ಪ್ರತಿಯೊಬ್ಬರಿಗೆ ಪೌರತ್ವ ಸಿಗುವವರೆಗೂ ವಿರಮಿಸುವುದಿಲ್ಲ: ಜಬಲ್​ಪುರ್​ನಲ್ಲಿ ಅಮಿತ್ ಶಾ

ಭಾರತ ವಿರೋಧಿ ಘೋಷಣೆ ಕೂಗುವ ಮತ್ತು ಭಾರತದ ವಿರುದ್ಧ ಧ್ವನಿ ಎತ್ತುವ ಶಕ್ತಿಗಳನ್ನ ಜೈಲಿಗೆ ಹಾಕುತ್ತೇವೆ... ರಾಮಮಂದಿರ ನಿರ್ಮಾಣಕ್ಕೆ ಅಡ್ಡಿಪಡಿಸಿದವರ ಕಣ್ಮುಂದೆಯೇ ಭವ್ಯ ಮಂದಿರ ನಿರ್ಮಾಣವಾಗುತ್ತದೆ ಎಂದು ಅಮಿತ್ ಶಾ ಪಣತೊಟ್ಟಿದ್ದಾರೆ.

news18
Updated:January 12, 2020, 6:21 PM IST
ಪ್ರತಿಯೊಬ್ಬರಿಗೆ ಪೌರತ್ವ ಸಿಗುವವರೆಗೂ ವಿರಮಿಸುವುದಿಲ್ಲ: ಜಬಲ್​ಪುರ್​ನಲ್ಲಿ ಅಮಿತ್ ಶಾ
ಅಮಿತ್ ಶಾ
  • News18
  • Last Updated: January 12, 2020, 6:21 PM IST
  • Share this:
ನವದೆಹಲಿ(ಜ. 12): ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸಿಎಎಗೆ ಯಾರು ಎಷ್ಟೇ ವಿರೋಧಿಸಿದರೂ ಕಾಯ್ದೆ ಜಾರಿ ಮಾಡದೇ ಬಿಡುವುದಿಲ್ಲ ಎಂದು ಪಣ ತೊಟ್ಟಿದ್ಧಾರೆ. ಮಧ್ಯ ಪ್ರದೇಶ ರಾಜ್ಯದ ಜಬಲ್​ಪುರ್​ನಲ್ಲಿ ಸಿಎಎ ಬೆಂಬಲಿಸಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅಮಿತ್ ಶಾ, ಪಾಕಿಸ್ತಾನದಲ್ಲಿ ಧಾರ್ಮಿಕ ದೌರ್ಜನ್ಯಕ್ಕೊಳಗಾಗಿ ಭಾರತಕ್ಕೆ ಬಂದಿರುವ ಪ್ರತಿಯೊಬ್ಬರಿಗೂ ಭಾರತೀಯ ಪೌರತ್ವ ಸಿಗುವವರೆಗೂ ತಾನು ವಿರಮಿಸುವುದಿಲ್ಲ ಎಂದು ಹೇಳಿದ್ಧಾರೆ.

“ಕಾಂಗ್ರೆಸ್ಸಿಗರೇ ಇಲ್ಲಿ ಕೇಳಿಸಿಕೊಳ್ಳಿ… ನೀವು ಎಷ್ಟು ಬೇಕಾದರೂ ವಿರೋಧಿಸಿ. ಆದರೆ, ಪಾಕಿಸ್ತಾನದಿಂದ ದೌರ್ಜನ್ಯಕ್ಕೊಳಗಾಗಿ ವಲಸೆ ಬಂದಿರುವ ಪ್ರತಿಯೊಬ್ಬರಿಗೂ ಭಾರತೀಯ ಪೌರತ್ವ ಸಿಗುವವರೆಗೂ ನಾವು ಸುಮ್ಮನೆ ಕೂರುವುದಿಲ್ಲ” ಎಂದು ಅಮಿತ್ ಶಾ ತಿಳಿಸಿದರು.

ಇದನ್ನೂ ಓದಿ: ಸ್ವಾಮಿ ವಿವೇಕಾನಂದ ಸಂಸ್ಥಾಪಿತ ಬೇಲುರ್ ಮಠದಲ್ಲಿ ಪ್ರಧಾನಿ ಮೋದಿಯಿಂದ ಸಿಎಎ ಪ್ರತಿಪಾದನೆ

“ಈ ಜನರಿಗೆ ಪೌರತ್ವ ನೀಡಿದ ಬಳಿಕವಷ್ಟೇ ತಮಗೆ ವಿಶ್ರಾಂತಿ. ನಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಪಾಕಿಸ್ತಾನದಿಂದ ಬಂದಿರುವ ಹಿಂದೂ, ಸಿಖ್, ಬೌದ್ಧ ಮತ್ತು ಕ್ರೈಸ್ತ ವಲಸಿಗರಿಗೆ ಭಾರತೀಯರಿಗಿರುವಷ್ಟೇ ಹಕ್ಕು ಇದೆ” ಎಂದು ಗೃಹ ಸಚಿವರು ಪ್ರತಿಪಾದಿಸಿದರು.

ತುಕಡೆ ಗ್ಯಾಂಗ್​ಗಳನ್ನು ಜೈಲಿಗಟ್ಟುತ್ತೇವೆ:

ಭಾರತ ವಿರೋಧಿ ಘೋಷಣೆ ಕೂಗುವ ಮತ್ತು ಭಾರತದ ವಿರುದ್ಧ ಧ್ವನಿ ಎತ್ತುವ ಶಕ್ತಿಗಳನ್ನ ಜೈಲಿಗೆ ಹಾಕುತ್ತೇವೆ ಎಂದು ಅಮಿತ್ ಶಾ ಎಚ್ಚರಿಕೆ ನೀಡಿದರು. “ಜೆಎನ್​ಯುನಲ್ಲಿ ಕೆಲ ವ್ಯಕ್ತಿಗಳು ಭಾರತ ವಿರೋಧಿ ಘೋಷಣೆಗಳನ್ನು ಕೂಗುತ್ತಾರೆ. ಭಾರತ್ ತೇರೆ ತುಕಡೆ ಹೋ ಏಕ್ ಹಜಾರ್, ಇನ್​ಶಾಲ್ಲಾ ಇನ್​ಶಾಲ್ಲಾ (ದೇವರು ಅನುಮತಿಸಿದರೆ ಭಾರತವನ್ನು ಸಾವಿರ ಹೋಳುಗಳನ್ನಾಗಿ ಮಾಡುತ್ತೇವೆ) ಎಂಬ ಘೊಷಣೆ ಕೂಗುತ್ತಾರೆ. ಇಂಥ ಜನರು ಜೈಲಿನಲ್ಲಿರಬೇಕಲ್ಲವೇ? ದೇಶದ ವಿರುದ್ಧ ಧ್ವನಿ ಎತ್ತುವ ಯಾರೇ ದೇಶದ್ರೋಹಿಗಳಿದ್ದರೂ ಅವರನ್ನು ಕಂಬಿ ಹಿಂದಕ್ಕೆ ಕಳುಹಿಸುತ್ತೇವೆ” ಎಂದು ಶಾ ಆರ್ಭಟಿಸಿದರು.

ಇದನ್ನೂ ಓದಿ: ಪೌರತ್ವ ತಿದ್ದುಪಡಿ ಕಾಯ್ದೆ ತಾರತಮ್ಯ, ಧರ್ಮದ ಆಧಾರದ ಮೇಲೆ ದೇಶ ವಿಭಜಿಸುವ ಕಾನೂನು; ಕೇಂದ್ರ ವಿರುದ್ಧ ಸೋನಿಯಾ ಗಾಂಧಿ ಕಿಡಿಭವ್ಯ ರಾಮ ಮಂದಿರ ನಿರ್ಮಾಣ ಶತಃಸಿದ್ಧ:

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ಸಿಗರು ಸುಪ್ರೀಂ ಕೋರ್ಟ್​ನಲ್ಲಿ ತೊಡರುಗಾಲು ಹಾಕಿದ್ದಕ್ಕೆ ಅಮಿತ್ ಶಾ ಬಲವಾಗಿ ಆಕ್ಷೇಪಿಸಿದರು. “ಕಾಂಗ್ರೆಸ್ ವಕೀಲ ಕಪಿಲ್ ಸಿಬಲ್ ಅವರು ರಾಮ ಮಂದಿರ ನಿರ್ಮಾಣ ಆಗಬಾರದು ಎನ್ನುತ್ತಾರೆ. ಸಿಬಲ್ ಭಾಯ್, ನೀವು ಮಂದಿರ ನಿರ್ಮಾಣಕ್ಕೆ ಏನೇ ಅಡ್ಡಿ ಬೇಕಾದರೂ ಮಾಡಿ, ಆದರೆ ನಾಲ್ಕು ತಿಂಗಳಲ್ಲಿ ಅಯೋಧ್ಯೆಯಲ್ಲಿ ಗಗನ ಚುಂಬಿಸುವ ಭವ್ಯ ಮಂದಿರ ಸಿದ್ಧವಾಗುತ್ತದೆ” ಎಂದು ಅಮಿತ್ ಶಾ ಹೇಳಿದರು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

Published by: Vijayasarthy SN
First published: January 12, 2020, 6:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading