Sri Lanka: “ಸಾವೊಂದೇ ಕಟ್ಟ ಕಡೆಯ ಆಯ್ಕೆ ಅದು ನೂರು ಪ್ರತಿಶತ ಸಂಭವಿಸುತ್ತದೆ"; ಆಹಾರ ಕೊರತೆಯ ಬಗ್ಗೆ ಶ್ರೀಲಂಕಾ ಎಚ್ಚರಿಕೆ

ದ್ವೀಪ ರಾಷ್ಟ್ರ ಶ್ರೀಲಂಕಾ ವಿನಾಶಕಾರಿ ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿದ್ದು, ಪರಿಸ್ಥಿತಿ ದಿನೇ ದಿನೇ ಬಿಗಡಾಯಿಸುತ್ತಲೇ ಇದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಅವಶ್ಯಕ ವಸ್ತುಗಳಾದ ಅಕ್ಕಿ, ಹಾಲಿನ ಪುಡಿ, ಬೇಳೆಕಾಳು, ಎಲ್ಪಿಜಿ, ಸಕ್ಕರೆ ಸೇರಿದಂತೆ ಹಲವು ದಿನಬಳಕೆಯ ವಸ್ತುಗಳ ಬೆಲೆಯಲ್ಲಿ ಧಿಡೀರ್ ಏರಿಕೆಯಾಗಿದೆ.

ಶ್ರೀಲಂಕಾ ಪರಿಸ್ಥಿತಿ

ಶ್ರೀಲಂಕಾ ಪರಿಸ್ಥಿತಿ

  • Share this:
ದ್ವೀಪ ರಾಷ್ಟ್ರ (Island nation) ಶ್ರೀಲಂಕಾ (Sri Lanka) ವಿನಾಶಕಾರಿ ಆರ್ಥಿಕ ಬಿಕ್ಕಟ್ಟಿನೊಂದಿಗೆ (The financial crisis) ಹೋರಾಡುತ್ತಿದ್ದು, ಪರಿಸ್ಥಿತಿ ದಿನೇ ದಿನೇ ಬಿಗಡಾಯಿಸುತ್ತಲೇ ಇದೆ. ಅಗತ್ಯ ವಸ್ತುಗಳ (Essential material) ಬೆಲೆ (Price) ಗಗನಕ್ಕೇರಿದೆ. ಅವಶ್ಯಕ ವಸ್ತುಗಳಾದ ಅಕ್ಕಿ (Rice), ಹಾಲಿನ ಪುಡಿ (Milk Powder), ಬೇಳೆಕಾಳು (Pulse), ಎಲ್ಪಿಜಿ (LPG), ಸಕ್ಕರೆ (Sugar) ಸೇರಿದಂತೆ ಹಲವು ದಿನಬಳಕೆಯ ವಸ್ತುಗಳ ಬೆಲೆಯಲ್ಲಿ ಧಿಡೀರ್ ಏರಿಕೆಯಾಗಿದೆ. ಆರ್ಥಿಕ ಪರಿಸ್ಥಿತಿ ಜೊತೆಗೆ ವಿದ್ಯುತ್, ಇಂಧನ, ಅನಿಲ, ಅಡುಗೆ ಎಣ್ಣೆ, ಸಿಲಿಂಡರ್ ಬೆಲೆಯೂ ಕೆಗೆಟಕುವ ಯಾವುದೇ ಲಕ್ಷಣಗಳನ್ನು ತೋರುತ್ತಿಲ್ಲ.

ಆಹಾರ ಕೊರತೆ ಎದುರಿಸುತ್ತಿರುವ ನೆರೆ ರಾಷ್ಟ್ರ
ಅಡುಗೆ ಪದಾರ್ಥಗಳ ಬೆಲೆ ಏರಿಕೆ ಜೊತೆಗೆ ಸಿಲಿಂಡರ್ ಬೆಲೆ 2,675 ರೂಪಾಯಿಗಳಿಂದ ಸುಮಾರು 5,000 ರೂಪಾಯಿಗಳಿಗೆ ($ 14) ಏರಿದೆ. ಹೀಗಾಗಿ ತೀವ್ರ ಪ್ರಮಾಣದ ಆಹಾರ ಕೊರತೆ ಎದುರಿಸುತ್ತಿರುವ ನೆರೆ ರಾಷ್ಟ್ರ ನಮಗೆ ಸಾಯುವುದೊಂದೆ ಆಯ್ಕೆ ಎಂದು ಹೇಳಿದೆ. ಆಹಾರದ ಕೊರತೆಯ ಬಗ್ಗೆ ಶ್ರೀಲಂಕಾದ ಪ್ರಧಾನಿ ಎಚ್ಚರಿಸಿದ್ದಾರೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಸರ್ಕಾರವು ಮುಂದಿನ ಋತುವಿನೊಳಗೆ ಸಾಕಷ್ಟು ಗೊಬ್ಬರವನ್ನು ಖರೀದಿಸಲಿದೆ ಎಂದು ಪ್ರತಿಜ್ಞೆ ಮಾಡಿದ್ದಾರೆ.

ಕಳೆದ ವರ್ಷ ಏಪ್ರಿಲ್‌ನಲ್ಲಿ ಅಧ್ಯಕ್ಷ ಗೊಟಾಬಯ ರಾಜಪಕ್ಸೆ ಅವರು ಎಲ್ಲಾ ರಾಸಾಯನಿಕ ಗೊಬ್ಬರಗಳನ್ನು ನಿಷೇಧಿಸುವ ನಿರ್ಧಾರದ ಮೂಲಕ ಇಳುವರಿಯನ್ನು ತೀವ್ರವಾಗಿ ಕಡಿತಗೊಳಿಸಿದರು ಮತ್ತು ಸರ್ಕಾರವು ನಿಷೇಧವನ್ನು ಹಿಂತೆಗೆದುಕೊಂಡಿದ್ದರೂ, ಯಾವುದೇ ಗಣನೀಯ ಆಮದುಗಳು ಇನ್ನೂ ನಡೆದಿಲ್ಲ.

"ಈ ಯಲಾ (ಮೇ-ಆಗಸ್ಟ್) ಹಂಗಾಮಿಗೆ ರಸಗೊಬ್ಬರವನ್ನು ಪಡೆಯಲು ಸಮಯವಿಲ್ಲದಿದ್ದರೂ, ಮಹಾ (ಸೆಪ್ಟೆಂಬರ್-ಮಾರ್ಚ್) ಹಂಗಾಮಿಗೆ ಸಾಕಷ್ಟು ದಾಸ್ತಾನುಗಳನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ" ಎಂದು ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ. ಇಂಧನದ ಹೆಚ್ಚಿನ ಸಬ್ಸಿಡಿ ದೇಶೀಯ ಬೆಲೆಗಳು ಮತ್ತು ರಾಸಾಯನಿಕ ಗೊಬ್ಬರಗಳ ಆಮದನ್ನು ನಿಷೇಧಿಸುವ ನಿರ್ಧಾರವು ದೇಶದಲ್ಲಿ ಕೃಷಿ ವಲಯವನ್ನು ಜರ್ಜರಿತಗೊಳಿಸಿದೆ.

“ಆಹಾರವಿಲ್ಲದೇ ಸಾಯುತ್ತೇವೆ”
ಆರ್ಥಿಕ ಚಟುವಟಿಕೆಯು ಈಗಾಗ್ಲೇ ಕುಂಠಿತಗೊಂಡಿದ್ದು, ಶ್ರೀಲಂಕಾವು ವಿದೇಶಿ ವಿನಿಮಯ, ಇಂಧನ ಮತ್ತು ಔಷಧಿಗಳ ಭೀಕರ ಕೊರತೆ, ವಿದ್ಯುತ್ ಕೊರತೆಯನ್ನು ಎದುರಿಸುತ್ತಿದೆ. ಆಹಾರದ ಕೊರತೆ ಜೊತೆ ಅಡುಗೆ ಅನಿಲ ಸಿಲಿಂಡರ್‌ಗಳ ಪೂರೈಕೆ ಸಹ ಸರಿಯಾದ ಪ್ರಮಾಣದಲ್ಲಿ ಆಗುತ್ತಿಲ್ಲ. 500 ಜನ ಖರೀದಿಗೆ ಬಂದರೆ ಕೇವಲ 200 ಸಿಲಿಂಡರ್ ಗಳು ಪೂರೈಕೆಯಾಗುತ್ತಿವೆ, ಇವು ನಮ್ಮನ್ನು ಕಷ್ಟಕ್ಕೆ ದೂಡಿವೆ ಎಂದು ಚಾಲಕ ಮೊಹಮ್ಮದ್ ಶಾಜ್ಲಿ ಹೇಳಿದರು. ಗ್ಯಾಸ್ ಇಲ್ಲದೆ, ಸೀಮೆಎಣ್ಣೆ ಇಲ್ಲದೆ ನಾವು ಏನೂ ಮಾಡಲು ಸಾಧ್ಯವಿಲ್ಲ. “ಕೊನೆಗೆ ಆಹಾರವಿಲ್ಲದೇ ಸಾಯುವುದೇ ನಮ್ಮ ಕಟ್ಟಕಡೆಯ ಆಯ್ಕೆ, ಅದು ನೂರು ಪ್ರತಿಶತ ಸಂಭವಿಸುತ್ತದೆ." ಎಂದು ನಾಗರೀಕರು ಹೇಳುತ್ತಿದ್ದಾರೆ.

ಇದನ್ನೂ ಓದಿ: Explained: ಅಮೆರಿಕಾದಲ್ಲಿ ಓದಲು ಇರುವ ಅವಕಾಶಗಳೇನು? ವಿದ್ಯಾರ್ಥಿಗಳು ಅಮೆರಿಕಾವನ್ನೇ ಬಯಸುವುದು ಏಕೆ?

ಮುಂದಿನ ಎರಡು ತಿಂಗಳುಗಳಲ್ಲಿ ಹಣದುಬ್ಬರವು 40%ಕ್ಕೆ ಏರಿಕೆಯಾಗಬಹುದು ಆದರೆ ಇದು ಹೆಚ್ಚಾಗಿ ಪೂರೈಕೆ-ಬದಿಯ ಒತ್ತಡಗಳಿಂದ ನಡೆಸಲ್ಪಡುತ್ತದೆ ಮತ್ತು ಬ್ಯಾಂಕ್ ಮತ್ತು ಸರ್ಕಾರದ ಕ್ರಮಗಳು ಈಗಾಗಲೇ ಬೇಡಿಕೆ-ಬದಿಯ ಹಣದುಬ್ಬರವನ್ನು ನಿಯಂತ್ರಿಸುತ್ತಿವೆ ಎಂದು ಗವರ್ನರ್ ಹೇಳಿದ್ದಾರೆ. ಹಣದುಬ್ಬರವು ಏಪ್ರಿಲ್‌ನಲ್ಲಿ 29.8%ಕ್ಕೆ ತಲುಪಿತು ಮತ್ತು ಆಹಾರದ ಬೆಲೆಗಳು ವರ್ಷದಿಂದ ವರ್ಷಕ್ಕೆ 46.6% ಹೆಚ್ಚಾಗಿದೆ.

ಸಾಲ ಪರಿಹಾರವನ್ನು ಒದಗಿಸುವ ಪ್ರಯತ್ನಿಸುತ್ತಿರುವ ಏಳು ಆರ್ಥಿಕ ಶಕ್ತಿಗಳು 
ಏಳು ಆರ್ಥಿಕ ಶಕ್ತಿಗಳ ಗುಂಪು ಶ್ರೀಲಂಕಾಕ್ಕೆ ಸಾಲ ಪರಿಹಾರವನ್ನು ಒದಗಿಸುವ ಪ್ರಯತ್ನಗಳನ್ನು ಬೆಂಬಲಿಸುತ್ತದೆ ಎಂದು G7 ಹಣಕಾಸು ಮುಖ್ಯಸ್ಥರು ಗುರುವಾರ ಜರ್ಮನಿಯಲ್ಲಿ ನಡೆದ ಸಭೆಯ ಕರಡು ಪತ್ರದಲ್ಲಿ ದೇಶವು ತನ್ನ ಸಾರ್ವಭೌಮ ಸಾಲವನ್ನು ಡೀಫಾಲ್ಟ್ ಮಾಡಿದ ನಂತರ ಹೇಳಿದ್ದಾರೆ. ಕೇಂದ್ರ ಬ್ಯಾಂಕ್ ಮುಖ್ಯಸ್ಥರಾದ ಪಿ.ನಂದಲಾಲ್ ವೀರಸಿಂಗ್ ಅವರು ಸಾಲ ಪುನರ್ರಚನೆಯ ಯೋಜನೆಗಳು ಬಹುತೇಕ ಅಂತಿಮಗೊಂಡಿವೆ ಮತ್ತು ಅವರು ಶೀಘ್ರದಲ್ಲೇ ಕ್ಯಾಬಿನೆಟ್ಟಿಗೆ ಪ್ರಸ್ತಾವನೆಯನ್ನು ಸಲ್ಲಿಸಲಿದ್ದಾರೆ ಎಂದು ಹೇಳಿದ್ದಾರೆ.

ಅಂತರರಾಷ್ಟ್ರೀಯ ಹಣಕಾಸು ನಿಧಿಯ ವಕ್ತಾರರು ನಿಧಿಯ ಬೆಳವಣಿಗೆಗಳನ್ನು ಬಹಳ ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಮತ್ತು ಶ್ರೀಲಂಕಾಕ್ಕೆ ವರ್ಚುವಲ್ ಮಿಷನ್ ಮೇ 24ರಂದು ದೇಶಕ್ಕೆ ಸಂಭಾವ್ಯ ಸಾಲ ಕಾರ್ಯಕ್ರಮದ ಕುರಿತು ತಾಂತ್ರಿಕ ಮಾತುಕತೆಗಳನ್ನು ಮುಕ್ತಾಯಗೊಳಿಸುವ ನಿರೀಕ್ಷೆಯಿದೆ ಎಂದು ಹೇಳಿದರು.

ಇದನ್ನೂ ಓದಿ:  Baby Girl: ವಿಮಾನದಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ!

ಸರ್ಕಾರದ ವಿರುದ್ಧ ಪ್ರತಿಭಟನೆ ಅತಿರೇಖಕಕ್ಕೆ ಹೋಗುತ್ತಿದ್ದಂತೆ ಗುರುವಾರ ಕೊಲಂಬೊದಲ್ಲಿ ನೂರಾರು ವಿದ್ಯಾರ್ಥಿ ಪ್ರತಿಭಟನಾಕಾರರನ್ನು ಹತ್ತಿಕ್ಕಲು ಪೊಲೀಸರು ಅಶ್ರುವಾಯು ಮತ್ತು ಜಲ ಕ್ಯಾನನ್ ಅನ್ನು ಪ್ರಯೋಗಿಸಿದರು. ರಾಷ್ಟ್ರಪತಿ ಹಾಗೂ ಪ್ರಧಾನಿಯನ್ನು ಪದಚ್ಯುತಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
Published by:Ashwini Prabhu
First published: