ಮೊಘಲ್ ದಾಳಿ (Mughal invasion), ಸುಲ್ತಾನರ ದಾಳಿಯಿಂದಾಗಿ ನಮ್ಮ ದೇಶದಲ್ಲಿ ಅದೆಷ್ಟೋ ಹಿಂದೂ ದೇವಾಲಯಗಳು (Hindu Temple) ಧ್ವಂಸಗೊಂಡಿವೆ. ದೇವಾಲಯದ ವಿಗ್ರಹಗಳನ್ನು ನಾಶಗೊಳಿಸಿ ಅಲ್ಲಿ ಮಸೀದಿ (Mosque) ಮಂದಿರ ಕಟ್ಟಿದ ಅದೆಷ್ಟೋ ನಿದರ್ಶನಗಳು ಇತಿಹಾಸದಲ್ಲಿ ಮುದ್ರಿತವಾಗಿದೆ. ಆದರೆ ತಮಿಳುನಾಡಿನ ಮುಸ್ಲಿಂ ವಕ್ಫ್ ಬೋರ್ಡ್ ದುಸ್ಸಾಹಸವನ್ನೇ ಮಾಡಿದ್ದು, 1,500 ವರ್ಷಗಳ ಇತಿಹಾಸವಿರುವ ದೇವಾಲಯ, ದೇವಾಲಯಕ್ಕೆ ಸೇರಿದ 400 ಎಕರೆ ಜಾಗ, 100 ಕ್ಕೂ ಹೆಚ್ಚು ಹಿಂದೂ ಕುಟುಂಬಗಳ (Hindu Families) ಆಸ್ತಿ, ಮನೆ ಹೀಗೆ ಪ್ರತಿಯೊಂದು ಸದ್ದಿಲ್ಲದೆ ವಕ್ಫ್ ಬೋರ್ಡ್ (Waqf Board) ಖಾತೆ ಸೇರಿದೆ.
ಸಂಪೂರ್ಣ ಗ್ರಾಮವನ್ನೇ ಗುಳುಂ ಮಾಡಿದ ವಕ್ಫ್ ಬೋರ್ಡ್:
ತಮಿಳು ನಾಡಿವ ತಿರುಚಿರಾಪಳ್ಳಿಯಲ್ಲಿ ವಕ್ಫ್ ಬೋರ್ಡ್‌ನ ಈ ಕುತಂತ್ರ ಬೆಳಕಿಗೆ ಬಂದಿದ್ದು, ಸ್ಥಳೀಯರೊಬ್ಬರು ತಮ್ಮ ಮಗಳ ವಿವಾಹ ವಿಷಯವಾಗಿ ಆಸ್ತಿಯನ್ನು ಮಾರಾಟ ಮಾಡುವುದಕ್ಕೆ ಪ್ರಯತ್ನಿಸಿದಾಗ ಅವರ ಆಸ್ತಿ ಮಾತ್ರವಲ್ಲದೆ, ಸಂಪೂರ್ಣ ಹಳ್ಳಿಯೇ ವಕ್ಫ್ ಬೋರ್ಡ್ ಕೈವಶವಾಗಿರುವುದು ಬೆಳಕಿಗೆ ಬಂದಿದೆ.
ವರದಿಗಳ ಪ್ರಕಾರ, ಎನ್ ರಾಜಗೋಪಾಲ್ ಎಂಬುವವರು ತಮ್ಮ ಮಗಳ ವಿವಾಹ ಸಲುವಾಗಿ ತಿರುಚಿರಾಪಳ್ಳಿ ಜಿಲ್ಲೆಯ ತಿರುಚೆಂಡುರೈ ಗ್ರಾಮದಲ್ಲಿದ್ದ 1 ಎಕರೆ 2 ಸೆಂಟ್ ಕೃಷಿ ಭೂಮಿಯನ್ನು ರಾಜೇಶ್ವರಿ ಎಂಬುವವರಿಗೆ ಮಾರಾಟ ಮಾಡಲು ನಿರ್ಧರಿಸಿದ್ದರು. ಆದರೆ ಆಸ್ತಿ ಮಾರಾಟ ಮಾಡಲು ರಿಜಿಸ್ಟ್ರಾರ್ ಕಚೇರಿ ತಲುಪಿದ್ದ ರಾಜಗೋಪಾಲ್ ಅವರಿಗೆ ಆಘಾತಕಾರಿ ಸುದ್ದಿಯೊಂದು ಬರಸಿಡಿಲಿನಂತೆ ಬಂದೆರಗಿತ್ತು.
ಅವರಿಗೆ ಸೇರಿದ್ದ 1.2 ಎಕರೆ ಜಮೀನು ತಮಿಳುನಾಡಿನ ವಕ್ಫ್ ಬೋರ್ಡಿಗೆ ಸೇರಿದ್ದು, ಅದನ್ನು ಮಾರಲು ಅವರು ಬೋರ್ಡ್‌ನ ಮಂಡಳಿಯಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆದುಕೊಳ್ಳಬೇಕು ಎಂದು ಅಲ್ಲಿ ತಿಳಿಸಲಾಯಿತು.
ಎರಡೂ ಸಮುದಾಯದಲ್ಲಿ ಶಾಂತಿ ಸೌಹಾರ್ದತೆ ಇತ್ತು
ಆದರೆ ಮಂಡಳಿ ಬರೀ ರಾಜಗೋಪಾಲ್ ಅವರ ಕೃಷಿ ಭೂಮಿಯನ್ನು ಮಾತ್ರವೇ ತನ್ನ ಸ್ವಾಧೀನಕ್ಕೆ ಒಳಪಡಿಸಿರಲಿಲ್ಲ, ಇನ್ನು ಮುಂದಿನ ವಿಚಾರಣೆಯನ್ನು ನಡೆಸಿದಾಗಲೇ ಅಸಲಿ ಸತ್ಯ ಬೆಳಕಿಗೆ ಬಂದಿದ್ದು. ಸಂಪೂರ್ಣ ತಿರುಚೆಂಡುರೈ ಗ್ರಾಮವೇ ವಕ್ಫ್ ಬೋರ್ಡ್‌ಗೆ ಸೇರಿದ್ದು ಎಂಬ ಕರಾಳ ಸತ್ಯ ಬಹಿರಂಗಗೊಂಡಿತು.
ಇದನ್ನೂ ಓದಿ: Actress Rape: ಯುವನಟಿ ಮೇಲೆ ಹಲವು ಬಾರಿ ರೇಪ್; ಪೊಲೀಸರಿಂದ ಬಿಲ್ಡರ್ ಬಂಧನ
ಕುತೂಹಲದ ವಿಷಯವೇನೆಂದರೆ ಗ್ರಾಮವು ಹಿಂದೂ ಪ್ರಾಬಲ್ಯಕ್ಕೆ ಒಳಪಟ್ಟಿದ್ದು, ಎರಡೂ ಸಮುದಾಯದವರು ಶಾಂತಿ ಹಾಗೂ ಸೌಹಾರ್ದತಯಿಂದ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ ಎಂದು ರಾಜ್‌ಗೋಪಾಲ್ ಸಮರ್ಥಿಸಿಕೊಂಡಿದ್ದಾರೆ. ಆದರೆ ಇದೀಗ ಈ ಹಗರಣದಿಂದ ಸಂಪೂರ್ಣ ಗ್ರಾಮಸ್ಥರ ನೆಮ್ಮದಿಯೇ ಹಾಳಾಗಿದೆ ಎಂಬುದು ರಾಜ್‌ಗೋಪಾಲ್ ಅವರ ಮಾತಾಗಿದೆ.
ಬಿಕ್ಕಟ್ಟಿನೊಂದಿಗೆ ಅಂತ್ಯಕಂಡಿರುವ ಮಾತುಕತೆ
ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರಾಜಗೋಪಾಲ್ 1996ರಲ್ಲಿ ಗ್ರಾಮದಲ್ಲಿದ್ದ ಒಂದು ತುಂಡು ಕೃಷಿ ಭೂಮಿಯನ್ನು ಖರೀದಿಸಿದ್ದು, ಆ ಸಮಯದಲ್ಲಿ ಅದು ವಕ್ಫ್ ಬೋರ್ಡ್‌ಗೆ ಸಂಬಂಧಿಸಿದ್ದಾಗಿರಲಿಲ್ಲ ಎಂದಾಗಿದೆ. ಗ್ರಾಮಸ್ಥರು ಮಂಡಳಿಯೊಂದಿಗೆ ಈ ಕುರಿತಾಗಿ ಮಾತುಕತೆ ನಡೆಸಿದರೂ ಅದು ಬಿಕ್ಕಟ್ಟಿನೊಂದಿಗೆ ಅಂತ್ಯಕಂಡಿದೆ.
ಜಮೀನಿನ ಎಲ್ಲಾ ದಾಖಲೆಗಳನ್ನು ರಾಜಗೋಪಾಲ್ ಹೊಂದಿದ್ದು, ಜಮೀನು ಮಾರಾಟ ಮಾಡಲು ಬಯಸಿದಾಗ ರಿಜಿಸ್ಟ್ರಾರ್ ಭೂಮಿಯು ವಕ್ಫ್ ಮಂಡಳಿಗೆ ಸೇರಿದ್ದು ಹಾಗೂ ಅದನ್ನು ಮಾರಾಟ ಮಾಡಲು ಮಂಡಳಿಯ ಅನುಮತಿ ಬೇಕಾಗಿರುವುದಾಗಿ ತಿಳಿಸಿದರು ಎಂದು ಮಾಧ್ಯಮದವರಿಗೆ ತಿಳಿಸಿದ್ದಾರೆ. ತಮ್ಮದೇ ಸ್ವಂತ ಕೃಷಿ ಭೂಮಿ ಮಾರಾಟ ಮಾಡಲು ಕೂಡ ಮಂಡಳಿಯ ಪರವಾನಗಿ ಪಡೆದುಕೊಳ್ಳಬೇಕಾಗಿರುವ ಪರಿಸ್ಥಿತಿ ಸಂಪೂರ್ಣ ಗ್ರಾಮಸ್ಥರಿಗೆ ಬಂದೆರಗಿದೆ.
ಇದನ್ನೂ ಓದಿ: Ahmadabad Lift Collapse: 7 ಅಂತಸ್ತಿನಿಂದ ಲಿಫ್ಟ್ ಕುಸಿತ; ಭೀಕರ ಅವಘಡದಲ್ಲಿ 8 ಜನರ ಸಾವು
ತಮ್ಮ ಮಗಳ ವಿವಾಹಕ್ಕಾಗಿ ಜಮೀನು ಮಾರಲು ಬಯಸಿದ್ದೆ ಆದರೆ ಹಣದ ಅಭಾವದಿಂದಾಗಿ ಈಗ ವಿವಾಹ ನಿಂತುಹೋಗಿದೆ ಎಂಬುದನ್ನು ದುಃಖದಿಂದ ರಾಜ್‌ಗೋಪಾಲ್ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ. ಇಂತಹ ಸಮಯದಲ್ಲಿ ಆತ್ಮಹತ್ಯೆಯೊಂದೇ ದಾರಿ ಎಂಬ ನೋವಿನಿಂದ ಕೂಡಿದ ಮಾತುಗಳನ್ನು ರೈತ ರಾಜ್‌ಗೋಪಾಲ್ ನುಡಿದಿದ್ದಾರೆ. ನಾನು ಈ ದುಃಖದಿಂದ ಅಸ್ವಸ್ಥನಾಗಿರುವೆ ಎಂಬುದು ಮೋಸಕ್ಕೊಳಗಾದ ರಾಜ್‌ಗೋಪಾಲ್ ಮಾತಾಗಿದೆ. ತಿರುಚೆಂಡುರೈ ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯ ಕಾವೇರಿ ನದಿಯ ದಡದಲ್ಲಿರುವ ಒಂದು ಹಳ್ಳಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ