HOME » NEWS » National-international » WAYS TO CHECK PF BALANCE AS EPFO TO CREDIT 8 5PC INTEREST SNVS

EPFO - ಪಿಎಫ್ ಮೊತ್ತಕ್ಕೆ ಶೇ. 8.5 ಬಡ್ಡಿ ಹಣ; ನಿಮ್ಮ ಪಿಎಫ್ ಬ್ಯಾಲೆನ್ಸ್ ನೋಡುವುದು ಹೇಗೆ?

2019-20ರ ಸಾಲಿನ ವರ್ಷದಲ್ಲಿ ದೇಶದ ವಿವಿಧ ಉದ್ಯೋಗಿಗಳ ಪಿಎಫ್ ಖಾತೆಯಲ್ಲಿನ ಹಣದ ಮೊತ್ತಕ್ಕೆ ಇಪಿಎಫ್ಒ ಸಂಸ್ಥೆ ಶೇ 8.5ರಷ್ಟು ಬಡ್ಡಿ ಹಣವನ್ನು ಸೇರಿಸುತ್ತಿದೆ. ಈ ಹಣದ ವಿವರ ಪಡೆಯುವ ವಿಧಾನಗಳು ಇಲ್ಲಿವೆ.

news18
Updated:December 29, 2020, 3:58 PM IST
EPFO - ಪಿಎಫ್ ಮೊತ್ತಕ್ಕೆ ಶೇ. 8.5 ಬಡ್ಡಿ ಹಣ; ನಿಮ್ಮ ಪಿಎಫ್ ಬ್ಯಾಲೆನ್ಸ್ ನೋಡುವುದು ಹೇಗೆ?
ಇಪಿಎಫ್​ಒ
  • News18
  • Last Updated: December 29, 2020, 3:58 PM IST
  • Share this:
ಬೆಂಗಳೂರು: ಪಿಎಫ್ ಸೌಲಭ್ಯ ಇರುವ ಉದ್ಯೋಗಿಗಳಿಗೆ ಖುಷಿಯ ಸುದ್ದಿ. ಸರ್ಕಾರಿ ಸ್ವಾಮ್ಯದ ಇಪಿಎಫ್​ಒ ಸಂಸ್ಥೆ 2019-20ನೇ ಸಾಲಿನ ವರ್ಷಕ್ಕೆ ಪಿಎಫ್ ಹಣಕ್ಕೆ ಶೇ. 8.5ರಷ್ಟು ಬಡ್ಡಿ ಹಣ ನೀಡಿದೆ. ಡಿಸೆಂಬರ್ ಅಂತ್ಯಕ್ಕೆ ಅಂದರೆ ಇನ್ನೆರಡು ದಿನದೊಳಗೆ ನಿಮ್ಮ ಪಿಎಫ್ ಖಾತೆಗೆ ಬಡ್ಡಿ ಹಣ ಬಂದು ಬೀಳಲಿದೆ. ಎರಡು ಕಂತುಗಳಲ್ಲಿ ಹಣ ಬರಲಿದೆ. ಮೊದಲ ಕಂತಿನಲ್ಲಿ 8.15% ಹಾಗೂ ಎರಡನೇ ಕಂತಿನಲ್ಲಿ 0.35% ಹಣವನ್ನು ಇಪಿಎಫ್​ಒ ಹಾಕಲಿದೆ.

ನಮ್ಮ ಪಿಎಫ್ ಖಾತೆಯಲ್ಲಿನ ಹಣದ ಬ್ಯಾಲೆನ್ಸ್ ತಿಳಿದುಕೊಳ್ಳಲು ನಾಲ್ಕು ಪ್ರಮುಖ ಮಾರ್ಗಗಳಿವೆ:

1) Umang ಆ್ಯಪ್ ಮೂಲಕ: ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿದ ಉಮಾಂಗ್ ಆ್ಯಪ್ ಅನ್ನ ಡೌನ್ ಲೋಡ್ ಮಾಡಿಕೊಂಡು ಉದ್ಯೋಗಿಗಳು ತಮ್ಮ ಪಿಎಫ್ ಹಣದ ಬ್ಯಾಲೆನ್ಸ್ ಪರಿಶೀಲಿಸಬಹುದು. ಈ ಆ್ಯಪ್​ನಲ್ಲಿ ಎಪಿಎಫ್ ಪಾಸ್​ಬುಕ್ ಪಡೆಯಬಹುದು, ಪಿಎಫ್ ಹಣಕ್ಕೆ ಕ್ಲೈಮ್ ಕೂಡ ಮಾಡಬಹುದು. ಇನ್ನೂ ಹೆಚ್ಚಿನ ಸೇವೆಗಳು ಈ ಆ್ಯಪ್​ನಲ್ಲಿವೆ. ನೀವು ಮೊಬೈಲ್​ನಲ್ಲಿ ಆ್ಯಪ್ ಓಪನ್ ಮಾಡಿದಾಗ ಅಲ್ಲಿ ಕಾಣಿಸುವ EPFO ಅನ್ನ ಒತ್ತಿದರೆ ಎಂಪ್ಲಾಯೀ ಸೆಂಟ್ರಿಕ್ ಸರ್ವಿಸಸ್ ಎಂಬ ಆಪ್ಷನ್ ನೋಡಬಹುದು. ಅಲ್ಲಿ ಕಾಣಿಸುವ View Passbook ಒತ್ತಿ ಇಪಿಎಫ್ ಬ್ಯಾಲೆನ್ಸ್ ಪರಿಶೀಲಿಸಬಹುದು. ಅದಕ್ಕೆ ಮುನ್ನ ಲಾಗಿನ್ ಆಗಬೇಕು. ಸಕ್ರಿಯಗೊಂಡ ನಿಮ್ಮ ಯುಎಎನ್ ನಂಬರ್ ನಮೂದಿಸಿದಾಗ ನಿಮ್ಮ ನಂಬರ್​ಗೆ ಬರುವ ಒಟಿಪಿಯ ಸಹಾಯದಿಂದ ಲಾಗಿನ್ ಆಗಬಹುದು. ನಂತರ ನಿಮ್ಮ ಕಂಪನಿಯ ಮೆಂಬರ್ ಐಡಿ ಆಯ್ಕೆ ಮಾಡಿ ನಿಮ್ಮ ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಬಹುದಾಗಿದೆ.

ಇದನ್ನೂ ಓದಿ: 60ರ ನಿವೃತ್ತಿ ವಯಸ್ಸಿನ ಸಮಯದಲ್ಲಿ ವೈದ್ಯಕೀಯ ವೆಚ್ಚಗಳನ್ನು ನಿಭಾಯಿಸುವುದು ಹೇಗೆ?

2) ಇಪಿಎಫ್​ಒ ಪೋರ್ಟಲ್: www.epfindia.gov.in ವೆಬ್ ಸೈಟ್​ನಲ್ಲೂ ನೀವು ಯುಎಎನ್ ನಂಬರ್ ಮೂಲಕ ನಿಮ್ಮ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಬಹುದು.

3) ಎಸ್ಸೆಮ್ಮೆಸ್: 7738299899 ನಂಬರ್​ಗೆ ನೀವು EPFOHO UAN ENG ಎಂದು ಟೈಪ್ ಮಾಡಿ ಮೆಸೇಜ್ ಕಳುಹಿಸಿ. ಅದರಿಂದಲೂ ನೀವು ಪಿಎಫ್ ಬ್ಯಾಲೆನ್ಸ್​ನ ಮಾಹಿತಿ ಪಡೆಯಬಹುದು. ಈ ಸೇವೆ ಪಡೆಯಲು ನೀವು ನಿಮ್ಮ ಯುಎಎನ್ ನಂಬರ್ ಅನ್ನು ನಿಮ್ಮ ಆಧಾರ್, ಪಾನ್ ಕಾರ್ಡ್ ಅಥವಾ ಬ್ಯಾಂಕ್ ಖಾತೆಯೊಂದಿಗೆ ಸೇರಿಸಿರಬೇಕು.

4) ಮಿಸ್ಡ್ ಕಾಲ್: ನೀವು 011-22901406 ದೂರವಾಣಿ ನಂಬರ್​ಗೆ ನಿಮ್ಮ ನೊಂದಾಯಿತ ನಂಬರ್​ನಿಂದ ಮಿಸ್ಡ್ ಕಾಲ್ ಕೊಡುವ ಮೂಲಕವೂ ಪಿಎಫ್ ಬ್ಯಾಲೆನ್ಸ್ ಮೊತ್ತದ ಅಪ್​ಡೇಟ್ ಪಡೆಯಬಹುದು. ಈ ಸೇವೆ ಪಡೆಯಲೂ ನೀವು ಆಧಾರ್, ಪ್ಯಾನ್ ನಂಬರ್ ಅಥವಾ ಬ್ಯಾಂಕ್ ಖಾತೆಗೆ ಯುಎಎನ್ ನಂಬರ್ ಜೋಡಿತವಾಗಿರಬೇಕು. ಹಾಗೂ ಯುಎಎನ್ ಪೋರ್ಟಲ್​ನಲ್ಲಿ ನೊಂದಾಯಿಸಿರಬೇಕು.
Published by: Vijayasarthy SN
First published: December 29, 2020, 3:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories