7 ವರ್ಷದ ಬಾಲಕ Zomato ಡೆಲಿವರಿ ಬಾಯ್​, ವಿಡಿಯೋದಲ್ಲಿ ಬಯಲಾಯ್ತು ನೋವಿನ ಕತೆ!

ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಇದರಲ್ಲಿ ಹುಡುಗನೊಬ್ಬ ಝೊಮ್ಯಾಟೊ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ಇದುವರೆಗೆ 40,000ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.

7 ವರ್ಷದ ಬಾಲಕ Zomato ಡೆಲಿವರಿ ಬಾಯ್

7 ವರ್ಷದ ಬಾಲಕ Zomato ಡೆಲಿವರಿ ಬಾಯ್

 • Share this:
  ನವದೆಹಲಿ(ಆ.05): ಸೋಶಿಯಲ್ ಮೀಡಿಯಾದಲ್ಲಿ (Social Media) ಟ್ರೆಂಡಿಂಗ್ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಇದರಲ್ಲಿ ಹುಡುಗನೊಬ್ಬ ಝೊಮಾಟೊ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರುವುದನ್ನು ಕಾಣಬಹುದು. ಆ ಬಾಲಕನ ಶ್ರಮ ಪ್ರೋತ್ಸಾಹದಾಯಕ ಮತ್ತು ಸ್ಪೂರ್ತಿದಾಯಕವಾಗಿದೆ. ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ (Twitter) ಹಂಚಿಕೊಂಡ ರಾಹುಲ್ ಮಿತ್ತಲ್ ಪ್ರಕಾರ, ಈ ಬಾಲಕ ಏಳು ವರ್ಷ ವಯಸ್ಸಿನವನಾಗಿದ್ದಾನೆ. ತನ್ನ ತಂದೆಯ ಅಪಘಾತವಾದ ನಂತರ ಬಾಲಕ ಆಹಾರ ವಿತರಣೆ ಕೆಲಸ ಮಾಡುವತ್ತ ಮುಖ ಮಾಡಿದ್ದಾನೆ. ತನ್ನ ಕುಟುಂಬವನ್ನು ಬೆಂಬಲಿಸಲು ಈ ಬಾಲಕ ಝೊಮ್ಯಾಟೊಗೆ ಡೆಲಿವರಿ ಏಜೆಂಟ್ (Zomato Delivery Agent) ಆಗಿ ಕೆಲಸ ಮಾಡುತ್ತಿದ್ದಾನೆ.

  ಟ್ರೆಂಡಿಂಗ್ ವೀಡಿಯೊ ಇದುವರೆಗೆ 40,000 ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅಂತಹ ಚಿಕ್ಕ ವಯಸ್ಸಿನಲ್ಲಿ ಹುಡುಗನ ಸಂಕಲ್ಪವು ಟ್ವಿಟರ್ ಬಳಕೆದಾರರ ಮನ ಮುಟ್ಟಿದೆ, ಈ ಬಾಲಕ ತನ್ನ ಕುಟುಂಬ ಸಂಕಷ್ಟದ ಪರಿಸ್ಥಿತಿಯಲ್ಲಿರುವಾಗ ತನ್ನ ಕುಟುಂಬವನ್ನು ನೋಡಿಕೊಳ್ಳಲು ಮುಂದಾಗಿದ್ದಕ್ಕಾಗಿ ಶ್ಲಾಘಿಸಿದ್ದಾರೆ. ಸುಮಾರು 30 ಸೆಕೆಂಡ್‌ಗಳ ವೀಡಿಯೊದಲ್ಲಿ ಶ್ರೀ ಮಿತ್ತಲ್ ಅವರು ಬಾಲಕನ ಕ್ರಿಯೆಗಳ ತಾರ್ಕಿಕತೆಯನ್ನು ವಿವರಿಸಿದ್ದಾರೆ.

  ಇದನ್ನೂ ಓದಿ:  Zomato Swiggy Offers: ಜೋಮಾಟೊ ಸ್ವಿಗ್ಗಿಯಿಂದ ಗ್ರಾಹಕರಿಗೆ ಭರ್ಜರಿ ಆಫರ್!

  ವಿಡಿಯೋದಲ್ಲಿ ಈ ಬಾಲಕ ಒಂದು ಕೈಯಲ್ಲಿ ಚಾಕೊಲೇಟ್‌ಗಳ ಪೆಟ್ಟಿಗೆಯನ್ನು ಹಿಡಿದುಕೊಂಡು ಸೈಕಲ್‌ನಲ್ಲಿ ಮನೆ ಮನೆಗೆ ಊಟವನ್ನು ಹೇಗೆ ತಲುಪಿಸುತ್ತಾನೆ ಎಂಬುವ ಬಗ್ಗೆ ಮತ್ತು ಟ್ವಿಟರ್ ಬಳಕೆದಾರರಿಗೆ ವಿವರಿಸಿದ್ದಾನೆ. ಈ 7 ವರ್ಷದ ಬಾಲಕ ತನ್ನ ತಂದೆ ಅಪಘಾತದಲ್ಲಿ ಗಾಯಗೊಂಡಿದ್ದರಿಂದ ಶಾಲೆಯಿಂದ ಮರಳಿದ ಬಳಿಕ Zomato ಗೆ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರುವುದಾಗಿಯೂ ತಿಳಿಸಿದ್ದಾನೆ.


  ಹೀಗಿರುವಾಗ ಈ ಬಾಲಕನ ಶ್ರಮವನ್ನು ಮೆಚ್ಚಿ ಆತನಿಗೆ ಸಹಾಯ ಮಾಡಬೇಕು, ಹಾಗೂ ಆತನ ತಂದೆ ಮತ್ತೆ ನಡೆದಾಡುವಂತೆ ಸಹಾಯ ಮಾಡಬೇಕು ಎಂದು ಟ್ವಿಟರ್​ನಲ್ಲಿ ಬಳಕೆದಾರರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಬೆಳಿಗ್ಗೆ ಶಾಲೆ ಮುಗಿಸಿದ ನಂತರ, ಬಾಲಕ ಟ್ವಿಟರ್ ಬಳಕೆದಾರರಿಗೆ ಆಹಾರವನ್ನು ತಲುಪಿಸಲು ಸಂಜೆ 6 ರಿಂದ ರಾತ್ರಿ 11 ರವರೆಗೆ ಮನೆ ಮನೆಗೆ ಸೈಕಲ್‌ನಲ್ಲಿ ಹೋಗುತ್ತೇನೆ ಎಂದು ಹೇಳಿದ್ದಾನೆ. ಹೀಗಿರುವಾಗ ಅನೇಕ ಬಳಕೆದಾರರು ಭಾವುಕರಾಗಿದ್ದಾರೆ ಹಾಘೂ ಸ್ವಯಂಪ್ರೇರಿತರಾಗಿ ಬಾಲಕನಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.

  ಇದನ್ನೂ ಓದಿ:  Zomato: ಜೋಮ್ಯಾಟೋ ನೋಡಿ ತಲೆ ಚಚ್ಚಿಕೊಂಡ ಜನರು! ಮೊನ್ನೆ, ನಿನ್ನೆ ಒಂದು ಲಕ್ಷ ಕೋಟಿ ಲಾಸ್​?

  ಹೀಗಿರುವಾಗಲೇ ಇದು ಕಾನೂನಿಗೆ ವಿರುದ್ಧವಾಗಿದೆ ಎಂದು ಕೆಲವು ಬಳಕೆದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕುಟುಂಬವನ್ನು ಬೆಂಬಲಿಸಲು ಜೊಮಾಟೊ ಮುಂದಾಗಿದೆ ಎಂದು ಮಿತ್ತಲ್ ಪ್ರತಿಕ್ರಿಯಿಸಿದ್ದಾರೆ. ಹುಡುಗನ ತಂದೆ ಕೆಲಸವನ್ನು ಪುನರಾರಂಭಿಸಲು ಸಿದ್ಧರಾದಾಗ, ಆಹಾರ ವಿತರಣಾ ಸೇವೆಯು ಅವನ ಖಾತೆಯನ್ನು ರದ್ದುಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ.
  Published by:Precilla Olivia Dias
  First published: