ಕೊರೋನಾ ಭೀತಿ ನಡುವೆ 1.5 ಲಕ್ಷ ಜನರಿಗೆ ಉದ್ಯೋಗ ಘೋಷಿಸಿದ ಕಂಪೆನಿ

ಸದ್ಯ ಅಮೆರಿಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 14,202ಕ್ಕೆಕ್ಕೆ ಏರಿಕೆಯಾಗಿದೆ. ಈವರೆಗೆ 208 ಜನರು ಮೃತಪಟ್ಟಿದ್ದಾರೆ. ಇತ್ತ ಅಮೆರಿಕ ಷೇರು ಮಾರುಕಟ್ಟೆ ಸ್ತಬ್ಧವಾಗುತ್ತಿದ್ದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಾರಣಾಂತಿಕ ಮಹಾಮಾರಿ ಕೊರೋನಾ ವೈರಸ್‌ಗೆ ಭಾರತದಲ್ಲಿ 5ನೇ ಬಲಿಯಾಗಿದೆ. ಈಗಾಗಲೇ ಸೋಂಕಿತರ ಸಂಖ್ಯೆ ದೇಶದಲ್ಲಿ 195ನ್ನು ದಾಟಿದೆ. ಜಗತ್ತಿನಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್​​ಗೆ ಇದುವರೆಗೂ 10,000ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ.

ಹಾಗೆಯೇ 2 ಲಕ್ಷಕ್ಕೂ ಅಧಿಕ ಜನರಿಗೆ ಕೊರೋನಾ ಸೋಂಕು ತಗುಲಿದೆ. ಈಗಾಗಲೇ ಅಮೆರಿಕದಲ್ಲಿ ಎಮರ್ಜೆನ್ಸಿ ಜಾರಿ ಮಾಡಲಾಗಿದ್ದು, ಯಾರೂ ಕೂಡ ಮನೆ ಬಿಟ್ಟು ಹೋಗದಂತೆ ಆದೇಶ ಹೊರಡಿಸಲಾಗಿದೆ. ಇದರ ಬೆನ್ನಲ್ಲೇ ಯುಎಸ್​ಎನಲ್ಲಿ ಆನ್​ಲೈನ್ ಮತ್ತು ಆಫ್​ಲೈನ್ ಮಾರಾಟದಲ್ಲಿ ಭಾರೀ ಏರಿಕೆ ಕಂಡುಬಂದಿದೆ.

ಈ ಹಿನ್ನೆಲೆಯಲ್ಲಿ ವಿಶ್ವದ ವಿಶ್ವದ ಅತಿದೊಡ್ಡ ಉದ್ಯೋಗದಾತ ಕಂಪೆನಿ ವಾಲ್​ಮಾರ್ಟ್​ 1.5 ಲಕ್ಷ ಜನರಿಗೆ ಉದ್ಯೋಗ ನೀಡುವುದಾಗಿ ಘೋಷಿಸಿದೆ. ಈ ಮೊದಲು ಅಮೆಜಾನ್ ಕೂಡ ಒಂದು ಲಕ್ಷ ಜನರಿಗೆ ಉದ್ಯೋಗ ನೀಡುವುದಾಗಿ ಘೋಷಿಸಿತು. ಖಾಯಂ ಉದ್ಯೋಗಿಗಳಿಗೆ $ 300 (ಸುಮಾರು 22 ಸಾವಿರ ರೂಪಾಯಿ) ಮತ್ತು ತಾತ್ಕಾಲಿಕ ಉದ್ಯೋಗಿಗಳಿಗೆ $ 150 (ಸುಮಾರು 11 ಸಾವಿರ ರೂಪಾಯಿ) ದೊರೆಯಲಿದೆ ಎಂದು ವಾಲ್​ಮಾರ್ಟ್​ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ವಾಲ್​ಮಾರ್ಟ್ ಅತಿದೊಡ್ಡ ಕಂಪನಿಯಾಗಿದೆ. ಇದು ಪ್ರಪಂಚದಾದ್ಯಂತ ವ್ಯವಹಾರವನ್ನು ವಿಸ್ತರಿಸಿಕೊಂಡಿದೆ. ಇದೀಗ ಎಲ್ಲೆಡೆ ಆನ್​ಲೈನ್-ಆಫ್​ಲೈನ್ ವ್ಯವಹಾರ ಹೆಚ್ಚಾಗುತ್ತಿದ್ದು, ಹೀಗಾಗಿ ಉದ್ಯೋಗಿಗಳ ಅನಿವಾರ್ಯತೆ ಕಂಪೆನಿಗಳಿಗೆ ತಲೆದೂರಿದೆ. ಈ ಹಿನ್ನೆಲೆಯಲ್ಲಿ ಅಮೆರಿಕದ ಪ್ರಮುಖ ಕಂಪೆನಿಗಳು ನೇಮಕಾತಿಯನ್ನು ಪ್ರಕಟಿಸಿದೆ ಎಂದು ಹೇಳಲಾಗುತ್ತಿದೆ.

ಕೊರೋನಾ ವೈರಸ್ ಭೀತಿಯಿಂದ ಅಮೆರಿಕ ಸ್ಟಾಕ್ ಮಾರುಕಟ್ಟೆಯಲ್ಲಿ ತೀವ್ರ ಕುಸಿತ ಕಂಡಿದೆ. ಆದರೆ ವಾಲ್​ಮಾರ್ಟ್​ ಕಂಪೆನಿಯ ಷೇರುಗಳ ಮೊತ್ತ ದಾಖಲೆಯ ಏರಿಕೆ ಕಾಣುತ್ತಿದೆ. ಸಣ್ಣ ಉದ್ಯಮಗಳು ಕೊರೋನಾ ಭೀತಿಯಿಂದ ಮುಚ್ಚುತ್ತಿದ್ದಂತೆ ವಾಲ್​ಮಾರ್ಟ್​ ವ್ಯಾಪಾರ ಹೆಚ್ಚಾಗಿದ್ದು, ಇದಕ್ಕೆ ಮುಖ್ಯ ಕಾರಣ.

ಇನ್ನು ವಾಲ್​ಮಾರ್ಟ್​ ಕಂಪೆನಿಯು ಮುಂದಿನ 5 ವರ್ಷಗಳಲ್ಲಿ ಭಾರತದಲ್ಲಿ 25 ಸಂಸ್ಥೆಗಳನ್ನು ತೆರೆಯುವುದಾಗಿ ಘೋಷಿಸಿದ್ದು, ಮೈಕ್ರೋ, ಸ್ಮಾಲ್ ಮತ್ತು ಮೀಡಿಯಂ ಎಂಟರ್‌ಪ್ರೈಸಸ್ ವಲಯದಲ್ಲಿ (ಎಂಎಸ್‌ಎಂಇ ಸೆಕ್ಟರ್) ತನ್ನ ಛಾಪು ಮೂಡಿಸಲಿದೆ. ಪ್ರಸ್ತುತ, ಭಾರತವು ವಾಲ್ಮಾರ್ಟ್‌ಗೆ ವಿಶ್ವದ ಐದನೇ ಅತಿದೊಡ್ಡ ಮೂಲ ಕೇಂದ್ರವಾಗಿದೆ.

ಸದ್ಯ ಅಮೆರಿಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 14,202ಕ್ಕೆಕ್ಕೆ ಏರಿಕೆಯಾಗಿದೆ. ಈವರೆಗೆ 208 ಜನರು ಮೃತಪಟ್ಟಿದ್ದಾರೆ. ಇತ್ತ ಅಮೆರಿಕ ಷೇರು ಮಾರುಕಟ್ಟೆ ಸ್ತಬ್ಧವಾಗುತ್ತಿದ್ದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ.
First published: