ತ್ರಿವಳಿ ತಲಾಖ್​ ಬೇರೆ, ಶಬರಿಮಲೆ ತೀರ್ಪೇ ಬೇರೆ; ಅವರೆಡಕ್ಕೂ ಹೋಲಿಕೆ ಸಾಧ್ಯವಿಲ್ಲ; ಅಮಿತ್​ ಶಾ

ತ್ರಿವಳಿ ತಲಾಖ್​ ತೀರ್ಪಿನ ಜೊತೆಗೆ ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ತಳುಕು ಹಾಕುವುದು ಸರಿಯಲ್ಲ. ಶಬರಿಮಲೆ ವಿಷಯ ಭಾವನೆಗೆ ಸಂಬಂಧಿಸಿದ್ದು. ದೇಶದ 13 ದೇವಸ್ಥಾನಗಳಲ್ಲಿ ಪುರುಷರಿಗೂ ಪ್ರವೇಶವಿಲ್ಲ. ಅದೆಲ್ಲ ಆಯಾ ಸಮುದಾಯದ ನಂಬಿಕೆಗೆ ಬಿಟ್ಟ ವಿಚಾರ ಎಂದು ಅಮಿತ್​ ಶಾ ಹೇಳಿದ್ದಾರೆ.

sushma chakre | news18
Updated:November 14, 2018, 1:00 PM IST
ತ್ರಿವಳಿ ತಲಾಖ್​ ಬೇರೆ, ಶಬರಿಮಲೆ ತೀರ್ಪೇ ಬೇರೆ; ಅವರೆಡಕ್ಕೂ ಹೋಲಿಕೆ ಸಾಧ್ಯವಿಲ್ಲ; ಅಮಿತ್​ ಶಾ
ಅಮಿತ್​ ಶಾ
sushma chakre | news18
Updated: November 14, 2018, 1:00 PM IST
ನ್ಯೂಸ್​18 ಕನ್ನಡ

ನವದೆಹಲಿ (ನ. 14): ಸೆಪ್ಟೆಂಬರ್ ಅಂತ್ಯದಲ್ಲಿ ಸುಪ್ರೀಂಕೋರ್ಟ್​ ನೀಡಿದ ಮಹತ್ವದ ತೀರ್ಪುಗಳಲ್ಲಿ ಶಬರಿಮಲೆಗೆ ಮಹಿಳೆಯರ ಪ್ರವೇಶ ಮತ್ತು ಮುಸ್ಲಿಂ ಸಮುದಾಯದ ತ್ರಿವಳಿ ತಲಾಖ್​ ನಿಷೇಧ ಮುಖ್ಯವಾದುದು. ತ್ರಿವಳಿ ತಲಾಖ್​ ಅನ್ನು ಸ್ವಾಗತಿಸಿದ್ದ ಬಿಜೆಪಿ ಮತ್ತು ಹಿಂದು ಕಾರ್ಯಕರ್ತರು ಶಬರಿಮಲೆ ತೀರ್ಪಿನ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದರು. ಈ ಇಬ್ಬಂದಿತನದ ಬಗ್ಗೆ ಸಾಕಷ್ಟು ವಿರೋಧಗಳೂ ವ್ಯಕ್ತವಾಗಿತ್ತು.

ಇದೀಗ, ಆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಶಾ, ಶಬರಿಮಲೆಗೆ ಮಹಿಳೆಯರ ಪ್ರವೇಶ ಮತ್ತು ತ್ರಿವಳಿ ತಲಾಖ್​ ತೀರ್ಪನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗಲು ಸಾಧ್ಯವಿಲ್ಲ ಎಂದಿದ್ದಾರೆ.

10ರಿಂದ 50 ವರ್ಷದೊಳಗಿನ ಮಹಿಳೆಯರು ಕೂಡ ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನ ಮಾಡಬಹುದು ಎಂದು ಸೆ. 28ರಂದು ತೀರ್ಪು ನೀಡಿದ್ದ ಸುಪ್ರೀಂಕೋರ್ಟ್​ ಮರುಪರಿಶೀಲನೆ ಅರ್ಜಿಗಳ ವಿಚಾರಣೆಯನ್ನು ನಿನ್ನೆ ಕೈಗೆತ್ತಿಕೊಂಡಿದ್ದ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ವಿಚಾರಣೆಯನ್ನು ಮುಂದಿನ ವರ್ಷ ಜ. 22ಕ್ಕೆ ಮುಂದೂಡಿದ್ದರು. ಹಾಗೇ, ಮಹಿಳೆಯ ಪ್ರವೇಶಕ್ಕೆ ಸಂಬಂಧಿಸಿದಂತೆ ಈ ಹಿಂದೆ ನೀಡಿದ್ದ ತೀರ್ಪು ಜನವರಿವರೆಗೂ ಮುಂದುವರಿಕೆಯಾಗಲಿದೆ ಎಂದು ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಶಬರಿಮಲೆಗೆ ಆಗಮಿಸಲಿರುವ ಮಹಿಳೆಯರಿಗೆ ಸೂಕ್ತ ಭದ್ರತೆ ಒದಗಿಸಲು ಕೇರಳ ಸರ್ಕಾರ ಮುಂದಾಗಿತ್ತು.

ಇದನ್ನೂ ಓದಿ: ಶಬರಿಮಲೆಗೆ ಹೆಂಗಸರ ಪ್ರವೇಶ ನಿಷೇಧ ಹೇರಲು ಸುಪ್ರೀಂ ನಕಾರ, ಜ. 22ಕ್ಕೆ ಅರ್ಜಿ ವಿಚಾರಣೆ ಮುಂದೂಡಿಕೆ

ನಿನ್ನೆ ಸುಪ್ರೀಂಕೋರ್ಟ್​ ಅರ್ಜಿ ವಿಚಾರಣೆಯನ್ನು ಮುಂದೂಡುತ್ತಿದ್ದಂತೆ ಸಭೆ ಕರೆದು ಶಬರಿಮಲೆಗೆ ಭದ್ರತೆ ಒದಗಿಸುವ ಬಗ್ಗೆ ಚರ್ಚೆ ನಡೆಸಿದ್ದ ಸಿಎಂ ಪಿಣರಾಯಿ ವಿಜಯನ್​ ಅವರಿಗೆ ಅಷ್ಟೊಂದು ಆತುರವೇಕೆ? ಎಂದು ಅಮಿತ್​ ಶಾ ಪ್ರಶ್ನೆ ಹಾಕಿದ್ದಾರೆ.

ಶಬರಿಮಲೆ ತೀರ್ಪಿನ ಕುರಿತು ರಾಜ್ಯ ಸರ್ಕಾರ ಯಾವುದೇ ಆದೇಶ ಹೊರಡಿಸುವ ಅಗತ್ಯವಿಲ್ಲ. ಸುಪ್ರೀಂಕೋರ್ಟ್​ನ ಬೇರೆ ತೀರ್ಪುಗಳ ಬಗ್ಗೆ ಇಷ್ಟು ಆಸಕ್ತಿ ತೋರದ ಕೇರಳ ಸರ್ಕಾರ ಈ ಒಂದು ವಿಷಯದಲ್ಲಿ ಅತಿಯಾದ ಮುತುವರ್ಜಿ ವಹಿಸುತ್ತಿರುವುದಕ್ಕೆ ಕಾರಣವೇನು? ಶಬರಿಮಲೆ ವಿಷಯದಲ್ಲಿ ರಾಜ್ಯ ಸರ್ಕಾರ ರಾಜಕೀಯ ಮಾಡುತ್ತಿಲ್ಲ ಎಂದರೆ ನಂಬುವುದು ಹೇಗೆ? ಎಂದು ಕೇಳಿದ್ದಾರೆ.
Loading...

ಇದನ್ನೂ ಓದಿ: ಶಬರಿಮಲೆ ಪ್ರವೇಶಕ್ಕೆ ಆನ್​ಲೈನ್​ ನೋಂದಣಿ ಮಾಡಿಕೊಂಡ ಮಹಿಳೆಯರು ಎಷ್ಟು ಗೊತ್ತಾ?

13 ದೇವಾಲಯಗಳಿಗೆ ಪುರುಷರಿಗೆ ಪ್ರವೇಶವಿಲ್ಲ:
ಸಂದರ್ಶನವೊಂದರಲ್ಲಿ ಮಾತನಾಡಿರುವ ಅಮಿತ್​ ಶಾ, ತ್ರಿವಳಿ ತಲಾಖ್​ ವಿಷಯದಲ್ಲಿ ಬಿಜೆಪಿ ಬೆಂಬಲ ಸೂಚಿಸಿದ್ದು ಬೇರೆ ವಿಷಯ. ಆದರೆ, ಶಬರಿಮಲೆ ತೀರ್ಪು ಧಾರ್ಮಿಕ ಭಾವನೆಗಳಿಗೆ ಸಂಬಂಧಪಟ್ಟಿದ್ದು. ಇವೆರಡೂ ತದ್ವಿರುದ್ಧ ಪ್ರಕರಣಗಳಾದ್ದರಿಂದ ನಾವು ಇಬ್ಬಂದಿತನ ತೋರುತ್ತಿದ್ದೇವೆ ಎಂದು ದೂಷಿಸುವುದು ಸರಿಯಲ್ಲ. ನಮ್ಮ ದೇಶದಲ್ಲಿ 13 ದೇವಸ್ಥಾನಗಳಿಗೆ ಪುರುಷರಿಗೆ ಪ್ರವೇಶವಿಲ್ಲ. ಅದರ ಬಗ್ಗೆ ಯಾರಾದರೂ ಧ್ವನಿಯೆತ್ತಿದ್ದಾರಾ? ನೀವು ಗುರುದ್ವಾರಕ್ಕೆ ಪ್ರವೇಶ ಮಾಡಬೇಕೆಂದರೆ ತಲೆಯನ್ನು ಬಟ್ಟೆಯಿಂದ ಮುಚ್ಚಿಕೊಳ್ಳಲೇಬೇಕು. ಈ ರೀತಿಯ ಹಲವಾರು ನಿಯಮಗಳು ಒಂದೊಂದು ಸಮುದಾಯದಲ್ಲಿವೆ. ಇದು ಅವರವರ ಭಾವನೆಗಳಿಗೆ ಸಂಬಂಧಿಸಿರುವುದರಿಂದ ಎಲ್ಲದನ್ನೂ ನಾವು ಪ್ರಶ್ನಿಸುವುದು ಸರಿಯಲ್ಲ ಎಂದಿದ್ದಾರೆ.

ಇದನ್ನೂ ಓದಿ: 'ಶಾ' ಪರ್ಶಿಯನ್ ಪದ​, ಬಿಜೆಪಿ ಮೊದಲು ತನ್ನ ಪಕ್ಷದ ಅಧ್ಯಕ್ಷನ ಹೆಸರು ಬದಲಿಸಲಿ; ಇತಿಹಾಸಕಾರ ಇರ್ಫಾನ್ ಹಬೀಬ್

 

First published:November 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ