HOME » NEWS » National-international » WATCH OTTAWA NURSE SINGS TO ICU PATIENTS IN VIRAL VIDEO NETIZENS PRAISE HEARTWARMING GESTURE STG LG

ಐಸಿಯು ರೋಗಿಗಳಿಗೆ ಹಾಡು ಹಾಡಿದ ಕೆನಡಾದ ನರ್ಸ್‌: ವಿಡಿಯೋ ವೈರಲ್‌; ನರ್ಸ್‌ಗೆ ನೆಟ್ಟಿಗರ ಶ್ಲಾಘನೆ

ಸೋಷಿಯಲ್ ಮೀಡಿಯಾ ಬಳಕೆದಾರರ ಟ್ವೀಟ್‌ಗಳಿಗೆ ಪ್ರತಿಕ್ರಿಯಿಸಿದ ಹೌಸನ್, ತನ್ನ ಸಹೋದ್ಯೋಗಿಗಳು ಮತ್ತು ಸಹ ದಾದಿಯರನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದೆ ಎಂದು ವಿನಮ್ರವಾಗಿ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಜನರು ನೀಡಿದ ಬೆಂಬಲಕ್ಕೆ ಅವರು ಧನ್ಯವಾದಗಳನ್ನು ಅರ್ಪಿಸಿದರು. ಆರೋಗ್ಯ ಕಾರ್ಯಕರ್ತರು ಪ್ರೋತ್ಸಾಹ ಪಡೆಯುವುದನ್ನು ನೋಡಲು ತನಗೆ ತೀವ್ರ ಖುಷಿಯಾಗಿದೆ ಎಂದು ಅವರು ಬರೆದಿದ್ದಾರೆ.

news18-kannada
Updated:May 4, 2021, 3:45 PM IST
ಐಸಿಯು ರೋಗಿಗಳಿಗೆ ಹಾಡು ಹಾಡಿದ ಕೆನಡಾದ ನರ್ಸ್‌: ವಿಡಿಯೋ ವೈರಲ್‌; ನರ್ಸ್‌ಗೆ ನೆಟ್ಟಿಗರ ಶ್ಲಾಘನೆ
ಹಾಡು ಹಾಡಿದ ನರ್ಸ್
  • Share this:
ಕೊರೋನಾ ವೈರಸ್‌ ಸಾಂಕ್ರಾಮಿಕವು ಇಡೀ ಜಗತ್ತನ್ನು ಶೋಚನೀಯ ಸ್ಥಿತಿಗೆ ತಂದಿದ್ದು, ಮುಂಚೂಣಿಯಲ್ಲಿರುವ ಕಾರ್ಮಿಕರ ಕಥೆಗಳು ಬಳಲುತ್ತಿರುವ ಜನರಿಗೆ ಸಹಾಯ ಮಾಡಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ. ಇದೇ ರೀತಿ ನರ್ಸ್‌ ಒಬ್ಬರು ಐಸಿಯು ರೋಗಿಗಳಿಗೆ ಧೈರ್ಯ ಹೇಳಲು ಯು ಆರ್‌ ನಾಟ್‌ ಅಲೋನ್‌ ಎಂಬ ಹಾಡನ್ನು ಹಾಡುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಈ ವೈರಲ್ ವಿಡಿಯೋದಲ್ಲಿ ಆ್ಯಮಿ-ಲಿನ್ ಹೌವ್ಸನ್ ಎಂಬ ನರ್ಸ್, ಸ್ಕ್ರಬ್‌ಗಳು ಮತ್ತು ಫೇಸ್‌ಮಾಸ್ಕ್ ಧರಿಸಿ, ''ನಾನು ಉತ್ತರಗಳನ್ನು ಹೊಂದಿಲ್ಲವಾದರೂ ಯು ಆರ್‌ ನಾಟ್‌ ಅಲೋನ್‌ ಎಂದು ಐಸಿಯು ರೋಗಿಗಳಿಗೆ ಹಾಡಿದ್ದಾರೆ. ಈ ವಿಡಿಯೋವನ್ನು ಕೆನಡಾ ರಾಜಧಾನಿ ಒಟ್ಟಾವಾದಲ್ಲಿನ ಆಸ್ಪತ್ರೆಯ ಅಧಿಕೃತ ಟ್ವಿಟ್ಟರ್‌ ಖಾತೆಯಿಂದ ಹಂಚಿಕೊಳ್ಳಲಾಗಿದೆ. ತನ್ನ ಹಾಡಿನ ಮೂಲಕ ಜನರ ಉತ್ಸಾಹವನ್ನು ಹೆಚ್ಚು ಮಾಡಿದ್ದಕ್ಕಾಗಿ ಆಸ್ಪತ್ರೆ ಹೌಸನ್‌ಗೆ ಧನ್ಯವಾದ ಅರ್ಪಿಸಿದೆ.

ಟ್ವಿಟ್ಟರ್ ಬಳಕೆದಾರರು ಹೌವ್ಸನ್ ಅವರ ಸಹಾನುಭೂತಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಹೃತ್ಪೂರ್ವಕವಾಗಿ ಪ್ರತಿಕ್ರಿಯಿಸಿದರು. ಈ ವಿಡಿಯೋ ಅವರ ಕಣ್ಣಲ್ಲಿ ನೀರು ತರಿಸಿದೆ ಎಂದು ಬಳಕೆದಾರರು ಬರೆದಿದ್ದಾರೆ. ಹೌಸನ್ ಅವರ ಚಿಕಿತ್ಸಕ ಗಾಯನಕ್ಕೆ ಟ್ವಿಟ್ಟರ್ ಬಳಕೆದಾರರು ಹೇಗೆ ಪ್ರತಿಕ್ರಿಯಿಸಿದ್ದಾರೆ ಇಲ್ಲಿ ನೋಡಿ..

ಹೌವ್ಸನ್ ಅವರ ಒಟ್ಟಾವಾ ನಗರದ ಆಸ್ಪತ್ರೆಯ ಸಹೋದ್ಯೋಗಿ ನಟಾಲಿಯಾ ಕ್ಯಾಲೊ ಅವರು ಹೌವ್ಸನ್‌ ಅನ್ನು ಹೊಗಳಿದ್ದು, ಅವರು ಉತ್ತಮವಾಗಿ ಕೆಲಸ ಮಾಡುತ್ತಾರೆ. ಇದರ ಹೊರತಾಗಿ ಅವರು ಪ್ರತಿಭಾವಂತ ಸಂಗೀತಗಾರರು ಎಂದು ಟ್ವೀಟ್ ಮಾಡಿದ್ದಾರೆ.

IPL 2021: ಕೊರೋನಾ ಭೀತಿಯಿಂದ ಐಪಿಎಲ್​ ಪಂದ್ಯಾವಳಿ ಮುಂದೂಡಿದ ಬಿಸಿಸಿಐ

ಸೋಷಿಯಲ್ ಮೀಡಿಯಾ ಬಳಕೆದಾರರ ಟ್ವೀಟ್‌ಗಳಿಗೆ ಪ್ರತಿಕ್ರಿಯಿಸಿದ ಹೌಸನ್, ತನ್ನ ಸಹೋದ್ಯೋಗಿಗಳು ಮತ್ತು ಸಹ ದಾದಿಯರನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದೆ ಎಂದು ವಿನಮ್ರವಾಗಿ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಜನರು ನೀಡಿದ ಬೆಂಬಲಕ್ಕೆ ಅವರು ಧನ್ಯವಾದಗಳನ್ನು ಅರ್ಪಿಸಿದರು. ಆರೋಗ್ಯ ಕಾರ್ಯಕರ್ತರು ಪ್ರೋತ್ಸಾಹ ಪಡೆಯುವುದನ್ನು ನೋಡಲು ತನಗೆ ತೀವ್ರ ಖುಷಿಯಾಗಿದೆ ಎಂದು ಅವರು ಬರೆದಿದ್ದಾರೆ.

ಕೆಲವು ಸೋಷಿಯಲ್‌ ಮೀಡಿಯಾ ಬಳಕೆದಾರರು ಮುಂಬರುವ ನರ್ಸಸ್ ವೀಕ್ 2021 ಹಿನ್ನೆಲೆ ಆಕೆಗೆ ಶುಭಾಶಯಗಳನ್ನು ಅರ್ಪಿಸಿದರು, ಇದನ್ನು ಮೇ 6 ರಿಂದ ಮೇ 12, 2021 ರವರೆಗೆ ಆಚರಿಸಲಾಗುವುದು.

ಇತ್ತೀಚೆಗೆ ಐಸಿಯುಗೆ ನಿಯೋಜಿಸಲ್ಪಟ್ಟಿದ್ದ ಹೌಸನ್ ಕೆನಡಾದ ಒಟ್ಟಾವಾ ಆಸ್ಪತ್ರೆಯಲ್ಲಿ ಎಂಡೋಸ್ಕೋಪಿ ದಾದಿಯಾಗಿ ಕೆಲಸ ಮಾಡುತ್ತಿದ್ದಾರೆ. ಕೆನಡಾದಲ್ಲಿ 1.2 ಮಿಲಿಯನ್ ಕೋವಿಡ್ ಪ್ರಕರಣಗಳು ಮೀರಿದ್ದು, ಈ ಪೈಕಿ 24,000 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಇನ್ನು, ಭಾರತದಲ್ಲಿ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ, ಇಲ್ಲಿ ಪ್ರಕರಣಗಳು 19 ಮಿಲಿಯನ್ ದಾಟುತ್ತಿದ್ದು ಮತ್ತು ಪ್ರತಿದಿನ 3,000 ಕ್ಕೂ ಹೆಚ್ಚು ಜನರು ಸಾಯುತ್ತಿದ್ದಾರೆ. ದೇಶವು ತನ್ನ ಆರೋಗ್ಯ ವ್ಯವಸ್ಥೆಯ ಎಲ್ಲಾ ರಂಗಗಳಲ್ಲಿ ತೀವ್ರ ಕೊರತೆಯನ್ನು ಎದುರಿಸುತ್ತಿದೆ. ಈ ಪೈಕಿ ಆಮ್ಲಜನಕ, ಔಷಧಿಗಳು ಮತ್ತು ಲಸಿಕೆಗಳು ಅಥವಾ ಆಸ್ಪತ್ರೆಯಲ್ಲಿ ಬೆಡ್‌ಗಳು, ದಾದಿಯರು ಮತ್ತು ವೈದ್ಯರಂತಹ ನಿರ್ಣಾಯಕ ಸೌಲಭ್ಯಗಳೂ ಇಲ್ಲ ಎನ್ನುವುದು ತೀವ್ರ ಆತಂಕಕಾರಿಯಾಗಿದೆ.
Published by: Latha CG
First published: May 4, 2021, 3:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories