HOME » NEWS » National-international » WATER RELEASED INTO YAMUNA TO IMPROVE ITS ENVIRONMENTAL CONDITION AHEAD OF TRUMPS VISIT SNVS

ಟ್ರಂಪ್ ಭೇಟಿಗೆ ಮುನ್ನ ಯಮುನೆಯ ಕೊಳಕು ನೀಗಿಸಲು ಹೊಸ ನೀರು ಹರಿಸಿದ ಯೋಗಿ ಸರ್ಕಾರ

ತಾಜ್ ಮಹಲ್ ಯಮುನಾ ನದಿಯ ತಟದಲ್ಲೇ ಇದೆ. ತಾಜ್ ಮಹಲ್ ವೀಕ್ಷಣೆಗೆ ಟ್ರಂಪ್ ಬರುವುದು ಬಹುತೇಕ ಖಚಿತವಿದೆ. ತಾಜ್ ಮಹಲ್​ಗೆ ಬಂದವರಿಗೆ ಯಮುನಾ ನದಿಯ ದರ್ಶನ ಅನಿವಾರ್ಯ.

news18
Updated:February 22, 2020, 12:01 PM IST
ಟ್ರಂಪ್ ಭೇಟಿಗೆ ಮುನ್ನ ಯಮುನೆಯ ಕೊಳಕು ನೀಗಿಸಲು ಹೊಸ ನೀರು ಹರಿಸಿದ ಯೋಗಿ ಸರ್ಕಾರ
ತಾಜ್ ಮಹಲ್
  • News18
  • Last Updated: February 22, 2020, 12:01 PM IST
  • Share this:
ಮಥುರಾ(ಫೆ. 22): ಡೊನಾಲ್ಡ್ ಟ್ರಂಪ್ ಅವರು ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಎಲ್ಲಿಯೂ ಲೋಪಕ್ಕೆ ಎಡೆಯಾಗದ ರೀತಿಯಲ್ಲಿ ಬರಮಾಡಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅಮೆರಿಕ ಅಧ್ಯಕ್ಷರಿಗೆ ಭಾರತದ ಬಗ್ಗೆ, ಇಲ್ಲಿಯ ಸ್ಥಳಗಳ ಬಗ್ಗೆ ನಕಾರಾತ್ಮಕ ಭಾವನೆ ಮೂಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಅವರು ಭೇಟಿ ನೀಡುವ ಸ್ಥಳಗಳಲ್ಲಿ ಕೊಳಕನ್ನ ನೀಗಿಸಿ ಸ್ವಚ್ಛತೆ ಮತ್ತು ನೈರ್ಮಲ್ಯತೆಗೆ ವ್ಯವಸ್ಥೆ ಮಾಡಲಾಗಿದೆ. ಟ್ರಂಪ್ ಹಾಗೂ ಅಮೆರಿಕದ ನಿಯೋಗವು ತಾಜ್ ಮಹಲ್ ವೀಕ್ಷಣೆಗೆ ಆಗ್ರಾ ಪಟ್ಟಣಕ್ಕೆ ಬರುತ್ತಿರುವುದರಿಂದ ಉತ್ತರ ಪ್ರದೇಶ ಸರ್ಕಾರ ಇಲ್ಲಿಯ ಯಮುನಾ ನದಿಯನ್ನು ಶುದ್ಧಿಗೊಳಿಸಲು ಮುಂದಾಗಿದೆ.

ನದಿಯನ್ನು ಏಕಾಏಕಿ ಶುಚಿಗೊಳಿಸಲು ಸಾಧ್ಯವಾಗದು. ಅದು ವರ್ಷಗಟ್ಟಲೆ ವಿವಿಧ ಹಂತಗಳಲ್ಲಿ ತೆಗೆದುಕೊಳ್ಳಬೇಕಾದ ಬೃಹತ್ ಯೋಜನೆ. ಆದರೆ, ಸಂಪೂರ್ಣವಾಗಿ ಕಲುಷಿತಗೊಂಡಿರುವ ಯಮುನಾ ನದಿಯನ್ನು ಸದ್ಯಕ್ಕಂತೂ ಸ್ವಚ್ಛಗೊಳಿಸಲು ಸಾಧ್ಯವಿಲ್ಲ. ಆದರೆ, ಯಮುನೆಯಿಂದ ಹೊರಸೂಸುವ ದುರ್ಗಂಧವನ್ನು ದೂರಮಾಡಲು ಯೋಗಿ ಸರ್ಕಾರ 500 ಕುಸೆಕ್ಸ್ ಸ್ವಚ್ಛ ನೀರನ್ನು ಯಮುನಾ ನದಿಗೆ ಹರಿಸಿದೆ. ಟ್ರಂಪ್ ಅವರು ನಾಳೆ (ಫೆ. 23) ಭಾರತಕ್ಕೆ ಆಗಮಿಸಲಿದ್ದು ಫೆ. 26ರಂದು ವಾಪಸ್ ತೆರಳಲಿದ್ಧಾರೆ. ಅವರು ಹೋಗುವವರೆಗೂ ಯಮುನಾ ನದಿಯಲ್ಲಿ ತಕ್ಕ ಮಟ್ಟದಷ್ಟು ನೀರು ಇರುವಂತೆ ನೋಡಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ: ಟ್ರಂಪ್ ಭಾರತದ ಭೇಟಿ, ವ್ಯಾಪಾರ ವೃದ್ಧಿಗೆ ಮಾತುಕತೆ; ದೇಶದ ಡೈರಿ ಉತ್ಪನ್ನಗಳಿಗೆ ತೆರೆಯಲಿದೆಯೇ ಅಮೆರಿಕ ಬಾಗಿಲು?

ಯಮುನಾ ನದಿಗೆ 500 ಕ್ಯೂಸೆಕ್ಸ್ ನೀರು ಬಿಟ್ಟರೆ ಕಲುಷಿತ ಪ್ರಮಾಣವನ್ನು ಸಾಕಷ್ಟು ತಗ್ಗಿಸಬಹುದಾಗಿದೆ. ಕುಡಿಯಲು ಸಾಧ್ಯವಾಗದಾದರೂ ನೀರಿನಲ್ಲಿ ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸಬಹುದು. ನದಿ ನೀರಿನಿಂದ ಹೊರಹೊಮ್ಮುವ ದುರ್ಗಂಧವನ್ನು ಕಡಿಮೆ ಮಾಡಬಹುದು ಎಂಬುದು ಅಧಿಕಾರಿಗಳ ನಿರೀಕ್ಷೆ.

ತಾಜ್ ಮಹಲ್ ಯಮುನಾ ನದಿಯ ತಟದಲ್ಲೇ ಇದೆ. ತಾಜ್ ಮಹಲ್ ವೀಕ್ಷಣೆಗೆ ಟ್ರಂಪ್ ಬರುವುದು ಬಹುತೇಕ ಖಚಿತವಿದೆ. ತಾಜ್ ಮಹಲ್​ಗೆ ಬಂದವರಿಗೆ ಯಮುನಾ ನದಿಯ ದರ್ಶನ ಅನಿವಾರ್ಯ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

Youtube Video
First published: February 22, 2020, 12:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories