ನಮ್ಮ ಬಳಿ ದುಬಾರಿ ಕಾರು ಇಲ್ಲ, Audi A6 ಇರೋದು; ಯೂಟ್ಯೂಬರ್​ ಮದನ್​ ಪತ್ನಿ ಹೇಳಿಕೆ ವೈರಲ್​!

PUBG Madan: ಪಬ್​ಜಿ ಗೇಮ್​ ಲೈವ್​ ಸ್ಟ್ರೀಮಿಂಗ್ ವೇಳೆ ಅಶ್ಲೀಲ ಭಾಷೆ ಬಳಸಿದ ಆರೋಪದಡಿ ಯೂಟ್ಯೂಬ್​ನಲ್ಲಿ Toxic ಚಾನೆಲ್​ ನಡೆಸುತ್ತಿದ್ದ ​ ಮದನ್​ ಅವರನ್ನು ಚೆನ್ನೈ ಪೊಲೀಸರು ಜೂನ್​ 18ರಂದು ಬಂಧಿಸಿದ್ದರು. ಜೂನ್​​ 20 ರಂದು ಸೆಂಟ್ರಲ್​​​ ಕ್ರೈಂ ತಂಡ  ಅವರ ಯೂಟ್ಯೂಬ್​​ ಚಾನೆಲ್​ ಅನ್ನು ನಿಷ್ಕ್ರೀಯಗೊಳಿಸಿದೆ ಜತೆಗೆ ವಿಡಿಯೋ ಡಿಲೀಟ್​ ಮಾಡಿದೆ.

ಮದನ್​ ಪತ್ನಿ ಕೃತಿಕಾ

ಮದನ್​ ಪತ್ನಿ ಕೃತಿಕಾ

 • Share this:
  ಭಾರತದಲ್ಲಿ ರದ್ದಾಗಿರುವ ಪಬ್ಜಿ ಅನ್ನು ಲೈವ್ಸ್ಟ್ರೀಮಿಂಗ್ ಮಾಡಿದ ಆರೋಪದ ಮೇಲೆ ಚೆನ್ನೈ ಮೂಲದ ಯೂಟ್ಯೂಬರ್ ಮದನ್​ ಅವರನ್ನು ಪೊಲೀಸರು ಕಳೆದ ತಿಂಗಳು ಬಂಧಿಸಿದ್ದರು.  ಜೂನ್​ 6ರಂದು ಮದನ್​ ಅವರ ಪತ್ನಿ ಈ ವಿಚಾರವಾಗಿ ಪತ್ರಿಕಾಗೋಷ್ಠಿ ನಡೆಸಿ, ಪತಿ ದಿನಕ್ಕೆ 20 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರು. ಸೈಬರ್​​ ಕ್ರೈಂ ಪೊಲೀಸರು ಅವರ ಯೂಟ್ಯೂಬ್​​ ಚಾನೆಲ್​ ಅನ್ನು ನಿಷ್ಕ್ರೀಯಗೊಳಿಸಿದ್ದಾರೆ. ಇದರಿಂದ  ಜೀವನೋಪಾಯಕ್ಕೆ ತೊಂದರೆಯಾಗಿದೆ ಎಂದಿದ್ದಾರೆ.

  ಪಬ್​ಜಿ ಗೇಮ್​ ಲೈವ್​ ಸ್ಟ್ರೀಮಿಂಗ್ ವೇಳೆ ಅಶ್ಲೀಲ ಭಾಷೆ ಬಳಸಿದ ಆರೋಪದಡಿ ಯೂಟ್ಯೂಬ್​ನಲ್ಲಿ Toxic ಚಾನೆಲ್​ ನಡೆಸುತ್ತಿದ್ದ ​ ಮದನ್​ ಅವರನ್ನು ಚೆನ್ನೈ ಪೊಲೀಸರು ಜೂನ್​ 18ರಂದು ಬಂಧಿಸಿದ್ದರು. ಜೂನ್​​ 20 ರಂದು ಸೆಂಟ್ರಲ್​​​ ಕ್ರೈಂ ತಂಡ  ಅವರ ಯೂಟ್ಯೂಬ್​​​ ಚಾನೆಲ್​ ಅನ್ನು ನಿಷ್ಕ್ರೀಯಗೊಳಿಸಿದೆ ಜತೆಗೆ ವಿಡಿಯೋ ಡಿಲೀಟ್​ ಮಾಡಿದೆ.

  ಪೊಲೀಸರು ಮದನ್​ ಅವರ ಮೊಬೈಲ್​ ನಂಬರ್​ ಆಧಾರದಡಿಯಲ್ಲಿ ಪತ್ತೆಹಚ್ಚಿ ಬಂಧಿಸಿದರು. ಅವರ ಪತ್ನಿ ಕೃತಿಕಾರನ್ನು ಜೂನ್​ 16ರಂದು ಸೇಲಂನಲ್ಲಿ ಅತ್ತೆ ಮನೆಯಲ್ಲಿ ಬಂಧಿಸಿದರು. ಕೃತಿಕಾ ಅವರು ಪತಿಯ ಕೆಲಸಕ್ಕೆ ಸಹಕರಿಸಿದ್ದ ಕಾರಣಕ್ಕೆ ಬಂಧಿಸಲಾಗಿತ್ತು. ಆದರೆ ಕೃತಿಕಾ ಅವರು ಪುಟ್ಟ ಮಗುವಿನ ತಾಯಿಯಾಗಿದ್ದರಿಂದ ಜೂನ್​ 29ರಂದು ಜಾಮೀನ್​ ಮೇಲೆ ಹೊರಬಂದರು.

  ಅಶ್ಲೀಲ ಮಾತಿನ ಮೂಲಕ ಅನೇಕ ವೀಕ್ಷಕರನ್ನು ಹೆಚ್ಚಿಸಿಕೊಂಡಿದ್ದ ಯೂಟ್ಯೂಬರ್​ ಮದನ್​ ಕೋಟ್ಯಂತರ ಆದಾಯ ಗಳಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಇನ್ನು ಮದನ್​ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ. ಜುಲೈ 6ರಂದು ಚೆನ್ನೈ ಪೊಲೀಸ್​ ಕಮೀಷನರ್​ ಶಂಕರ್​ ಜೈಸ್ವಾಲ್​ ಗುಂಡಾಸ್​ ಕಾಯ್ಕೆಯಡಿ ಆರೋಪಿಯನ್ನು ಬಂಧನದಲ್ಲಿ ಇರಿಸಿದ್ದಾರೆ.

  ಜಾಮೀನಿನಡಿ ಬಿಡುಗಡೆಗೊಂಡ ಕೃತಿಕಾ ಜೂನ್​ 6ರಂದು ಅವರು ಚೆನ್ನೈ ಪೊಲೀಸ್​ ಆಯುಕ್ತರನ್ನು ಭೇಟಿ ಮಾಡಿದರು. ಪತಿಯ ಬಗೆಗೆ ವಿವರಿಸಿದರು. ನಂತರ ಚೆನ್ನೈ ಪೊಲೀಸ್​ ಆಯೋಗದಲ್ಲಿ ವರದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು. ಈ ವೇಳೆ ಪತ್ರಕರ್ತ ಕೇಳಿದ ಪ್ರಶ್ನೆಗೆ ಕೃತಿಕಾ ಅವರು ‘ನನ್ನ ಗಂಡನ ಯೂಟ್ಯೂಬ್​​ ಚಾನೆಲ್​ ನಿಷ್ಕ್ರೀಯಗೊಂಡಿದೆ, ಇದರಿಂದ ನನ್ನ ಜೀವನೋಪಾಯಕ್ಕೆ ಧಕ್ಕೆಯಾಗುತ್ತಿದೆ. ನಮ್ಮಲ್ಲಿ ಯಾವುದೇ ಐಷಾರಾಮಿ ಕಾರು ಇಲ್ಲ. ನಮ್ಮಲ್ಲಿ ಆಡಿ6 ಕಾರು ಮಾತ್ರ ಇದೆ ಎಂದು ಹೇಳಿದ್ದಾರೆ.

  ಸದ್ಯ ಮದನ್​ ಪತ್ನಿ ಕೃತಿಕಾ ಅವರ ಮಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಟ್ರೋಲ್​ ಪೇಜ್​ಗಳು ಅವರ ಮಾತನ್ನು ವೈರಲ್​ ಮಾಡುತ್ತಿದೆ.
  Published by:Harshith AS
  First published: