Rahul Gandhi Foreign Trip: ವಿದೇಶಕ್ಕೆ ಹಾರಿದ ರಾಹುಲ್ ಗಾಂಧಿ; ಯಾವ ದೇಶ, ಏನು ಕಾರಣ?

ಸಂಸದ ರಾಹುಲ್ ಗಾಂಧಿ ವೈಯಕ್ತಿಕ ಭೇಟಿಗಾಗಿ ವಿದೇಶ ಪ್ರವಾಸ ಕೈಗೊಂಡಿದ್ದಾರಾ ಅಥವಾ ಪಕ್ಷದ ಪರವಾಗಿ ಅಧಿಕೃತ ಪ್ರವಾಸಕ್ಕಾಗಿ ತೆರಳಿದ್ದಾರಾ ಎಂಬ ಮಾಹಿತಿ ಇದುವರೆಗೂ ಹೊರಬಿದ್ದಿಲ್ಲ.

ರಾಹುಲ್ ಗಾಂಧಿ

ರಾಹುಲ್ ಗಾಂಧಿ

 • Share this:
  ದೆಹಲಿ: ಜಾರಿ ನಿರ್ದೇಶನಾಲಯದ ವಿಚಾರಣೆಗಳ ನಡುವೆಯೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿದೇಶ ಪ್ರಯಾಣಕ್ಕೆ ಮುಂದಾಗಿದ್ದಾರೆ.  ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಮತ್ತು ವಯನಾಡ್ ಲೋಕಸಭಾ ಕ್ಷೇತ್ರದ ಸಂಸದ ರಾಹುಲ್ ಗಾಂಧಿ (Wayanad Lok Sabha MP Rahul Gandhi)  ಮಂಗಳವಾರ ವಿದೇಶ ಪ್ರವಾಸಕ್ಕಾಗಿ ದೇಶ ತೊರೆದಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಅಧಿಕೃತ ಮೂಲಗಳು ತಿಳಿಸಿವೆ. ಇಂದು (ಜುಲೈ 12) ರಾಹುಲ್ ಗಾಂಧಿ ವಿದೇಶ ವಿಮಾನ  (Rahul Gandhi Foreign Trip) ಏರಿದ್ದಾರೆ ಎಂದು ವರದಿಯಾಗಿದ್ದು ಜುಲೈ 17ರ ಒಳಗೆ ಅವರು ಭಾರತಕ್ಕೆ ಮರಳಲಿದ್ದಾರೆ ಎನ್ನಲಾಗಿದೆ. ಆದರೆ ಸಂಸದ ರಾಹುಲ್ ಗಾಂಧಿ ವಿದೇಶ ಪ್ರಯಾಣದ ಉದ್ದೇಶವನ್ನು ಕಾಂಗ್ರೆಸ್ ಬಿಟ್ಟುಕೊಟ್ಟಿಲ್ಲ. 

  ಸಂಸದ ರಾಹುಲ್ ಗಾಂಧಿ ವೈಯಕ್ತಿಕ ಭೇಟಿಗಾಗಿ ವಿದೇಶ ಪ್ರವಾಸ ಕೈಗೊಂಡಿದ್ದಾರಾ ಅಥವಾ ಪಕ್ಷದ ಪರವಾಗಿ ಅಧಿಕೃತ ಪ್ರವಾಸಕ್ಕಾಗಿ ತೆರಳಿದ್ದಾರಾ ಎಂಬ ಮಾಹಿತಿ ಇದುವರೆಗೂ ಹೊರಬಿದ್ದಿಲ್ಲ. ಅಲ್ಲದೇ ಸಂಸದ ರಾಹುಲ್ ಗಾಂಧಿ ಯಾವ ದೇಶಕ್ಕೆ ತೆರಳುತ್ತಿದ್ದಾರೆ ಎಂಬ ಮಾಹಿತಿಯನ್ನೂ ಗಾಂಧಿ ಕುಟುಂಬದ ಮೂಲಕಗಳು ತಿಳಿಸಿಲ್ಲ.

  ಕಾಂಗ್ರೆಸ್​ನಲ್ಲಿ ಎಲ್ಲವೂ ಸರಿಯಾಗಿಲ್ಲ
  ಕಾಂಗ್ರೆಸ್ ಗೋವಾ ಘಟಕದಲ್ಲಿ ಎಲ್ಲವೂ ಸರಿಯಾಗಿಲ್ಲ. ಈ ನಡುವೆಯೇ ಸಂಸದ ರಾಹುಲ್ ಗಾಂಧಿ ದೇಶ ತೊರೆದಿದ್ದಾರೆ. ಕಳೆದ ಭಾನುವಾರವಷ್ಟೇ ಗೋವಾ ಕಾಂಗ್ರೆಸ್ ಘಟಕವು ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವ ಸಂದರ್ಭದಲ್ಲಿ ಮೈಕಲ್ ಲೋಬೋ ಅವರನ್ನು ರಾಜ್ಯದ ವಿರೋಧ ಪಕ್ಷದ ನಾಯಕ ಸ್ಥಾನದಿಂದ ತೆಗೆದುಹಾಕಿತ್ತು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬಳಿ ಕಾಂಗ್ರೆಸ್ ಪಕ್ಷದ ಸಂಸದ ಮುಕುಲ್ ವಾಸ್ನಿಕ್ ಅವರು ಕರಾವಳಿ ರಾಜ್ಯಕ್ಕೆ ಭೇಟಿ ನೀಡಿ ಬೆಳವಣಿಗೆಗಳನ್ನು ಪರಿಶೀಲಿಸುವಂತೆ ಕೇಳಿಕೊಂಡಿದ್ದರು.

  ಇದನ್ನೂ ಓದಿ: Sonia Gandhi: ಸೋನಿಯಾ ಗಾಂಧಿಗೆ ಸಂಕಷ್ಟದ ಸುರಿಮಳೆ; ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮತ್ತೆ ಸಮನ್ಸ್

  ಗೋವಾದಲ್ಲಿ ಕಾಂಗ್ರೆಸ್ ಸ್ಥಿತಿ ಹೀಗಿದೆ
  ಅಲ್ಲದೇ ಬಿಜೆಪಿ ಗೋವಾ ಕಾಂಗ್ರೆಸ್ ಶಾಸಕರ ನಡುವೆ ಭಜನೆಗೆ ಪ್ರಯತ್ನಿಸುತ್ತಿದೆ. ನಾಯಕರಿಗೆ ದೊಡ್ಡ ಮೊತ್ತದ ಹಣವನ್ನು ನೀಡಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಈ ಎಲ್ಲ ಬೆಳವಣಿಗೆಗಳ ನಡುವೆ ಕಾಂಗ್ರೆಸ್ ಉನ್ನತ ಮಟ್ಟದ ನಾಯಕ ರಾಹುಲ್ ಗಾಂಧಿ ವಿದೇಶ ಪ್ರಯಾಣ ಕೈಗೊಂಡಿದ್ದಾರೆ.

  ಇತ್ತೀಚಿಗಷ್ಟೇ ರಾಹುಲ್ ಗಾಂಧಿ ಕಚೇರಿ ಧ್ವಂಸವಾಗಿತ್ತು
  ಜೂನ್ 24 ರಂದು ಕೇರಳದ ವಯನಾಡಿನಲ್ಲಿ ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಂಸದ ಕಚೇರಿಯನ್ನು ಧ್ವಂಸಗೊಳಿಸಲಾಗಿತ್ತು. ದಾಳಿಯಲ್ಲಿ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (SFI) ಪಾತ್ರವಿದೆ ಎಂದು ಕಾಂಗ್ರೆಸ್ ಪಕ್ಷ  ಆರೋಪಿಸಿತ್ತು.

  ಇದನ್ನೂ ಓದಿ: AICC ಸಮೀಕ್ಷೆ ಆಧರಿಸಿ ಸಿದ್ದು-ಡಿಕೆಶಿ ಜೊತೆ ರಾಹುಲ್ ಗಾಂಧಿ ಸಮಾವೇಶ! ಜೊತೆಯಲ್ಲೇ ಭೋಜನ

  ರಾಹುಲ್ ಗಾಂಧಿ ಅವರ ವಯನಾಡ್ ಕಚೇರಿ ಮೇಲೆ ನಡೆದ ದಾಳಿಯ ದೃಶ್ಯಗಳನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಸಿಪಿಐ(ಎಂ) ಕಾರ್ಯಕರ್ತರೇ ಹಲ್ಲೆ ನಡೆಸಿದ್ದಾರೆ ಎಂದು ಸಂಸದ ಶಶಿ ತರೂರ್ ಆರೋಪಿಸಿದ್ದರು. ಅಲ್ಲದೇ ಜಾರಿ ನಿರ್ದೇಶನಾಲಯವು ಸಹ ರಾಹುಲ್ ಗಾಂಧಿ ಅವರ
  ವಿಚಾರಣೆ ನಡೆಸಿತ್ತು.

  ಏನಿದು ನ್ಯಾಷನಲ್ ಹೆರಾಲ್ಡ್ ಪ್ರಕರಣ?
  2016 ರಿಂದ ನ್ಯಾಷನಲ್ ಹೆರಾಲ್ಡ್ ಪ್ರಕರಣದ ತನಿಖೆ ನಡೆಸುತ್ತಿದ್ದ ಆದಾಯ ತೆರಿಗೆ ಇಲಾಖೆ, ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮಾಲೀಕತ್ವ ಹೊಂದಿರುವ ಕಾಂಗ್ರೆಸ್ ಪ್ರವರ್ತಿತ ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಹಣಕಾಸು ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಚಾರ್ಜ್ ಶೀಟ್ ಸಲ್ಲಿಸಿತ್ತು. ಸೋನಿಯಾ ಗಾಂಧಿ ಮತ್ತು ಅವರ ಮಗ ಯಂಗ್ ಇಂಡಿಯನ್‌ನ ಪ್ರವರ್ತಕರು ಮತ್ತು ಬಹುಪಾಲು ಷೇರುದಾರರಲ್ಲಿ ಸೇರಿದ್ದಾರೆ ಮತ್ತು ಪ್ರತಿಯೊಬ್ಬರೂ ಕಂಪನಿಯಲ್ಲಿ 38 ಪ್ರತಿಶತ ಪಾಲನ್ನು ಹೊಂದಿದ್ದಾರೆ.
  Published by:guruganesh bhat
  First published: