Savings Tips: ದುಡ್ಡು ಮಾಡಬೇಕಾ? ಹಣ ಉಳಿತಾಯ ಮಾಡಲು ಹಾಗೂ ಹೂಡಿಕೆ ಮಾಡಲು ಇಲ್ಲಿವೆ ಪರಿಣಾಮಕಾರಿ ಟಿಪ್ಸ್

How to save money? Here are the tips: ಆರ್ಥಿಕ ಯೋಜನೆಯನ್ನು ಮಾಡುವ ಮೊದಲು ಈ ಕುರಿತು ನೀವು ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳುವು ಅನಿವಾರ್ಯವಾಗಿದೆ. ಹಾಗಾದರೆ ಇಂದಿನ ಲೇಖನದಲ್ಲಿ ಈ ಯೋಜನೆಗೆ ಅಗತ್ಯವಾಗಿರುವ ಕೆಲವೊಂದು ಸೂತ್ರಗಳನ್ನು ಅರಿತುಕೊಳ್ಳೋಣ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    How to Save Money: ಆರ್ಥಿಕ ಯೋಜನೆ ಎಂಬುದು ಪ್ರತಿಯೊಬ್ಬ ಉದ್ಯಮಿಗಳ ಗೆಲುವಿಗೆ ಕಾರಣವಾಗಿರುವ ಅಂಶವಾಗಿದೆ. ನಿಮ್ಮ ವ್ಯವಹಾರವನ್ನು ಅಭಿವೃದ್ಧಿಪಡಿಸಲು ಹಾಗೂ ಹೂಡಿಕೆಗಳನ್ನು ಸುಧಾರಿಸಲು ಹಾಗೂ ದಿಟ್ಟತನದಿಂದ ಕೂಡಿದ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಕೂಡ ಆರ್ಥಿಕ ಯೋಜನೆ ನಿಮಗೆ ಬೆಂಬಲ ನೀಡುತ್ತದೆ. ಆರ್ಥಿಕ ಯೋಜನೆಯನ್ನು ಮಾಡುವ ಮೊದಲು ಈ ಕುರಿತು ನೀವು ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳುವು ಅನಿವಾರ್ಯವಾಗಿದೆ. ಹಾಗಾದರೆ ಇಂದಿನ ಲೇಖನದಲ್ಲಿ ಈ ಯೋಜನೆಗೆ ಅಗತ್ಯವಾಗಿರುವ ಕೆಲವೊಂದು ಸೂತ್ರಗಳನ್ನು ಅರಿತುಕೊಳ್ಳೋಣ.

    ತೆರಿಗೆಯನ್ನು ಕಾಲ ಕಾಲಕ್ಕೆ ಪಾವತಿಸುತ್ತಿರಿ:

    ಕಾಲ ಕಾಲಕ್ಕೆ ತೆರಿಗೆಯನ್ನು ಪಾವತಿಸುವುದರಿಂದ ನೀವು ವರ್ಷದ ಅಂತ್ಯಕ್ಕೆ ಜಮೆ ಮಾಡುವ ಹಣದ ಅಭಾವದಿಂದ ಪರಿತಪಿಸುವ ಅಗತ್ಯವಿರುವುದಿಲ್ಲ. ವೆಚ್ಚಗಳಿಗೂ ಮುನ್ನ ನಿಮ್ಮ ಉನ್ನತ ಆದಾಯದ ಮೇಲೆ ಗಮನವರಿಸಿ ಹಾಗೂ ತೆರಿಗೆ ಪಾವತಿಯನ್ನು ಅಂತಿಮ ಅವಧಿಗೂ ಮುನ್ನ ಪಾವತಿಸಿ

    ತುರ್ತು ಉಳಿತಾಯ ನಿಮ್ಮ ಬಳಿ ಇರಲಿ:

    ನೀವು ಎಷ್ಟೇ ಉಳಿತಾಯ ಮಾಡಿದ್ದರೂ ತುರ್ತು ಉಳಿತಾಯ ನಿಧಿಗಳು ನಿಮ್ಮ ಕಷ್ಟಕಾಲದಲ್ಲಿ ನಿಮ್ಮ ಸಂರಕ್ಷಣೆಯನ್ನು ಮಾಡುತ್ತವೆ. ಕನಿಷ್ಠ ಪಕ್ಷ ಮೂರು ಅಥವಾ ಆರು ತಿಂಗಳ ಉಳಿತಾಯವನ್ನು ನೀವು ಹೊಂದಿರಬೇಕು ಎಂಬುದಾಗಿ ಆರ್ಥಿಕ ತಜ್ಞರು ತಿಳಿಸುತ್ತಾರೆ. ನಿಮ್ಮ ವ್ಯವಹಾರ ಹಾಗೂ ಮನೆಗೆ ಬೇಕಾಗಿರುವ ತುರ್ತು ಖರ್ಚುಗಳನ್ನು ಲೆಕ್ಕಹಾಕಿ ಹಾಗೂ ಇದನ್ನು ಪ್ರತ್ಯೇಕವಾಗಿ ತೆಗೆದಿರಿಸಿ. ನಿಮ್ಮ ಉಳಿತಾಯದಿಂದ 10%, 20% ಮೊತ್ತವನ್ನು ತೆಗೆದಿರಿಸಿ.

    ಹಣ ಮಾಡಲು ಹಣ ಉಳಿತಾಯ ಮಾಡಿ:

    ಗಳಿಕೆಯ 20% ಹಾಗೂ 40% ವನ್ನು ಪ್ರತ್ಯೇಕ ಖಾತೆಯಲ್ಲಿ ತೆಗೆದಿರಿಸುವ ಕ್ರಮವನ್ನು ಮಾಸಿಕ ಉಳಿತಾಯ ತೆರಿಗೆ ಎಂಬುದಾಗಿ ಕೂಡ ಕರೆಯಬಹುದಾಗಿದೆ. ಈ ಹಣವನ್ನು ಕಡಿಮೆ ಅಪಾಯವಿರುವ ಕ್ಷೇತ್ರಗಳಾದ ಬಾಂಡ್‌ಗಳು, ಮ್ಯೂಚುವಲ್ ಫಂಡ್‌ಗಳು ಅದೇ ರೀತಿ ಹೆಚ್ಚಿನ ಅಪಾಯವಿರುವ ಕ್ರಿಪ್ಟೋ ಕರೆನ್ಸಿಯಲ್ಲೂ ತೊಡಗಿಸಿಕೊಳ್ಳಬಹುದಾಗಿದೆ.

    ಈ ಹಂತಗಳನ್ನು ಅನುಸರಿಸುವ ಮೂಲಕ ಉಳಿತಾಯವನ್ನು ಮಾಡಬಹುದು ಹಾಗೂ ತುರ್ತು ಉಳಿತಾಯ ಗುರಿಗಳನ್ನು ಸಾಧಿಸಬಹುದಾಗಿದೆ. ಈ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಸ್ವಲ್ಪ ಕಷ್ಟವಾಗಿದ್ದರೂ ನಮ್ಮನ್ನು ನಾವು ಸಿದ್ಧಪಡಿಸಿಕೊಳ್ಳುವ ಮೂಲಕ ಹಣ ಉಳಿತಾಯ ಮಾರ್ಗವನ್ನು ಅನುಸರಿಸಬಹುದು ಎಂದು ಲೇಖಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

    ಮೊದಲಿಗೆ ಆರಂಭ ಕಷ್ಟವಾಗಿರುತ್ತದೆ:

    ಆರಂಭದಲ್ಲಿ ಈ ಹಂತಗಳು ಸವಾಲಿನದ್ದು ಹಾಗೂ ಕಷ್ಟದಾಯಕ ಎಂದೆನಿಸುತ್ತದೆ. ಮೊದಲಿಗೆ ನಿಮ್ಮ ಆದಾಯ ಹಾಗೂ ಖರ್ಚುಗಳ ಮೇಲೆ ಗಮನವಿರಿಸಿ. ಇದರಿಂದ ಹಣವನ್ನು ಖರ್ಚುಮಾಡುವ ಹಾಗೂ ಉಳಿತಾಯ ಮಾಡುವ ವಿಧಾನದಲ್ಲಿ ಬದಲಾವಣೆಗಳನ್ನು ಕಾಣಬಹುದಾಗಿದೆ.

    ಹಣ ವಿನಿಯೋಗದ ಮೇಲೆ ನಿಯಂತ್ರಣ ಇರಿಸಿ:

    ನಿಮ್ಮ ಖರ್ಚುಗಳನ್ನು ನೀವು ಇದುವರೆಗೆ ಗಮನಿಸಿಲ್ಲ ಎಂದಾದಲ್ಲಿ ಅದನ್ನು ಕೂಡಲೇ ಕಾರ್ಯರೂಪಕ್ಕೆ ತನ್ನಿ. ನಿಮಗೆ ಬೇಡದೇ ಇರುವ ಸೇವೆಗಳಿಂದ ಹೊರಬನ್ನಿ. ವೃಥಾ ಖರ್ಚುಗಳನ್ನು ಮಾಡದಿರಿ. ಖರ್ಚುಗಳ ಮೇಲೆ ಕಡಿವಾಣ ಹಾಕಿ.

    ಹಂತ ಹಂತವಾಗಿ ಉಳಿತಾಯ ಮಾಡಿ:

    ಜೊತೆಯಾಗಿ ಎಲ್ಲಾ ಹಂತಗಳನ್ನು ಪೂರೈಸಲು ಸಾಧ್ಯವಾಗದೇ ಇದ್ದರೂ ಹಂತ ಹಂತವಾಗಿ ಹಣ ಉಳಿತಾಯ ಮಾರ್ಗಗಳನ್ನು ಅನುಸರಿಸಿ. ಮೊದಲಿಗೆ ತೆರಿಗೆ ಉಳಿತಾಯದಿಂದ ಆರಂಭಿಸಿ.

    ಇದನ್ನೂ ಓದಿ: Savings Tips: ಮನೆಯಲ್ಲೇ ಹಣ ಉಳಿತಾಯ ಮಾಡಲು 5 ಉಪಯೋಗಕಾರಿ ಟಿಪ್ಸ್ ಇಲ್ಲಿದೆ ನೋಡಿ!

    ಪ್ರತಿಯೊಂದನ್ನು ಸ್ವಯಂಚಾಲಿತಗೊಳಿಸಿ:

    ನಿಮ್ಮ ತೆರಿಗೆಗಳ ಉಳಿತಾಯ, ತುರ್ತು ಉಳಿತಾಯ ಹಾಗೂ ಹೂಡಿಕೆಗಳನ್ನು ನೀವು ಸ್ವಯಂಚಾಲಿತಗೊಳಿಸಿದಂತೆ ನಿಮಗೆ ಗೊತ್ತಿಲ್ಲದಂತೆಯೇ ಸರಳವಾಗಿಬಿಡುತ್ತದೆ.

    ಅಪಾಯಗಳ ಬಗ್ಗೆ ಅರಿವಿರಲಿ:

    ಹೂಡಿಕೆಗಳನ್ನು ಮಾಡುವ ಮುನ್ನ ಮಾರುಕಟ್ಟೆಯಲ್ಲಿನ ಅಪಾಯಗಳ ಕುರಿತು ಮುಂಜಾಗ್ರತೆ ವಹಿಸಿ. ಮ್ಯೂಚುವಲ್ ಫಂಡ್ ಅಥವಾ ಕ್ರಿಪ್ಟೋ ಕರೆನ್ಸಿಯಾಗಿರಬಹುದು ಈ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಮುನ್ನ ಸಂಬಂಧಿಸಿದ ಜ್ಞಾನವನ್ನು ವೃದ್ಧಿಸಿಕೊಳ್ಳಿ.

    ಇದನ್ನೂ ಓದಿ: Post Office PPF Savings: ವರ್ಷಕ್ಕೆ ಬರೀ 500 ಉಳಿಸಿ, ಲಕ್ಷಗಟ್ಟಲೆ ಗಳಿಸಿ, ಪೋಸ್ಟ್ ಆಫೀಸಿನ ಈ ಸ್ಕೀಂ ಬಹಳ ಒಳ್ಳೆಯದು

    ನುರಿತ ಆರ್ಥಿಕ ಯೋಜಕರ ಸಹಾಯವನ್ನು ಪಡೆದುಕೊಳ್ಳಿ:

    ಆರಂಭಿಸುವುದು ಹೇಗೆ ಅಥವಾ ನಿಮ್ಮ ಹೂಡಿಕೆಗಳನ್ನು ಸುಧಾರಿಸುವುದು ಹೇಗೆ ಎಂಬುದರ ಕುರಿತು ನಿಮಗೆ ಗೊಂದಲಗಳಿದ್ದರೆ ವೃತ್ತಿಪರ ಆರ್ಥಿಕ ಯೋಜಕರ ಸಹಾಯವನ್ನು ಪಡೆದುಕೊಳ್ಳಿ.
    Published by:Sharath Sharma Kalagaru
    First published: