ಆತ್ಮರಕ್ಷಣೆಗಾಗಿ ಅತ್ಯಾಚಾರ ಆರೋಪಿಗಳ ಮೇಲೆ ಫೈರ್ ಮಾಡುವುದು ಅನಿವಾರ್ಯವಾಗಿತ್ತು; ವಿಶ್ವನಾಥ್ ಸಜ್ಜನರ್ ಸ್ಪಷ್ಟನೆ

ಪಶುವೈದ್ಯೆಯ ಮೇಲೆ ಕಾಮುಕರು ಅಮಾನುಷವಾಗಿ ಮುಗಿಬಿದ್ದ ಕೇವಲ ಒಂದೇ ವಾರದಲ್ಲಿ ಈ ಪ್ರಕರಣಕ್ಕೆ ಹೈದರಾಬಾದ್ ಪೊಲೀಸರು ಮುಕ್ತಿ ನೀಡಿದ್ದಾರೆ. ಈ ಮೂಲಕ ಅತ್ಯಾಚಾರಿಗಳಿಗೆ ಕಟು ಸಂದೇಶ ರವಾನಿಸಿದ್ದಾರೆ. ಅಲ್ಲದೆ, ಇಡೀ ದೇಶದ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

MAshok Kumar | news18-kannada
Updated:December 6, 2019, 4:07 PM IST
ಆತ್ಮರಕ್ಷಣೆಗಾಗಿ ಅತ್ಯಾಚಾರ ಆರೋಪಿಗಳ ಮೇಲೆ ಫೈರ್ ಮಾಡುವುದು ಅನಿವಾರ್ಯವಾಗಿತ್ತು; ವಿಶ್ವನಾಥ್ ಸಜ್ಜನರ್ ಸ್ಪಷ್ಟನೆ
ಎನ್​ಕೌಂಟರ್ ಕುರಿತು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡುತ್ತಿರುವ ವಿಶ್ವನಾಥ್ ಸಜ್ಜನರ್.
  • Share this:
ಹೈದರಾಬಾದ್​ (ಡಿಸೆಂಬರ್​ 06); ಪೊಲೀಸರ ಆತ್ಮರಕ್ಷಣೆಗಾಗಿ ಅತ್ಯಾಚಾರ ಆರೋಪಿಗಳ ಮೇಲೆ ಗುಂಡು ಹಾರಿಸುವುದು ಅನಿವಾರ್ಯವಾಗಿತ್ತು ಎಂದು ಸೈದರಾಬಾದ್​ ನಗರ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನರ್​ ಸ್ಪಷ್ಟಪಡಿಸಿದ್ದಾರೆ.

ತೆಲಂಗಾಣ ಪಶುವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇತ್ತೀಚೆಗೆ ದೇಶದಾದ್ಯಂತ ದೊಡ್ಡ ಮಟ್ಟದ ಸದ್ದು ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದ ನಾಲ್ಕೂ ಜನ ಆರೋಪಿಗಳನ್ನು ಹಿರಿಯ ಪೊಲೀಸ್​ ಅಧಿಕಾರಿ ವಿಶ್ವನಾಥ್ ಸಜ್ಜನರ್ ನೇತೃತ್ವದಲ್ಲಿ ಇಂದು ಬೆಳಗ್ಗೆ ಎನ್​ಕೌಂಟರ್ ಮಾಡಿ ಕೊಲ್ಲಲಾಗಿತ್ತು.

ಈ ಘಟನೆಗೆ ಇಡೀ ದೇಶ ಸಂತೋಷ ವ್ಯಕ್ತಪಡಿಸಿದರೆ ಮಾನ ಹಕ್ಕುಗಳ ಹೋರಾಟಗಾರರು ಹಾಗೂ ಕೆಲವರು ಮಾತ್ರ ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಮತ್ತು ಅಧಿಕಾರ ದುರುಪಯೋಗ ಎಂದು ಟೀಕಿಸಿದ್ದಾರೆ. ಹೀಗಾಗಿ ಪತ್ರಿಕಾಗೋಷ್ಠಿ ನಡೆಸಿರುವ ಅಧಿಕಾರಿ ಎನ್​ಕೌಂಟರ್ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಎನ್​ಕೌಂಟರ್ ಕುರಿತು ಸ್ಪಷ್ಟನೆ ನೀಡಿರುವ ಅವರು, "ಅತ್ಯಾಚಾರ ಘಟನೆ ನಡೆದ ಸ್ಥಳಕ್ಕೆ ಮಹಜರ್ ಮಾಡಲು 10 ಜನ ಪೊಲೀಸರ ತಂಡ ಆರೋಪಿಗಳ ತೆರಳಿದ್ದೆವು. ಆದರೆ, ಈ ಸಂದರ್ಭದಲ್ಲಿ ಆರೋಪಿಗಳು ನಮ್ಮ ಮೇಲೆ ಕಲ್ಲು ಮತ್ತು ದೊಣ್ಣೆಯಿಂದ ಹಲ್ಲೆಗೆ ಮುಂದಾಗಿದ್ದರು. ನಮ್ಮ ಗನ್​ ಕಿತ್ತುಕೊಂಡು ನಮ್ಮ ಮೇಲೆಯೇ ಫೈರ್ ಮಾಡಲು ಮುಂದಾದರು.

ಪ್ರಮುಖ ಆರೋಪಿ ಮೊಹಮ್ಮದ್ ಆರೀಫ್ ನಮ್ಮ ಮೇಲೆ ಮೊದಲು ಫೈರ್​ ಮಾಡಿದ್ದ. ಶರಣಾಗುವಂತೆ ನಾವು ಎಷ್ಟೇ ಹೇಳಿದರೂ ಆರೋಪಿಗಳು ಶರಣಾಗಿರಲಿಲ್ಲ. ಈ ಹಲ್ಲೆಯಲ್ಲಿ ಓರ್ವ ಎಸ್​ಐ ಸೇರಿದಂತೆ ನಾಲ್ಕು ಜನ ಪೊಲೀಸರಿಗೆ ತೀವ್ರ ಗಾಯಗಳಾಗಿವೆ. ಹೀಗಾಗಿ, ಆತ್ಮರಕ್ಷಣೆ ಮಾಡಿಕೊಳ್ಳುವ ನಿಮಿತ್ತ ಆರೋಪಿಗಳ ಮೇಲೆ ನಾವು ಫೈರ್ ಮಾಡಿದೆವು. ವಿಚಾರಣೆ ವೇಳೆ ಎಲ್ಲರೂ ತಾವು ಮಾಡಿದ್ದ ತಪ್ಪನ್ನು ಒಪ್ಪಿಕೊಂಡಿದ್ದರು. ಈ ಕುರಿತು ಸರ್ಕಾರಕ್ಕೆ ಸಂಪೂರ್ಣ ವರದಿ ನೀಡಲಾಗಿದೆ" ಎಂದು ತಿಳಿಸಿದ್ದಾರೆ.

ಪಶುವೈದ್ಯೆಯ ಮೇಲೆ ಕಾಮುಕರು ಅಮಾನುಷವಾಗಿ ಮುಗಿಬಿದ್ದ ಕೇವಲ ಒಂದೇ ವಾರದಲ್ಲಿ ಈ ಪ್ರಕರಣಕ್ಕೆ ಹೈದರಾಬಾದ್ ಪೊಲೀಸರು ಮುಕ್ತಿ ನೀಡಿದ್ದಾರೆ. ಈ ಮೂಲಕ ಅತ್ಯಾಚಾರಿಗಳಿಗೆ ಕಟು ಸಂದೇಶ ರವಾನಿಸಿದ್ದಾರೆ. ಅಲ್ಲದೆ, ಇಡೀ ದೇಶದ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಇದನ್ನೂ ಓದಿ : ವಾರಂಗಲ್ ಮಾದರಿಯಲ್ಲೇ ನಡೆದೋಯ್ತು ಎನ್​ಕೌಂಟರ್; ಎರಡೂ ಪ್ರಕರಣದ ಹಿಂದಿದೆ ಕನ್ನಡಿಗ ವಿಶ್ವನಾಥ್ ಸಜ್ಜನವರ್ ಖದರ್!
First published: December 6, 2019, 4:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading