ಹೈದರಾಬಾದ್(ಮೇ.21): ಬೈಕ್ ಚಕ್ರಕ್ಕೆ ಬುರ್ಖಾ ಸಿಕ್ಕಿಹಾಕಿಕೊಂಡು ಬೈಕ್‌ನಿಂದ (Bike) ಬಿದ್ದ ಮಹಿಳೆಯ ವಿಡಿಯೋ (Video) ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral) ಆಗಿದೆ. ವೀಡಿಯೋವನ್ನು ಶೇರ್ ಮಾಡಿರುವ ಅನೇಕರು ಮಹಿಳೆಯರು ದ್ವಿಚಕ್ರ ವಾಹನದಲ್ಲಿ (Two Wheeler) ಹೋಗುವಾಗ ಎಚ್ಚರಿಕೆ ವಹಿಸಿ ಇಂತಹ ಅವಘಡಗಳನ್ನು ತಪ್ಪಿಸಲು ಎಚ್ಚರಿಕೆ (Warn) ನೀಡುತ್ತಿದ್ದಾರೆ. ಹೈದರಾಬಾದ್‌ನ (Hyderabad) ಯಾಚರಂನಲ್ಲಿ 18 ವರ್ಷದ ಯುವತಿ ಮತ್ತು ಆಕೆಯ ಸಹೋದರ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಭಾನುವಾರ ಈ ಘಟನೆ ಸಂಭವಿಸಿದೆ. ವೀಡಿಯೋದಲ್ಲಿರುವ (Video) ಬಾಲಕಿಗೆ ಗಂಭೀರ ಗಾಯಗಳಾಗಿದ್ದು, ಮರುದಿನ ಸಾವು ಸಂಭವಿಸಿದೆ. ಅಪಘಾತದಲ್ಲಿ (Accident) ಸಹೋದರ ಯಾವುದೇ ಗಾಯಗಳಿಲ್ಲದೆ ಬದುಕುಳಿದಿದ್ದಾರೆ.
ಇಂತಹ ದುರಂತದ ಬಗ್ಗೆ ಎಚ್ಚರಿಕೆ ನೀಡಿರುವ ಟಿಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿಸಿ ಸಜ್ಜನರ್, “ಮಹಿಳೆಯರೇ ಮತ್ತು ಯುವತಿಯರೇ ನೀವು ಬೈಕ್‌ನಲ್ಲಿ ಕುಳಿತುಕೊಳ್ಳುವಾಗ ಜಾಗರೂಕರಾಗಿರಿ” ಎಂದು ಟ್ವೀಟ್ ಮಾಡಿದ್ದಾರೆ.
ಈ ಘಟನೆಯು ಆನ್‌ಲೈನ್‌ನಲ್ಲಿ ಜಾಗೃತಿ ವೀಡಿಯೊಗಳನ್ನು ಹಂಚಿಕೊಳ್ಳುವುದರೊಂದಿಗೆ ರಸ್ತೆ ಸುರಕ್ಷತೆಯ ಕುರಿತು ಸಂಭಾಷಣೆಗಳನ್ನು ಹುಟ್ಟುಹಾಕಿತು.
మహిళలు, యువతులు బైక్ వెనుక కూర్చున్నప్పుడు జర పైలం..!!! @HiHyderabad @siddipetcp @spsircilla @cpwrl @KhammamCp @HYDTP @oneindiatelugu @NewsmeterTelugu @News18Telugu @ntdailyonline @RachakondaCop @Rachakonda_tfc @iAbhinayD #RoadAccident #RoadSafety #TSRTCRoadSafety pic.twitter.com/cfwJ2SfZR5
— V.C Sajjanar IPS MD TSRTC Office (@tsrtcmdoffice) May 19, 2022
ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವಾಗ ಇಂಥಹ ಬಹಳಷ್ಟು ಘಟನೆಗಳು ನಡೆಯುತ್ತಿದ್ದು ಈ ನಿಟ್ಟಿನಲ್ಲಿ ಸೀರೆ, ದುಪಟ್ಟಾಗಳನ್ನು ಮಹಿಳೆಯರು ಜಾಗರೂಕತೆಯಿಂದ ನಿರ್ವಹಿಸಬೇಕು. ರಭಸದಲ್ಲಿ ಹೋಗುವಾಗ ದುಪಟ್ಟಾ ಸಿಲುಕಿ ಅಪಘಾತ ಆಗಿರುವಂತ ಬಹಳಷ್ಟು ಉದಾಹರಣೆಗಳಿವೆ.
ಇದನ್ನೂ ಓದಿ: Uber Trips: ಉಬರ್ ಪ್ರಯಾಣಿಕರಿಗೆ, ಡ್ರೈವರ್ಗಳಿಗೆ ಭರ್ಜರಿ ಸಂತಸದ ಸುದ್ದಿ ಘೋಷಿಸಿದ ಕಂಪನಿ!
ಕತ್ತರಿಗುಪ್ಪೆಯಲ್ಲಿ (Kattariguppe) ಭೀಕರ ರಸ್ತೆ ಅಪಘಾತ (Accident) ಸಂಭವಿಸಿದೆ. ಬೆಂಗಳೂರಿನ ಜನನಿಬಿಡ ಕತ್ತರಿಗುಪ್ಪೆ ಬಳಿ ಉದ್ಭವ ಆಸ್ಪತ್ರೆ ಎದುರೇ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದು, ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ. ಕತ್ತರಿಗುಪ್ಪೆ ಸಮೀಪ ಕಾಫಿ ಕುಡಿದು ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ನಾಲ್ವರ ಮೇಲೆ, ಅತಿ ವೇಗವಾಗಿ ಬಂದ ಕಾರು ಡಿಕ್ಕಿಯಾಗಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಪಾದಚಾರಿಗಳು (Pedestrians) ಮೇಲೆ ಹಾರಿ ಬಿದ್ದಿದ್ದಾರೆ. ಈ ಎಲ್ಲ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕ್ಯಾಟರಿಂಗ್‌ನಲ್ಲಿ ಕೆಲಸ ಮಾಡುತ್ತಿದ್ದ ಮೂವರು ಕೆಲಸ ಮುಗಿಸಿಕೊಂಡು ರಸ್ತೆ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದರು.
ಕಿರುತೆರೆಯಲ್ಲಿ ಸಹಾಯಕ ನಿರ್ದೇಶನ ಮಾಡುತ್ತಿದ್ದ ಮುಕೇಶ್ ಎಂಬಾತ ಬೆಳಗ್ಗೆ ಕೆಲಸವನ್ನು ಮುಗಿಸಿ ಮನೆಗೆ ಹೊರಟ್ಟಿದ್ದ. ಈ ವೇಳೆ ಕಾರು ವಿಪರೀತ ವೇಗದಲ್ಲಿ ಕತ್ರಿಗುಪ್ಪೆ ಜಂಕ್ಷನ್ ಗೆ ಬಂದಿದೆ ಕಾರು ಬರುವುದನ್ನು ಗಮನಿಸದ ಪಾದಚಾರಿಗಳು ರಸ್ತೆಯಲ್ಲಿ ಹೋಗುವಾಗ ಕಾರು ಬಂದ ವೇಗದಲ್ಲೇ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ನಾಲ್ವರು ದಿಕ್ಕಾಪಾಲಾಗಿ ಬಿದ್ದಿದ್ದಾರೆ. ಕಾರು ಪಾದಚಾರಿಗಳಿಗೆ ಡಿಕ್ಕಿ ಹೊಡೆದು ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಎರಡು ದ್ವಿಚಕ್ರವಾಹನಗಳಿಗೆ ಮತ್ತು ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದಿದೆ.
ಇದನ್ನೂ ಓದಿ: Accident: ಮದುವೆಗೆ ಹೊರಟವರಿಗೆ ಮರದ ರೂಪದಲ್ಲಿ ಕಾದಿತ್ತು ಸಾವು! ಕ್ರೂಸರ್ ಡಿಕ್ಕಿಗೆ 7 ಮಂದಿ ಬಲಿ
ಸಹಾಯಕ ನಿರ್ದೇಶಕ ಮುಕೇಶ್ ಕಾರು
ಚಾಲಕ ಮುಕೇಶ್ ಶಿವಮೊಗ್ಗ ಮೂಲದವನಾಗಿದ್ದು ಕನ್ನಡ ಸಿನಿಮಾ ಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾನೆ. ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ ರವರ ಜೊತೆಗೆ ಕೆಲಸ ಮಾಡ್ತಿದ್ದ ಈತ 'ನಾನು ಮತ್ತು ಗುಂಡ' ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಬೆಳಗ್ಗೆ ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ ಹಾಗು ಮುಕೇಶ್ ಇಬ್ಬರು ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ