Savarkar Controversy| ಸಾವರ್ಕರ್​ ಕ್ಷಮಾಪಣೆಗೆ ಗಾಂಧಿ ಸಲಹೆ ನೀಡಿದ್ದರೇ? ನಿಜಕ್ಕೂ ಇದೊಂದು ಹಾಸ್ಯಾಸ್ಪದ ಹೇಳಿಕೆ; ರಾಜಮೋಹನ್ ಗಾಂಧಿ

Mahatma Gandhi-Savarkar: 1913ರ ಕ್ಷಮಾಪಣಾ ಅರ್ಜಿಯಲ್ಲಿ ಸರ್ಕಾರ ತನ್ನ ಬಹುಮುಖ ಲಾಭ ಮತ್ತು ಕರುಣೆಯಲ್ಲಿ ನನ್ನನ್ನು ಬಿಡುಗಡೆ ಮಾಡಲಿ ಎಂದು ಸಾವರ್ಕರ್​ ಕೇಳಿಕೊಂಡಿದ್ದರು. ಇದು ಕ್ಷಮಾಪಣೆಯಲ್ಲದೆ ಮತ್ತೇನು? ಎಂದು ರಾಜಮೋಹನ್ ಗಾಂಧಿ ಪ್ರಶ್ನಿಸಿದ್ದಾರೆ.

ರಾಜಮೋಹನ ಗಾಂಧಿ.

ರಾಜಮೋಹನ ಗಾಂಧಿ.

 • Share this:
  "ಮಹಾತ್ಮಾ ಗಾಂಧಿಯವರ (Mahatma Gandhi) ಸೂಚನೆ ಮೇರೆಗೆ ಜೈಲಿನಲ್ಲಿದ್ದ ಸಾವರ್ಕರ್​ (Savarkar) ಬ್ರಿಟೀಷರಿಗೆ ಕ್ಷಮಾಪಣಾ ಪತ್ರ ಬರೆದಿದ್ದರು" ಎಂಬ ಕೇಂದ್ರ ಸಚಿವ ರಾಜನಾಥ್​ ಸಿಂಗ್ (Rajnat Singh) ಹೇಳಿಕೆ ಇತ್ತೀಚೆಗೆ ಭಾರೀ ವೈರಲ್ ಆಗಿತ್ತು. ಅಲ್ಲದೆ, ಈ ಹೇಳಿಕೆ ವಿರುದ್ಧ ರಾಷ್ಟ್ರಾಧ್ಯಂತ ವ್ಯಾಪಕ ಟೀಕೆಗಳೂ ಎದುರಾಗಿದ್ದವು. ಅಸಲಿಗೆ ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಗಾಂಧಿ ಪ್ರವೇಶ ನಡೆದದ್ಧೇ 1915ರಲ್ಲಿ. ಆದರೆ, ಸಾವರ್ಕರ್​ 1911ರಲ್ಲೇ ಕ್ಷಮಾಪಣಾ ಪತ್ರ ಬರೆದಿದ್ದರು. ಈ ವೇಳೆ ದಕ್ಷಿಣ ಆಫ್ರಿಕಾದಲ್ಲಿದ್ದ ಗಾಂಧಿ ಸಾವರ್ಕರ್​ಗೆ ಹೇಗೆ ಸೂಚನೆ ನೀಡಲು ಸಾಧ್ಯ? ಎಂಬ ಪ್ರಶ್ನೆಗಳು ಉದ್ಭವವಾಗಿದ್ದವು. ಆದರೆ, ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿರುವ ಮಹಾತ್ಮಾ ಗಾಂಧಿ ಮೊಮ್ಮಗ ರಾಜಮೋಹನ ಗಾಂಧಿ (Rajmohan Gandhi), "ಸಾವರ್ಕರ್‌ ಅವರು ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆಯುವಂತೆ ಗಾಂಧೀಜಿ ಸಲಹೆ ನೀಡಿದ್ದರು ಎಂಬ ಹೇಳಿಕೆ ಹಾಸ್ಯಾಸ್ಪದ, ಅಸಂಬದ್ಧ ಹಾಗೂ ವಿವೇಚನಾ ರಹಿತ" ಹೇಳಿಕೆ ಎಂದು ಕಿಡಿಕಾರಿದ್ದಾರೆ. 

  ಅರ್ಬಾನಾ-ಷಾಂಪೇನ್‌ನ ಇಲಿನಾಯ್ಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಮತ್ತು ಜೀವನ ಚರಿತ್ರೆಕಾರರು ಆಗಿರುವ ರಾಜಮೋಹನ ಗಾಂಧಿ ಈ ವಿವಾದದ ಬಗ್ಗೆ ಮಾತನಾಡಿದ್ದು, ರಾಜನಾಥ್ ಸಿಂಗ್‌ ಅವರ ಹೇಳಿಕೆ ಸಂಪೂರ್ಣ ತಪ್ಪಾಗಿದೆ. ಸಾವರ್ಕರ್‌ ಅವರು ಹಲವು ಕ್ಷಮಾಪಣಾ ಪತ್ರಗಳನ್ನು ಬರೆದಿದ್ದರು ಎಂದು ಹೇಳುವುದು ತಪ್ಪೆಂದು ರಾಜನಾಥ್ ಸಿಂಗ್‌ ಹೇಳಿರುವುದು ಸಂಪೂರ್ಣ ಸುಳ್ಳು. ಅಂಡಮಾನ್ ಜೈಲಿಗೆ ಹಾಕಿದ ಕೆಲವೇ ದಿನಗಳಲ್ಲಿ 1911ರಲ್ಲಿ ಸಾವರ್ಕರ್‌ ಕ್ಷಮಾಪಣಾ ಪತ್ರ ಬರೆದಿದ್ದರು. ಅಲ್ಲದೆ ಸಾವರ್ಕರ್‌ ಅವರು ಒಟ್ಟು ಏಳು ಕ್ಷಮಾಪಣಾ ಪತ್ರಗಳನ್ನು ಬರೆದಿದ್ದರು" ಎಂದು ರಾಜಮೋಹನ್‌ ಗಾಂಧಿ ತಿಳಿಸಿದ್ದಾರೆ.

  ಕ್ಷಮಾಪಣೆ ಕೇಳಲು ಇದ್ದ ಅವಕಾಶದಲ್ಲಿ ಬಿಡುಗಾಗಿ ಸಾವರ್ಕರ್‌ ಕೋರಿಕೆ ಸಲ್ಲಿಸಿದ್ದರು. "1913ರ ಕ್ಷಮಾಪಣಾ ಅರ್ಜಿಯಲ್ಲಿ ಸರ್ಕಾರ ತನ್ನ ಬಹುಮುಖ ಲಾಭ ಮತ್ತು ಕರುಣೆಯಲ್ಲಿ ನನ್ನನ್ನು ಬಿಡುಗಡೆ ಮಾಡಲಿ ಎಂದು ಸಾವರ್ಕರ್​ ಕೇಳಿಕೊಂಡಿದ್ದರು. ಇದು ಕ್ಷಮಾಪಣೆಯಲ್ಲದೆ ಮತ್ತೇನು? ಎಂದು ರಾಜಮೋಹನ್ ಗಾಂಧಿ ಪ್ರಶ್ನಿಸಿದ್ದಾರೆ.

  1920ರ ಜನವರಿ ಸಾವರ್ಕರ್‌ ಅವರಿಗೆ ಬರೆದ ಪತ್ರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ರಾಜಮೋಹನ ಗಾಂಧಿಯವರು, ಸಾವರ್ಕರ್ ಅವರ ಕಿರಿಯ ಸಹೋದರ ನಾರಾಯಣ್ ರಾವ್ ಅವರು ಸಹಾಯಕ್ಕಾಗಿ ಮಾಡಿದ ಮನವಿಗೆ ಪ್ರತ್ಯುತ್ತರವಾಗಿತ್ತು. ಗಾಂಧೀಜಿಯವರು ಸ್ವಂತ ಇಚ್ಛೆಯಿಂದ ಪತ್ರ ಬರೆದಿಲ್ಲ ಎಂದು ಸ್ಪಷ್ಟಪಡಿಸಿದರು.

  ಸಾವರ್ಕರ್ ಅವರ ಅಪರಾಧವನ್ನು ರಾಜಕೀಯ ಎಂದು ತೋರಿಸಲು ಗಾಂಧಿ ಪತ್ರವು ಸಲಹೆ ನೀಡಿದೆ. ಕ್ಷಮಾಪಣೆಗಾಗಿ ಮನವಿ ಮಾಡಲು ಗಾಂಧೀಜಿಯವರು ಪತ್ರ ಬರೆದಿಲ್ಲ. ಮುಖ್ಯವಾಗಿ ಸಾವರ್ಕರ್ ಅವರಿಗೆ ಗಾಂಧೀಜಿಯವರು ಪತ್ರ ಬರೆಯುವ ಒಂಬತ್ತು ವರ್ಷಗಳ ಮೊದಲೇ ಸಾವರ್ಕರ್‌ ಕ್ಷಮಾಪಣಾ ಪತ್ರಗಳನ್ನು ಬ್ರಿಟಿಷರಿಗೆ ಬರೆದಿದ್ದರು ಎಂದು ತಿಳಿಸಿದ್ದಾರೆ.

  ಇದನ್ನೂ ಓದಿ: Mohan Bhagwat| ಸಾವರ್ಕರ್ ಮುಸ್ಲಿಮರ ಶತ್ರು ಅಲ್ಲ, ಭಿನ್ನ ಸಂಸ್ಕೃತಿಯರಲ್ಲಿ ಎಂದಿಗೂ ವ್ಯತ್ಯಾಸವನ್ನು ಕಂಡವರಲ್ಲ; RSS ಮುಖ್ಯಸ್ಥ ಭಾಗವತ್

  ಗಾಂಧೀಜಿಯವರು 1920, ಮೇ ತಿಂಗಳಲ್ಲಿ ಸಾವರ್ಕರ್‌ ಸಹೋದರರ ಕುರಿತು ಲೇಖನ ಬರೆದಿದ್ದರು ಎಂಬುದನ್ನು ಒಪ್ಪಿಕೊಂಡಿರುವ ರಾಜಮೋಹನ್‌ ಗಾಂಧಿ, "ಬ್ರಿಟಿಷರ ಸಂಪರ್ಕದಿಂದ ಕಳೆದುಕೊಂಡ ಸ್ವತಂತ್ರವಾಗಲು ಅವರು ಬಯಸಿರಲಿಲ್ಲ. ಇದಕ್ಕೆ ಬದಲಾಗಿ ಬ್ರಿಟಿಷರ ಜೊತೆಗೂಡಿ ಭಾರತದ ಭವಿಷ್ಯವನ್ನು ಉತ್ತಮವಾಗಿ ರೂಪಿಸಬಹುದು ಎಂದು ಭಾವಿಸಿದ್ದರು" ಎಂದೂ ಉಲ್ಲೇಖಿಸಿದ್ದಾರೆ.

  ಭಾರತದ ಮಟ್ಟಿಗೆ ಪ್ರತಿ ವರ್ಷ ಅಕ್ಟೋಬರ್ ತಿಂಗಳಲ್ಲಿ ಅದರಲ್ಲೂ ಗಾಂಧಿ ಜಯಂತಿಯಂದು ಮಹಾತ್ಮಾ ಗಾಂಧಿ ಮತ್ತು ಸಾವರ್ಕರ್​ ಬಗ್ಗೆ ಚರ್ಚೆಗಳು ಮತ್ತು ವಿವಾದಾತ್ಮಕ ಪ್ರಸಂಗಗಳು ನಡೆಯುವುದು ಸಾಮಾನ್ಯ. ಈ ಹಿಂದೆ ಬಿಜೆಪಿಯ ಮಾತೃ ಸಂಸ್ಥೆ ಆರ್​ಎಸ್​ಎಸ್​ನ ಉತ್ತರಪ್ರದೇಶ ಕಾರ್ಯಕರ್ತರು ಮಹಾತ್ಮಾ ಗಾಂಧಿಯನ್ನು ಗೋಡ್ಸೆ ಕೊಲ್ಲುವಂತೆ ದೃಶ್ಯವನ್ನು ಮರು ಸಂಯೋಜಿಸಿ ಇಕ್ಕಟ್ಟಿಗೆ ಸಿಲುಕಿದ್ದರು.

  ಇದನ್ನೂ ಓದಿ: Varun Gandhi vs BJP| ರೈತರನ್ನು ಬೆಂಬಲಿಸಿದ್ದ ವಾಜಪೇಯಿ ಭಾಷಣ ಹಂಚಿಕೊಂಡ ವರುಣ್ ಗಾಂಧಿ; ಬಿಜೆಪಿ ಮತ್ತೆ ಟಾಂಗ್!

  ಇನ್ನೂ ಹಲವು ಬಿಜೆಪಿ ನಾಯಕರು ವೇದಿಕೆಯಲ್ಲಿ ಗೋಡ್ಸೆಯನ್ನು ಸಮರ್ಥಿಸಿಕೊಂಡು ಮಾತನಾಡುವ ವಿಡಿಯೋಗಳು ಆಗಿಂದಾಗ್ಗೆ ವೈರಲ್ ಆಗುತ್ತಲೇ ಇರುತ್ತವೆ. ಗಾಂಧಿ ಬಗೆಗಿನ ಅಪಪ್ರಚಾರಗಳೂ ಎಗ್ಗಿಲ್ಲದೆ ನಡೆಯುತ್ತಿದೆ. ಆದರೆ, ಇಂತಹ ಜನರ ವಿರುದ್ಧ ಸರ್ಕಾರ ಮಾತ್ರ ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂಬುದು ವಿಪರ್ಯಾಸ.
  Published by:MAshok Kumar
  First published: