ಕ್ಯಾನ್ಸರ್ನಿಂದ ಬಳಲುತ್ತಿದ್ದ ರಿಷಿ ಕಪೂರ್ ಇತ್ತೀಚೆಗಷ್ಟೇ ಮೃತಪಟ್ಟಿದ್ದರು. ಅವರ ಸಾವಿಗೆ ಸಾಕಷ್ಟು ಜನರು ಸಂತಾಪ ಸೂಚಿಸಿದ್ದಾರೆ. ಅವರೆಲ್ಲರಿಗೂ ಕಪೂರ್ ಕುಟುಂಬ ಧನ್ಯವಾದ ಹೇಳಿದೆ. ಇನ್ನು, ಕಷ್ಟದ ಸಮಯದಲ್ಲಿ ಸಹಾಯ ಮಾಡಿದ ಅಂಬಾನಿ ಕುಟುಂಬವನ್ನು ರಿಷಿ ಕಪೂರ್ ಕುಟುಂಬ ವಿಶೇಷವಾಗಿ ನೆನಪಿಸಿಕೊಂಡಿದೆ.
ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಸವಿವರವಾಗಿ ರಿಷಿ ಪತ್ನಿ ನೀತು ಸಿಂಗ್ ಬರೆದುಕೊಂಡಿದ್ದಾರೆ. “ನಮ್ಮ ಕುಟುಂಬಕ್ಕೆ ಕಳೆದ ಎರಡು ವರ್ಷಗಳು ತುಂಬಾನೇ ದೀರ್ಘ ಪ್ರಯಾಣ. ಇಲ್ಲಿ ಒಳ್ಳೆಯ ಹಾಗೂ ಕೆಟ್ಟ ದಿನಗಳು ಎರಡೂ ಇದ್ದವು. ಆ ದಿನಗಳು ತುಂಬಾನೇ ಭಾವನಾತ್ಮಕವಾಗಿ ಕೂಡಿದ್ದವು. ಅಂಬಾನಿ ಕುಟುಂಬದ ಪ್ರೀತಿ ಇಲ್ಲದಿದ್ದರೆ ಈ ಪ್ರಯಾಣ ಸಾಧ್ಯವೇ ಇರುತ್ತಿರಲಿಲ್ಲ,” ಎಂದು ಅಂಬಾನಿ ಕುಟುಂಬವನ್ನು ನೆನೆದಿದ್ದಾರೆ ನೀತು ಸಿಂಗ್.
“ಕಳೆದ ಕೆಲ ದಿನಗಳಿಂದ ಈ ಬಗ್ಗೆ ನಾವು ಆಲೋಚನೆ ಮಾಡುತ್ತಲೇ ಇದ್ದೇವೆ. ಪ್ರತಿ ಹೆಜ್ಜೆಯಲ್ಲೂ ನಮಗೆ ಸಹಾಯ ಮಾಡಿದ ಅಂಬಾನಿ ಕುಟುಂಬಕ್ಕೆ ಹೇಗೆ ಧನ್ಯವಾದ ಹೇಳಬೇಕು ಎಂಬುದು ತಿಳಿಯುತ್ತಲೇ ಇಲ್ಲ,” ಎಂದು ನೀತು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Karnataka 1st PUC 2020 Result: ಕರ್ನಾಟಕ ಪ್ರಥಮ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟ
“ಕಳೆದ ಏಳು ತಿಂಗಳಿಂದ ರಿಷಿ ಅವರ ಬಗ್ಗೆ ಇಡೀ ಕುಟುಂಬ ಸಂಪೂರ್ಣವಾಗಿ ಕಾಳಜಿ ತೆಗೆದುಕೊಂಡಿದೆ. ಅವರಿಗೆ ಆದಷ್ಟು ತೊಂದರೆ ಆಗದಂತೆ ನೋಡಿಕೊಂಡಿದ್ದೇವೆ. ಈ ಪ್ರಯಾಣದಲ್ಲಿ ಸಹಾಯ ಮಾಡಿದ ಮುಕೇಶ್ ಅಣ್ಣ, ನೀತು ಅತ್ತಿಗೆ, ಆಕಾಶ್, ಶ್ಲೋಕಾ, ಅನಂತ್ ಮತ್ತು ಇಶಾ ನೀವು ಗಾರ್ಡಿಯನ್ ಏಂಜೆಲ್ಳು. ನಿಮ್ಮ ಬಗ್ಗೆ ನಮಗೆ ಆಗುತ್ತಿರುವ ಹೆಮ್ಮೆಯನ್ನು ಶಬ್ದಗಳ ಮೂಲಕ ವ್ಯಕ್ತಪಡಿಸಲು ಸಾಧ್ಯವೇ ಇಲ್ಲ,” ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.
“ನಾವು ನಿಮ್ಮ ಸಹಕಾರ ಹಾಗೂ ಸಹಾಯಕ್ಕೆ ಹೃದಯದಾಳದಿಂದ ಧನ್ಯವಾದ ಹೇಳುತ್ತಿದ್ದೇವೆ. ನಿಮ್ಮನ್ನು ಆಪ್ತರಾಗಿ ಪಡೆದ ನಾವೇ ಧನ್ಯರು. ಕಪೂರ್ ಕುಟುಂಬ ನಿಮಗೆ ಸದಾ ಆಭಾರಿ,” ಎಂದಿದ್ದಾರೆ ನೀತು ಸಿಂಗ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ