• Home
  • »
  • News
  • »
  • national-international
  • »
  • Kargil: ಕಾರ್ಗಿಲ್‌ನಲ್ಲಿ ಯೋಧರೊಂದಿಗೆ 'ವಂದೇ ಮಾತರಂ' ಹಾಡಿದ ಪ್ರಧಾನಿ ನರೇಂದ್ರ ಮೋದಿ

Kargil: ಕಾರ್ಗಿಲ್‌ನಲ್ಲಿ ಯೋಧರೊಂದಿಗೆ 'ವಂದೇ ಮಾತರಂ' ಹಾಡಿದ ಪ್ರಧಾನಿ ನರೇಂದ್ರ ಮೋದಿ

ಸೈನಿಕರೊಂದಿಗೆ ಮೋದಿ

ಸೈನಿಕರೊಂದಿಗೆ ಮೋದಿ

Modi In Kargil: ದೀಪಾವಳಿ ಹಬ್ಬ ಸೈನಿಕರ ಜೊತೆ ಆಚರಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಕಾರ್ಗಿಲ್ ತಲುಪಿದ್ದಾರೆ. ಪ್ರಧಾನಿ ಮೋದಿ ಅವರು ಕಾರ್ಗಿಲ್‌ನಲ್ಲಿ ಸಶಸ್ತ್ರ ಪಡೆಗಳ ಸದಸ್ಯರೊಂದಿಗೆ 'ವಂದೇ ಮಾತರಂ' ಹಾಡಿದರು. ಪ್ರಧಾನಿ ಮೋದಿ ಸೈನಿಕರ ನಡುವೆ ಚಪ್ಪಾಳೆ ತಟ್ಟುತ್ತಿರುವುದನ್ನು ಕಾಣಬಹುದು

ಮುಂದೆ ಓದಿ ...
  • Share this:

ಲಡಾಖ್(ಅ.24): ಪ್ರಧಾನಮಂತ್ರಿ ನರೇಂದ್ರ ಮೋದಿಯವರು (Prime Minister Narendra Modi) ಕಾರ್ಗಿಲ್ (Kargil) ದೀಪಾವಳಿ ಆಚರಣೆಯಲ್ಲಿ ಭಾಗವಹಿಸುತ್ತಿದ್ದಂತೆ ಸಶಸ್ತ್ರ ಪಡೆಗಳ ಸದಸ್ಯರು 'ವಂದೇ ಮಾತರಂ' (Vande Mataram) ಹಾಡುವುದರೊಂದಿಗೆ 'ಭಾರತ್ ಮಾತಾ ಕಿ ಜೈ' ಘೋಷಣೆಗಳನ್ನು ಕೂಗಿದರು. ಸಶಸ್ತ್ರ ಪಡೆಗಳ ಸದಸ್ಯರೊಂದಿಗೆ ಮೋದಿ ಕೂಡಾ ‘ವಂದೇ ಮಾತರಂ’ ಹಾಡಿದರು. ಪ್ರಧಾನಿ ಮೋದಿ ಅವರು ಸೈನಿಕರ ನಡುವೆ ಚಪ್ಪಾಳೆ ತಟ್ಟುತ್ತಿರುವುದು ಕಂಡುಬಂದರೆ, ದೇಶದ ಸೈನಿಕರು ಸಂಗೀತ ವಾದ್ಯಗಳೊಂದಿಗೆ ವಂದೇ ಮಾತರಂ ಹಾಡಿದ್ದಾರೆ.


ಇದನ್ನೂ ಓದಿ: President: ನನ್ನನ್ನೂ ಭಾರತದ ರಾಷ್ಟ್ರಪತಿ ಮಾಡಿ! ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ವ್ಯಕ್ತಿ



ಯೋಧರಿಗೆ ಮೋದಿ ಸಂದೇಶ


ಸೇನೆಯನ್ನು ಉದ್ದೇಶಿಸಿ ಮಾತನಾಡಿದ ಪಿಎಂ ಮೋದಿ, "ಯುದ್ಧ ಯಾವತ್ತೂ ನಮ್ಮ ಮೊದಲ ಆಯ್ಕೆ ಆಗಿರಲಿಲ್ಲ. ಅದು ಲಂಕೆ ಆಗಿರಲಿ ಅಥವಾ ಕುರುಕ್ಷೇತ್ರದ ಯುದ್ಧವಾಗಿರಲಿ, ಅದನ್ನು ಮುಂದೂಡಲು ನಾವು ಅಂತಿಮ ಕ್ಷಣದವರೆಗೂ ಯತ್ನಿಸಿದ್ದೇವೆ. ನಾವು ಯುದ್ಧಕ್ಕೆ ವಿರುದ್ಧವಾಗಿದ್ದೇವೆ ಆದರೆ ಶಕ್ತಿಯಿಲ್ಲದೆ ಶಾಂತಿ ಸಾಧ್ಯವಿಲ್ಲ. ಯಾರಾದರೂ ನಮ್ಮನ್ನು ಕೆಟ್ಟ ದೃಷ್ಟಿಯಿಂದ ನೋಡುವ ಧೈರ್ಯ ಮಾಡಿದರೆ, ನಮ್ಮ ಸಶಸ್ತ್ರ ಪಡೆಗಳು ತಕ್ಕ ಉತ್ತರವನ್ನು ನೀಡುತ್ತವೆ ಎಂದಿದ್ದಾರೆ.


ಪ್ರಧಾನಿ ನರೇಂದ್ರ ಮೋದಿ ಅವರು ದೀಪಾವಳಿ ಸಂದರ್ಭದಲ್ಲಿ ಸೇನಾ ಸಿಬ್ಬಂದಿಯನ್ನುದ್ದೇಶಿಸಿ ಮಾತನಾಡುತ್ತಾ, ಕಾರ್ಗಿಲ್‌ನಲ್ಲಿ ನಮ್ಮ ಸೇನೆಯು ಭಯೋತ್ಪಾದನೆಯ ಹುನ್ನಾರವನ್ನು ಹತ್ತಿಕ್ಕಿತು ಮತ್ತು ದೇಶದಲ್ಲಿ ಅಂತಹ ವಿಜಯದ ದೀಪಾವಳಿ ಆಚರಣೆ ಜನರು ಇನ್ನೂ ನೆನಪಿಸಿಕೊಳ್ಳುತ್ತಾರೆ ಎಂದು ಹೇಳಿದರು. ಕಾರ್ಗಿಲ್‌ನಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಕ್ಕಳು, ವೀರ ಪುತ್ರರು ಮತ್ತು ಪುತ್ರಿಯರು ತಮ್ಮ ಸ್ವಂತ ಶಕ್ತಿಯಲ್ಲಿ ಸಂಪೂರ್ಣ ನಂಬಿಕೆ ಇದ್ದಾಗ ರಾಷ್ಟ್ರವೊಂದು ಅಮರವಾಗಿರುತ್ತದೆ ಎಂದು ಹೇಳಿದರು.


ಸೈನಿಕರೊಂದಿಗೆ ನಿರಂತರ ದೀಪಾವಳಿ ಆಚರಿಸುತ್ತಿರುವ ಪ್ರಧಾನಿ


2015 ರಲ್ಲಿ, ತಮ್ಮ ಎರಡನೇ ದೀಪಾವಳಿಯಂದು, ಪ್ರಧಾನಿ ಮೋದಿ ಪಂಜಾಬ್‌ನಲ್ಲಿ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿದ್ದರು. ಇಲ್ಲಿ ಅವರು 1965 ರ ಯುದ್ಧದ ಯುದ್ಧ ಸ್ಮಾರಕವಕ್ಕೆ ಭೇಟಿ ನೀಡಿದ್ದರು. 2016ರಲ್ಲಿ ದೀಪಾವಳಿ ಆಚರಿಸಲು ಮೋದಿ ಹಿಮಾಚಲದ ಕಿನ್ನೌರ್‌ಗೆ ತೆರಳಿದ್ದರು. ಇಲ್ಲಿ ಅವರು ಭಾರತ-ಚೀನಾ ಗಡಿಯ ಬಳಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ್ದರು. 2017ರಲ್ಲಿಯೂ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ್ದ ಮೋದಿ, ಈ ವೇಳೆ ಅವರು ಜಮ್ಮು ಮತ್ತು ಕಾಶ್ಮೀರದ ಗುರೇಜ್ ತಲುಪಿದ್ದರು.


ಇದನ್ನೂ ಓದಿ: Solar Eclipse 2022: 27 ವರ್ಷದ ಬಳಿಕ ಮುರಿಯಲಿದೆ ಕಾಶಿ ವಿಶ್ವನಾಥ ಧಾಮದ ಈ ಪ್ರಮುಖ ಪರಂಪರೆ!


2018 ರಲ್ಲಿ, ಉತ್ತರಾಖಂಡದ ಹರ್ಷಿಲ್‌ನಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸರೊಂದಿಗೆ ಪ್ರಧಾನ ಮಂತ್ರಿ ದೀಪಾವಳಿಯನ್ನು ಆಚರಿಸಿದ್ದರು. ಇನ್ನು, 2019 ರಲ್ಲಿ, ಅವರು ಎಲ್ಒಸಿಯಲ್ಲಿ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿದ್ದರು. ಈ ವೇಳೆ, ನಿಯಂತ್ರಣ ರೇಖೆಯಲ್ಲಿ ನಿಯೋಜಿಸಲಾದ ಸೈನಿಕರನ್ನು ಭೇಟಿ ಮಾಡಲು ಮೋದಿ ರಜೌರಿಗೆ ತೆರಳಿದ್ದರು. ಕೋವಿಡ್ ಸಾಂಕ್ರಾಮಿಕದ ಮಧ್ಯೆಯೂ, 2020 ರಲ್ಲಿ, ಪ್ರಧಾನಿಯವರು ಜೈಸಲ್ಮೇರ್‌ನ ಲೋಂಗೆವಾಲಾ ಪೋಸ್ಟ್‌ನಲ್ಲಿ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿದ್ದರು.

Published by:Precilla Olivia Dias
First published: