ಸುಪ್ರೀಂಕೋರ್ಟ್​ ತೀರ್ಪನ್ನು ಸ್ವಾಗತಿಸುತ್ತೇವೆ, ನಾಳೆ ಜಯ ನಮ್ಮದೆ; ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ

ನ್ಯೂಸ್​18 ಕನ್ನಡದೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಒಳ್ಳೆಯ ತೀರ್ಪು​ ಬಂದಿದೆ. ಈ ತೀರ್ಪನ್ನು ನಾವು ಸ್ವಾಗತಿಸುತ್ತೇವೆ ಎಂದರು.

news18-kannada
Updated:November 26, 2019, 11:31 AM IST
ಸುಪ್ರೀಂಕೋರ್ಟ್​ ತೀರ್ಪನ್ನು ಸ್ವಾಗತಿಸುತ್ತೇವೆ, ನಾಳೆ ಜಯ ನಮ್ಮದೆ; ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ.
  • Share this:
ಬಿಜೆಪಿಗೆ ಸರ್ಕಾರ ರಚಿಸಲು ಆಹ್ವಾನ ನೀಡಿದ್ದ ರಾಜ್ಯಪಾಲ ಭಗತ್​ ಸಿಂಗ್​ ಕೊಶ್ಯಾರಿ ಅವರ ಕ್ರಮವನ್ನು ಪ್ರಶ್ನಿಸಿ ಶಿವಸೇನೆ, ಕಾಂಗ್ರೆಸ್​, ಎನ್​ಸಿಪಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನಾಳೆಯೇ ವಿಶ್ವಾಸಮತ ಯಾಚಿಸುವಂತೆ ಸೂಚಿಸಿದೆ. ಮಹಾರಾಷ್ಟ್ರ ಕಾಂಗ್ರೆಸ್​ ಉಸ್ತುವಾರಿ ಹೊತ್ತಿರುವ ಮಲ್ಲಿಕಾರ್ಜುನ ಖರ್ಗೆ ಸುಪ್ರೀಂಕೋರ್ಟ್​​ನ ತೀರ್ಪನ್ನು ಸ್ವಾಗತಿಸಿದ್ದು, ನಾಳೆ ನಮ್ಮದೇ ಗೆಲುವು ಎಂದಿದ್ದಾರೆ.

ಈ ಬಗ್ಗೆ ನ್ಯೂಸ್​18 ಕನ್ನಡದೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, “ಒಳ್ಳೆಯ ತೀರ್ಪು​ ಬಂದಿದೆ. ನಮ್ಮ ಮನವಿಗೆ ಕೋರ್ಟ್​​ ಸ್ಪಂದಿಸಿದೆ. ಈ ಮೊದಲು ಕರ್ನಾಟಕದ ವಿಚಾರದಲ್ಲಿ ನೀಡಿದ್ದ ತೀರ್ಪಿನ ಮಾದರಿಯಲ್ಲೇ ಈ ಜಡ್ಜ್​ಮೆಂಟ್​ ಇದೆ. ಈ ತೀರ್ಪನ್ನು ನಾವು ಸ್ವಾಗತಿಸುತ್ತೇವೆ,” ಎಂದರು.

ನಿನ್ನೆ ಕಾಂಗ್ರೆಸ್​, ಶಿವಸೇನೆ ಹಾಗೂ ಎನ್​ಸಿಪಿ ಸಭೆ ನಡೆಸಿತ್ತು. ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಕೂಡ ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ಮೈತ್ರಿಕೂಟಕ್ಕೆ ಎಷ್ಟು ಜನರ ಬೆಂಬಲ ಇದೆ ಎನ್ನುವ ಬಗ್ಗೆ ಮಾಹಿತಿ ನೀಡಿದ ಅವರು, “165 ಶಾಸಕರ ಪೈಕಿ 163 ಜನ ನಮ್ಮ ಬೆಂಬಲಕ್ಕಿದ್ದಾರೆ. ಹೀಗಾಗಿ, ನಮಗೆ ಮೆಜಾರಿಟಿ ಇದೆ. ನಾಳೆ ನಾವು ಸರ್ಕಾರ ರಚನೆ ಮಾಡುವುದು ಖಚಿತ,” ಎಂದರು ಖರ್ಗೆ.

ಅಜಿತ್​ ಪವಾರ್​ ಬಿಜೆಪಿಗೆ ಬೆಂಬಲ ಸೂಚಿಸಿದ ಬಗ್ಗೆ ಮಾತನಾಡಿದ ಖರ್ಗೆ, “ಜಾರಿ ನಿರ್ದೇಶನಾಲಯದ ಪ್ರಕರಣಗಳಿಗೆ ಹೆದರಿ ಅಜಿತ್​ ಪವಾರ್​ ಈ ರೀತಿ ಮಾಡಿದ್ದಾರೆ. ಅವರು ಸ್ವಂತ ರಕ್ಷಣೆಗೆ ಹೋಗಿದ್ದಾರೆ. ಹೀಗಾಗಿ ಅವರ ಬಗ್ಗೆ ಜನರಿಗೆ ಒಳ್ಳೆಯ ಅಭಿಪ್ರಾಯ ಇಲ್ಲ,” ಎಂದು ಹೇಳಿದರು ಖರ್ಗೆ.
First published:November 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ