ಜುಲೈ 14ರ ರಾತ್ರಿ ಚಂದ್ರಯಾನ ಲೈವ್ ವೀಕ್ಷಿಸಬೇಕೆ? ಆನ್​ಲೈನ್​ನಲ್ಲಿ ನಿಮ್ಮ ಹೆಸರು ನೊಂದಾಯಿಸಿ

ಐದು ಸಾವಿರ ಜನರಿಗೆ ಮಾತ್ರ ಲೈವ್ ವೀಕ್ಷಣೆಯ ಅವಕಾಶವಿದ್ದು, ಮೊದಲು ನೊಂದಾಯಿಸಿದವರಿಗೆ ಆದ್ಯತೆ ಇದೆ. ಗುರುವಾರ ಮಧ್ಯರಾತ್ರಿಯಿಂದಲೇ ಆನ್​ಲೈನ್​ನಲ್ಲಿ ರಿಜಿಸ್ಟ್ರೇಶನ್​ಗೆ ತೆರೆದಿರಲಾಗುತ್ತದೆ.

news18
Updated:July 3, 2019, 9:12 PM IST
ಜುಲೈ 14ರ ರಾತ್ರಿ ಚಂದ್ರಯಾನ ಲೈವ್ ವೀಕ್ಷಿಸಬೇಕೆ? ಆನ್​ಲೈನ್​ನಲ್ಲಿ ನಿಮ್ಮ ಹೆಸರು ನೊಂದಾಯಿಸಿ
ಚಂದ್ರಯಾನ ಯೋಜನೆಗೆ ಸಿದ್ಧತೆ
  • News18
  • Last Updated: July 3, 2019, 9:12 PM IST
  • Share this:
ಬೆಂಗಳೂರು(ಜುಲೈ 03): ಭಾರತದ ಪ್ರತಿಷ್ಠಿತ ಗಗನಯಾನ ಯೋಜನೆಯ ಭಾಗವಾಗಿರುವ ಎರಡನೇ ಚಂದ್ರಯಾನಕ್ಕೆ ದಿನಗಣನೆ ಪ್ರಾರಂಭವಾಗಿದೆ. ಜುಲೈ 14-15ರಂದು ಆಂಧ್ರದ ಶ್ರೀಹರಿಕೋಟದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಉಪಗ್ರಹವೊಂದನ್ನು ಚಂದ್ರನಲ್ಲಿಗೆ ಕಳುಹಿಸಲಾಗುತ್ತಿದೆ. ಇಸ್ರೋ ಸಂಸ್ಥೆಯು ಈ ಅಪರೂಪದ ದೃಶ್ಯವನ್ನು ಜನಸಾಮಾನ್ಯರಿಗೆ ನೇರವಾಗಿ ವೀಕ್ಷಿಸುವ ಅವಕಾಶ ಮಾಡಿಕೊಡುತ್ತಿದೆ. ಜುಲೈ 4ರ ಮಧ್ಯರಾತ್ರಿಯಂದು ಜನರು ಲೈವ್ ವೀಕ್ಷಣೆಗೆ ಹೆಸರು ನೊಂದಾಯಿಸಿಕೊಳ್ಳಬಹುದು. ಆದರೆ, ಕೇವಲ 5 ಸಾವಿರ ಜನರಿಗೆ ಮಾತ್ರ ಈ ಅವಕಾಶವಿರುತ್ತದೆ. ಮೊದಲು ನೊಂದಾಯಿಸಿದವರಿಗೆ ಮೊದಲ ಆದ್ಯತೆ. ಕೆಲವೇ ನಿಮಿಷಗಳಲ್ಲಿ ರಿಜಿಸ್ಟ್ರೇಶನ್ ಮುಕ್ತಾಯವಾಗುವ ಸಾಧ್ಯತೆ ಇರುತ್ತದೆ.

ಹಿಂದಿನ ಚಂದ್ರಯಾನ-1 ಮತ್ತು ಮಂಗಳಯಾನದ ವೇಳೆಯಲ್ಲೂ ಇಸ್ರೋ ಸಂಸ್ಥೆ ಸಾರ್ವಜನಿಕರಿಗೆ ಲೈವ್ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿತ್ತು.

ಇದನ್ನೂ ಓದಿ: ಇಲ್ಲೊಂದು ಅಪರೂಪದ ಘಟನೆ; 3 ವರ್ಷದ ಹಿಂದೆ ಕಳೆದುಹೋದ ಗಂಡನನ್ನು ಟಿಕ್​ಟಾಕ್​ನಲ್ಲಿ ಹುಡುಕಿದ ಮಹಿಳೆ!

ಲೈವ್ ವೀಕ್ಷಣೆ ಹೇಗೆ?

ಜಿಎಸ್​ಎಲ್​ವಿ ಮಾರ್ಕ್3 ರಾಕೆಟ್ ಚಂದ್ರಯಾನ-2 ಉಪಗ್ರಹವನ್ನು ಜುಲೈ 14ರ ಮಧ್ಯರಾತ್ರಿ ಗಗನಕ್ಕೆ ಹೊತ್ತೊಯ್ದು ಚಂದ್ರನ ಪರಿಧಿಗೆ ಬಿಟ್ಟು ಹೋಗುತ್ತದೆ. ಅಂದು ಉಡಾವಣೆಯಾಗುವ ಲಾಂಚ್​ಪ್ಯಾಡ್​ನಲ್ಲಿ ಸಾರ್ವಜನಿಕರ ಉಪಸ್ಥಿತಿಗೆ ಅವಕಾಶ ಇರುವುದಿಲ್ಲ. ಲಾಂಡ್​ಪ್ಯಾಡ್​ನಿಂದ ಐದು ಕಿಮೀ ಆಚೆಯ ಸ್ಥಳವೊಂದರಲ್ಲಿ ಸಾರ್ವಜನಿಕರಿಗೆ ಸ್ಥಳ ಮಾಡಿಕೊಡಲಾಗುತ್ತದೆ. ಸತೀಶ್ ಧವನ್ ಸ್ಪೇಸ್ ಸೆಂಟರ್​ಗೇ ಸೇರಿದ ಈ ಸ್ಥಳದಲ್ಲಿ ರಾಕೆಟ್ ಉಡಾವಣೆಯಾದ ಕ್ಷಣದಿಂದ ಹಿಡಿದು ಚಂದ್ರನ ಪರಿಧಿಗೆ ಉಪಗ್ರಹ ಹೋಗುವವರೆಗೂ ಪ್ರತೀ ಕ್ಷಣವನ್ನೂ ಟ್ರ್ಯಾಕ್ ಮಾಡಿ ಬೃಹತ್ ಪರದೆಯಲ್ಲಿ ಅದರ ನೇರ ಪ್ರಸಾರ ನೀಡಲಾಗುತ್ತದೆ. 5 ಸಾವಿರ ಜನರು ಒಂದೇ ಸ್ಥಳದಲ್ಲಿ ಕೂತು ಈ ಪರದೆ ಮೂಲಕ ಚಂದ್ರಯಾನದ ಲೈವ್ ವೀಕ್ಷಿಸಬಹುದು. ಹಾಗೆಯೇ ಉಡಾವಣೆಯಾದ ಕೆಲ ನಿಮಿಷಗಳ ಕಾಲ ಬರಿಗಣ್ಣಿನಿಂದಲೂ ರಾಕೆಟ್ ಏರುವುದನ್ನು ನೋಡಬಹುದು.

ಇದನ್ನು ಓದಿ: ಬಡತನದಲ್ಲಿ ಬೆಳೆದು ಸಾಮ್ರಾಜ್ಯ ಕಟ್ಟಿದ್ದ ದೋಸೆ ಕಿಂಗ್​ ಹೆಣ್ಣಿಗಾಗಿ ಜೀವಾವಧಿ ಶಿಕ್ಷೆಗೆ ಗುರಿಯಾದ ಕಥೆ

ಎರಡನೇ ಚಂದ್ರಯಾನದಲ್ಲಿದೆ ಕೆಲ ವಿಶೇಷತೆಗಳು:ಮನುಷ್ಯ ಮೊದಲು ಚಂದ್ರನಲ್ಲಿಗೆ ಹೋಗಿದ್ದು ಸರಿಯಾಗಿ 6 ದಶಕಗಳ ಹಿಂದೆ. ಅಲ್ಲಿಂದ ಇಲ್ಲಿಯವರೆಗೂ ಹಲವಾರು ಬಾರಿ ಚಂದ್ರನಲ್ಲಿಗೆ ಮಾನವ ಸಹಿತ ಮತ್ತು ಮಾನವರಹಿತ ನೌಕೆಗಳನ್ನ ಕಳುಹಿಸಲಾಗಿದೆ. 2008ರಲ್ಲಿ ಭಾರತವೂ ಕೂಡ ಮೊತ್ತಮೊದಲ ಬಾರಿಗೆ ಚಂದ್ರಯಾನ ಯೋಜನೆಯನ್ನು ಯಶಸ್ವಿಯಾಗಿ ನೆರವೇರಿಸಿತು. ಚಂದ್ರನಲ್ಲಿ ನೀರಿದ್ದ ಸುಳಿವನ್ನು ಮೊದಲು ಪತ್ತೆ ಹಚ್ಚಿದ್ದು ಭಾರತವೇ ಎಂಬುದು ಇಲ್ಲಿ ಗಮನಾರ್ಹ.

ಆದರೆ, ಭಾರತ ಕೈಗೊಂಡಿರುವ ಎರಡನೇ ಚಂದ್ರಯಾನ ಯೋಜನೆ ಕೂಡ ಯಾರೂ ಮಾಡದ ಸಾಹಸಕ್ಕೆ ಕೈಹಾಕಿದೆ. ಈವರೆಗೆ ಯಾರೂ ಹೋಗದ ಚಂದ್ರನ ದಕ್ಷಿಣ ಧ್ರುವಕ್ಕೆ ಚಂದ್ರಯಾನ-2 ಕಾಲಿಡಲಿದೆ. ಚಂದ್ರನ ನೆಲದಲ್ಲಿ ರೋಬೋ ಕೆಲ ದಿನಗಳ ಕಾಲ ಸುತ್ತಾಟ ನಡೆಸಿ ಹಲವಾರು ಸ್ಯಾಂಪಲ್​ಗಳನ್ನ ಸಂಗ್ರಹಿಸುವ ಗುರಿ ಹೊಂದಿದೆ. ಸೆಪ್ಟೆಂಬರ್ 6 ಅಥವಾ 7ರಂದು ಈ ಗಗನನೌಕೆಯು ಚಂದ್ರನ ನೆಲ ಮುಟ್ಟುವ ನಿರೀಕ್ಷೆ ಇದೆ.

ಇದನ್ನೂ ಓದಿ: ವಾವ್​..! ಕಣ್ಣಿಗೆ ಬಟ್ಟೆ ಕಟ್ಟಿದ್ದರೂ ಹಗ್ಗದ ಮೇಲೆ ನಡೆಯುತ್ತೆ ಪೊಲೀಸ್​ ನಾಯಿ; ಅದರ ಚಾಣಾಕ್ಷತನಕ್ಕೆ ಶ್ವಾನಪ್ರಿಯರು ಫಿದಾ

ಭಾರತದ ಈ ಚಂದ್ರಯಾನ-2 ಯೋಜನೆಯನ್ನು ಇಬ್ಬರು ಮಹಿಳೆಯರು ಉದ್ಘಾಟಿಸಲಿರುವುದು ಮತ್ತೊಂದು ವಿಶೇಷ. ಪ್ರಾಜೆಕ್ಟ್ ಡೈರೆಕ್ಟರ್ ಎಂ. ವನಿತಾ ಮತ್ತು ಮಿಷನ್ ಡೈರೆಕ್ಟರ್ ರಿತು ಕರಿಧಾಲ್ ಅವರು ಉಡಾವಣೆಗೆ ಚಾಲನೆ ಕೊಡಲಿದ್ದಾರೆ. ಅಷ್ಟೇ ಅಲ್ಲ, ಚಂದ್ರಯಾನ-2 ಯೋಜನೆಯಲ್ಲಿ ಭಾಗಿಯಾಗಿರುವವರ ಪೈಕಿ ಮಹಿಳೆಯರ ಸಂಖ್ಯೆಯೇ ಶೇ. 30ರಷ್ಟಿದೆ. ಮಾನವ ಸಂಪನ್ಮೂಲ ಹೊರತುಪಡಿಸಿ ಈ ಯೋಜನೆಯ ಒಟ್ಟಾರೆ ವೆಚ್ಚ 1 ಸಾವಿರ ಕೋಟಿ ರೂಪಾಯಿ ಮೀರುವುದಿಲ್ಲ. ಉಪಗ್ರಹಕ್ಕೆ 603 ಕೋಟಿ, ಜಿಎಸ್​ಎಲ್​ವಿ ರಾಕೆಟ್​ಗೆ 375 ಕೋಟಿ ರೂ ವೆಚ್ಚವಾಗುತ್ತಿದೆ.

(ವರದಿ: ದೀಪಾ ಬಾಲಕೃಷ್ಣನ್)

ನಿಮ್ಮ ನ್ಯೂಸ್ 18 ಕನ್ನಡವನ್ನು ಹಲೋ-ಆ್ಯಪ್​​ನಲ್ಲೂ ಹಿಂಬಾಲಿಸಿ
First published: July 3, 2019, 9:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading