ಮುಂಬೈ ಪೊಲೀಸ್ ಸೋಶಿಯಲ್ ಮೀಡಿಯಾ ತಮ್ಮ ಹಾಸ್ಯಪ್ರಜ್ಞೆಗೆ ಸಖತ್ ಫೇಮಸ್. ತಮ್ಮ ಪ್ರತಿ ಪೋಸ್ಟ್ಗಳ ಮೂಲಕವೂ ಇಂಟರ್ನೆಟ್ನಲ್ಲಿ ಜನರ ಮನಸ್ಸನ್ನು ಗೆಲ್ಲುತ್ತಿರುತ್ತಾರೆ. ಮುಂಬೈ ಪೊಲೀಸ್ ಸೋಶಿಯಲ್ ಮೀಡಿಯಾ ಪೇಜ್ ಫಾಲೋ ಮಾಡುವ ಪ್ರತಿಯೊಬ್ಬರಿಗೂ ಅದರ ಪಾಪ್ ಕಲ್ಚರ್, ಮೆಮೆ ಮತ್ತು ಟ್ರೆಂಡಿಂಗ್ ವಿಷಯಗಳ ಮೂಲಕ ಜನರಿಗೆ ಜಾಗೃತಿ ಮೂಡಿಸುವ ವಿಧಾನ ಹಾಸ್ಯದ ಕಡಲಲ್ಲಿ ತೇಲಿಸುತ್ತದೆ. ತಮ್ಮ ಇತ್ತೀಚಿನ ಪೋಸ್ಟ್ನಲ್ಲಿ ಮುಂಬೈ ಪೊಲೀಸರು ಹ್ಯಾಕರ್‌ಗಳನ್ನು ಟ್ರೋಲ್ ಮಾಡಲು ಪ್ರಸಿದ್ಧ ಟರ್ಕಿಯ ಐಸ್‌ಕ್ರೀಂ ಮಾರಾಟಗಾರನ ವೀಡಿಯೊವೊಂದನ್ನು ವೈರಲ್ ಮಾಡಿದ್ದಾರೆ.
ಟರ್ಕಿಯ ಐಸ್‌ಕ್ರೀಂ ಮಾರಾಟಗಾರ ಡೊಂಡುರ್ಮಾ ಎಂಬ ಐಸ್‌ಕ್ರೀಮ್ ಮಾರಾಟ ಮಾಡುವ ಒಂದು ಚಿಕ್ಕ ವಿಡಿಯೋ ತುಣುಕಿದೆ. ಅದರಲ್ಲಿ ವಿಶೇಷವಾದ ಐಸ್‌ಕ್ರೀಮ್ ಇದ್ದು, ಈ ಐಸ್‌ಕ್ರೀಮ್ ಕರಗುವುದಿಲ್ಲ ಅಥವಾ ಕರಗುತ್ತಾ ಹನಿ ಸೋರುವುದಿಲ್ಲ. ಈ ಐಸ್‌ಕ್ರೀಂ ಗ್ರಾಹಕನ ಕೈ ತಲುಪುವುದೇ ಬಹಳ ವಿಶೇಷತೆಯಿಂದ ಕೂಡಿದೆ. ಮಾರಾಟಗಾರ ಗ್ರಾಹಕನ ಕೈಗೆ ಐಸ್‌ಕ್ರೀಂ ಕೊಡುವಾಗ ಹಲವಾರು ಟ್ರಿಕ್ಸ್ ಬಳಸುತ್ತಾನೆ. ಕೆಲವು ಗ್ರಾಹಕರು ಈ ಟ್ರಿಕ್ಸ್ ಎಂಜಾಯ್ ಮಾಡಿದರೆ, ಇನ್ನು ಕೆಲವರು ಸಾಕಷ್ಟು ಕಿರಿಕಿರಿಯನ್ನು ಅನುಭವಿಸುತ್ತಾರೆ. ಸಾಕಷ್ಟು ಕಾಡಿಸಿದ ನಂತರ ಐಸ್ ಕ್ರೀಂ ಅನ್ನು ಗ್ರಾಹಕರಿಗೆ ನೀಡುವ ವಿಡಿಯೋ ಇಂಟರ್ನೆಟ್ನಲ್ಲಿ ಬಹಳ ಫೇಮಸ್.
ಈ ಪೇಜ್ ಏಪ್ರಿಲ್ 2 ರಂದು ವಿಡಿಯೋವೊಂದನ್ನು ಶೇರ್ ಮಾಡಿದ್ದು, ಇದರಲ್ಲಿ ಐಸ್‌ಕ್ರೀಂ ಮಾರಾಟಗಾರ ಐಸ್‌ಕ್ರೀಂ ಕೊಡುವುದಕ್ಕೆ ಸಾಕಷ್ಟು ಕಾಡಿಸುತ್ತಿದ್ದಾನೆ. ಇದರಿಂದ ಗ್ರಾಹಕ ಸಾಕಷ್ಟು ಕಿರಿಕಿರಿಗೆ ಒಳಗಾಗಿದ್ದಾನೆ. ಗ್ರಾಹಕ ಕಿರಿಕಿರಿ ಮಾಡಿಕೊಂಡಿರುವ ಮುಖಭಾವ ಒಂದು ಕಡೆಯಾದರೆ, ಆ ವಿಡಿಯೋಗೆ ನೀಡಿರುವ ಕ್ಯಾಪ್ಷನ್ ಮಾತ್ರ ನೆಟ್ಟಿಗರನ್ನು ನೆಗೆಗಡಲಲ್ಲಿ ತೇಲಿಸಿದೆ. 'ಬಲವಾದ ಪಾಸ್ವರ್ಡ್ಗಳ ಮೂಲಕ ಹ್ಯಾಕರ್ಸ್ಗಳು ಖಾತೆಯನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ' ಎನ್ನುವ ಶೀರ್ಷಿಕೆ ಹ್ಯಾಕರ್ಸ್ಗೆ ಬಿಸಿ ಮುಟ್ಟಿಸಿದೆ.
View this post on Instagram
ಸಾರ್ವಕಾಲೀಕವಾಗಿ ಇದು ಅತ್ಯುತ್ತಮ ಮೆಮೆ ಪೇಜ್ ಆಗಿದೆ ಎಂದು ಬಳಕೆದಾರರೊಬ್ಬರು ಈ ಇನ್ಸ್ಟಾಗ್ರಾಂ ಪೇಜನ್ನು ಹೊಗಳಿದ್ದಾರೆ. ಇನ್ನು ಕೆಲವರು ಈ ಪೇಜ್ನ ಅಡ್ಮಿನ್ನ ಹಾಸ್ಯಪ್ರಜ್ಞೆಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಈ ವೀಡಿಯೋದಲ್ಲಿರುವ ವ್ಯಕ್ತಿಯನ್ನು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಕೆಲ ನೆಟ್ಟಿಗರು ಹೋಲಿಸಿದ್ದಾರೆ.
ಇದಕ್ಕೂ ಮುನ್ನ, ಈ ಪೇಜ್ನ ಇನ್ನೊಂದು ಪೋಸ್ಟ್ ಸಾರ್ವಜನಿಕರ ಮೆಚ್ಚುಗೆ ಗಳಿಸಿತ್ತು. ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳ ಬಗ್ಗೆ ಜಾಗೃತಿ ಮೂಡಿಸಲು ಸೃಜನಶೀಲ ಜಾಹೀರಾತುಗಳ ಸರಣಿಯನ್ನು ಪೇಜ್ನಲ್ಲಿ ಹಂಚಿಕೊಂಡಿದ್ದರು. ಮಾರ್ಚ್ 30 ರಂದು "ಆಜ್ ಮೇ ಊಪರ್ ಆಸ್ಮಾನ್ ನೀಚೆ" ಎನ್ನುವ ಫೇಮಸ್ ಹಿಂದಿ ಹಾಡಿಗೆ ಒಂದು ಟ್ವಿಸ್ಟ್ ನೀಡಿದ್ದರು. ಜೊತೆಗೆ ಆಕರ್ಷಕ ಕ್ಯಾಪ್ಷನ್ ಅನ್ನು ಸಹ ನೀಡಿದ್ದರು.
ಜಸ್ಟೀಸ್ ಲೀಗ್ ಸಿನಿಮಾ ಪಾತ್ರಗಳನ್ನು ಒಳಗೊಂಡ ಇನ್ನೊಂದು ಪೋಸ್ಟ್ ಸಾಕಷ್ಟು ಗಮನ ಸೆಳೆಯಿತು. ಸೂಪರ್ ಹೀರೊಗಳಾದ ಸೂಪರ್‌ಮ್ಯಾನ್, ಬ್ಯಾಟ್‌ಮ್ಯಾನ್, ದಿ ಫ್ಲ್ಯಾಶ್ ಮತ್ತು ವಂಡರ್ ವುಮನ್‌ನ ಚಿಹ್ನೆಗಳೊಂದಿಗೆ ಮಾಸ್ಕ್ ಸೇರಿಸಿದ್ದರು. ಈ ಪೋಸ್ಟ್ಗೆ ಮತ್ತೊಂದು ಸೃಜನಾತ್ಮಕ ಶೀರ್ಷಿಕೆ ನೀಡಿದ್ದರು. ನೀವೇ ನಿಮಗೆ ‘justice’ ಮಾಡಿ ಮತ್ತು ಸುರಕ್ಷತೆ ಎನ್ನುವ ‘league’ ಗೆ ಪ್ರವೇಶ ಪಡೆದುಕೊಳ್ಳಿ ಎನ್ನುವ ಕ್ಯಾಚಿ ಪೋಸ್ಟ್ ಎಲ್ಲರ ಮನಸೆಳೆದಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ