• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Rahul Gandhi: ರಾಹುಲ್ ಗಾಂಧಿಗೆ ಮನೆ ನಿರ್ಮಿಸಿಕೊಡುವಂತೆ ಪುರಸಭೆಗೆ ಮನವಿ ಸಲ್ಲಿಸಿದ ವಯನಾಡ್ ಬಿಜೆಪಿ!

Rahul Gandhi: ರಾಹುಲ್ ಗಾಂಧಿಗೆ ಮನೆ ನಿರ್ಮಿಸಿಕೊಡುವಂತೆ ಪುರಸಭೆಗೆ ಮನವಿ ಸಲ್ಲಿಸಿದ ವಯನಾಡ್ ಬಿಜೆಪಿ!

ರಾಹುಲ್ ಗಾಂಧಿ

ರಾಹುಲ್ ಗಾಂಧಿ

2019 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಘೋಷಿಸಲಾದ ರಾಹುಲ್ ಗಾಂಧಿಯವರ 15 ಕೋಟಿ ರೂಪಾಯಿ ಮೌಲ್ಯದ ಸಂಪತ್ತಿನ ವಿವರಗಳನ್ನು ಬಿಜೆಪಿ ಪಕ್ಷದ ಸದಸ್ಯರು ಸಾಮಾಜಿಕ ಜಾಲ ತಾಣಗಳಲ್ಲಿ ಶೇರ್‌ ಮಾಡಿಕೊಂಡು ವ್ಯಂಗ್ಯವಾಡುತ್ತಿದ್ದಾರೆ.

  • Trending Desk
  • 4-MIN READ
  • Last Updated :
  • New Delhi, India
  • Share this:

    ನವದೆಹಲಿ: ರಾಯ್‌ಪುರದಲ್ಲಿ ನಡೆದ ಕಾಂಗ್ರೆಸ್‌ನ 85 ನೇ ಸರ್ವಸದಸ್ಯರ ಅಧಿವೇಶನದಲ್ಲಿ ರಾಹುಲ್ ಗಾಂಧಿಯವರು (Rahul Gandhi) ತಮಗೆ ವಯಸ್ಸು 52 ಆಗಿದ್ದರೂ ನನಗೆ ಮನೆ ಇಲ್ಲ, ಅಲಹಾಬಾದ್‌ನಲ್ಲಿ (Allahabad) ನಾವು ಹೊಂದಿರುವ ಮನೆ ನಮ್ಮದಲ್ಲ ಎಂಬ ಹೇಳಿಕೆಗೆ ಲೇವಡಿ ಮಾಡಿರುವ ವಯನಾಡ್‌ನ ಬಿಜೆಪಿ (BJP) ಪಕ್ಷದ ಕಾರ್ಯಕರ್ತರು ಗಾಂಧಿ ವಂಶಸ್ಥರಿಗೆ ನಿವಾಸ ಕಲ್ಪಿಸುವಂತೆ ಸ್ಥಳೀಯ ಪುರಸಭೆಯನ್ನು ಒತ್ತಾಯಿಸುವ ಮೂಲಕ ವ್ಯಂಗ್ಯವಾಡಿದ್ದಾರೆ.


    ವಯನಾಡ್ ಬಿಜೆಪಿ ಘಟಕದ ಜಿಲ್ಲಾಧ್ಯಕ್ಷ ಕೆ.ಪಿ.ಮಧು ನೇತೃತ್ವದ ಬಿಜೆಪಿ ನಿಯೋಗ ವಯನಾಡಿನ ಕಲ್ಪೆಟ್ಟಾ ಪುರಸಭೆಗೆ ಮನವಿ ಪತ್ರ ಸಲ್ಲಿಸಿದ್ದು, ರಾಹುಲ್ ಗಾಂಧಿ ಅವರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಅಪಾರ ಪ್ರಮಾಣದ ಸಂಪತ್ತಿನ ಒಡೆಯನಾಗಿದ್ದರೂ ರಾಹುಲ್ ಗಾಂಧಿ ತಾನೊಬ್ಬ ನಿರಾಶ್ರಿತ ಎಂದು ಹೇಳಿಕೊಂಡಿರುವುದು ನಿಜಕ್ಕೂ ಹಾಸ್ಯಸ್ಪದವಾಗಿದೆ. ಹೀಗಾಗಿ ಬಿಜೆಪಿ ಪಕ್ಷವು ಕಲ್ಪೆಟ್ಟಾ ಪುರಸಭೆಗೆ ರಾಹುಲ್ ಗಾಂಧಿಯವರಿಗೆ ನಿವೇಶನ ದೊರಕಿಸಿಕೊಡುವಂತೆ ಮನವಿ ಸಲ್ಲಿಸಿದೆ ಎಂದು ಮಧು ಮಾಧ್ಯಮಗಳಿಗೆ ತಿಳಿಸಿದ್ದಾರೆ.


    ಇದನ್ನೂ ಓದಿ: Rahul Gandhi: ಭಾರತ್ ಜೋಡೋ ಯಾತ್ರೆ ನನಗೂ ಅಲ್ಲ ಕಾಂಗ್ರೆಸ್‌ಗೂ ಅಲ್ಲ, ಭಾರತದ ಜನರಿಗಾಗಿ: ರಾಹುಲ್ ಗಾಂಧಿ


    ರಾಹುಲ್ ಹೇಳಿಕೆಗೆ ಬಿಜೆಪಿ ಅಪಹಾಸ್ಯ


    ರಾಹುಲ್ ಗಾಂಧಿ ಹೇಳಿರುವ ಮಾತುಗಳು ಬಿಜೆಪಿ ಪಕ್ಷದ ಲೇವಡಿಗೆ ಕಾರಣವಾಗಿದ್ದು ಕೋಟಿಗಟ್ಟಲೆ ಆಸ್ತಿ ಹೊಂದಿದ್ದರೂ ತನಗೊಂದು ಮನೆ ಇಲ್ಲ ಎಂದು ಹೇಳಿರುವ ರಾಹುಲ್ ಹೇಳಿಕೆಗೆ ನಗಬೇಕೋ ಅಳಬೇಕೋ ಎಂದು ತಿಳಿಯುತ್ತಿಲ್ಲ ಎಂದು ವಯನಾಡ್ ಬಿಜೆಪಿ ಕಾರ್ಯಕರ್ತರು ಹೇಳಿದ್ದಾರೆ.


    2019 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಘೋಷಿಸಲಾದ ರಾಹುಲ್ ಗಾಂಧಿಯವರ 15 ಕೋಟಿ ರೂಪಾಯಿ ಮೌಲ್ಯದ ಸಂಪತ್ತಿನ ವಿವರಗಳನ್ನು ಬಿಜೆಪಿ ಪಕ್ಷದ ಸದಸ್ಯರು ಸಾಮಾಜಿಕ ಜಾಲ ತಾಣಗಳಲ್ಲಿ ಶೇರ್‌ ಮಾಡಿಕೊಂಡು ವ್ಯಂಗ್ಯವಾಡುತ್ತಿದ್ದು, ರಾಯ್‌ಪುರದಲ್ಲಿ ರಾಹುಲ್ ಗಾಂಧಿ ನೀಡಿರುವ ಹೇಳಿಕೆಯನ್ನು ಆಧಾರವಾಗಿರಿಸಿಕೊಂಡು ಪ್ರತಿಪಕ್ಷಗಳು ಅಪಹಾಸ್ಯ ಮಾಡುತ್ತಿವೆ.


    ಇದನ್ನೂ ಓದಿ: S Jaishankar: ಚೀನಾ ಗಡಿ ವಿಚಾರದಲ್ಲಿ ರಾಹುಲ್ ಗಾಂಧಿಗೆ ಹೆಚ್ಚಿನ ಜ್ಞಾನ ಇದ್ದರೆ ಕೇಳಲು ಸಿದ್ಧ: ಸಚಿವ ಜೈ ಶಂಕರ್


    2019 ರಲ್ಲಿ ರಾಹುಲ್ ಗಾಂಧಿ ಅವರು ಒದಗಿಸಿದ 15 ಕೋಟಿ ರೂಪಾಯಿಗೂ ಹೆಚ್ಚು ಸಂಪತ್ತಿನ ಬಗ್ಗೆ ಅಫಿಡವಿಟ್ ಅನ್ನು ಹಂಚಿಕೊಂಡಿರುಚ ಕಾಂಗ್ರೆಸ್‌ ವಿರುದ್ಧದ ಟ್ರೋಲ್‌ಪೇಜ್‌ಗಳು, ಕೇರಳದ ಸಿಪಿಎಂ ಸರ್ಕಾರವು ನಿರಾಶ್ರಿತರಿಗೆ ಮನೆಗಾಗಿ ಲೈಫ್ ಮಿಷನ್ ಯೋಜನೆಯಡಿ ಗಾಂಧಿಗೆ ಮನೆ ನೀಡಲು ಬಯಸಿದ್ದರೂ ಗಾಂಧಿಯವರ ಬಳಿ ಇರುವ ಅಪಾರ ಸಂಪತ್ತಿನಿಂದ ಈ ಸೌಲಭ್ಯಕ್ಕೆ ಅನರ್ಹರಾಗಿದ್ದಾರೆ ಎಂದು ಹಾಸ್ಯಮಾಡಿವೆ.


    ಜವಬ್ದಾರಿ ಅರಿತುಕೊಂಡಿರುವೆ- ರಾಹುಲ್


    ಭಾರತ್ ಜೋಡೋ ಯಾತ್ರೆಯ ಮೂಲಕ ತನ್ನ ಜವಾಬ್ದಾರಿಗಳೇನು ಎಂಬುದನ್ನು ಅರಿತುಕೊಂಡಿರುವೆ, ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜನರೆಲ್ಲರಿಗೂ ತಾನೇನು ಮಾಡಬಹುದು ಎಂಬುದನ್ನು ಆಲೋಚಿಸಿದೆ ಎಂದು ರಾಹುಲ್ ಗಾಂಧಿ ಹೇಳಿದ್ದರು. ಅಲ್ಲದೇ, ಹೀಗಾಗಿಯೇ ನನ್ನನ್ನು ಭೇಟಿ ಮಾಡಲು ಬರುವವರಿಗೆ ಮನೆಯಲ್ಲಿ ದೊರೆಯುವ ಪ್ರೀತಿ, ಆತಿಥ್ಯ, ಅಪ್ಯಾಯಮಾನತೆ ನನ್ನ ಯಾತ್ರೆಯಲ್ಲಿ ದೊರೆಯಬೇಕೆಂದು ಆಶಿಸಿದೆ. ಇದನ್ನು ಅಧಿಕಾರಿಗಳಿಗೂ ತಿಳಿಸಿದೆ. ನಮ್ಮ ಯಾತ್ರೆಯೇ ಮನೆಯಾಗಿದ್ದು, ಈ ಮನೆಯ ಬಾಗಿಲು ಬಡವ-ಶ್ರೀಮಂತ ಹೀಗೆ ಪ್ರತಿಯೊಬ್ಬರಿಗೂ ತೆರೆದಿದೆ ಎಂದು ತಿಳಿಸಿದ್ದರು.


    ಜವಬ್ದಾರಿ ಅರಿತುಕೊಳ್ಳಲು ತುಂಬಾ ಸಮಯ ಹಿಡಿಯಿತು


    ರಾಹುಲ್ ಗಾಂಧಿಯವರ ಭಾಷಣಕ್ಕೆ ಪ್ರತಿಕ್ರಿಯಿಸಿದ ಬಿಜೆಪಿಯ ಸಂಬಿತ್ ಪಾತ್ರ, ರಾಹುಲ್ ಗಾಂಧಿಯವರು ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಲು ಬಹಳ ಸಮಯ ತೆಗೆದುಕೊಂಡರು ಎಂದು ಅಪಹಾಸ್ಯಗೈದಿದ್ದಾರೆ. 52 ವರ್ಷಗಳ ನಂತರ, ರಾಹುಲ್ ಗಾಂಧಿ ಅವರು ಜವಾಬ್ದಾರಿಗಳ ಬಗ್ಗೆ ಯೋಚಿಸಲು ಪ್ರಾರಂಭಿಸಿದರು. ಅವರು ಪಕ್ಷದ ಅಧ್ಯಕ್ಷ ಸ್ಥಾನವನ್ನು ತ್ಯಜಿಸಿದರು ಮತ್ತು ನಂತರ ತಮ್ಮ ಜವಾಬ್ದಾರಿಗಳ ಬಗ್ಗೆ ಯೋಚಿಸಲು ಪ್ರಾರಂಭಿಸಿದರು. ಗಾಂಧಿ ಕುಟುಂಬದ ಇತರ ಸದಸ್ಯರಂತೆಯೇ ನಿಮ್ಮ ಅಧಿಕಾರ ಕೂಡ ಜವಬ್ದಾರಿಯಿಲ್ಲದ್ದು ಎಂದು ಸಂಬಿತ್ ಪಾತ್ರ ವ್ಯಂಗ್ಯ ಮಾಡಿದ್ದಾರೆ.

    Published by:Avinash K
    First published: