಲಿ ಮರುಸ್ಥಾಪನೆ ಯೋಜನೆಗಳ ಅನುಷ್ಠಾನಕ್ಕೆ ಹಣವನ್ನು ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಸಲ್ಲಿಕೆ ಮಾಡಿರುವ ಅರ್ಜಿಯಲ್ಲಿ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಲಾಗಿದೆ..

  ಅಲ್ಲದೆ ಕೇಂದ್ರ ಉನ್ನತಾಧಿಕಾರ ಸಮಿತಿಯು 24,000 ಕೋಟಿ ರೂಪಾಯಿ ಮೊತ್ತದ CEPMIZ ಅನ್ನು ಶಿಫಾರಸು ಮಾಡಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಈಗ ಸಂಗ್ರಹವಾಗಿರುವ ಮೊತ್ತ 18,722 ಕೋಟಿ ರೂಪಾಯಿಗೆ ತಲುಪಿದ್ದು, ಅದು ಈಗ ಮೇಲ್ವಿಚಾರಣಾ ಸಮಿತಿಯಲ್ಲಿ ಲಭ್ಯವಿದೆ ಎಂದೂ ಹೇಳಲಾಗಿದೆ.

  18000 ಕೋಟಿ ಹಣ ಬಳಕೆಗಾಗಿ ಮನವಿ

  ಇನ್ನು ಗಣಿಗಾರಿಕೆಯಿಂದ ಹಾನಿಗೆ ಒಳಗಾಗಿರುವ ಬಳ್ಳಾರಿ ಜಿಲ್ಲೆಯ ಕೆಲವು ಪ್ರದೇಶಗಳು, ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಹಲವಾರು ಪ್ರದೇಶಗಳಲ್ಲಿ ಗಣಿಗಾರಿಕೆಯಿಂದ ಹಾನಿಗೆ ಒಳಗಾಗಿರುವ ಪ್ರದೇಶಗಳ ಅಭಿವೃದ್ಧಿಗೆ 18000 ಕೋಟಿ ಹಣವನ್ನು ವ್ಯಯ ಮಾಡಬೇಕಾಗಿದೆ.. ಹೀಗಾಗಿ ಆ ಹಣವನ್ನು ಶೀಘ್ರವೇ ಬಿಡುಗಡೆ ಮಾಡಲು, ಕರ್ನಾಟಕ ಸಲ್ಲಿಕೆ ಮಾಡಿರುವ ಅರ್ಜಿಯನ್ನು ತುರ್ತು ಎಂದು ಪರಿಗಣಿಸಿ ವಿಚಾರಣೆ ನಡೆಸಬೇಕು ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿಕೊಂಡಿದೆ..

  ಇದನ್ನೂ ಓದಿ: Vote ಕೊಡಿ" ಅಂತ ಕೇಳುವಾಗಲೇ ಕೈಕೊಟ್ಟ Heart! ಹೃದಯಾಘಾತಕ್ಕೆ ಚುನಾವಣೆ ಅಭ್ಯರ್ಥಿ ಸಾವು

  ಹಣ ಬಳಸಲು ಸುಪ್ರೀಂ ಕೋರ್ಟ್ ಅನುಮತಿ ಬೇಕು

  ಇನ್ನು ಗಣಿಗಾರಿಕೆಯಿಂದ ಹಾಳಾದ ಪ್ರದೇಶಗಳ ಅಭಿವೃದ್ಧಿಗಾಗಿ ಗಣಿ ಕಂಪನಿಗಳಿಂದ ಜಿಲ್ಲಾ ಮಿನರಲ್ ಫಂಡ್ ಅನ್ನು ಸಂಗ್ರಹಿಸಲಾಗಿದೆ. ಈಗ ಇದರ ಮೊತ್ತವೇ 18 ಸಾವಿರ ಕೋಟಿ ರೂಪಾಯಿಗೆ ಏರಿಕೆಯಾಗಿದ್ದು, ಜಿಲ್ಲಾ ಮಿನರಲ್ ಫಂಡ್ ನಲ್ಲಿ ಹಣ ಇದೆ. ಆದರೇ, ಈ ಬೃಹತ್ ಮೊತ್ತದ ಹಣವನ್ನು ಗಣಿಗಾರಿಕೆಯಿಂದ ಹಾನಿಗೊಳಗಾದ ಪ್ರದೇಶದ ಪುನಶ್ಚೇತನ ಹಾಗೂ ಅಭಿವೃದ್ದಿಗೆ ಬಳಸಲು ಸುಪ್ರೀಂಕೋರ್ಟ್ ನ ಅನುಮತಿ ಬೇಕಾಗಿದೆ. ಹೀಗಾಗಿ ಕರ್ನಾಟಕ ರಾಜ್ಯ ಸರ್ಕಾರವು 18 ಸಾವಿರ ಕೋಟಿ ರೂಪಾಯಿ ಹಣದ ಬಳಕೆಗೆ ಸುಪ್ರೀಂಕೋರ್ಟ್ ಅನುಮತಿ ಕೋರಿ ಅರ್ಜಿ ಸಲ್ಲಿಸಿದೆ.
  Published by:ranjumbkgowda1 ranjumbkgowda1
  First published: