• Home
  • »
  • News
  • »
  • national-international
  • »
  • Bihar: ನಾನು ಭಾರತೀಯಳು, ನಾನೇಕೆ ಪಾಕ್​ಗೆ ಹೋಗಲಿ?: IAS ಅಧಿಕಾರಿಯ ಸೊಕ್ಕಿಗೆ ಬಾಲಕಿಯ ದಿಟ್ಟ ಉತ್ತರ!

Bihar: ನಾನು ಭಾರತೀಯಳು, ನಾನೇಕೆ ಪಾಕ್​ಗೆ ಹೋಗಲಿ?: IAS ಅಧಿಕಾರಿಯ ಸೊಕ್ಕಿಗೆ ಬಾಲಕಿಯ ದಿಟ್ಟ ಉತ್ತರ!

ಬಿಹಾರ ಕೇಡರ್‌ನ ಹಿರಿಯ ಐಎಎಸ್ ಅಧಿಕಾರಿ ಹರ್ಜೋತ್ ಕೌರ್

ಬಿಹಾರ ಕೇಡರ್‌ನ ಹಿರಿಯ ಐಎಎಸ್ ಅಧಿಕಾರಿ ಹರ್ಜೋತ್ ಕೌರ್

ಬಾಲಕಿಯೊಬ್ಬಳು ಬಿಹಾರ ಕೇಡರ್‌ನ ಹಿರಿಯ ಐಎಎಸ್ ಅಧಿಕಾರಿ ಹರ್ಜೋತ್ ಕೌರ್ ಅವರ ಬಳಿ ಸರ್ಕಾರ ₹ 20-30ಕ್ಕೆ ಸ್ಯಾನಿಟರಿ ಪ್ಯಾಡ್ ನೀಡಬಹುದೇ? ಎಂದು ಮುಗ್ಧವಾಗಿ ಪ್ರಶ್ನಿಸಿದ್ದಾಳೆ. ಆದರೆ ಈ ಪ್ರಶ್ನೆಯಿಂದ ಕೋಪಗೊಂಡ ಐಎಎಸ್​ ಅಧಿಕಾರಿ ಕೌರ್ ನಾಳೆ ಸರ್ಕಾರ ಜೀನ್ಸ್ ನೀಡಬೇಕು ಎನ್ನುತ್ತೀರಿ. ಬಳಿಕ ಸುಂದರವಾದ ಬೂಟುಗಳನ್ನು ಏಕೆ ಕೊಡಬಾರದು? ಎಂದು ಪ್ರಶ್ನಿಸಲಾರಂಭಿಸುತ್ತೀರಿ ಎಂದಿದ್ದಾರೆ.

ಮುಂದೆ ಓದಿ ...
  • Share this:

ಪಾಟ್ನಾ(ಸೆ.29): ಬಿಹಾರ ಸರ್ಕಾರ (Bihar Govt) ನಡೆಸುತ್ತಿರುವ ಕಾರ್ಯಕ್ರಮವಾದ ಸ್ಕೂಲ್​ಗಿರಿಯಲ್ಲಿ ಹಿರಿಯ ಐಎಎಸ್ ನೀಡಿದ ವಿಚಿತ್ರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿನಿಯೊಬ್ಬಳು ಐಎಎಸ್ ಅಧಿಕಾರಿಗೆ (IAS Officer), ಸರ್ಕಾರ ಕಡಿಮೆ ಬೆಲೆಗೆ ಸ್ಯಾನಿಟರಿ ಪ್ಯಾಡ್ (Sanitary Pad) ನೀಡಬಹುದೇ? ಎಂದೇ ಪ್ರಶ್ನಿಸಿದ್ದಾಳೆ. ಈ ಬಗ್ಗೆ ಸಿಟ್ಟಾದ ಐಎಎಸ್ ಅಧಿಕಾರಿ, ಜನರ ಬೇಡಿಕೆಗೆ ಕೊನೆ ಇಲ್ಲದಂತಾಗಿದೆ. ಜನರು ಯಾವಾಗಲೂ ಒಂದಿಲ್ಲೊಂದು ಕೇಳುತ್ತಾರೆ. ನಾಳೆ ಅವರು ಕಾಂಡೋಮ್ (Condom) ಕೇಳಲು ಪ್ರಾರಂಭಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ವಿದ್ಯಾರ್ಥಿನಿ ವಿರುದ್ಧ ಅಧಿಕಾರಿ ಗರಂ


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮ, UNICEF, ಸೇವ್ ದಿ ಚಿಲ್ಡ್ರನ್ ಮತ್ತು ಪ್ಲಾನ್ ಇಂಟರ್ನ್ಯಾಷನಲ್ ಆಯೋಜಿಸಿದ್ದ 'ಸಶಕ್ತ್ ಬೇಟಿ, ಸಮೃದ್ಧ್ ಬಿಹಾರ್: ಟುವಾರ್ಡ್ಸ್​ ಎನ್ಹಾನ್ಸಿಂಗ್ ದ ಗರ್ಲ್ ಚೈಲ್ಡ್​' (ಸಬಲ ಹೆಣ್ಮಗು, ಸಮೃದ್ಧ ಬಿಹಾರ: ಹೆಣ್ಣುಮಗುವಿನ ಮೌಲ್ಯ ಹೆಚ್ಚಿಸುವ ಕಡೆಗೆ) ಕಾರ್ಯಕ್ರಮದಲ್ಲಿ ಬಾಲಕಿಯೊಬ್ಬಳು ಬಿಹಾರ ಕೇಡರ್‌ನ ಹಿರಿಯ ಐಎಎಸ್ ಅಧಿಕಾರಿ ಹರ್ಜೋತ್ ಕೌರ್ ಅವರ ಬಳಿ ಸರ್ಕಾರ ₹ 20-30ಕ್ಕೆ ಸ್ಯಾನಿಟರಿ ಪ್ಯಾಡ್ ನೀಡಬಹುದೇ? ಎಂದು ಮುಗ್ಧವಾಗಿ ಪ್ರಶ್ನಿಸಿದ್ದಾಳೆ. ಆದರೆ ಈ ಪ್ರಶ್ನೆಯಿಂದ ಕೋಪಗೊಂಡ ಐಎಎಸ್​ ಅಧಿಕಾರಿ ಕೌರ್ ನಾಳೆ ಸರ್ಕಾರ ಜೀನ್ಸ್ ನೀಡಬೇಕು ಎನ್ನುತ್ತೀರಿ. ಬಳಿಕ ಸುಂದರವಾದ ಬೂಟುಗಳನ್ನು ಏಕೆ ಕೊಡಬಾರದು? ಎಂದು ಪ್ರಶ್ನಿಸಲಾರಂಭಿಸುತ್ತೀರಿ ಎಂದಿದ್ದಾರೆ.


ಇದನ್ನೂ ಓದಿ: Love Dhoka: ಆ ಹುಡುಗಿ ಪಾಲಿಗೆ ಪ್ರಿಯಕರನೇ ವಿಲನ್! ಅತ್ಯಾಚಾರದಿಂದ ನೊಂದು ವಿಷ ಕುಡಿದ ಸಂತ್ರಸ್ತೆ


ವಿದ್ಯಾರ್ಥಿನಿಯರಿಗೆ ಕಡಿಮೆ ಬೆಲೆಗೆರ ಪ್ಯಾಡ್​ ಕೊಡಿಸಬಹುದೇ ಎಂದು ಕೇಳಿದ್ದ ಬಾಲಕಿ


ಇಷ್ಟಕ್ಕೇ ಸುಮ್ಮನಾಗದ ಮಹಿಳಾ ಐಎಎಸ್ ಅಧಿಕಾರಿ, ಬಾಲಕಿ ವಿರುದ್ಧ ಮತ್ತಷ್ಟು ಕಿಡಿ ಕಾರುತ್ತಾ ಹೀಗೇ ಆದರೆ ನಾಳೆ ಸರ್ಕಾರವು ಕುಟುಂಬ ಯೋಜನೆಗಾಗಿ ಕಾಂಡೋಮ್​ಗಳನ್ನು ನೀಡಬೇಕೆಂದು ನೀವು ಬಯಸುತ್ತೀರಿ ಎಂದಿದ್ದಾರೆ. ಅಧಿಕಾರಿಯ ಈ ಉತ್ತರ ಆಲಿಸಿದ ವಿದ್ಯಾರ್ಥಿನಿ ಜನರ ಮತಗಳಿಂದಲೇ ಸರ್ಕಾರ ರಚನೆಯಾಗುತ್ತದೆ ಎಂದು ಹೇಳಿದ್ದು, ಇದಕ್ಕುತ್ತರಿಸಿದ ಅಧಿಕಾರಿ ಇದು ಮೂರ್ಖತನದ ಪರಮಾವಧಿ, ಹಾಗಾದ್ರೆ ನೀವು ಮತ ನೀಡಬೇಡಿ, ಇದೂ ಪಾಕಿಸ್ತಾನವಾಗಲಿ. ಹಾಗಾದ್ರೆ ನೀವು ಹಣ ಮತ್ತು ಸೇವೆಗಾಗಿ ಮತ ಹಾಕುತ್ತೀರಾ? ಎಂದು ಪ್ರಶ್ನಿಸಿದ್ದಾರೆ.


ಅಧಿಕಾರಿಯ ಮಾತಿಗೆ ಎಲ್ಲರೂ ಶಾಕ್


ಹಿರಿಯ ಐಎಎಸ್ ಅಧಿಕಾರಿ ಮತ್ತು ಸಾಮಾನ್ಯ ವಿದ್ಯಾರ್ಥಿಯ ನಡುವಿನ ಈ ಸಂಭಾಷಣೆಯನ್ನು ಕೇಳಿ ಎಲ್ಲರೂ ದಿಗ್ಭ್ರಮೆಗೊಂಡಿದ್ದಾರೆ. ಈ ಅಧಿಕಾರಿ ಯುನಿಸೆಫ್ ಮತ್ತು ಇತರ ಸಂಸ್ಥೆಗಳ ಸಹಭಾಗಿತ್ವದಲ್ಲಿ ಮೂಡಿಬಂದ 'ಸಶಕ್ತ್ ಬೇಟಿ, ಸಮೃದ್ಧಿ ಬಿಹಾರ್' ಕಾರ್ಯಕ್ರಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ ಎಂಬುವುದು ಉಲ್ಲೇಖನೀಯ. ಈ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಮ್ ಮ್ಯಾನೇಜಿಂಗ್ ಡೈರೆಕ್ಟರ್ ಹರ್ಜೋತ್ ಕೌರ್ ಬಮ್ರಾ ಅವರನ್ನು ಪ್ರಶ್ನೆಗಳನ್ನು ಕೇಳಿದಾಗ, ಇಂತಹ ವಿವಾದಾತ್ಮಕ ಉತ್ತರಗಳು ಬಂದವು.


ಶೌಚಾಲಯ ವ್ಯವಸ್ಥೆ ಸರಿಯಾಗಿಲ್ಲ ಎಂದಿದ್ದಕ್ಕೂ ಕಿಡಿ


ಜಾಗೃತಿ ಕಾರ್ಯಾಗಾರದಲ್ಲಿ ಹುಡುಗಿಯೊಬ್ಬಳು ಮಾತನಾಡಿ, "ಶಾಲೆಯ ಶೌಚಾಲಯ ಕೆಟ್ಟಿದೆ, ಆಗಾಗ್ಗೆ ಹುಡುಗರು ಸಹ ಪ್ರವೇಶಿಸುತ್ತಾರೆ, ಅವರು ಶೌಚಾಲಯಕ್ಕೆ ಹೋಗುವ ಸ್ಥಿತಿ ನಿರ್ಮಾಣವಾಗಬಾರದೆಂದು, ತಾವು ಕಡಿಮೆ ನೀರು ಕುಡಿಯುತ್ತೇವೆ ಎಂದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅಧಿಕಾರಿ, ನಿಮ್ಮ ಮನೆಯಲ್ಲಿ ನಿಮಗಾಗಿ ಪ್ರತ್ಯೇಕ ಶೌಚಾಲಯ ಇದೆಯೇ? ನೀವು ವಿವಿಧ ಸ್ಥಳಗಳಲ್ಲಿ ಬಹಳಷ್ಟು ವಿಷಯಗಳನ್ನು ಕೇಳುತ್ತಿದ್ದರೆ, ಹೇಗೆ ಕೆಲಸ ಮಾಡಲು ಸಾಧ್ಯವಾಗುತ್ತದೆ? ಎಂದು ಪ್ರಶ್ನಿಸಿದ್ದಾರೆ.


ಇದನ್ನೂ ಓದಿ: Shocking: ವಿದೇಶಗಳಲ್ಲಿ ಅಕ್ರಮ ಪೊಲೀಸ್ ಸ್ಟೇಷನ್ ತೆರೆದ ಚೀನಾ!


ನಾನೇಕೆ ಪಾಕಿಸ್ತಾನಕ್ಕೆ ಹೋಗಲಿ ಎಂದ ವಿದ್ಯಾರ್ಥಿನಿ


ಇದೇ ವೇಳೆ ಪಾಕಿಸ್ತಾನದ ಬಗ್ಗೆ ಐಎಎಸ್ ಅಧಿಕಾರಿಯ ಹೇಳಿಕೆಗೆ ಪ್ರತಿಕ್ರಿಯಿಸಿದ ವಿದ್ಯಾರ್ಥಿ, ನಾನು ಭಾರತೀಯಳು. ನಾನೇಕೆ ಪಾಕಿಸ್ತಾನಕ್ಕೆ ಹೋಗಬೇಕು? ಎಂದು ಮರುಪ್ರಶ್ನೆ ಹಾಕಿದ್ದಾರೆ. ಹೀಗಿರುವಾಗ ಅಧಿಕಾರಿ ಮಾತನಾಡುತ್ತಾ ಹುಡುಗಿಯರೇ, ನೀವು ನಿಮ್ಮ ಆಲೋಚನೆಯನ್ನು ಬದಲಾಯಿಸಿಕೊಳ್ಳಬೇಕು. ಭವಿಷ್ಯದಲ್ಲಿ ನಿಮ್ಮನ್ನು ಎಲ್ಲಿ ನೋಡಬೇಕೆಂದು ನೀವು ನಿರ್ಧರಿಸಬೇಕು. ಈ ನಿರ್ಧಾರವನ್ನು ನೀವೇ ತೆಗೆದುಕೊಳ್ಳಬೇಕಾಗುತ್ತದೆ. ಸರ್ಕಾರವು ನಿಮಗಾಗಿ ಇದನ್ನು ಮಾಡಲು ಸಾಧ್ಯವಿಲ್ಲ. ನೀವು ಇರುವ ಸ್ಥಳದಲ್ಲಿ ಅಥವಾ ನಾನು ಕುಳಿತಿರುವ ಬದಿಯಲ್ಲಿ ಕುಳಿತುಕೊಳ್ಳಲು ನೀವು ಬಯಸುವಿರಾ? ಎಂದು ಪ್ರಶ್ನಿಸಿದ್ದಾರೆ.,

Published by:Precilla Olivia Dias
First published: