Viral Video| ನಾನು ಮನೆಯಲ್ಲಿರಲು ಹುಟ್ಟಿದವಳಲ್ಲ, ಶಾಲೆಗೆ ಹೋಗಬೇಕು; ಹಠ ಹಿಡಿದ ಅಫ್ಘನ್ ವಿದ್ಯಾರ್ಥಿನಿಯ ವಿಡಿಯೋ ವೈರಲ್

ಅಫ್ಘಾನಿಸ್ತಾನದ ವಿದ್ಯಾರ್ಥಿನಿಯ 'ನಾನು ಶಾಲೆಗೆ ಹೋಗಬೇಕು' ಎನ್ನುವ ವಿಡಿಯೋ ಶರವೇಗದಲ್ಲಿ ವೈರಲ್​ ಆಗುತ್ತಿದೆ. ಈ ವಿಡಿಯೋದಲ್ಲಿ ವಿದ್ಯಾರ್ಥಿನಿ ಮಹಿಳೆಯರ ಶಿಕ್ಷಣದ ಹಕ್ಕು ಮತ್ತು ಆಫ್ಘಾನಿಸ್ತಾನದ ಅಭಿವೃದ್ಧಿಗೆ ಮಹಿಳೆಯರ ಪಾತ್ರ ಎಷ್ಟು ಮುಖ್ಯ ಎನ್ನುವುದನ್ನು ವಿವರಿಸಿದ್ದಾಳೆ.

ಶಿಕ್ಷಣಕ್ಕಾಗಿ ಹೋರಾಡುತ್ತಿರುವ ಅಫ್ಘನ್ ಮಹಿಳೆ.

ಶಿಕ್ಷಣಕ್ಕಾಗಿ ಹೋರಾಡುತ್ತಿರುವ ಅಫ್ಘನ್ ಮಹಿಳೆ.

  • Share this:
'ನನ್ನ ದೇಶಕ್ಕೆ ನಾನು ಸೇವೆ ಸಲ್ಲಿಸಲು, ಅದರ ಬೆಳವಣಿಗೆಗೆ ನನ್ನ ಕೊಡುಗೆ ನೀಡಲು ನನಗೆ ಅವಕಾಶ ಬೇಕು. ಮಹಿಳೆಯರಿಗೆ ಸಮಾನ ಹಕ್ಕಿದೆ. ಹೆಣ್ಣು ಮಕ್ಕಳ ಹಕ್ಕನ್ನು ಕಸಿದುಕೊಳ್ಳು ವುದಕ್ಕೆ ಈ ತಾಲಿಬಾನಿಗಳು (Taliban) ಯಾರು? ಇವತ್ತಿನ ಹುಡುಗಿಯರೇ ಮುಂದಿನ ತಾಯಂದಿರು. ಈ ಹೆಣ್ಣು ಮಕ್ಕಳಿಗೆ ಶಿಕ್ಷಣವೇ (Child Education) ಸಿಗದಿದ್ದರೇ ತಮ್ಮ ಮಕ್ಕಳಿಗೆ ಅವರು ಏನು ಕಲಿಸುತ್ತಾರೆ? ನಾನು ಈ ಕಾಲದಲ್ಲಿ ಹುಟ್ಟಿದ ಈ ಪೀಳಿಗೆಯ ಹೆಣ್ಣು. ನಾನು ಕೇವಲ ತಿಂದು, ಮಲಗಿ, ಮನೆಯಲ್ಲೇ ಸಮಯ ಕಳೆಯಲು ಹುಟ್ಟಿದವಳಲ್ಲ. ನಾನು ಶಾಲೆಗೆ ಹೋಗಬೇಕು. ನನ್ನ ದೇಶದ ಬೆಳವಣಿಗೆಯಲ್ಲಿ ತೊಡಗಿಕೊಳ್ಳಬೇಕು. ಶಿಕ್ಷಣವೇ ಇರದಿದ್ದರೇ ನಾನು ಇದನ್ನು ಹೇಗೆ ಸಾಧಿಸಲಿ. ನಿಮಗೆ ಇದನ್ನು ಊಹಿಸಿಕೊಳ್ಳು ವುದಕ್ಕಾದರೂ ಸಾಧ್ಯವೇ? ಅಫ್ಘಾನಿಸ್ತಾನದ (Afghanistan) ಹೆಣ್ಣು ಮಕ್ಕಳಿಗೆ ಶಿಕ್ಷಣ ಸಿಗದಿದ್ದರೆ ಮುಂದಿನ ಪೀಳಿಗೆ ಉತ್ತಮ ನಡವಳಿಕೆಗಳನ್ನು ಕಲಿಯಲು ಸಾಧ್ಯವೇ ಇಲ್ಲ. ನಮಗೆ ಶಿಕ್ಷಣವೇ ಸಿಗದಿದ್ದರೇ ನಾವು ಈ ಪ್ರಪಂಚದಲ್ಲಿ ಎಲ್ಲೂ ಸಲ್ಲುವುದಿಲ್ಲ. ನಾವು ದೃಷ್ಟಿಯನ್ನು ಕಳೆದುಕೊಂಡಂತೆ! '

ವಾವ್! ಎಂಥಾ ಮಾತು. ಬೆಂಕಿ ಚೆಂಡಿನಂಥ ನುಡಿಗಳು, ಕೆಂಡದಷ್ಟೇ ಪ್ರಖರತೆ..! ಇದು ಶಿಕ್ಷಣದ ಶಕ್ತಿ. ಇಂತಹ ಶಿಕ್ಷಣದಿಂದ ಹೆಣ್ಣು ಮಕ್ಕಳನ್ನು ವಂಚಿತರನ್ನಾಗಿಸಿ ಕೇವಲ ಗಂಡು ಮಕ್ಕಳಿಗೆ ಮಾತ್ರ ಶಿಕ್ಷಣದ ಹಕ್ಕನ್ನು ನೀಡಿರುವ ತಾಲಿಬಾನಿಗಳ ನಿರಂಕುಶಪ್ರಭುತ್ವಕ್ಕೆ ವಿದ್ಯಾರ್ಥಿನಿಯೊಬ್ಬಳು ಸಿಡಿದೆದ್ದಿದ್ದಾಳೆ. ವಿಡಿಯೋ ಮೂಲಕ ತನ್ನ ಮನದ ಜ್ವಾಲೆಯನ್ನು ಮಾತಿನ ಮೂಲಕ ಹೊರಹಾಕಿ ಇಡೀ ಪ್ರಪಂಚದಿಂದಲೇ ಭೇಷ್ ಎನಿಸಿಕೊಂಡಿದ್ದಾಳೆ.

ಅಫ್ಘಾನಿಸ್ತಾನದ ವಿದ್ಯಾರ್ಥಿನಿಯ 'ನಾನು ಶಾಲೆಗೆ ಹೋಗಬೇಕು' ಎನ್ನುವ ವಿಡಿಯೋ ಶರವೇಗದಲ್ಲಿ ವೈರಲ್​ ಆಗುತ್ತಿದೆ. ಈ ವಿಡಿಯೋದಲ್ಲಿ ವಿದ್ಯಾರ್ಥಿನಿ ಮಹಿಳೆಯರ ಶಿಕ್ಷಣದ ಹಕ್ಕು ಮತ್ತು ಆಫ್ಘಾನಿಸ್ತಾನದ ಅಭಿವೃದ್ಧಿಗೆ ಮಹಿಳೆಯರ ಪಾತ್ರ ಎಷ್ಟು ಮುಖ್ಯ ಎನ್ನುವುದನ್ನು ವಿವರಿಸಿದ್ದಾಳೆ. ತನ್ನ ಕೆಂಡದುಂಡೆಯಂಥ ಮಾತುಗಳಿಂದ ಮನವರಿಕೆ ಮಾಡಿಕೊಟ್ಟಿದ್ದಾಳೆ.

ತಾಲಿಬಾನಿಯರು ಅಫ್ಘಾನಿಸ್ತಾನವನ್ನು ತಮ್ಮ ಕೈವಶ ಮಾಡಿಕೊಂಡ ನಂತರ ಮಹಿಳೆಯರ ಸ್ವಾತಂತ್ರ್ಯಕ್ಕೆ ಮಾರಕವಾಗಿ ನಡೆದುಕೊಂಡಿದೆ. ಮಹಿಳಾ ಶಿಕ್ಷಣ ಮತ್ತು ಮಹಿಳೆಯರ ಕೆಲಸದ ಹಕ್ಕುಗಳ ಬಗ್ಗೆ ಅತ್ಯಂತ ಕಠಿಣ ನಿಲುವನ್ನು ಪ್ರದರ್ಶಿಸಿದೆ. ತಾಲಿಬಾನಿಯರು ಅಫ್ಘನ್​ ಹೆಣ್ಣು ಮಕ್ಕಳಿಗೆ ಮಾಧ್ಯಮಿಕ ಶಾಲಾ ಶಿಕ್ಷಣವನ್ನು ನಿಷೇಧಿಸಿದೆ. ಆ ಮೂಲಕ ತಮ್ಮ ಭರವಸೆಗೆ ಕೊಳ್ಳಿ ಇಟ್ಟಿದ್ದಾರೆ. ಈ ಬಗ್ಗೆ ತನ್ನ ಆಕ್ರೋಶ ಹೊರ ಹಾಕಿರುವ ಆಫ್ಘನ್ ನೆಲದ ಹೆಣ್ಣು ಮಗಳು ಸ್ತ್ರೀ ಶಕ್ತಿ ಒಂದು ಪೀಳಿಗೆ ಕಟ್ಟುವಲ್ಲಿ ಎಷ್ಟು ಪ್ರಮುಖವಾದುದು ಎನ್ನುವುದನ್ನು ಸಂಪೂರ್ಣ ವಿಶ್ವಕ್ಕೆ ತಿಳಿಸಿಕೊಟ್ಟಿದ್ದಾಳೆ. ಸದ್ಯ ಈಕೆಯ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಅಪಾರ ಪ್ರಶಂಸೆಗೆ ಪಾತ್ರವಾಗಿದೆ.

ತಲೆಗೆ ಸ್ಕಾರ್ಫ್​ ಕಟ್ಟಿಕೊಂಡು ವಿದ್ಯಾರ್ಥಿನಿ ನಿಂತಿದ್ದಾಳೆ. ಆಕೆಯೊಟ್ಟಿಗೆ ಇನ್ನಿತರ ಇಬ್ಬರು ಹುಡುಗಿಯರು ಮತ್ತು ಒಬ್ಬ ಹುಡುಗ ಪ್ಲಕ್​ಕಾರ್ಡ್​ಗಳನ್ನು ಹಿಡಿದು ನಿಂತಿದ್ದಾರೆ. ಆಕೆಯ ಕೆಂಡದ ಮಳೆಯಂಥ ಮಾತುಗಳು, ವಾಕ್ಯದಲ್ಲಿನ ಸ್ಪಷ್ಟತೆ, ವಾಕ್​ಚಾತುರ್ಯ, ಮನುಕುಲದ ಬೆಳವಣಿಗೆಯಲ್ಲಿ ಹೆಣ್ಣಿನ ಪಾತ್ರದ ಬಗೆಗಿನ ನಿಖರವಾದ ನಿಲುವು ಎಲ್ಲರನ್ನು ಬೆರಗುಗೊಳಿಸಿದೆ.

20 ವರ್ಷದ ಹಿಂದೆ ತಾಲಿಬಾನಿಗಳು ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿಸಿದ್ದರು. ಹೆಣ್ಣು ಮಕ್ಕಳನ್ನು ಭೋಗದ ವಸ್ತುವಿನಂತೆ ನಡೆಸಿಕೊಂಡಿದ್ದು, ಹರಾಜಿನ ಪ್ರಕ್ರಿಯೆಯ ಮೂಲಕವು ಅವಳ ಶೋಷಣೆ ನಡೆದಿದ್ದು ಇತಿಹಾಸದ ಪುಟಗಳಲ್ಲಿವೆ. ಇಂತಹ ಹತ್ತು ಹಲವಾರು ಕಥೆಗಳನ್ನೇ ಕಳೆದ 20 ವರ್ಷಗಳಿಂದ ತಮ್ಮ ತಾಯಿಯಿಂದ, ಅಜ್ಜಿಯರಿಂದ ಕೇಳಿಕೊಂಡು ಬಂದಿದ್ದ ಇಂದಿನ ಯುವ ಪೀಳಿಗೆ ಈಗ ಸಿಡಿದು ನಿಂತಿದೆ. ಸಾಮಾಜಿಕ ಮಾಧ್ಯಮಗಳ ಪರಿಣಾಮ ಆಫ್ಘನ್ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹದ ನುಡಿಗಳು ಜಗತಿನಾದ್ಯಂತ ಕೇಳಿ ಬರುತ್ತಿವೆ.

ಇದನ್ನೂ ಓದಿ: Bharat Bandh| ರೈತರು ಕರೆ ನೀಡಿರುವ ಸೆ.27 ಭಾರತ್​ ಬಂದ್​ಗೆ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಬೆಂಬಲ!

'ನಾನು ಕೇವಲ ತಿಂದು, ಮಲಗಿ, ಮನೆಯಲ್ಲೇ ಸಮಯ ಕಳೆಯಲು ಹುಟ್ಟಿದವಳಲ್ಲ. ನಾನು ಶಾಲೆಗೆ ಹೋಗಬೇಕು. ನನ್ನ ದೇಶದ ಬೆಳವಣಿಗೆಯಲ್ಲಿ ತೊಡಗಿಕೊಳ್ಳಬೇಕು. ಅಫ್ಘನ್ ಹೆಣ್ಣು ಮಗಳು ತನ್ನ ಶಿಕ್ಷಣ ಹಕ್ಕನ್ನು ಮಾತನಾಡುತ್ತಿದ್ದಾಳೆ. ಆದರೆ ಈ ಉಗ್ರವಾದಿ ತಾಲಿಬಾನಿಗಳು ಅದನ್ನು ನಿರಾಕರಿಸುತ್ತಿದ್ದಾರೆ' ಎಂದು ಅಲುಕ್ ಅಮಿರಿ ಎನ್ನುವ ಟ್ವಿಟ್ಟರ್ ಬಳಕೆದಾರರು ವಿಡಿಯೋ ರೀ ಟ್ವೀಟ್ ಮಾಡಿದ್ದಾರೆ.

'ಧೈರ್ಯಶಾಲಿ, ಆಕೆಯ ನಡೆಯನ್ನು ನಾನು ಪ್ರಶಂಸಿಸುತ್ತೇನೆ. ಆಕೆ ಮತ್ತು ಆಕೆಯ ಕುಟುಂಬ ಸುರಕ್ಷಿತವಾಗಿದ್ದಾಳೆಂದು ನಾನು ನಂಬುತ್ತೇನೆ. ನನಗೆ ಗೊತ್ತು ಈಗ ಅಲ್ಲಿ ಮಾತನಾಡುವುದು ಬಹಳ ಅಪಾಯದ ಸನ್ನಿವೇಶ' ಎಂದು ಜಾಕ್ವೀನ್ ಮಾಂಟೆಝೊರಾ ಎನ್ನುವವರು ಟ್ವೀಟ್​ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Delhi's Rohini Court shoot out Case: ಮೂವರ ಸಾವಿಗೆ ಕಾರಣವಾದ ದೆಹಲಿ ಕೋರ್ಟ್​ ಶೂಟೌಟ್ ಪ್ರಕರಣ; ಇಬ್ಬರ ಬಂಧನ!

ಈ ವಿಡಿಯೋ 68,200ಕ್ಕಿಂತ ಹೆಚ್ಚು ವೀಕ್ಷಣೆಗಳು ಮತ್ತು ಹಲವಾರು ಕಾಮೆಂಟ್‌ಗಳನ್ನು ಗಳಿಸಿದೆ. ಯುವತಿಯ ಕೆಚ್ಚೆದೆಯ ಮಾತನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಇಂತಹ ಧೈರ್ಯಶಾಲಿ ಹೆಣ್ಣು ಮಕ್ಕಳು ಈ ಜಗತ್ತಿಗೆ ಬೇಕು.. ಭಲೇ ಎಂದು ಹಾಡಿ ಹೊಗಳಿದ್ದಾರೆ.
Published by:MAshok Kumar
First published: