• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • 10 ಬಿಲಿಯನ್ ಡಾಲರ್ ಮೌಲ್ಯದ ತಪ್ಪು ಮಾಡಿದ್ದನ್ನು ಒಪ್ಪಿಕೊಂಡ ವಿಶ್ವದ 6ನೇ ಶ್ರೀಮಂತ ವ್ಯಕ್ತಿ ವಾರೆನ್ ಬಫೆಟ್..!

10 ಬಿಲಿಯನ್ ಡಾಲರ್ ಮೌಲ್ಯದ ತಪ್ಪು ಮಾಡಿದ್ದನ್ನು ಒಪ್ಪಿಕೊಂಡ ವಿಶ್ವದ 6ನೇ ಶ್ರೀಮಂತ ವ್ಯಕ್ತಿ ವಾರೆನ್ ಬಫೆಟ್..!

ವಾರೆನ್ ಬಫೆಟ್

ವಾರೆನ್ ಬಫೆಟ್

ದೀರ್ಘಕಾಲದ ಬರ್ಕ್‌ಷೈರ್ ಹೂಡಿಕೆದಾರರಾಗಿರುವ ಟಾಮ್ ರುಸ್ಸೊ ಅವರು ಬಫೆಟ್‌ ಅವರ ಪ್ರಾಮಾಣಿಕತೆಯನ್ನು ಸ್ವಾಗತಿಸಿದ್ದಾರೆ. ‘ಕೆಲವೇ ವ್ಯವಸ್ಥಾಪಕರು ತಮ್ಮ ಜವಾಬ್ದಾರಿಯನ್ನು ದೂಷಿಸುವ ಬದಲು ಒಪ್ಪಿಕೊಳ್ಳಲು ಸಿದ್ಧರಿದ್ದಾರೆ’ ಎಂದು ಅವರು ಹೇಳಿದ್ದಾರೆ.

 • Share this:

  ಶತಕೋಟ್ಯಧಿಪತಿ, ಜಗತ್ತಿನ ಅತ್ಯಂತ ಯಶಸ್ವಿ ಹೂಡಿಕೆದಾರರಾದ ವಾರೆನ್ ಬಫೆಟ್ ಕೂಡ ತಪ್ಪುಗಳನ್ನು ಮಾಡುತ್ತಾರೆ. ಅರೇ..? ವಿಶ್ವದ 6ನೇ ಶ್ರೀಮಂತ ವ್ಯಕ್ತಿ ವಾರೆನ್ ಬಫೆಟ್ ಎಲ್ಲಾದರೂ ತಪ್ಪು ಮಾಡುವುದುಂಟೆ ಎಂದು ನೀವು ಕೇಳಬಹುದು. ಹೌದು ಅಂತಾ ಸ್ವತಃ ಬಫೆಟ್ ಅವರೇ ಹೇಳಿಕೊಂಡಿದ್ದಾರೆ. 90 ವರ್ಷದ ಬಿಲಿಯನೇರ್ ಬಫೆಟ್ ಅವರು 2016ರಲ್ಲಿ ತಾವು ಮಾಡಿದ ದೊಡ್ಡ ತಪ್ಪಿನ ಬಗ್ಗೆ ಹೇಳಿಕೊಂಡಿದ್ದಾರೆ. ‘ವಿಮಾನ ಮತ್ತು ಕೈಗಾರಿಕಾ ಭಾಗಗಳ ತಯಾರಕ ಕಂಪನಿ ಪ್ರೆಸಿಷನ್ ಕ್ಯಾಸ್ಟ್‌ಪಾರ್ಟ್ಸ್ ಕಾರ್ಪ್(ಪಿಸಿಸಿ) ಅನ್ನು ಖರೀದಿಸಲು ತಮ್ಮ ಬರ್ಕ್‌ಷೈರ್ ಹ್ಯಾಥ್‌ವೇ ಇಂಕ್ 32.1 ಬಿಲಿಯನ್ ಡಾಲರ್ ಖರ್ಚು ಮಾಡಿತ್ತು. ಈ ಕಂಪನಿ ಖರೀದಿಸಲು ನಾನು ಹೆಚ್ಚು ಹಣ ಪಾವತಿಸಿದ್ದೇನೆ’ ಎಂದು ಬಫೆಟ್ ಒಪ್ಪಿಕೊಂಡಿದ್ದಾರೆ.


  ಕೊರೋನಾ ವೈರಸ್ ಸಾಂಕ್ರಾಮಿಕದಿಂದ ವಾಯುಯಾನ ಮತ್ತು ಒರೆಗಾನ್ ಮೂಲದ ಪೋರ್ಟ್‌ಲ್ಯಾಂಡ್ ಘಟಕದ ಉತ್ನನ್ನಗಳ ಬೇಡಿಕೆ ಕುಸಿಯಿತು. ಪರಿಣಾಮ ಬರ್ಕ್‌ಷೈರ್ ಕಳೆದ ಆಗಸ್ಟ್ ತಿಂಗಳಿನಲ್ಲಿ 9.8 ಬಿಲಿಯನ್ ಡಾಲರ್ ನಷ್ಟ ಅನುಭವಿಸಿತು. ಹೂಡಿಕೆದಾರರಿಗೆ ಬರೆದ ತಮ್ಮ ವಾರ್ಷಿಕ ಪತ್ರದಲ್ಲಿ ಬಫೆಟ್ ಅವರು, ‘ವ್ಯವಹಾರದಲ್ಲಿ ಅತ್ಯುತ್ತಮವಾಗಿರುವ ಕಂಪನಿಯನ್ನು ನಾನು ಖರೀಸಿದೆ ಮತ್ತು ಇನ್ನೂ ಕೂಡ ಅದರ ಉಸ್ತುವಾರಿ ವಹಿಸಿಕೊಂಡಿರುವ ಪಿಸಿಸಿ ಸಿಇಒ ಮಾರ್ಕ್ ಡೊನೆಗನ್ ಅವರನ್ನು ಪಡೆಯಲು ಬರ್ಕ್‌ಷೈರ್ ಅದೃಷ್ಟಶಾಲಿಯಾಗಿದೆ’ ಎಂದಿದ್ದಾರೆ.


  ತಾವು ಪಿಸಿಸಿ ಕಂಪನಿಯಯ ಸಾಮಾನ್ಯ ಲಾಭದ ಸಾಮರ್ಥ್ಯದ ಬಗ್ಗೆ ತುಂಬಾ ಆಶಾವಾದಿಯಾಗಿರುವುದಾಗಿ ಬಫೆಟ್ ಹೇಳಿದ್ದಾರೆ. 2020ರಲ್ಲಿ ಪಿಸಿಸಿ ಸುಮಾರು 13,400ಕ್ಕೂ ಹೆಚ್ಚು ಅಥವಾ ಅದರ ಶೇ.40ರಷ್ಟು ಉದ್ಯೋಗಿಗಳನ್ನು ಕಳೆದುಕೊಂಡಿತು. ಇತ್ತೀಚೆಗೆ ಮಾತ್ರ ಕಂಪನಿ ಸುಧಾರಿಸುವತ್ತ ಮುಖ ಮಾಡಿದೆ ಎಂದು ಬರ್ಕ್‌ಷೈರ್ ಹೇಳಿದೆ.
  ‘ನಾನು ಅವಾಗ ತಪ್ಪು ಮಾಡಿದೆ. ಭವಿಷ್ಯದ ಗಳಿಕೆಯ ಸರಾಸರಿ ಮೊತ್ತ ನಿರ್ಣಯಿಸುವಲ್ಲಿ ಮತ್ತು ಅದರ ಪರಿಣಾಮವಾಗಿ ವ್ಯವಹಾರಕ್ಕೆ ಪಾವತಿಸಲು ಸರಿಯಾದ ಬೆಲೆಯ ಲೆಕ್ಕಾಚಾರದಲ್ಲಿ ತಪ್ಪಾಗಿದೆ. ಆ ರೀತಿಯ ನನ್ನ ಮೊದಲ ದೋಷದಿಂದ ಪಿಸಿಸಿ ದೂರವಿದೆ. ಆದರೆ ಇದು ದೊಡ್ಡ ತಪ್ಪು’ ಎಂದು ಬಫೆಟ್ ತಿಳಿಸಿದ್ದಾರೆ. 2 ವರ್ಷಗಳ ಹಿಂದೆ ಕ್ರಾಫ್ಟ್ ಫುಡ್ಸ್ ಗಾಗಿ ತಾವು ಹೆಚ್ಚು ಮೊತ್ತ ಪಾವತಿಸಿರುವುದಾಗಿ ಬಫೆಟ್ ಒಪ್ಪಿಕೊಂಡಿದ್ದಾರೆ. ಬರ್ಕ್‌ಷೈರ್ ಮತ್ತು ಖಾಸಗಿ ಇಕ್ವಿಟಿ ಸಂಸ್ಥೆ 3G ಕ್ಯಾಪಿಟಲ್ ಅನ್ನು 2015ರಲ್ಲಿ ತಮ್ಮ ಹೆಚ್.ಜೆ.ಹೆಂಜ್ ಕಂಪನಿ ಜೊತೆ ವಿಲೀನಗೊಳಿಸಿದಾಗ ಈ ತಪ್ಪಾಗಿದೆ ಎಂದು ಅವರು ಹೇಳಿದ್ದಾರೆ.


  ಇದನ್ನು ಓದಿ: ಯಾರಿಗೆ ಕೋವಿಡ್ ಲಸಿಕೆ ಸಿಗುತ್ತೆ? ಉಸಿರಾಟ ತೊಂದರೆ, ಹೆಚ್ಐವಿ, ಕ್ಯಾನ್ಸರ್ ಸೇರಿ 20 ಕಾಯಿಲೆಗಳ ಪಟ್ಟಿ


  2008ರ ತಮ್ಮ ವಾರ್ಷಿಕ ಪತ್ರದಲ್ಲಿ 1993ರ ಡೆಕ್ಸ್ಟರ್ ಶೂ ಖರೀದಿ ತಾವು ಮಾಡಿಕೊಂಡ ಅತ್ಯಂತ ಕೆಟ್ಟ ವ್ಯವಹಾರವೆಂದು ಬಫೆಟ್ ಹೇಳಿದ್ದರು. ‘ತಾವು ನಿಷ್ಪ್ರಯೋಜಕ ವ್ಯವಹಾರಕ್ಕೆ ಕೈಹಾಕಿ ತುಂಬಾ ನಷ್ಟವನ್ನುಂಟು ಮಾಡಿಕೊಂಡೆ. ಈ ಕಂಪನಿ ಸ್ವಾಧೀನಕ್ಕೆ ತಾವು ಹಣಕ್ಕೆ ಬದಲು ಬರ್ಕ್‌ಷೈರ್ ಸ್ಟಾಕ್ ಅನ್ನು ಬಳಸಿದ್ದು ನನಗೆ ದುಬಾರಿಯಾಯಿತು’ ಎಂದು ಅವರು ಹೇಳಿದ್ದಾರೆ. ‘ನಾನು ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ತಪ್ಪುಗಳನ್ನು ಮಾಡುತ್ತೇನೆ, ಬೇಕಾದರೆ ನಿವು ಅದರ ಬಗ್ಗೆ ಬೆಟ್ ಕಟ್ಟಿ’ ಎಂದು ಬಫೆಟ್ ಬರೆದುಕೊಂಡಿದ್ದಾರೆ.


  ದೀರ್ಘಕಾಲದ ಬರ್ಕ್‌ಷೈರ್ ಹೂಡಿಕೆದಾರರಾಗಿರುವ ಟಾಮ್ ರುಸ್ಸೊ ಅವರು ಬಫೆಟ್‌ ಅವರ ಪ್ರಾಮಾಣಿಕತೆಯನ್ನು ಸ್ವಾಗತಿಸಿದ್ದಾರೆ. ‘ಕೆಲವೇ ವ್ಯವಸ್ಥಾಪಕರು ತಮ್ಮ ಜವಾಬ್ದಾರಿಯನ್ನು ದೂಷಿಸುವ ಬದಲು ಒಪ್ಪಿಕೊಳ್ಳಲು ಸಿದ್ಧರಿದ್ದಾರೆ’ ಎಂದು ಅವರು ಹೇಳಿದ್ದಾರೆ.

  Published by:HR Ramesh
  First published: