ಕೃಷಿಗೆ ಸಂಬಂಧಿಸಿದ ಕಾಯ್ದೆಗಳ ವಿರೊಧಿಸಿ ದೆಹಲಿಯಲ್ಲಿ ರೈತರು ಚಳುವಳಿ ಮುಂದುವರಿಸಿರೋ ಸಂದರ್ಭದಲ್ಲಿಯೇ ನೂತನ ಕಾಯ್ದೆಗಳು ಕೃಷಿಕರ ಅಭಿವೃದ್ಧಿಗೆ ಪೂರಕವಾಗಿದ್ದು, ರಾಜಕೀಯ ಪ್ರೇರಿತ ರೈತ ಹೋರಾಟ ಅಂತ್ಯಗೊಳಿಸಬೇಕೆಂಬ ಅಭಿಪ್ರಾಯವನ್ನು ಜನತೆ ವ್ಯಕ್ತಪಡಿಸಿದೆ. ನೂತನ ಕಾಯ್ದೆಗಳ ಕುರಿತಾಗಿ ನ್ಯೂಸ್ 18 ನೆಟ್ ವರ್ಕ್ ವಿವಿಧ ಕ್ಷೇತ್ರಗಳ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿತ್ತು. 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ 2412 ಜನರ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಜನತೆಯ ಪ್ರತಿಕ್ರಿಯೆಯ ಪ್ರಮುಖಾಂಶಗಳು.
- ಹೊಸ ಕೃಷಿ ಸುಧಾರಣಾ ಕಾನೂನುಗಳು ರೈತರಿಗೆ ಪ್ರಯೋಜನಕರವಾಗಿದ್ದು, ದೆಹಲಿ ಬಳಿ ನಡೆಸುತ್ತಿರುವ ಪ್ರತಿಭಟನೆಗಳನ್ನು ಹಿಂತೆಗೆದುಕೊಳ್ಳಬೇಕೆಂದು ಅವರು ಪ್ರತಿಕ್ರಿಯಿಸಿದ್ದಾರೆ.
- ಶೇ. 62 ರಷ್ಟು ಜನರು ಪ್ರತಿಭಟನೆಗಳನ್ನು ಹಿಂತೆಗೆದುಕೊಳ್ಳುವುದು ಉತ್ತಮ ಎಂದು ಅಭಿಮತ ವ್ಯಕ್ತಪಡಿಸಿದ್ದಾರೆ.
- ಶೇ.61 ರಷ್ಟು ಜನ ಹೊಸ ಕೃಷಿ ಸುಧಾರಣಾ ಕಾನೂನುಗಳನ್ನು ಬೆಂಬಲಿಸುತ್ತಿದ್ದಾರೆ.
- ಕೃಷಿ ಸುಧಾರಣಾ ಕಾನೂನುಗಳ ವಿರುದ್ಧದ ಪ್ರತಿಭಟನೆಗಳು ರಾಜಕೀಯ ಪ್ರೇರಿತವಾಗಿವೆ ಎಂದು ಶೇ. 54 ರಷ್ಟು ಜನರು ನಂಬಿದ್ದಾರೆ
- ಶೇ. 59 ರಷ್ಟು ಜನರು ಪ್ರತಿಭಟನಾ ನಿರತ ರೈತರು ಕೃಷಿ ಸುಧಾರಣಾ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಬಾರದು ಮತ್ತು ರಾಜಿ ಮಾಡಿಕೊಳ್ಳಬೇಕು ಎಂದು ನಂಬಿದ್ದಾರೆ
- ಹೊಸ ಕೃಷಿ ಸುಧಾರಣಾ ಕಾನೂನಿನಡಿಯಲ್ಲಿ ರೈತರು ಉತ್ತಮ ಬೆಲೆ ಪಡೆಯಬಹುದು ಎಂದು ಶೇ. 67 ರಷ್ಟು ನಂಬಿದ್ದಾರೆ
- ಶೇ. 72 ರಷ್ಟು ಜನರು ಭಾರತೀಯ ಕೃಷಿಯ ಸುಧಾರಣೆ ಮತ್ತು ಆಧುನೀಕರಣವನ್ನು ಬೆಂಬಲಿಸುತ್ತಾರೆ
- ರೈತರು ತಮ್ಮ ಉತ್ಪನ್ನಗಳನ್ನು ಎಪಿಎಂಸಿ ಮಂಡಿ ಹೊರಗೆ ಮಾರಾಟ ಮಾಡುವ ಆಯ್ಕೆಯನ್ನು ನೀಡಿರೋದಕ್ಕೆ ಶೇ. 75 ರಷ್ಟು ಜನರು ಸ್ವಾಗತಿಸಿದ್ದಾರೆ.
- ಎಂಎಸ್ಪಿ ಮುಂದುವರಿಯುತ್ತದೆ ಎಂಬ ಲಿಖಿತ ಭರವಸೆ ನೀಡುವ ಪ್ರಸ್ತಾಪವನ್ನು ಶೇ. 59 ಜನರು ಬೆಂಬಲಿಸಿದ್ದಾರೆ
- ಶೇ. 67 ರಷ್ಟು ಜನರು ನಿಷೇಧಿಸುವ ಸುಗ್ರೀವಾಜ್ಞೆಯನ್ನು ಹಿಂತೆಗೆದುಕೊಳ್ಳುವ ಬೇಡಿಕೆಯನ್ನು ಒಪ್ಪುವುದಿಲ್ಲ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ