War Crimes Law: ಯುದ್ಧಕ್ಕೆ ಕಾರಣವಾಗಿರುವ Russia ಅಧ್ಯಕ್ಷ ಪುಟಿನ್ ಅವರನ್ನು ಬಂಧಿಸಬಹುದೇ?

ಈಗಾಗಲೇ ರಷ್ಯಾ ಅಧ್ಯಕ್ಷರ ವಿರುದ್ಧ ಜಾಗತಿಕ ನೆಲೆಗಟ್ಟಿನಲ್ಲಿ ಕಾನೂನಾತ್ಮಕ ಪ್ರಕ್ರಿಯೆಗಳು ಪ್ರಾರಂಭವಾಗಿವೆ. ವಿಶ್ವಸಂಸ್ಥೆಯ ಉನ್ನತ ನ್ಯಾಯಾಲಯವು, ರಷ್ಯಾ ಉಕ್ರೇನ್ ಮೇಲೆ ದಾಳಿಯನ್ನು ತೀವ್ರವಾಗಿ ಖಂಡಿಸಿದೆ.

ರಷ್ಯಾ ಅಧ್ಯಕ್ಷ ಪುಟಿನ್ (ಸಂಗ್ರಹ ಚಿತ್ರ)

ರಷ್ಯಾ ಅಧ್ಯಕ್ಷ ಪುಟಿನ್ (ಸಂಗ್ರಹ ಚಿತ್ರ)

 • Share this:
  ದಿನಗಳೆದಂತೆ ರಷ್ಯಾ (Russia) ತನ್ನ ದಾಳಿಗಳನ್ನು ಉಕ್ರೇನ್ (Ukraine) ಮೇಲೆ ತೀವ್ರಗೊಳಿಸುತ್ತಲೇ ಇದೆ. ನಿತ್ಯ ನೂರಾರು ಸಂಖ್ಯೆಯಲ್ಲಿ ಜನರು ನಿರ್ಗತಿಕರಾಗುತ್ತಿದ್ದಾರೆ. ಈ ನಡುವೆ ರಷ್ಯಾ ಮ್ಯಾಟರ್ನಿಟಿ ಆಸ್ಪತ್ರೆಯೊಂದರ ಮೇಲೆ ಬಾಂಬ್ ದಾಳಿ ಮಾಡಿದ್ದು ಅಪಾರ ಸಾವು-ನೋವು ಸಂಭವಿಸಿವೆ ಎನ್ನಲಾಗುತ್ತಿದೆ. ಇನ್ನೊಂದೆಡೆ ಮಾರಿಯೊಪೋಲ್ ನಲ್ಲಿರುವ ಥಿಯೇಟರ್ ಒಂದರ ಮೇಲೆ ರಷ್ಯಾ ಪಡೆ ತೀವ್ರ ಬಾಂಬ್ ದಾಳಿ (Bomb Attack) ನಡೆಸಿದೆ ಎನ್ನಲಾಗಿದ್ದು ಆ ಥಿಯೇಟರ್ ನಲ್ಲಿ ಜನರು ಆಶ್ರಯ ಪಡೆದಿದ್ದರೆಂಬ ಸುದ್ದಿಯಿದೆ. ಇದನ್ನು ಯುದ್ಧಾಪರಾಧ ಎಂದು ಪರಿಗಣಿಸಲಾಗುತ್ತಿದೆ. ಗುರುವಾರದಂದು ಮಾರಿಯೊಪೋಲ್ ಥಿಯೇಟರ್ ಕಟ್ಟಡದ ಭವ್ಯ ನೋಟವು ಈಗ ಹೇಗೆ ಬೆಂಕಿ ಹಾಗೂ ಅವಶೇಷಗಳ ಗೂಡಾಗಿದೆ ಎಂಬುದನ್ನು ತೋರಿಸುವ ಚಿತ್ರಗಳನ್ನು ಅಧಿಕಾರಿಗಳು ಅಪ್ಲೋಡ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾರಿಯೊಪೋಲ್ ನಗರದ ಮೇಯರ್ ವಾಡಿಮ್ ಬಾಯ್ಚೆಂಕೊ ಅವರು ವಿಡಿಯೋ ಸಂದೇಶ ನೀಡಿದ್ದು ರಷ್ಯಾದ ಈ ದಾಳಿಯು 'ಭಯಾನಕ ದುಖ'ವಾಗಿದೆ ಎಂದು ವ್ಯಾಖ್ಯಾನಿಸಿದ್ದು ಈ ಥಿಯೇಟರ್ ನಲ್ಲಿ ಹಲವರು ಆಶ್ರಯ ಪಡೆದಿದ್ದರು, ಕೆಲವರು ಅದೃಷ್ಟವಂತರು ಪ್ರಾಣ ಉಳಿಸಿಕೊಂಡರು ಆದರೆ ಮಿಕ್ಕವರು ಅಷ್ಟು ಅದೃಷ್ಟವಂತರಾಗಿರಲಿಲ್ಲ ಎಂದು ನುಡಿಗಳನ್ನು ಆಡಿದ್ದಾರೆ.

  ಪುಟಿನ್  'ಯುದ್ಧಾಪರಾಧಿ' 

  ಇತ್ತ ಯುದ್ಧ ಮುಂದುವರೆದಿದ್ದರೆ ಅತ್ತ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾ ವಿರುದ್ಧ ಗೊಣಗುವುದನ್ನು ಮುಂದುವರೆಸಿವೆ. ಈ ಮಧ್ಯೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಖಾರವಾಗಿ ಮಾತನಾಡುತ್ತ ಪುಟಿನ್ ಅವರನ್ನು 'ಯುದ್ಧಾಪರಾಧಿ' ಎಂದು ಜರಿದಿದ್ದಾರೆ. ಆದರೆ ಈ ಬಗ್ಗೆ ವ್ಹೈಟ್ ಹೌಸ್ ವಕ್ತಾರರು ಯಾವುದೇ ಸ್ಪಷ್ಟನೆ ನೀಡಿಲ್ಲ ಬದಲಾಗಿ ಅಧ್ಯಕ್ಷರು ಭಾವನಾತ್ಮಕವಾಗಿ ಮಾತನಾಡುತ್ತಿದ್ದರೆಂದಷ್ಟೆ ಹೇಳಿದ್ದಾರೆ. ಕೆಲವರು ಇದು ರಾಜಕೀಯತೆಯಿಂದ ಕೂಡಿರುವ ಮಾತಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

  ಯುದ್ಧ ನಿಲ್ಲಿಸಿ ಎಂದ ವಿಶ್ವಸಂಸ್ಥೆ ನ್ಯಾಯಾಲಯ 

  ಆದರೆ ಈಗಾಗಲೇ ರಷ್ಯಾ ಅಧ್ಯಕ್ಷರ ವಿರುದ್ಧ ಜಾಗತಿಕ ನೆಲೆಗಟ್ಟಿನಲ್ಲಿ ಕಾನೂನಾತ್ಮಕ ಪ್ರಕ್ರಿಯೆಗಳು ಪ್ರಾರಂಭವಾಗಿವೆ. ವಿಶ್ವಸಂಸ್ಥೆಯ ಉನ್ನತ ನ್ಯಾಯಾಲಯವು, ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಿ ಅದನ್ನು ಆಕ್ರಮಿಸುತ್ತಿರುವ ರೀತಿಯ ಬಗ್ಗೆ ಖೇದ ವ್ಯಕ್ತಪಡಿಸುತ್ತ ಈ ಬಗ್ಗೆ ತಾನು ಆಳವಾದ ಕಾಳಜಿ ಹೊಂದಿದ್ದು ಈ ಕೂಡಲೇ ಈ ಯುದ್ಧವನ್ನು ನಿಲ್ಲಿಸುವಂತೆ ರಷ್ಯಾ ಅಧ್ಯಕ್ಷರಿಗೆ ಹೇಳಿದೆ. ಈ ಸಂದರ್ಭದಲ್ಲಿ ಉಕ್ರೇನಿನ ರಾಜಧಾನಿ ಕೀವ್ ಹರ್ಷ ವ್ಯಕ್ತಪಡಿಸುತ್ತ ಪ್ರಕರಣವನ್ನು ತಾನು ಉಕ್ರೇನಿ ಜನರು ಮತ್ತೆ ತಮ್ಮ ಸಾಮಾನ್ಯ ಜೀವನಚರಿಗೆ ಮರಳುವವರೆಗೂ ಮುಂದುವರೆಸುವುದಾಗಿ ಹೇಳಿದೆ.

  ಇದನ್ನೂ ಓದಿ: ಮಕ್ಕಳು ಆಶ್ರಯ ಪಡೆದಿದ್ದ Ukraineನ ನಾಟಕದ ಥಿಯೇಟರ್ ಮೇಲೆ Russia ಬಾಂಬ್ ದಾಳಿ!

  ಉಕ್ರೇನ್ ದೇಶದ ಬಹು ಭಾಗಗಳಲ್ಲಿ ಬಂದಿರುವ ರಷ್ಯಾ ಪಡೆ ಅಲ್ಲಿ ಬೀಡು ಬಿಟ್ಟಿರುವ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯದಿಂದ ಈ ಆದೇಶ ಹೊರ ಬಿದ್ದಿದೆ. ವಿಶ್ವಸಂಸ್ಥೆ ತನ್ನ ವರದಿಯಲ್ಲಿ ಒಟ್ಟಾರೆಯಾಗಿ ಮೂರು ಮಿಲಿಯನ್ ಗಿಂತಲೂ ಹೆಚ್ಚು ಜನ ದೇಶ ತೊರೆದಿದ್ದಾರೆಂದು ಹೇಳಿದೆ. ಇತ್ತೀಚಿಗಷ್ಟೆ ಕೀವ್ ರಷ್ಯಾದ ಮೊಸ್ಕೋವನ್ನು ಹೇಜ್ ನಲ್ಲಿರುವ ಅಂತಾರಷ್ಟ್ರೀಯ ನ್ಯಾಯಾಲಯಕ್ಕೆ ಎಳೆದು ತಂದಿತ್ತು. ಈ ಬಗ್ಗೆ ವಿಚಾರಣೆ ನಡೆದು ಈಗ ನ್ಯಾಯಾಲಯವು ಮೊಸ್ಕೋಗೆ ತನ್ನ ದಾಳಿ/ಆಕ್ರಮಣ ನಿಲ್ಲಿಸುವಂತೆ ಆದೇಶಿಸಿದೆ ಎನ್ನಾಲಾಗಿದೆ. ಆದಾಗ್ಯೂ, ಇದನ್ನು ಯುದ್ಧಾಪರಾಧ ಎನ್ನಲಾದಿತೆ?

  ಅಷ್ಟಕ್ಕೂ ಯುದ್ಧಾಪರಾಧ ಎಂದರೇನು?

  ಅಂತಾರಾಷ್ಟ್ರೀಯ ಅಥವಾ ದೇಶೀಯ ಮಟ್ಟದಲ್ಲಿ ಶಸ್ತ್ರಾಸ್ತ್ರಗಳ ಸಂಘರ್ಷ ಉಂಟಾದ ಸಂದರ್ಭದಲ್ಲಿ ನಾಗರಿಕರ ಅಥವಾ ಶತ್ರು ಸೈನಿಕರ ಮೇಲೆ ದಾಳಿ ಮಾಡುವ ಮೂಲಕ ಅಂತಾರಾಷ್ಟ್ರೀಯ ನಿಯಮ ಉಲ್ಲಂಘನೆಯನ್ನು ಯುದ್ಧಾಪರಾಧ ಎಂದು ಪರಿಗಣಿಸಲಾಗಿದೆ.

  ಪುಟಿನ್ ಅವರನ್ನು ವಿಚಾರಣೆ ಮಾಡಬಹುದೆ?

  ಸದ್ಯದ ಪರಿಸ್ಥಿತಿಗಳನ್ನು ನೋಡುವುದಾದರೆ ಕೆಲವು ಮಿತಿಗಳೊಂದಿಗೆ ನಾಲ್ಕು ವಿಧಗಳಲ್ಲಿ ಪುಟಿನ್ ಅವರ ಮೇಲೆ ವಿಚಾರಣೆಗಳನ್ನು ಕೈಗೊಳ್ಳಲು ಅವಕಾಶಗಳಿವೆ ಎನ್ನಲಾಗಿದೆ. ಮೊದಲನೆಯದಾಗ್ ಅಂತಾರಾಷ್ಟ್ರೀಯ ಅಪಾರಧ ನ್ಯಾಯಾಲಯ. ಎರಡನೆಯದಾಗಿ ವಿಶ್ವಸಂಸ್ಥೆಯು ಪುಟಿನ ಅವರ ಮೇಲಿರುವ ಆರೋಪಗಳನ್ನು ಹೈಬ್ರಿಡ್ ಇಂಟರ್ನ್ಯಾಷನಲ್ ವಾರ್ ಕ್ರೈಮ್ಸ್ ಟ್ರಿಬ್ಯೂನಲ್ ಅವರಿಗೆ ಹಸ್ತಾಂತರಿಸಿ ಪುಟಿನ್ ಅವರ ವಿಚಾರಣೆ ನಡೆಸುವುದು. ಮೂರನೆಯದಾಗಿ ಸಂಘಟ್ನೆಗಳಾದ ನ್ಯಾಟೊ, ಯುರೋಪಿಯನ್ ಒಕ್ಕೂಟ ಇಲ್ಲವೆ ಅಮೆರಿಕ ಸೇರಿ ಒಂದು ಟ್ರಿಬ್ಯೂನಲ್ ಹುಟ್ಟು ಹಾಕಿ ಅಲ್ಲಿ ಪುಟಿನ್ ಅವರ ವಿಚಾರಣೆ ನಡೆಸುವುದು. ಇದಕ್ಕೆ ಉದಾಹರಣೆಯೆಂದರೆ ಎರಡನೆ ವಿಶ್ವಯುದ್ಧದ ನಂತರ ನಾಜಿಗಳ ವಿರುದ್ಧ ವಿಚಾರಣೆ ನಡಸಲು ನ್ಯುರೆಂಬರ್ಗ್ ನಲ್ಲಿ ಮಾಡಲಾಗಿದ್ದ ಟ್ರಿಬ್ಯೂನಲ್.

  ಕೊನೆಯದಾಗಿ ಕೆಲ ದೇಶಗಳು ಯುದ್ಧಾಪರಾಧಿಗಳನ್ನು ವಿಚಾರಣೆ ಮಾಡಲು ತಮ್ಮದೆ ಆದ ಕಾನೂನುಗಳನ್ನು ಹೊಂದಿವೆ. ಉದಾಹರಣೆಗೆ ಜರ್ಮನಿ. ಈಗಾಗಲೇ ಜರ್ಮನಿ ಈ ಬಗ್ಗೆ ಪುಟಿನ್ ಅವರ ಕುರಿತು ಯಾವ ರೀತಿ ನಡೆ ಇಡಬೇಕೆಂದು ಚಿಂತಿಸುತ್ತಿದೆ ಎನ್ನಲಾಗಿದೆ. ಅಮೆರಿಕದಲ್ಲಿ ಈ ರೀತಿಯ ಕಾನೂನು ಇಲ್ಲ.
  Published by:Kavya V
  First published: