ನೀವೂ ಹಾಲಿವುಡ್​ಗೆ ಹಾರಬೇಕಾ? ಹಾಗಿದ್ದರೆ ಈ ವರದಿ ಓದಿ...!

Anitha E | news18
Updated:July 11, 2018, 5:17 PM IST
ನೀವೂ ಹಾಲಿವುಡ್​ಗೆ ಹಾರಬೇಕಾ? ಹಾಗಿದ್ದರೆ ಈ ವರದಿ ಓದಿ...!
Anitha E | news18
Updated: July 11, 2018, 5:17 PM IST
ನ್ಯೂಸ್​ 18 ಕನ್ನಡ 

ಲಾಸ್​ ಎಂಜಲಿಸ್​ನಲ್ಲಿರುವ ಹಾಲಿವುಡ್​ಗೆ ಇನ್ನೂ ಯಾರು ಬೇಕಾದರೂ ಹೋಗುವ ಕಾಲ ದೂರ ಇಲ್ಲ. ಅದಕ್ಕಾಗಿಯೇ ಯೋಜನೆಯೊಂದು ಸಿದ್ಧಗೊಳ್ಳುತ್ತಿದೆ. ಹವದು ಹಾಲಿವುಡ್​ ಎಲ್ಲರ ಕೈಗೂ ಎಟುಕುವಂತೆ ಮಾಡುವ ಉದ್ದೇಶದಿಂದ ಯೋಜನೆಯೊಂದನ್ನು ರೂಪಿಸಲಾಗುತ್ತಿದೆ. ಅದಕ್ಕೆಂದೇ ಎಲ್ಲರೂ ಸಿದ್ಧರಾಗಿ.

ಲಾಸ್​ ಎಂಜಲಿಸ್​ಗೆ ಭೇಟಿ ನೀಡುವ ಪ್ರತಿಯೊಬ್ಬರೂ ಸಹ ಹಾಲಿವುಡ್​ಗೆ ಭೇಟಿ ನೀಡದೆ ಬರುವುದಿಲ್ಲ. ಹಾಲಿವುಡ್​ ಸಿನಿಮಾಗಳು ಚಿತ್ರೀಕರಣಗೊಳ್ಳುವ ಸುಂದರ ಹಾಗೂ ಕ್ರಿಯಾತ್ಮಕ ಜಗತ್ತನ್ನು ಮಿಸ್​ ಮಾಡಿಕೊಳ್ಳಲು ಯಾರು ಬಯಸುತ್ತಾರೆ.

ಲಾಸ್​ ಎಂಜಲಿಸ್​ನ ಬೆಟ್ಟದಲ್ಲಿ ಮಿಂಚುವ ಹಾಲಿವುಡ್​ ಸೈನ್​ ಬೋರ್ಡ್​ ಬಳಿ ಪ್ರವಾಸಿಗರನ್ನು ಕರೆದೊಯ್ಯಲು 10 ಕೋಟಿ ವೆಚ್ಚದಲ್ಲಿ ಕೇಬಲ್​ ಕಾರನ್ನು ಮಾಡುವ ಯೋಜನೆ ಇದೆ ಎಂದು ವಾರ್ನರ್​ ಬ್ರೊಸ್​ ಸೋಮವಾರ ಪ್ರಕಟಿಸಿದೆ.

'ಹಾಲಿವುಡ್​ ಸ್ಟುಡಿಯೋ ನೋಡಲು ಬರುವ ಪ್ರವಾಸಿಗರನ್ನು ಗುಡ್ಡ ಮೇಲಿರುವ ಸೈನ್​ ಬೋರ್ಡ್​ ಬಳಿ ಕರೆದುಕೊಂಡು ಹೋಗಲು ಕೇಬಲ್​ ಕಾರಿನ ವ್ಯವಸ್ಥೆ ಮಾಡಲಾಗುವುದು. ಇದರಿಂದ 1.6 ಕಿ.ಮೀ ದೂರವನ್ನು ಕೇವಲ 6 ನಿಮಿಷದಲ್ಲಿ ಕ್ರಮಿಸಬಹುದಾಗಿದೆ. ಅಲ್ಲದೆ ಅಲ್ಲಿನ ಪ್ರದೇಶವನ್ನು ವೀಕ್ಷಿಸಲು ದಾರಿಯನ್ನೂ ಸಹ ಮಾಡಲಾಗುವುದು' ಎಂದು ಲಾಸ್​ ಎಂಜಲಿಸ್​ ಟೈಮ್ಸ್​ ವರದಿ ಮಾಡಿದೆ.

 
First published:July 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ