HOME » NEWS » National-international » WAS THERE ENOUGH SPACE FOR RAPE IN THE SUV VADODARA POLICE SEEKS REPORT FROM RTO KVD

ಈ ವಾಹನದಲ್ಲಿ ರೇಪ್ ಮಾಡುವಷ್ಟು ಸ್ಥಳ ಇದ್ಯಾ? - RTO ಅಧಿಕಾರಿಗೆ ಇದೆಂಥಾ ಪ್ರಶ್ನೆ..!

ಈ ಶಾಕಿಂಗ್​ ಪ್ರಶ್ನೆಗೆ RTO ಅಧಿಕಾರಿಯ ಉತ್ತರ ಏನಾಗಿತ್ತು ಗೊತ್ತಾ?

Kavya V | news18-kannada
Updated:May 9, 2021, 3:35 PM IST
ಈ ವಾಹನದಲ್ಲಿ ರೇಪ್ ಮಾಡುವಷ್ಟು ಸ್ಥಳ ಇದ್ಯಾ? - RTO ಅಧಿಕಾರಿಗೆ ಇದೆಂಥಾ ಪ್ರಶ್ನೆ..!
ಸಾಂದರ್ಭಿಕ ಚಿತ್ರ
  • Share this:
ವಡೋದರ: ಸಾಮಾನ್ಯವಾಗಿ RTO ಅಧಿಕಾರಿಗಳು ಅಪಘಾತ ಪ್ರಕರಣಗಳಲ್ಲಿ ವಾಹನಗಳನ್ನು ಪರಿಶೀಲಿಸಿ ವರದಿ ನೀಡುತ್ತಾರೆ. ವಾಹನ ಎಷ್ಟರ ಮಟ್ಟಿಗೆ ಸುಸ್ಥಿತಿಯಲ್ಲಿತ್ತು, ಬ್ರೇಕ್​ ಸರಿಯಾಗಿತ್ತಾ, ವಾಹನದ ಕಾರಣದಿಂದ ಅಪಘಾತ ಸಂಭವಿಸಿತೇ ಎಂಬೆಲ್ಲಾ ವಿಷಯಗಳ ಆಧಾರದ ಮೇಲೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ. ಆದರೆ ಒಂದು ವಾಹನದಲ್ಲಿ ಅತ್ಯಾಚಾರ ಮಾಡುವಷ್ಟು ಸ್ಥಳ ಇದೆಯಾ? ಇಲ್ಲವಾ? ಎಂಬ ಬಗ್ಗೆ ಮೊದಲ ಬಾರಿಗೆ ಪರಿಶೀಲನೆ ನಡೆದಿದೆ. ಗುಜರಾತ್​ನ ವಡೋದರ ಆರ್​ಟಿಓ ಅಧಿಕಾರಿ ಮೊದಲ ಬಾರಿಗೆ ಇಂಥಹ ಪ್ರಶ್ನೆಯಿಂದ ಶಾಕ್​ ಆಗಿದ್ದರು. ಅಷ್ಟಕ್ಕೂ ಇಂಥ ಪ್ರಶ್ನೆ ಕೇಳಿದವರು ಸ್ಥಳೀಯರ ಪೊಲೀಸರು ಅನ್ನೋದು ಇನ್ನೂ ಅಚ್ಚರಿಗೊಳಿಸುವ ಸಂಗತಿ.

ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು SUV ವಾಹನದಲ್ಲಿ ಅತ್ಯಾಚಾರ ನಡೆಯಬಹುದಾದಷ್ಟು ಸ್ಥಳವಿರುತ್ತಾ? ಹಿಂಬದಿಯ ಸೀಟನ್ನು ಮಡಿಚ್ಚಿಟ್ಟರೆ ಎಷ್ಟು ಸ್ಥಳ ಸಿಗಬಹುದು ಎಂದು ಆರ್​ಟಿಓ ಅಧಿಕಾರಿಯನ್ನು ಕೇಳಿದ್ದಾರೆ. ವೃತಿ ಜೀವನದಲ್ಲೇ ಮೊದಲ ಬಾರಿಗೆ ಇಂಥ ಪ್ರಶ್ನೆಯನ್ನು ಆರ್​ಟಿಓ ಅಧಿಕಾರಿ ಎದುರಿಸಿದ್ದಾರಂತೆ. ಕಳೆದ ತಿಂಗಳ 26ರ ತಡರಾತ್ರಿ SUV ವಾಹನದಲ್ಲಿ ನನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಯುವತಿಯೊಬ್ಬರು ಏ.30ರಂದು ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಮೇ 2ರಂದು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಅತ್ಯಾಚಾರ ನಡೆದಿದೆ ಎನ್ನಲಾಗಿದ್ದ ವಾಹನವನ್ನೂ ವಶಕ್ಕೆ ಪಡೆದಿದ್ದರು.

ತನಿಖೆ ವೇಳೆ ಅತ್ಯಾಚಾರ ಆರೋಪಿ ನನ್ನ ವಾಹನದಲ್ಲಿ ರೇಪ್​ ಮಾಡಲು ಸಾಧ್ಯವೇ ಇಲ್ಲ. ಇದೆಲ್ಲಾ ಕಟ್ಟುಕಥೆ, ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ವಾದಿಸಿದ್ದ. ಅಪರಾಧ ವಿಭಾಗದ ಪೊಲೀಸರು ಘಟನೆ ನಡೆದಿದೆ ಎನ್ನಲಾದ ವಾಹನವನ್ನು ಸಂಪೂರ್ಣವಾಗಿ ಪರಿಶೀಲನೆಗೆ ಒಳಪಡಿಸಿದ್ದರು. ವಿಧಿವಿಜ್ಞಾನ ತಂಡವೂ ಸ್ಥಳ ಮಹಜರ್​ ನಡೆಸಿ ಹಲವು ಸ್ಯಾಂಪಲ್​ಗಳನ್ನು ಸಂಗ್ರಹಿಸಿದ್ದಾರೆ. ಆದರೆ ಆರೋಪಿಯ ಕಾರಲ್ಲಿ ಘಟನೆ ನಡೆಯುವಷ್ಟು ಸ್ಥಳವಿತ್ತು ಎಂಬುವುದನ್ನು ಸಾಬೀತುಪಡಿಸುವುದು ಪೊಲೀಸರಿಗೆ ಅಗತ್ಯವಿತ್ತು. ಹೀಗಾಗಿಯೇ ಅಪರಾಧ ವಿಭಾಗದ ಪೊಲೀಸರು ಆರ್​ಟಿಓ ಅಧಿಕಾರಿಯ ಮೊರೆ ಹೋಗಿದ್ದಾರೆ.

ಸಾಮಾನ್ಯವಾಗಿ ಅಪಘಾತ ಪ್ರಕರಣಗಳಲ್ಲಿ ವಾಹನವನ್ನು ಪರಿಶೀಲಿಸಿ ಸರ್ಟಿಫಿಕೇಟ್​ ನೀಡುತ್ತಿದ್ದ ಅಧಿಕಾರಿಗೆ ಪೊಲೀಸರ ಈ ಅಪರೂಪದ ಪ್ರಶ್ನೆ ಅಚ್ಚರಿ ಮೂಡಿಸಿತ್ತು. ಅತ್ಯಾಚಾರದಂತ ಗಂಭೀರ ಪ್ರಕರಣ ಸಂಬಂಧ ಎಂದೂ ವಾಹನವನ್ನು ಪರಿಶೀಲನೆ ನಡೆಸಿಲ್ಲ ಎಂದು ಅಧಿಕಾರಿ ಹೇಳಿಕೊಂಡಿದ್ದಾರೆ. ಅತ್ಯಾಚಾರ ಮಾಡುವಷ್ಟು ಸ್ಥಳ ಇತ್ತು, ಇಲ್ಲ ಎಂದು ಹೇಳುವುದು ಅಸಾಧ್ಯ. ವಾಹನದ ಹಿಂಬದಿ ಸೀಟ್​ ಮಡಿಚಿದರೆ ಎಷ್ಟು ಸ್ಥಳಾವಕಾಶ ದೊರೆಯುತ್ತೆ ಅಂತಷ್ಟೇ ಹೇಳಲು ಸಾಧ್ಯ. ಈ ನಿಟ್ಟಿನಲ್ಲೇ ನಾನು ವರದಿಯನ್ನು ಕೊಡುತ್ತೇನೆ. ಅತ್ಯಾಚಾರ ಪ್ರಕರಣವನ್ನು ನಿರೂಪಿಸುವುದು ಪೊಲೀಸರ ಕರ್ತವ್ಯ ಎಂದು ಆರ್​ಟಿಓ ಅಧಿಕಾರಿ ತಿಳಿಸಿದ್ದಾರೆ.

ಇದೊಂದು ಅತ್ಯಂತ ಸೂಕ್ಷ್ಮ ಪ್ರಶ್ನೆಯಾಗಿದ್ದು, ಅಪರಾಧ ಪ್ರಕರಣಗಳಲ್ಲಿ ಇಂಥಹ ಯಾರೂ ಊಹಿಸಲು ಸಾಧ್ಯವಾಗದ ಅಂಶಗಳೇ ಸತ್ಯವನ್ನು ಬಯಲಿಗೆಳೆಯುತ್ತವೆ. ಈ ಅಪರಾಧದ ಮಿಸ್ಟರಿ ಮತ್ತಷ್ಟು ತನಿಖೆಯಿಂದಷ್ಟೇ ಹೊರ ಬರಬೇಕಿದೆ.
Published by: Kavya V
First published: May 9, 2021, 3:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories