ನಾವೇ ನಿಜವಾದ ಹಿಂದುಗಳು, ನೀವೆಲ್ಲಾ ಕೇವಲ ಬೋಗಸ್; ಬಿಜೆಪಿ ವಿರುದ್ಧ ಸಿಎಂ ಕೆಸಿಆರ್​​​​ ಕಿಡಿ!

ಇನ್ನು ಕೇಂದ್ರ ಬಿಜೆಪಿ ಸರ್ಕಾರ ನಿರುದ್ಯೋಗ ತೊಲಗಿಸುವಲ್ಲಿ; ದೇಶವನ್ನು ಅಭಿವೃದ್ದಿ ಮಾಡುವಲ್ಲಿ ವಿಫಲವಾಗಿದೆ. ಕೇಂದ್ರದ ವೈಫಲ್ಯಗಳನ್ನು ಮರೆಮಾಚುವ ಸಲುವಾಗಿಯೇ ರಾಮ ಜನ್ಮಭೂಮಿಯಂಥ ವಿವಾದವನ್ನು ಕೆದಕಿ ಮುನ್ನೆಲೆಗೆ ತರುತ್ತಿದೆ. ಜನರ ಸಂಪೂರ್ಣ ಗಮನವನ್ನು ವಿವಾದದ ಸುತ್ತ ಸೆಳೆಯುವ ಹುನ್ನಾರ ನಡೆಸುತ್ತಿದೆ- ಸಿಎಂ ಕೆಸಿಆರ್​​​

Ganesh Nachikethu | news18
Updated:April 3, 2019, 7:06 PM IST
ನಾವೇ ನಿಜವಾದ ಹಿಂದುಗಳು, ನೀವೆಲ್ಲಾ ಕೇವಲ ಬೋಗಸ್; ಬಿಜೆಪಿ ವಿರುದ್ಧ ಸಿಎಂ ಕೆಸಿಆರ್​​​​ ಕಿಡಿ!
ಕೆಸಿಆರ್​, ಮೋದಿ
  • News18
  • Last Updated: April 3, 2019, 7:06 PM IST
  • Share this:
ಹೈದರಾಬಾದ್​​​(ಮಾ.20): "ಹಿಂದುತ್ವದ ಬಗ್ಗೆ ಮಾತನಾಡಲು ಬಿಜೆಪಿಗೆ ಮಾತ್ರ ಹಕ್ಕಿದೆಯೇ? ನಾವ್ಯಾರು ಹಿಂದುಗಳಲ್ಲವೇ? ಬಿಜೆಪಿ ಬಿಟ್ಟರೇ ಮತ್ಯಾರು ಪೂಜೆ ಮತ್ತಿತ್ತರ ಹಿಂದೂ ಸಂಪ್ರದಾಯ ಪಾಲಿಸುವುದಿಲ್ಲವೇ? ನಾವ್ಯಾರು ಧಾರ್ಮಿಕ ಶ್ರದ್ಧೆಯಿಂದ ಹಿಂದೂ ಹಬ್ಬಗಳನ್ನು ಆಚರಿಸುವುದಿಲ್ಲವೇ? ದೇಶದ ಪ್ರತಿ ಮನೆಯಲ್ಲೂ ಹಿಂದೂ ದೇವರ ಫೋಟೊಗಳನ್ನು ಇಟ್ಟುಕೊಂಡಿದ್ದಾರೆ. ಹಾಗಾದರೆ ಬಿಜೆಪಿ ಮತ್ತು ವಿಶ್ವ ಹಿಂದೂ ಪರಿಷತ್​ ಮಾತ್ರವೇ ಹಿಂದೂಗಳು, ನಾವ್ಯಾರು ಅಲ್ಲವೇ?" ಎಂದು ಪ್ರಶ್ನಿಸುವ ಮೂಲಕ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್​​ ಬಿಜೆಪಿಗೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜತೆಗೆ ಚುನಾವಣೆ ಹೊಸ್ತಿಲಲ್ಲಿ ಲಘು ಹಿಂದುತ್ವದೆಡೆಗೆ ಹೆಜ್ಜೆ ಇಟ್ಟಿದ್ದಾರೆ.

"ಮತ ಗಳಿಕೆಗಾಗಿ ಬಿಜೆಪಿ ಹಿಂದೂ ಧರ್ಮವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಮುಸ್ಲಿಂ ಮತ್ತು ಕ್ರೈಸ್ತ ಧರ್ಮಗಳ ವಿರುದ್ಧ ಅಮಾಯಕ ಹಿಂದುಗಳನ್ನು ಎತ್ತಿಕಟ್ಟುವ ಮೂಲಕ ಸಮಾಜದಲ್ಲಿ ದ್ವೇಷ ಬಿತ್ತುತ್ತಿದೆ," ಎಂದು ಬಿಜೆಪಿ ಮೇಲೆ ಸಿಎಂ ಕೆಸಿಆರ್​​​ ಗಂಭೀರ ಆರೋಪ ಮಾಡಿದರು. ಅಲ್ಲದೇ ಬಿಜೆಪಿ ಅನುಸರಿಸುತ್ತಿರುವ ಹಿಂದುತ್ವ ಕೇವಲ ಮತಬ್ಯಾಂಕ್​​ಗಾಗಿ​​​. ಧರ್ಮಗಳ ನಡುವೆ ದ್ವೇಷ ಬಿತ್ತುವ ಹಿಂದುತ್ವ ಬರೀ ಬೋಗಸ್​​. ನಮ್ಮ ಮನೆಯಲ್ಲಿ ನಾವು ಪಾಲಿಸುವ ಹಿಂದುತ್ವವೇ ನೈಜ ಹಿಂದುತ್ವ. ಅವರಿಗಿಂತ ನಾವೇ ನಿಜವಾದ ಹಿಂದೂಗಳು ಎಂದು ಟಿಆರ್​​ಎಸ್​ ಮುಖ್ಯಸ್ಥ ಬಿಜೆಪಿ ವಿರುದ್ಧ ಕಿಡಿಕಾರಿದ್ಧಾರೆ.

ಲೋಕಸಭೆ ಚುನಾವಣೆ ಪ್ರಚಾರದ ಅಂಗವಾಗಿ ಬುಧವಾರ ಮಾತನಾಡಿದ ಸಿಎಂ ಕೆಸಿಆರ್​​, ತಮ್ಮ ಮಗಳು​​ ಕವಿತಾ ಪ್ರತಿನಿಧಿಸುವ ನಿಝಾಮಾಬಾದ್ ಕ್ಷೇತ್ರದಲ್ಲಿ ಟಿಆರ್​​ಎಸ್​ನಿಂದ​ ಬೃಹತ್ ಸಮಾವೇಶ ಆಯೋಜಿಸಿದ್ದರು. ಇಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಸಿಎಂ ಚಂದ್ರಶೇಖರ ರಾವ್, "ಬಿಜೆಪಿ ರಾಜಕೀಯ ಪಕ್ಷವೇ ಅಥವಾ ಧಾರ್ಮಿಕ ಸಂಘಟನೆಯೇ?" ಎಂದು ಬಹಿರಂಗವಾಗಿಯೇ ಪ್ರಶ್ನಿಸಿದರು. ಅಲ್ಲದೇ ರಾಮ, ಕೃಷ್ಣ, ಕಂಸ, ಶೂರ್ಪನಖಿ, ಸತ್ಯಭಾಮೆಯ ಜನ್ಮಸ್ಥಳವನ್ನು ನಿರ್ಧರಿಸಲು ನೀವ್ಯಾರು? ಈ ಬಗ್ಗೆ ನಿಮ್ಮ ನಿಲುವೇನು ಎಂದು ಕೇಳಿದರು.

ಇದನ್ನೂ ಓದಿ: ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಚೆಲುವರಾಯಸ್ವಾಮಿಗೆ ಸೂಚನೆ ನೀಡಿದ ಸಿದ್ದರಾಮಯ್ಯ

ಕೇಂದ್ರ ಬಿಜೆಪಿ ಸರ್ಕಾರ ನಿರುದ್ಯೋಗ ತೊಲಗಿಸುವಲ್ಲಿ, ದೇಶದ ಅಭಿವೃದ್ದಿಯ ಪಥದತ್ತ ಕರೆದೊಯ್ಯುವಲ್ಲಿ ವಿಫಲವಾಗಿದೆ. ಕೇಂದ್ರದ ವೈಫಲ್ಯಗಳನ್ನು ಮರೆಮಾಚುವ ಸಲುವಾಗಿಯೇ ರಾಮ ಜನ್ಮಭೂಮಿಯಂಥ ವಿವಾದವನ್ನು ಕೆದಕಿ ಮುನ್ನೆಲೆಗೆ ತರಲಾಗುತ್ತಿದೆ. ಜನರ ಸಂಪೂರ್ಣ ಗಮನವನ್ನು ವಿವಾದದ ಸುತ್ತ ಸೆಳೆಯುವ ಹುನ್ನಾರ ಬಿಜೆಪಿಯದ್ದಾಗಿದೆ ಎಂದರು.

ಇದನ್ನೂ ಓದಿ: ಮಂಡ್ಯದಲ್ಲಿ ಸುಮಲತಾ ನಾಮಪತ್ರ ಸಲ್ಲಿಕೆ; ಬಹಿರಂಗ ಸಮಾವೇಶಕ್ಕೆ ಹತ್ತಾರು ಸಾವಿರ ಜನ ಆಗಮನ!

ಹೀಗೆ ಮಾತು ಮುಂದುವರೆಸಿದ ಟಿಆರ್​ಎಸ್​​ ಮುಖ್ಯಸ್ಥ, "ಅಯೋಧ್ಯೆ ವಿವಾದವನ್ನು ನ್ಯಾಯಾಂಗ ಬಗೆಹರಿಸಲಿದೆ. ಧಾರ್ಮಿಕ ವಿಚಾರಗಳಲ್ಲಿ ರಾಜಕೀಯ ಪಕ್ಷಗಳು ಏಕೆ ಹಸ್ತಕ್ಷೇಪ ಮಾಡಬೇಕು? ಅಲ್ಲದೇ ಚುನಾವಣೆ ಹೊತ್ತಲ್ಲಿಯೇ ಈ ಬಗ್ಗೆ ಯಾಕೆ ಮಾತಾಡಬೇಕು? ಎಂದು ಕೆಂಡಕಾರಿದರು. ಜತೆಗೆ ಇದು ನ್ಯಾಯಾಲಯ ನಿರ್ಧರಿಸಬೇಕಾದ ವಿಚಾರವೇ ಹೊರತು, ರಾಜಕೀಯ ಪಕ್ಷಗಳು ನಿರ್ಧರಿಸುವಂತದ್ದಲ್ಲ ಎಂದರು.
First published:March 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ