Mission Paani | ನೀರು ನನ್ನನ್ನ ಉಳಿಸಿದೆ – ಸ್ಲಿಪ್ ಡಿಸ್ಕ್ನಿಂದ ಚೇತರಿಸಿಕೊಂಡ ಬಗೆ ವಿವರಿಸಿದ ಅಕ್ಷಯ್ ಕುಮಾರ್
Mission Paani | ನೀರಿನ ಮಹತ್ವ ಹಾಗೂ ಅದರಿಂದ ಆಗುವ ವಿವಿಧ ಲಾಭಗಳ ಬಗ್ಗೆ ಅಕ್ಷಯ್ ಕುಮಾರ್ ತಮ್ಮ ಅನುಭವ ಸಮೇತ ವಿವರ ಹಂಚಿಕೊಂಡಿದ್ದಾರೆ. ಜಲಥೆರಪಿಯಿಂದ ತಮಗೆ ಆದ ಅನುಕೂಲವನ್ನು ಅವರು ತಿಳಿಸಿದ್ದಾರೆ.
ನ್ಯೂಸ್18 ಮತ್ತು ಹಾರ್ಪಿಕ್ ಇಂಡಿಯಾ ಸಂಸ್ಥೆಗಳು ನಡೆಸುತ್ತಿರುವ ಮಿಷನ್ ಪಾನಿ ವಾಟರ್ಥಾನ್ (Mission Paani Waterthon) ಅಭಿಯಾನಕ್ಕೆ ಹಲವು ದೊಡ್ಡ ಸೆಲಬ್ರಿಟಿಗಳು, ಸಾಧಕರು ಕೈಜೋಡಿಸಿ ನೀರಿನ ಮಹತ್ವ ಹಾಗೂ ಜಲ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಈ ಅಭಿಯಾನದಲ್ಲಿ “ಪಾನಿ ಕೀ ಕಹಾನಿ, ಭಾರತ್ ಕೀ ಜುಬಾನಿ” ಥೀಮ್ ಮೂಲಕ ಭಾರತದಲ್ಲಿ ಜಲ ಬಿಕ್ಕಟ್ಟಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅಭಿಯಾನದ ರಾಯಭಾರಿಯಾಗಿರುವ ನಟ ಅಕ್ಷಯ್ ಕುಮಾರ್ ತಮ್ಮ ಫಿಟ್ನೆಸ್ಗೆ ನೀರು ಹೇಗೆ ಪ್ರಮುಖ ಪಾತ್ರ ವಹಿಸಿದೆ ಎಂಬುದನ್ನು ಅನುಭವ ಸಮೇತ ಹಂಚಿಕೊಂಡಿದ್ದಾರೆ. ಹೈಡ್ರೋಥೆರಪಿ (ಜಲಚಿಕಿತ್ಸೆ) ಯಿಂದ ಆಗುವ ವಿವಿಧ ಅನುಕೂಲಗಳನ್ನ ಅವರು ತಿಳಿಸಿಕೊಟ್ಟಿದ್ದಾರೆ.
ಗಂಭೀರ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳಲು ಹಾಗೂ ಕಠಿಣ ತರಬೇತಿ ನಂತರ ಚೇತರಿಸಿಕೊಳ್ಳಲು ಹೈಡ್ರೋಥೆರಪಿ ಮಾಡಲಾಗುತ್ತದೆ. ಅಥ್ಲೀಟ್ಗಳಲ್ಲಿ ಇದು ಬಹಳ ಜನಪ್ರಿಯಾ ಚಿಕಿತ್ಸಾ ವಿಧಾನವಾಗಿದೆ. ಅಕ್ಷಯ್ ಕುಮಾರ್ ತೊಂಬತ್ತರ ದಶಕದಲ್ಲಿ ಸ್ಲಿಪ್ ಡಿಸ್ಕ್ಗೆ ಒಳಗಾಗಿದ್ದರು. ಆಗ ಅವರು ಚೇತರಿಸಿಕೊಳ್ಳಲು ಬಹಳ ಪ್ರಯತ್ನಪಟ್ಟರೂ ಸಾಧ್ಯವಾಗಿರಲಿಲ್ಲ. ಕೊನೆಗೆ ಸ್ಲಿಪ್ ಡಿಸ್ಕ್ ಸಮಸ್ಯೆಯಿಂದ ಹೊರಬರಲು ಜಲಚಿಕಿತ್ಸೆ ಕಾರಣವಾಯಿತಂತೆ.
ಸ್ಲಿಪ್ ಡಿಸ್ಕ್ ಸಮಸ್ಯೆಯಿಂದ ಹೊರಬರಲು ಜಲಥೆರಪಿ ಹೇಗೆ ಸಾಧ್ಯವಾಗಿಸಿತು ಎಂಬುದನ್ನು ಅಕ್ಷಯ್ ಕುಮಾರ್ ವಿವರ ನೀಡಿದ್ದಾರೆ. ವಾಕಿಂಗ್, ಜಾಗಿಂಗ್, ರನ್ನಿಂಗ್ ಇತ್ಯಾದಿ ದೈಹಿಕ ಕಸರತ್ತುಗಳನ್ನ ನೀರಿನೊಳಗೆ ಮಾಡುವುದೇ ಜಲಥೆರಪಿಯ ಪ್ರಮುಖ ಅಂಶ. ನೀರಿನ ಒಳಗೆ ದೇಹ ಹಗುರವಾಗಿರುತ್ತದೆ. ಹೀಗಾಗಿ ಹೆಚ್ಚು ಒತ್ತಡ ಇಲ್ಲದೆ ವ್ಯಾಯಾಮ ಮಾಡಬಹುದಾಗಿದೆ ಎಂದು ಅಕ್ಷಯ್ ಕುಮಾರ್ ಹೇಳುತ್ತಾರೆ. ಸ್ಮಿಮಿಂಗ್ ಪೂಲ್ನಲ್ಲಿ ಇಂಥ ವ್ಯಾಯಾಮ ಮಾಡಲು ಸಾಧ್ಯ ಎಂದು ಅವರು ಸಲಹೆ ನೀಡುತ್ತಾರೆ.
ಅಕ್ಷಯ್ ಕುಮಾರ್ ನಿತ್ಯವೂ ವಾಟರ್ ಟ್ರೆಡ್ಮಿಲ್ ಕೂಡ ಬಳಸುತ್ತಾರೆ. ಈ ಟ್ರೆಡ್ಮಿಲ್ಗೆ ಬಳಸುವ ನೀರನ್ನು ಮೂರ್ನಾಲ್ಕು ತಿಂಗಳವರೆಗೂ ಮರಬಳಕೆ ಮಾಡುತ್ತಾರೆ. ಕೆಲ ಗ್ರಾಮೀಣ ಭಾಗದಲ್ಲಿ ಮಹಿಳೆಯರು ನೀರು ತರಲು ಹತ್ತು ಕಿಮೀ ದೂರದವರೆಗೆ ನಡೆದುಹೋಗುತ್ತಾರೆ. ಈ ಹಿನ್ನೆಲೆಯಲ್ಲಿ ಮಹಿಳೆಯರ ಕಷ್ಟಕ್ಕೆ ಜೊತೆಯಾಗಿ ನಿಲ್ಲಲು ಸಾಂಕೇತಿಕವಾಗಿಯೂ ಅಕ್ಷಯ್ ಕುಮಾರ್ ಅವರು ವಾಟರ್ ಟ್ರೆಡ್ಮಿಲ್ ಉಪಯೋಗಿಸುತ್ತಿದ್ದಾರೆ.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ