ಭಾರತಕ್ಕೆ ಏನು ಬೇಕೋ ಅದನ್ನು ಪೂರೈಸಲು ನಾವು ಸಿದ್ಧರಿದ್ದೇವೆ; US ಎಚ್ಚರಿಕೆಯ ನಡುವೆ Russia ಘೋಷಣೆ

ಭಾರತದ ವಿದೇಶಾಂಗ ನೀತಿಗಳು ಸ್ವಾತಂತ್ರ್ಯ ಮತ್ತು ನಿಜವಾದ ರಾಷ್ಟ್ರೀಯ ನ್ಯಾಯ ಸಮ್ಮತ ಹಿತಾಸಕ್ತಿಗಳ ಮೇಲೆ ಕೇಂದ್ರೀಕರಿಸುತ್ತವೆ ಎಂದು ನಾನು ನಂಬುತ್ತೇನೆ ಎಂದು ರಷ್ಯಾದ ವಿದೇಶಾಂಗ ಸಚಿವರು ಹೇಳಿದರು.

ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಮತ್ತು ಭಾರತದ ವಿದೇಶಾಂಗ ಸಚಿವ ಜೈಶಂಕರ್

ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಮತ್ತು ಭಾರತದ ವಿದೇಶಾಂಗ ಸಚಿವ ಜೈಶಂಕರ್

 • Share this:
  ಭಾರತವು (India) ನಮ್ಮಿಂದ ಖರೀದಿಸಲು ಬಯಸುವ ಯಾವುದೇ ಸರಕು (Material)ಗಳನ್ನು ಪೂರೈಸಲು ನಾವು ಸಿದ್ಧರಿದ್ದೇವೆ ಎಂದು ರಷ್ಯಾದ (Russia) ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ (Foreign Minister Sergey Lavrov ) ಹೇಳಿದ್ದಾರೆ. ನಾವು ಚರ್ಚೆಗೆ ಸಿದ್ಧರಿದ್ದೇವೆ. ರಷ್ಯಾ ಮತ್ತು ಭಾರತ ಉತ್ತಮ ಸಂಬಂಧವನ್ನು ಹೊಂದಿವೆ ಎಂದು ಲಾವ್ರೊವ್ ಹೇಳಿದ್ದಾರೆ. ಭಾರತದ ಮೇಲೆ ಅಮೆರಿಕದ (America) ಒತ್ತಡವು, ಭಾರತ-ರಷ್ಯಾ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆಯೇ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರನ್ನು ಕೇಳಿದಾಗ? ಯಾವುದೇ ಒತ್ತಡವು ನಮ್ಮ ಪಾಲುದಾರಿಕೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂಬುದರಲ್ಲಿ ನಮಗೆ ಯಾವುದೇ ರೀತಿಯ ಸಂದೇಹವಿಲ್ಲ ಎಂದು ಲಾವ್ರೊವ್ ಹೇಳಿದರು.

  ಉಕ್ರೇನ್ ನ್ನಲ್ಲಿ ಯುದ್ಧ ನಡೆಯುತ್ತಿಲ್ಲ, ವಿಶೇಷ ಕಾರ್ಯಾಚರಣೆ ನಡೆಯುತ್ತಿದೆ

  ಲಾವ್ರೋವ್ ಅಮೆರಿಕ ತಮ್ಮ ರಾಜಕೀಯವನ್ನು ಅನುಸರಿಸಲು ಇತರರನ್ನು ಒತ್ತಾಯಿಸುತ್ತಿದೆ ಎಂದು ಲಾವ್ರೊವ್ ಹೇಳಿದರು. ಉಕ್ರೇನ್ ನ್ನಲ್ಲಿ ಯಾವುದೇ ಯುದ್ಧ ನಡೆಯುತ್ತಿಲ್ಲ. ವಿಶೇಷ ಕಾರ್ಯಾಚರಣೆ ನಡೆಯುತ್ತಿದೆ ಎಂದು ಹೇಳಿದರು.

  ಉಕ್ರೇನ್‌ನಲ್ಲಿ ಯುದ್ಧದ ಬೆಳವಣಿಗೆಯ ಬಗ್ಗೆ ಕೇಳಿದಾಗ, ನೀವು ಅದನ್ನು ಯುದ್ಧ ಎಂದು ಕರೆದಿದ್ದೀರಿ ಅದು ನಿಜವಲ್ಲ ಎಂದು ಲಾವ್ರೊವ್ ಹೇಳಿದರು. ಇದು ವಿಶೇಷ ಕಾರ್ಯಾಚರಣೆಯಾಗಿದ್ದು, ಮಿಲಿಟರಿ ಮೂಲ ಸೌಕರ್ಯವನ್ನು ಗುರಿಯಾಗಿಸಲಾಗುತ್ತಿದೆ.

  ಇದನ್ನೂ ಓದಿ: ಪ್ರಧಾನಿ ಮೋದಿ ಹತ್ಯೆಗೆ ಸಂಚು, ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಇ-ಮೇಲ್..!

  ಭದ್ರತಾ ಸವಾಲುಗಳ ವಿಷಯದಲ್ಲಿ ಭಾರತವನ್ನು ಹೇಗೆ ಬೆಂಬಲಿಸಬಹುದು

  ರಷ್ಯಾಕ್ಕೆ ಯಾವುದೇ ಬೆದರಿಕೆಯನ್ನು ಪ್ರಸ್ತುತ ಪಡಿಸುವ ಸಾಮರ್ಥ್ಯವನ್ನು ನಿರ್ಮಿಸುವ ಕೈವ್ ಆಡಳಿತವನ್ನು ಕಸಿದುಕೊಳ್ಳುವುದು ನಮ್ಮ ಗುರಿಯಾಗಿದೆ. ಭದ್ರತಾ ಸವಾಲುಗಳ ವಿಷಯದಲ್ಲಿ ಭಾರತವನ್ನು ಹೇಗೆ ಬೆಂಬಲಿಸಬಹುದು ಎಂದು ಲಾವ್ರೊವ್ ಅವರನ್ನು ಕೇಳಲಾಯಿತು.

  ಹಲವು ದಶಕಗಳಿಂದ ಭಾರತದೊಂದಿಗೆ ನಾವು ಬೆಳೆಸಿಕೊಂಡಿರುವ ಸಂಬಂಧವನ್ನು ಸಂಭಾಷಣೆಯು ನಿರೂಪಿಸುತ್ತದೆ ಎಂದು ಲಾವ್ರೊವ್ ಉತ್ತರಿಸಿದರು. ಸಂಬಂಧಗಳು ಕಾರ್ಯತಂತ್ರದ ಪಾಲುದಾರಿಕೆಗಳಾಗಿವೆ. ಈ ಆಧಾರದ ಮೇಲೆ ನಾವು ಎಲ್ಲಾ ಕ್ಷೇತ್ರಗಳಲ್ಲಿ ನಮ್ಮ ಸಹಕಾರವನ್ನು ಉತ್ತೇಜಿಸುತ್ತಿದ್ದೇವೆ.

  ಭಾರತದ ವಿದೇಶಾಂಗ ನೀತಿಗಳು ಸ್ವಾತಂತ್ರ್ಯ ಮತ್ತು ನಿಜವಾದ ರಾಷ್ಟ್ರೀಯ ನ್ಯಾಯ ಸಮ್ಮತ ಹಿತಾಸಕ್ತಿಗಳ ಮೇಲೆ ಕೇಂದ್ರೀಕರಿಸುತ್ತವೆ ಎಂದು ನಾನು ನಂಬುತ್ತೇನೆ ಎಂದು ರಷ್ಯಾದ ವಿದೇಶಾಂಗ ಸಚಿವರು ಹೇಳಿದರು.

  ರಷ್ಯಾದ ಒಕ್ಕೂಟದ ಆಧಾರದ ಮೇಲೆ ಅದೇ ನೀತಿಯು ನಮ್ಮನ್ನು ದೊಡ್ಡ ದೇಶಗಳು, ಉತ್ತಮ ಸ್ನೇಹಿತರು ಮತ್ತು ನಿಷ್ಠಾವಂತ ಪಾಲುದಾರರನ್ನಾಗಿ ಮಾಡುತ್ತದೆ.

  ರಷ್ಯಾ ವಿದೇಶಾಂಗ ಸಚಿವರು ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಬಂದಿದ್ದಾರೆ

  ಇದಕ್ಕೂ ಮುನ್ನ ಶುಕ್ರವಾರ ಬೆಳಗ್ಗೆ ಸೆರ್ಗೆಯ್ ಲಾವ್ರೊವ್ ಅವರು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಭೇಟಿಯಾದರು. ಉಕ್ರೇನ್, ಅಫ್ಘಾನಿಸ್ತಾನ, ಇರಾನ್, ಇಂಡೋ-ಪೆಸಿಫಿಕ್, ಆಸಿಯಾನ್ ಮತ್ತು ಭಾರತೀಯ ಉಪಖಂಡದಲ್ಲಿನ ಬೆಳವಣಿಗೆಗಳು ಮತ್ತು ದ್ವಿಪಕ್ಷೀಯ ಸಹಕಾರವನ್ನು ಉಭಯ ದೇಶಗಳ ವಿದೇಶಾಂಗ ಮಂತ್ರಿಗಳ ನಡುವೆ ಚರ್ಚಿಸಲಾಯಿತು.

  ಇಂದು ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. ಮಾಹಿತಿ ಪ್ರಕಾರ, ರಷ್ಯಾದಿಂದ ಅಗ್ಗದ ಕಚ್ಚಾ ತೈಲ ಖರೀದಿ, ಎಸ್-400 ಕ್ಷಿಪಣಿ ವ್ಯವಸ್ಥೆ ಸೇರಿದಂತೆ ವಿವಿಧ ಸೇನಾ ಉಪಕರಣಗಳನ್ನು ಸಕಾಲದಲ್ಲಿ ತಲುಪಿಸುವುದು ಇತ್ಯಾದಿ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ.

  ರಷ್ಯಾ ವಿದೇಶಾಂಗ ಸಚಿವ ಲಾವ್ರೊವ್ ಅವರು ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಗುರುವಾರ ಆಗಮಿಸಿದ್ದಾರೆ. ಉಕ್ರೇನ್ ಮೇಲಿನ ದಾಳಿಯ ನಂತರ ಇದು ಅವರ ಮೊದಲ ಭಾರತ ಭೇಟಿಯಾಗಿದೆ.

  ರಷ್ಯಾದ ಶತ್ರುಗಳೆಂದು ಪರಿಗಣಿಸಲ್ಪಟ್ಟಿರುವ ಅಮೆರಿಕದ ಹಿರಿಯ ಅಧಿಕಾರಿಗಳು ಸಹ ಭಾರತದಲ್ಲಿ ಇರುವ ಸಮಯದಲ್ಲಿ ಸೆರ್ಗೆಯ್ ಲಾವ್ರೊವ್ ಅವರ ಈ ಭೇಟಿ ನಡೆಯುತ್ತಿದೆ.

  ಈ ಸಮಯದಲ್ಲಿ US ಉಪ NSA (ರಾಷ್ಟ್ರೀಯ ಭದ್ರತಾ ಸಲಹೆಗಾರ) ದಲೀಪ್ ಸಿಂಗ್ ಕೂಡ ಭಾರತದಲ್ಲಿದ್ದಾರೆ. ದಲೀಪ್ ಸಿಂಗ್ ಕೂಡ ಭಾರತಕ್ಕೆ ಎಚ್ಚರಿಕೆ ನೀಡಿದ್ದು, ಇದಕ್ಕೆ ಭಾರತ ಕೂಡ ದಿಟ್ಟ ಉತ್ತರ ನೀಡಿದೆ.

  ಇದನ್ನೂ ಓದಿ: ರಷ್ಯಾ ಉಕ್ರೇನ್ ನಡುವೆ ರಾಜಿ ಮಾಡಿಸಿ; ಭಾರತಕ್ಕೆ ರಷ್ಯಾದಿಂದ ಆಹ್ವಾನ!

  ರಷ್ಯಾದ ಮೇಲೆ ಹೇರಲಾಗಿರುವ ನಿರ್ಬಂಧಗಳನ್ನು ಉಲ್ಲಂಘಿಸುವ ದೇಶಗಳು ಸಹ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ದಲೀಪ್ ಸಿಂಗ್ ಹೇಳಿದ್ದಾರೆ.

  ಭಾರತದ ಇಂಧನ ಮತ್ತು ಇತರ ವಸ್ತುಗಳ ಆಮದುಗಳಲ್ಲಿ ರಷ್ಯಾದ ಪಾಲು ಹೆಚ್ಚಾಗುವುದನ್ನು ಅಮೆರಿಕ ಬಯಸುವುದಿಲ್ಲ ಎಂದು ಅವರು ಹೇಳಿದರು.
  Published by:renukadariyannavar
  First published: